Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Home Tips: ರಾತ್ರಿ ಇಡೀ ಸುರಿಯುತ್ತಿರುವ ಜಡಿ ಮಳೆಗೆ ಸೊಳ್ಳೆಗಳು ಹೆಚ್ಚಾಗುತ್ತಿದೆಯೇ?? ಈ ಒಂದು ಸಣ್ಣ ಮನೆಮದ್ದು ಟ್ರೈ ಮಾಡಿ ನಿಮ್ಮ ಮನೆಯಲ್ಲಿ ಸೊಳ್ಳೆಗಳು ಮಂಗಮಾಯ!!

ಆದರೆ ಎಷ್ಟೆಲ್ಲಾ ರೂಪಾಯಿ ಹಣ ಸುರಿದರೂ ಇವುಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಬದಲಿಗೆ ಒಂದು ಸಿಂಪಲ್ ಮನೆ ಮದ್ದು ತಯಾರು ಮಾಡಿ ನೋಡಿ ಮನೆಯಲ್ಲಿರುವ ಸೊಳ್ಳೆಗಳೆಲ್ಲ ಸತ್ತು ಬೀಳುತ್ತವೆ

Home Tips: ಸ್ನೇಹಿತರೆ, ಮನುಷ್ಯರು ಮಾಡಿರುವ ಪಾಪದಿಂದಾಗಿ ಇಂತಹ ಉರಿಬಿಸಿಲಿನ ಬೇಸಿಗೆ ಕಾಲದಲ್ಲಿಯೂ ಮಳೆರಾಯನ ಬಿಟ್ಟುಬಿಡದೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಹೌದು ಸ್ನೇಹಿತರೆ ಬೆಂಗಳೂರಿನಲ್ಲಂತೂ ಮಳೆಯ ಕಾಟಕ್ಕೆ ಜನರು ತತ್ತರಿಸಿಹೋಗಿದ್ದಾರೆ ಎಂದರೆ ತಪ್ಪಾಗಲಾರದು. ಅಲ್ಲಲ್ಲಿ ಹಳ್ಳಕೊಳ್ಳವಿರುವ ಪ್ರದೇಶದಲ್ಲಂತೂ ಮಿನಿ ಕೆಆರ್ಎಸ್ ಆಗಿಬಿಟ್ಟಿರುತ್ತದೆ. ಹೀಗೆ ನೀರು ನಿಂತ ಪ್ರದೇಶಗಳಲ್ಲೆಲ್ಲಾ ಸೊಳ್ಳೆ ರಾಯನು ತನ್ನ ಸಂತತಿಯನ್ನು ಹೆಚ್ಚು ಮಾಡಿಕೊಳ್ಳುತ್ತಾ ಜನರಿಗೆ ಕಿರಿಕಿರಿಯನ್ನುಂಟು ಮಾಡುತ್ತಿರುತ್ತದೆ‌.

ಹೀಗೆ ಮನೆತುಂಬಾ ಸೊಳ್ಳೆಗಳು ಹೆಚ್ಚಾಗಿ ಸುತ್ತುತ್ತಿರುತ್ತವೆ. ನೀವು ಕೂಡ ಸೊಳ್ಳೆಗಳ ಕಾಟದಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ನಾವಿವತ್ತು ತಿಳಿಸುವಂತಹ ಸಿಂಪಲ್ ಮನೆಮದ್ದನ್ನು ಟ್ರೈ ಮಾಡಿ ಹಾಗೂ ನಿಮ್ಮ ಮನೆಯಲ್ಲಿ ಸೊಳ್ಳೆಗಳನ್ನು ಮಾಡಿ ಮಂಗಮಾಯ. ಹಾಗಾದ್ರೆ ಮನೆಮದ್ದನ್ನು ಮಾಡುವುದು ಹೇಗೆ? ಅದಕ್ಕೆ ಏನೇನೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ.

ಹೌದು ಸ್ನೇಹಿತರೆ ಜನರಿಗಂತೂ ಈ ಕೀಟಾಣುಗಳಿಂದಲೇ ಅತಿಹೆಚ್ಚಿನ ತೊಂದರೆಯುಂಟಾಗುತ್ತದೆ ಎಂದರೆ ತಪ್ಪಾಗಲಾರದು. ಸೊಳ್ಳೆ ಜಿರಳೆ ಹಾಗೂ ಇನ್ನಿತರ ಕ್ರಿಮಿ ಕೀಟಾಣುಗಳನ್ನು ಹೋಗಲಾಡಿಸಲು ಟಿವಿ ಆಡ್ಗಳಲ್ಲಿ ಹಾಗೂ ಮೆಡಿಕಲ್ ಶಾಪಿನಲ್ಲಿ ವಿಧವಿಧವಾದಂತಹ ಮಸ್ಕಿಟೋ ರೆಪೆಲ್ಲೆಂಟ್, ಬ್ಯಾಟ್, ಪರದೆ, ಗುಡ್ ನೈಟ್ ಅಷ್ಟೇ ಯಾಕೆ ಇದರಲ್ಲೇ ಆಕ್ಟಿವ್ ಮೋಡ್ ನಾರ್ಮಲ್ ಮೋಡ್ ಹೀಗೆ ಇತ್ಯಾದಿ ವಸ್ತುಗಳನ್ನು ಮನೆಗೆ ತರುತ್ತಾರೆ.

ಆದರೆ ಎಷ್ಟೆಲ್ಲಾ ರೂಪಾಯಿ ಹಣ ಸುರಿದರೂ ಇವುಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಬದಲಿಗೆ ಒಂದು ಸಿಂಪಲ್ ಮನೆ ಮದ್ದು ತಯಾರು ಮಾಡಿ ನೋಡಿ ಮನೆಯಲ್ಲಿರುವ ಸೊಳ್ಳೆಗಳೆಲ್ಲ ಸತ್ತು ಬೀಳುತ್ತವೆ. ಹೌದು ಫ್ರೆಂಡ್ಸ್ ಈ ಸಿಂಪಲ್ ಸೊಳ್ಳೆಯ ಮದ್ದನ್ನು ತಯಾರಿಸುವುದಕ್ಕೆ ಕೇವಲ ಎರಡೇ ಎರಡು ಸಾಮಗ್ರಿಗಳು ಬೇಕು.

ಹೌದು ಕಾಫಿಪುಡಿ ಮತ್ತು ನೀರು. ಇದೇನಪ್ಪಾ ಸೊಳ್ಳೆ ಔಷಧಿ ತಯಾರು ಮಾಡುವುದನ್ನು ಹೇಳುವ ಮೊದಲು ಡಿಕಾಸನ್ ಹೇಳುತ್ತಿದ್ದಾನಲ್ಲ ಎಂದುಕೊಳ್ಳಬೇಡಿ. ಈ ಔಷಧಿ ಮಾಡಲು ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದಕ್ಕೆ ಕಾಫಿಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಪಾತ್ರೆಯನ್ನು ಸೊಳ್ಳೆಗಳು ಹೆಚ್ಚಾಗಿ ಎಲ್ಲಿ ಕಂಡುಬರುತ್ತದೆ ಅಲ್ಲಿ ಇಟ್ಟರೆ ಸೊಳ್ಳೆ ನಿಯಂತ್ರಣವಾಗುತ್ತದೆ.

ಹೀಗೆ ಈ ಮನೆಮದ್ದನ್ನು ಸಂಜೆ ಸುಮಾರು ಐದೂವರೆ ಸಮಯಕ್ಕೆ ತಯಾರು ಮಾಡಿದರೆ ಒಳಿತು ಹಾಗೂ ಸತಂತ ಎರಡು-ಮೂರು ದಿನ ತಪ್ಪದೇ ಬಳಸಿದರೆ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿರುವ ಸೊಳ್ಳೆ ಮಾಯ. ಇನ್ನು ಎರಡನೇ ಮದ್ದು ಒಂದು ಬೌಲ್ಗೆ ಕರ್ಪೂರದ ಪುಡಿ ಹಾಗೂ ಕೊಬ್ಬರಿ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಇದನ್ನು ಸೊಳ್ಳೆ ಇರುವ ಜಾಗದಲ್ಲಿ ಇಟ್ಟು ಕಿಟಕಿ ಹಾಗೂ ಬಾಗಿಲುಗಳನ್ನು ಮುಚ್ಚಬೇಕು ಕರ್ಪೂರದ ವಾಸನೆಗೆ ಸೊಳ್ಳೆ ಸತ್ತುಹೋಗುತ್ತವೆ. ಇದನ್ನು ತಪ್ಪದೇ ನಾಲ್ಕೈದು ದಿನ ಮಾಡಿದರೆ ಸೊಳ್ಳೆಗಳು ಕಂಡಿತವಾಗಿಯೂ ಮಂಗ ಮಾಯವಾಗುತ್ತದೆ.

ಇನ್ನು ನಾವು ತಿಳಿಸುವಂತಹ ಮೂರನೇ ಮನೆಮದ್ದು ಬಹಳನೇ ಸುಲಭ ಹೌದು ಗೆಡ್ಡೆ ಬೆಳ್ಳುಳ್ಳಿಯನ್ನು ನಾಲ್ಕರಿಂದ ಐದು ನಿಮಿಷ ನೀರೊಳಗೆ ಹಾಕಿ ಚೆನ್ನಾಗಿ ಕುದಿಸಬೇಕು ನಂತರ ಸ್ಪ್ರೇ ಬಾಟಲ್ ಒಳಗೆ ಹಾಕಿ ಮನೆ ಸುತ್ತಲೂ ಸ್ಪ್ರೇ ಮಾಡಿದರೆ, ಸೊಳ್ಳೆ ನಿಯಂತ್ರಣಕ್ಕೆ ಬರುತ್ತದೆ. ಇದು ಹಂಡ್ರೆಡ್ ಪರ್ಸೆಂಟ್ ನೈಸರ್ಗಿಕವಾಗಿದ್ದು, ಇದರಿಂದ ಯಾವುದೇ ಸೈಡ್ ಎಫೆಕ್ಟ್ ಮನುಷ್ಯರಿಗೆ ಆಗುವುದಿಲ್ಲ.

Home remedies to get rid of mosquitoes

Leave a comment