Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Government Offer: ರೈತರನ್ನು ಮದುವೆಯಾದ್ರೆ ಸಿಗುತ್ತೆ 5 ಲಕ್ಷ! ಸರ್ಕಾರದಿಂದ ಬಂಪರ್ ಆಫರ್!

ಭಾನುವಾರ ಇಡೀ ರಾಜ್ಯದ ರೈತ ಸಂಘಗಳ 200 ಕ್ಕಿಂತ ಹೆಚ್ಚು ಪ್ರತಿನಿಧಿಗಳು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಈ ಬಗ್ಗೆ ಚರ್ಚೆ ಮಾಡಿದ್ದಾರೆ.

Government Offer: ನಮ್ಮ ದೇಶದ ಬೆನ್ನೆಲುಬು ರೈತರೇ ಆಗಿದ್ದರು ಸಹ ಹೆಚ್ಚು ಕಷ್ಟ ಅನುಭವಿಸುವುದು ಕೂಡ ರೈತರೇ. ಮದುವೆ ವಿಷಯ ಅಂತ ಬಂದಾಗಲೂ ಕೂಡ ರೈತರಿಗೆ ಹೆಣ್ಣು ಕೊಡುವುದಕ್ಕೆ ಜನ ಹಿಂದೆ ಮುಂದೆ ನೋಡುತ್ತಾರೆ. ರೈತರ ಜೊತೆಗೆ ಮದುವೆ ಮಾಡಿದರೆ ಮಗಳು ಹಳ್ಳಿಯಲ್ಲೇ ಇರಬೇಕಾಗುತ್ತದೆ ಎಂದು ಯೋಚನೆ ಮಾಡುವವರು ಇದ್ದಾರೆ. ಆದರೆ ಇದೀಗ ರೈತರನ್ನು ಮದುವೆಯಾದರೆ ಸರ್ಕಾರವೇ ಸಹಾಯ ಮಾಡುವ ಹಾಗೆ ಹೊಸ ಕಾನೂನು ತರಲು ಮುಂದಾಗಿದ್ದಾರೆ ರೈತ ಸಂಘದ ಅಧ್ಯಕ್ಷರು..

ರಾಜ್ಯ ಬಜೆಟ್ ನಲ್ಲಿ ರೈತರಿಗೆ ಗುಡ್ ನ್ಯೂಸ್?

ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದ ಬಜೆಟ್ ಮಂಡನೆ ನಡೆಯಲಿದೆ. ಈ ವೇಳೆ ರೈತರ ಪರವಾಗಿ ಕೆಲವು ನಿರ್ಧಾರ ತೆಗೆದುಕೊಳ್ಳಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರು ಸಿಎಂ ಅವರಿಗೆ ಮನವಿ ಮಾಡಿರುವುದಾಗಿ ಹೇಳಿದ್ದಾರೆ. ಈ ವರ್ಷದ ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಆಗಬೇಕು. ಜೊತೆಗೆ ರೈತರನ್ನು ಮದುವೆಯಾದರೆ ಆ ಹೆಣ್ಣುಮಗಳಿಗೆ 5 ಲಕ್ಷ ಸರ್ಕಾರದಿಂದ ಸಹಾಯಧನ ಸಿಗಬೇಕು ಎಂದು ಮನವಿ ಮಾಡಿದ್ದಾರೆ.

ಸರ್ಕಾರಕ್ಕೆ ವಿಶೇಷ ಮನವಿ:

ಭಾನುವಾರ ಇಡೀ ರಾಜ್ಯದ ರೈತ ಸಂಘಗಳ 200 ಕ್ಕಿಂತ ಹೆಚ್ಚು ಪ್ರತಿನಿಧಿಗಳು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಬಡಗಲಪುರ ನಾಗೇಂದ್ರ ಅವರು ಈ ಬಗ್ಗೆ ಮಾತನಾಡಿ, ರೈತರಿಗೆ ಸಾಲದಿಂದ ಮುಕ್ತಿ ಸಿಗಬೇಕು, ಬರಗಾಲದ ನಷ್ಟಕ್ಕೆ ಪರ್ಮನೆಂಟ್ ಆಗಿ ಒಂದು ಪರಿಹಾರ ಸಿಗಬೇಕು. ಬಜೆಟ್ ವೇಳೆ ಕೃಷಿ ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. 10 ವರ್ಷಕ್ಕೆ ಅನುಕೂಲ ಆಗುವ ಹಾಗೆ ಯೋಜನೆಗಳನ್ನು ರೂಪಿಸಬೇಕು ಎಂದು ತಿಳಿಸಿದ್ದಾರೆ.

ರೈತರ ಮದುವೆ ವಿಚಾರಕ್ಕೆ ಮಾತನಾಡಿ, ರೈತರಿಗೆ ಹೆಣ್ಣು ಕೊಡೋದಕ್ಕೆ ಯಾರು ಮುಂದೆ ಬರದೇ 45 ವರ್ಷವಾದರು ಇನ್ನು ಮದುವೆಯಾಗದೆ ಇರುವವರು ಇದ್ದಾರೆ. ಕೃಷಿಗೆ ಸರಿಯಾದ ಪ್ರಾಮುಖ್ಯತೆ ಇಲ್ಲದೆ ರೈತರಿಗೆ ಮದುವೆ ಆಗುತ್ತಿಲ್ಲ. ಹಾಗಾಗಿ ರೈತರನ್ನು ಮದುವೆಯಾಗುವ ಹುಡುಗಿಗೆ 5 ಲಕ್ಷ ಕೊಡಬೇಕು, ಹಾಗೆಯೇ ಬಿಜೆಪಿ ಸರ್ಕಾರ ಭೂಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದಿತ್ತು, ಅದನ್ನು ವಾಪಸ್ ಪಡೆಯಬೇಕು ಎಂದು ಇಷ್ಟು ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯ ಸರ್ಕಾರದ ಬಜೆಟ್ ಮಂಡನೆ ವೇಳೆ ರೈತ ಸಂಘ ಮನವಿ ಮಾಡಿರುವ ಅಷ್ಟು ಬೇಡಿಕೆಗಳನ್ನು ಸರ್ಕಾರ ಗಣನೆಗೆ ತಗೊಂಡು, ಎಲ್ಲವನ್ನು ಈಡೇರಿಸುತ್ತಾ ಎಂದು ಕಾದು ನೋಡಬೇಕಿದೆ. ರಾಜ್ಯ ಬಜೆಟ್ ಮಂಡನೆಗೆ ಉಳಿದಿರುವುದು ಇನ್ನು ಒಂದೆರಡು ದಿನಗಳು ಮಾತ್ರ. ಈ ಬಾರಿ ಬಜೆಟ್ ನಲ್ಲಿ ಯಾವೆಲ್ಲಾ ಸೇವೆ ಸಿಗುತ್ತದೆ ಎಂದು ಕಾದು ನೋಡಬೇಕಿದೆ.

If you marry a farmer, you will get 5 lakh! Bumper offer from the government!

Leave a comment