Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Chia Seed Benefits: ಬೇಸಿಗೆಯಲ್ಲಿ ಚಿಯಾ ಬೀಜದ ಸೇವನೆಯಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಆ್ಯಂಟಿಆಕ್ಸಿಡೆಂಟ್‌ ಹೆಚ್ಚಾಗಿರುವುದರಿಂದ ಕ್ಯಾನ್ಸರ್ ಅಂತಹ ಖಾಯಿಲೆಗಳನ್ನು ತಡೆಗಟ್ಟಲು ಸಹಕಾರಿ ಆಗಲಿದೆ. ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುತ್ತದೆ.

Chia Seed Benefits: ಬೇಸಿಗೆ ಕಾಲ ಬಂದರೆ ಸಾಕಪ್ಪಾ ಸಾಕು ಅನ್ನಿಸುವಷ್ಟು ಸೆಖೆ ಆಗುತ್ತದೆ. ಏಷ್ಟು ತಂಪು ಪಾನೀಯಗಳನ್ನು ಕುಡಿದರೂ ನೀರಡಿಕೆ ಕಡಿಮೆ ಆಗುವುದಿಲ್ಲ. ಬಿಸಿಲು ಹೆಚ್ಚಾಗಿ ದೇಹದ ಉಷ್ಣತೆಯ ಪ್ರಮಾಣ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಹೆಚ್ಚಾಗಿ ನೀರು ಕುಡಿಯಬೇಕು. ಬೇಸಿಗೆ ಕಾಲ ಬಂದರೆ ತಂಪು ಪಾನೀಯ ಕಂಪನಿಗಳಿಗೆ ಬಹಳ ಲಾಭ. ಆರೋಗ್ಯಕ್ಕೆ ಉತ್ತಮ ಅಲ್ಲದಿದ್ದರೂ ಸಹ ಪಾನೀಯ ಗಳು ಹೆಚ್ಚಾಗಿ ವ್ಯಾಪಾರ ಆಗುತ್ತವೆ. ಆದರೆ ತಂಪು ಪಾನೀಯ ಕುಡಿಯುವ ಬದಲು ಆರೋಗ್ಯಕ್ಕೆ ಉತ್ತಮವಾದ ಜ್ಯೂಸ್ ಅಥವಾ ಹಣ್ಣನು ಸೇವಿಸುವುದು ಬಹಳ ಉತ್ತಮ. ಹಾಗೆಯೇ ಜ್ಯೂಸ್ ಅಥವಾ ನೀರಿನ ಜೊತೆಗೆ ಚಿಯಾ ಬೀಜವನ್ನು ಸೇರಿಸಿ ಕುಡಿದರೆ ದೇಹಕ್ಕೆ ತಂಪು ನೀಡುವುದರ ಜೊತೆ ಆರೋಗ್ಯಕ್ಕೆ ಬಹಳ ಒಳ್ಳೆಯದು

ಚಿಯಾ ಬೀಜವನ್ನೂ ನೀರಿನಲ್ಲಿ ಅಥವಾ ಜ್ಯೂಸ್ ಗೆ ಬೆರೆಸಿ ಕುಡಿಯುವುದರಿಂದ ಯೂಸ್ ( uses ) ಏನೇನು ?
1) ಚಿಯಾ ಬೀಜದಲ್ಲಿ 138 ಕ್ಯಾಲೋರಿ, 4.7ಗ್ರಾಂ ಪ್ರೊಟೀನ್, 8.7ಗ್ರಾಂ ಕೊಬ್ಬು, 11.9 ಗ್ರಾಂ ಕಾರ್ಬ್ಸ್, 9.8 ಗ್ರಾಂ ನಾರಿನಂಶ , ಶೇಕಡಾ 14ರಷ್ಟು ಕ್ಯಾಲ್ಸಿಯಂ, ಇನ್ನಷ್ಟು ಪೋಷಕಾಂಶ ಇದೆ.

2) ಆ್ಯಂಟಿಆಕ್ಸಿಡೆಂಟ್‌ ಹೆಚ್ಚಾಗಿರುವುದರಿಂದ ಕ್ಯಾನ್ಸರ್ ಅಂತಹ ಖಾಯಿಲೆಗಳನ್ನು ತಡೆಗಟ್ಟಲು ಸಹಕಾರಿ ಆಗಲಿದೆ. ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುತ್ತದೆ.

3) ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹೆಚ್ಚು ಹೊತ್ತು ಹಸಿವಾಗಿದೆ ಇರುವಂತೆ ಮಾಡುವ ಗುಣವಿದೆ. ಅದರಿಂದ ಪಡೆ ಕಡೆ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವ ಸಾಧ್ಯತೆ ಕಡಿಮೆ. ತೂಕ ಇಳಿಸಲು ಇದು ಸಹಕಾರಿ ಆಗಲಿದೆ.

4) ನಾರಿನಂಶ ಮತ್ತು ಕೊಬ್ಬಿನಂಶ ಇರುವುದರಿಂದ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡುತ್ತದೆ. ಇದರಿಂದ ಹಾರ್ಟ್ ಪ್ರಾಬ್ಲೆಮ್ ತಡೆಗಟ್ಟಬಹುದು.

ಚಿಯಾ ಬೀಜವನ್ನು ಏಷ್ಟು ಪ್ರಮಾಣದಲ್ಲಿ ಸೇವಿಸಬೇಕು ?

ಒಂದು ದಿನಕ್ಕೆ ಎರಡರಿಂದ ಮೂರು ಚಮಚ ಚಿಯಾ ಬೀಜವನ್ನು ಬಳಸಬಹುದು. ದಿನನಿತ್ಯ ಬಳಸಿದರೂ ಸಹ ಅಡ್ಡ ಪರಿಣಾಮಗಳಿಲ್ಲ.

ಚಿಯಾ ಬೀಜವನ್ನು ಸೇವಿಸುವುದರಿಂದ ಅಪಾಯಗಳು ಏನೇನು?

1. ಯಾವುದೇ ಔಷಧಿ ಅಥವಾ ಆಹಾರ ಪದಾರ್ಥವನ್ನು ಅತಿಯಾಗಿ ಸೇವಿಸಿದರೆ ಅದು ಅಪಾಯ ಆಗುತ್ತದೆ.ಅದರಂತೆಯೇ ಚಿಯಾ ಬೀಜವನ್ನು ಅತಿಯಾಗಿ ಸೇವನೆ ಮಾಡುವುದರಿಂದ ಜಠರ ಮತ್ತು ಕರುಳಿನ ಸಮಸ್ಯೆ ಉಂಟಾಗುತ್ತದೆ. ಪೈಭರ್ ಅಂಶ ಹೆಚ್ಚಾಗಿರುವುದರಿಂದ ಇದನ್ನು ಹೆಚ್ಚಾಗಿ ಮಿತವಾಗಿ ಬಳಸಿ.

2. ಕೆಲವರಿಗೆ ಇದು ಅಲರ್ಜಿ ಆಗುವ ಸಾಧ್ಯತೆ ಇರುತ್ತದೆ. ಅತಿಯಾದ ಸೂಕ್ಷ್ಮ ದೇಹ ಪ್ರಕೃತಿ ಹೊಂದಿರುವವರು ಒಮ್ಮೆ ಸೇವಿಸಿ , ಏನಾದರೂ ಅಲರ್ಜಿ ಲಕ್ಷಣಗಳು ಕಂಡರೆ ಸೇವನೆ ಮಾಡಬೇಡಿ.

3. ಯಾವುದೇ ಬೇರೆ ಬೀಜಗಳ ಜೊತೆ ಸೇರಿಸಿ ಸೇವಿಸುವುದು ಉತ್ತಮವಲ್ಲ. ಇದರಣೆಗೆ ಮೆಂತ್ಯ, ಕಿತ್ತಳೆ, ಸಾಸಿವೆ.

4. ರಕ್ತದೊತ್ತಡ ಕಡಿಮೆ ಮಾಡಲು ಇದು ಸಹಕಾರಿ. ಲೋ ಬಿಪಿ ಇರುವವರು ಇದನ್ನು ಸೇವಿಸಬಾರದು. ಇನ್ನಷ್ಟು ರಕ್ತದೊತ್ತಡ ಕಡಿಮೆ ಮಾದುತ್ತದೆ.

Consuming chia seeds in summer is very good for health.

Leave a comment