Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Karnataka Job Fair: ರಾಜ್ಯದಲ್ಲಿ ನಡೆಯಲಿದೆ ದೊಡ್ಡ ಉದ್ಯೋಗ ಮೇಳ! ಹೊಸ ಹೆಲ್ಪ್ ಲೈನ್ ಶುರು!

ರಾಜ್ಯದ ಕೌಶಲ್ಯ ಅಭಿವೃದ್ಧಿ ಇಲಾಖೆಯು ಈ ವಿಶೇಷವಾದ ಉದ್ಯೋಗ ಮೇಳವನ್ನು ಅರೇಂಜ್ ಮಾಡಿದೆ. ಎರಡು ದಿನಗಳ ಕಾಲ ಬೆಂಗಳೂರು ಅರಮನೆ ಮೈದಾನದಲ್ಲಿ ಈ ಉದ್ಯೋಗ ಮೇಳ ನಡೆಯಲಿದೆ.

Karnataka Job Fair: ನಮ್ಮ ರಾಜ್ಯದಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರವು ಬೆಂಗಳೂರು ಅರಮನೆ ಮೈದಾನದಲ್ಲಿ ಫೆಬ್ರವರಿ 19 ಮತ್ತು 20ರ ವರೆಗು ಉದ್ಯೋಗ ಮೇಳವನ್ನು ಆಯೋಜಿಸಿದೆ. ಇದಕ್ಕಾಗಿ ಹೆಲ್ಪ್ ಲೈನ್ ಕೂಡ ಶುರು ಮಾಡಿದ್ದು, ರಾಜ್ಯ ಮಟ್ಟದಲ್ಲಿ ಉದ್ಯೋಗ ಮೇಳ ನಡೆಸಲಾಗುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..

ರಾಜ್ಯ ಸರ್ಕಾರದ ಬೃಹತ್ ಉದ್ಯೋಗ ಮೇಳ:

ರಾಜ್ಯದ ಕೌಶಲ್ಯ ಅಭಿವೃದ್ಧಿ ಇಲಾಖೆಯು ಈ ವಿಶೇಷವಾದ ಉದ್ಯೋಗ ಮೇಳವನ್ನು ಅರೇಂಜ್ ಮಾಡಿದೆ. ಎರಡು ದಿನಗಳ ಕಾಲ ಬೆಂಗಳೂರು ಅರಮನೆ ಮೈದಾನದಲ್ಲಿ ಈ ಉದ್ಯೋಗ ಮೇಳ ನಡೆಯಲಿದೆ. ಇದಕ್ಕಾಗಿ ಸರ್ಕಾರ ವಿಶೇಷವಾಗಿ ಟೋಲ್ ಫ್ರೀ ಹೆಲ್ಪ್ ಲೈನ್ ನಂಬರ್ ಶುರು ಮಾಡಿದ್ದು, 18005999918 ಈ ನಂಬರ್ ಗೆ ಕೆಲಸಕ್ಕಾಗಿ ಹುಡುಕುತ್ತಿರುವವರು ಕರೆಮಾಡಿ, ಸಂಪೂರ್ಣ ಮಾಹಿತಿ ಪಡೆಯಬಹುದು.

ಆರು ಸಚಿವರ ತಂಡ:

ಈ ಉದ್ಯೋಗ ಮೇಳವನ್ನು ನಡೆಸಲು ಸರ್ಕಾರವು ವಿಶೇಷವಾಗಿ 6 ಸದಸ್ಯರು ಸಚಿವರು ಇರುವ ತಂಡವನ್ನು ನೇಮಿಸಿದೆ. ಹಾಗೆಯೇ ಇಲ್ಲಿ ಕೆಲಸಕ್ಕೆ ಸೇರಬೇಕಿರುವವರು ಮತ್ತು ಕೆಲಸ ಕೊಡುತ್ತಿರುವವರು, ಸ್ಕಿಲ್ ಕನೆಕ್ಟ್ ವೆಬ್ಸೈಟ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು. ಐಟಿಬಿಟಿ ಗ್ರಾಮೀಣಾಭಿವೃದ್ಧಿ ಸಚಿವ ಆಗಿರುವ ಪ್ರಿಯಾಂಕ್ ಖರ್ಗೆ, ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್, ಕೌಶಲ್ಯ ಅಭಿವೃದ್ಧಿ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರಾದ ಡಾಕ್ಟರ್ ಶರಣ ಪ್ರಕಾಶ್ ಪಾಟೀಲ್.

ಯುವ ಸಬಲೀಕರಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವರಾದ ಬಿ ನಾಗೇಂದ್ರ ,ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂ ಸುಧಾಕರ್, ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇವರು ತಂಡದ ಸಚಿವರಾಗಿದ್ದಾರೆ. ಇವರೆಲ್ಲರೂ ಸೇರಿ,ಉದ್ಯೋಗ ಮೇಳ ನಡೆಸಲಿದ್ದಾರೆ.

Abroad Company Recruitment ಸಹ ನಡೆಯಲಿದೆ:

ಸಿಎಂ ಸಿದ್ದರಾಮಯ್ಯ ಅವರು ವಿದೇಶದ ಕಂಪನಿಗಳಲ್ಲಿ ಕೂಡ ನಮ್ಮ ರಾಜ್ಯದ ಯುವಕರಿಗೆ ಕೆಲಸ ಸಿಗುವ ಹಾಗೆ ಈ ಉದ್ಯೋಗ ಮೇಳದಿಂದ ಸಹಾಯ ಆಗಬೇಕು ಎಂದು ತಿಳಿಸಿದ್ದಾರೆ. ರಾಜ್ಯದ ಯುವ ಪೀಳಿಗೆಗೆ ಕೆಲಸ ಸಿಗುವುದಕ್ಕೆ ಉದ್ಯೋಗ ನೀತಿಯನ್ನು ಜಾರಿಗೆ ತರಲಾಗುತ್ತಿದೆ. 80,000 ಜನರನ್ನು ಕೌಶಲ್ಯ ಅಭಿವೃದ್ಧಿಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರವು ನಮ್ಮ ರಾಜ್ಯದ ಯುವ ಪೀಳಿಗೆಯ ನಿರುದ್ಯೋಗ ಸಮಸ್ಯೆ ನಿವಾರಣೆ ಕಡಿಮೆ ಮಾಡಲು, ಈ ಉದ್ಯೋಗ ಮೇಳ ನಡೆಸುತ್ತಿದೆ.

ಅಧಿಕೃತ ವೆಬ್ಸೈಟ್ – https://itiemp.karnataka.gov.in/new-page/Job%20fair/kn

A big job fair will be held in the state of Karnataka.

Leave a comment