Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Edakallu Guddada Mele: ಎಡಕಲ್ಲು ಗುಡ್ಡದಮೇಲೆ ಸಿನಿಮಾವನ್ನು ಜಯಂತಿ ಮೊದಲು ರಿಜೆಕ್ಟ್ ಮಾಡಿದ್ದು ಯಾಕೆ? ಅನಂತರ ಒಪ್ಪಿಕೊಳ್ಳಲು ಕಾರಣವೇನು?

ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಅಣ್ಣಾವ್ರು ತಮ್ಮೊಂದಿಗೆ ಕೆಲಸ ಮಾಡಿದ್ದಂತಹ ಎಲ್ಲ ನಟಿಯರೊಂದಿಗೆ ಬಹಳ ಪ್ರೀತಿ ಸಲುಗೆಯಿಂದ ಮಾತನಾಡಿಸುತ್ತಿದ್ದರು.

Edakallu Guddada Mele: ಸ್ನೇಹಿತರೆ, ಚಂದವಳ್ಳಿ ತೋಟ ಎಂಬ ಸಿನಿಮಾದ ಮೂಲಕ ಸಾಮಾನ್ಯ ಹುಡುಗಿಯಾಗಿ ಕನ್ನಡ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದ ಜಯಂತಿ ತಮ್ಮ ಅಭೂತಪೂರ್ವ ಅಭಿನಯವನ್ನು ಜನರಿಗೆ ಪರಿಚಯ ಮಾಡಿ ಅಭಿನಯ ಶಾರದೆಯಾದರು. ಹೌದು ಸ್ನೇಹಿತರೆ ಮೊದಲ ಸಿನಿಮಾದಲ್ಲೇ ಇಡೀ ಕನ್ನಡಿಗರ ಮನಸ್ಸನ್ನು ಗೆದ್ದಿದ್ದ ಅಂತಹ ಜಯಂತಿ ಯವರಿಗೆ ಅನಂತರ ಅವಕಾಶಗಳ ಸಾಗರವೇ ಹರಿದು ಬರುತ್ತದೆ. ಹೀಗೆ ತಮ್ಮ ವಿಶಿಷ್ಟ ಅಭಿನಯದಿಂದ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಂತಹ ಕಲಾವಿದೆ.

ತಮ್ಮ 13 ವಯಸ್ಸಿಗೆ ಜೇನುಗೂಡು ಎಂಬ ಸಿನಿಮಾದ ಮೂಲಕ ಬಾಲನಟಿಯಾಗಿ ಜಯಂತಿಯವರು ಬಣ್ಣ ಹಚ್ಚುತ್ತಾರೆ. ಅದಾದನಂತರ ಬಾರಿ ದೊಡ್ಡ ಮಟ್ಟದ ಹೆಸರು ತಂದುಕೊಟ್ಟ ಸಿನಿಮಾವೆಂದರೆ ಅದು ಚಂದವಳ್ಳಿ ತೋಟ. ಮೊದಲ ಬಾರಿಗೆ ರಾಜಕುಮಾರ್ ಅವರೊಡನೆ ನಟಿಸಿದ ಜಯಂತಿ ಅಣ್ಣಾವ್ರೊಂದಿಗೆ ಅತಿಸಲುಗೆಯಿಂದ ಮತ್ತು ಒಡನಾಟದಿಂದ ಮಾತನಾಡಿಸುತ್ತಿದ್ದಂತ ಏಕೈಕ ನಾಯಕಿ.

ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಅಣ್ಣಾವ್ರು ತಮ್ಮೊಂದಿಗೆ ಕೆಲಸ ಮಾಡಿದ್ದಂತಹ ಎಲ್ಲ ನಟಿಯರೊಂದಿಗೆ ಬಹಳ ಪ್ರೀತಿ ಸಲುಗೆಯಿಂದ ಮಾತನಾಡಿಸುತ್ತಿದ್ದರು. ಈ ಸ್ಥಾನದಲ್ಲಿ ಜಯಂತಿ ಅವರದು ಒಂದು ಕೈ ಮೇಲು ಎಂದರೆ ತಪ್ಪಾಗಲಾರದು. ಏಕೆಂದರೆ ಅಣ್ಣಾವ್ರ ಜೊತೆ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಕಲಾವಿದೆ ಎನ್ನುವ ಅಭಿದಾನಕ್ಕೂ ಜಯಂತಿ ಪಾತ್ರರಾಗುತ್ತಾರೆ.

ಡಾಕ್ಟರ್ ವಿಷ್ಣುವರ್ಧನ್ ಅವರ ನಾಗರಹಾವು ಸಿನಿಮಾದಲ್ಲಿ ಜಯಂತಿ ಮಾಡಿರುವ ಒನಕೆ ಓಬವ್ವನ ಸಣ್ಣ ಪಾತ್ರವು ನಮ್ಮ ಮನಸ್ಸಿನಲ್ಲಿ ಅಚ್ಚರಿಯದೆ ಉಳಿಯುತ್ತದೆ ಎಂದರೆ ಅದು ಜಯಂತಿಯವರ ಅಭಿನಯ ಸಾಮರ್ಥ್ಯಕ್ಕೆ ಹಿಡಿದಂತಹ ಕನ್ನಡಿ. ಹೌದು ಫ್ರೆಂಡ್ಸ್ ಈಗಿನ ಪುಟ್ಟ ಮಕ್ಕಳಿಗೆ ಈ ಹಾಡನ್ನು ತೋರಿಸಿದರೆ ಸಾಕ್ಷಾತ ಒನಕೆ ಓಬವ್ವನೇ ಜಯಂತಿಯ ರೂಪದಲ್ಲಿದ್ದರೆ ಎನ್ನುತ್ತಾರೆ.

ಜಯಂತಿಯವರ ವೃತ್ತಿಜೀವನಕ್ಕೆ ಮಹತ್ತರವಾದ ತಿರುವು ನೀಡಿದ ಸಿನಿಮಾ ಎಂದರೆ ಅದು ಎಡಕಲ್ಲು ಗುಡ್ಡದಮೇಲೆ ಸಿನಿಮಾ. ಆದರೆ ಈ ಸಿನಿಮಾದ ಕಥೆ ಕೇಳಿದಂತಹ ಜಯಂತಿ ನಾನು ಈ ಸಿನಿಮಾ ಮಾಡಲ್ಲ ಎಂದು ನಿರಾಕರಿಸುತ್ತಾರೆ ನಂತರ ಒಪ್ಪಿಕೊಂಡಿದ್ಯಾಕೆ ಎಂಬ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಪುಟವನ್ನು ಸಂಪೂರ್ಣವಾಗಿ ಓದಿ.

ಹೌದು ಸ್ನೇಹಿತರೆ ಮೊದಲಬಾರಿಗೆ ಪುಟ್ಟಣ್ಣ ಕಣಗಾಲ್ ಜಯಂತಿ ಅವರಿಗೆ ಸಿನೆಮಾದ ಕಥೆ ಹೇಳಿದಾಗ, ಈ ಒಂದು ಕಥೆಯಲ್ಲಿ ನೆಗೆಟಿವ್ ಫೀಲ್ ಹೆಚ್ಚಿದೆ ಆದ್ದರಿಂದ ಈ ಸಿನಿಮಾದಲ್ಲಿ ನಟಿಸಲು ನನಗೆ ಇಷ್ಟವಾಗುತ್ತಿಲ್ಲ. ಬೇರೆ ಯಾರನ್ನಾದರೂ ಹಾಕಿಕೊಳ್ಳಿ ಎಂದು ಜಯಂತಿ ಪುಟ್ಟಣ್ಣ ಕಣಗಾಲ್ ಅವರಿಗೆ ಹೇಳಿದರು.

ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ಅಷ್ಟು ಸುಲಭವಾಗಿ ಈ ಒಂದು ಮಾತನ್ನು ಒಪ್ಪಿಕೊಳ್ಳಲಿಲ್ಲ, “ತಾಯಿ ನೀವು ಮೊದಲಿಗೆ ಸಿನಿಮಾದಲ್ಲಿ ನಟಿಸಿ ತದನಂತರ ಜನರ ಪ್ರತಿಕ್ರಿಯೆ ನೋಡಿ, ಆಗಲು ನಿಮಗೆ ಪಾತ್ರ ಇಷ್ಟವಾಗಲಿಲ್ಲ ಎಂದರೆ ನಾನು ನಿಮ್ಮನ್ನು ಕ್ಷಮೆ ಕೇಳುತ್ತೇನೆ. ಅಲ್ಲದೆ ಈ ಒಂದು ಪಾತ್ರಕ್ಕೆ ನಿಮ್ಮನ್ನು ಬಿಟ್ಟರೆ ಬೇರೆ ಯಾರು ಸೂಕ್ತವಾಗುವುದಿಲ್ಲ ಆದ್ದರಿಂದ ದಯವಿಟ್ಟು ಚಿತ್ರದಲ್ಲಿ ನಟಿಸಿ” ಎಂದು ಪುಟ್ಟಣ್ಣ ಕಣಗಾಲ್ ಕೇಳಿಕೊಳ್ಳುತ್ತಾರೆ. “ಸರಿ ನಿಮ್ಮ ಮೇಲೆ ನನಗೆ ನಂಬಿಕೆಯಿಂದ ನಾನು ಸಿನಿಮಾದಲ್ಲಿ ಅಭಿನಯಿಸುತ್ತೇನೆ” ಎಂದು ಜಯಂತಿ ಒಪ್ಪಿಕೊಂಡರು. ಈ ಸಿನಿಮಾ ರಿಲೀಸ್ ಆದಾಗ ನಟಿ ಜಯಂತಿಗೆ ಸಿಕ್ಕಂತಹ ಕೀರ್ತಿ, ಪ್ರತಿಷ್ಠೆ, ಗೆಲವು ಇಂದಿಗೂ ಅಜರಾಮರ.

Why did Jayanthi first reject the movie Edakallu Guddada Mele? Then why did she agree to act in that movie?

Leave a comment