Food tips: ಊಟ ಮಾಡಿದ ತಕ್ಷಣ ಮರೆತು ಕೂಡ ಈ 10 ತಪ್ಪುಗಳನ್ನು ಮಾಡಲೇಬೇಡಿ, ಮಾಡಿದರೆ ಇಷ್ಟೆಲ್ಲಾ ತೊಂದರೆ ಬರುವ ಸಾಧ್ಯತೆ ಇದೆ.
Food Tips: ನಮ್ಮ ಜೀವನದ ಸಣ್ಣ ಪುಟ್ಟ ತಪ್ಪುಗಳಿಂದಲೇ ನಾವು ನಮ್ಮ ಆರೋಗ್ಯ ಕಳೆದುಕೊಳ್ಳಬೇಕಾಗುತ್ತದೆ. ಅಂತಹದ್ದರಲ್ಲಿ ನಾವು ಊಟ ಮಾಡಿದ ನಂತರ ಈ ಸಣ್ಣ ಪುಟ್ಟ ತಪ್ಪುಗಳನ್ನು ಮಾಡುವುದರಿಂದ ಇಂದಲ್ಲ ನಾಳೆ ನಮ್ಮ ಆರೋಗ್ಯ ಕಳೆದುಕೊಳ್ಳಬೇಕಾಗುತ್ತದೆ. ಹಾಗಾದರೆ ಅವು ಯಾವುವು ಎಂದು ತಿಳಿಯುವುದಾದರೆ.
1)ಮೊದಲನೆಯದಾಗಿ ಊಟ ಮಾಡಿದ ತಕ್ಷಣ ಟೀ ಕುಡಿಯುವುದು. ಟಿ ನಲ್ಲಿ ಆಸಿಡ್ನ ಪ್ರಮಾಣ ಅತಿ ಹೆಚ್ಚಾಗಿ ಇರುತ್ತದೆ. ಊಟ ಮಾಡಿದ ತಕ್ಷಣ ಟೀಯನ್ನು ಕುಡಿದರೆ ಅದು ಗ್ಯಾಸ್ಟಿಕ್ ಅನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ಅತಿ ಹೆಚ್ಚಿನ ಟಿ ಸೇವಿಸುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು ಅಲ್ಲ.
2)ಎರಡನೆಯದಾಗಿ ಊಟ ಮಾಡಿದ ತಕ್ಷಣ ನಡೆಯುವುದು ಎಷ್ಟೋ ಜನ ಹೇಳುತ್ತಾರೆ. ಊಟ ಮಾಡಿದ ತಕ್ಷಣ ಸ್ವಲ್ಪ ಹೊತ್ತು ನಡೆದರೆ ಅಥವಾ ವಾಕಿಂಗ್ ಮಾಡಿದರೆ ದೇಹಕ್ಕೆ ಒಳ್ಳೆಯದು ಆಹಾರ ಜೀರ್ಣವಾಗುತ್ತದೆ ಎಂದು. ಆದರೆ ಇದು ಸಂಪೂರ್ಣ ತಪ್ಪು. ಏಕೆಂದರೆ ನಾವು ಊಟ ಮಾಡಿದ ತಕ್ಷಣ ನಮ್ಮ ಹೊಟ್ಟೆ ತುಂಬಾ ಊಟವಿರುತ್ತದೆ. ರಕ್ತ ಸಂಚಾರ ಫಾಸ್ಟ್ ಆಗಿ ಆಗುತ್ತಿರುವುದರಿಂದ ಹೊಟ್ಟೆಗೆ ಸರಿಯಾಗಿ ರಕ್ತದ ಸಂಚಾರ ಆಗುವುದಿಲ್ಲ.
3)ಮೂರನೆಯದಾಗಿ ಸ್ನಾನ ಮಾಡುವುದು. ಎಷ್ಟು ಜನ ಊಟ ಮಾಡಿದ ತಕ್ಷಣವೇ ಸ್ನಾನಕ್ಕೆ ಹೋಗುತ್ತಾರೆ. ಆದರೆ ಇದು ತಪ್ಪು. ಏಕೆಂದರೆ ಸ್ನಾನ ಮಾಡುವಾಗ ಎಷ್ಟೋ ಜನರು ಬಿಸಿ ನಿರಿನಲ್ಲಿ ಸ್ನಾನ ಮಾಡುತ್ತಾರೆ. ಆದರೆ ಬಿಸಿ ನೀರನ್ನು ಊಟ ಮಾಡಿದ ತಕ್ಷಣ ದೇಹದ ಮೇಲೆ ವಿಧಗಳು ಅದರಿಂದ ದೇಹದ ಉಷ್ಣತೆಯ ಪ್ರಮಾಣ ಹೆಚ್ಚಾಗುತ್ತದೆ ಇದು ಆರೋಗ್ಯಕ್ಕೆ ಒಳ್ಳೆಯದು ಅಲ್ಲ.
4)ನಾಲ್ಕನೆಯದಾಗಿ ನಿದ್ದೆ ಮಾಡುವುದು. ಊಟ ಮಾಡಿದ ತಕ್ಷಣ ನಿದ್ದೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಜೀರ್ಣಶಕ್ತಿಯನ್ನು ಕಡಿಮೆಗೊಳಿಸುತ್ತದೆ. ಅಷ್ಟೇ ಅಲ್ಲದೆ ತಿಂದ ಆಹಾರ ಸರಿಯಾಗಿ ದೇಹಕ್ಕೆ ಹೊಂದಿಕೊಳ್ಳುವುದಿಲ್ಲ.
ನಿಂಬೆ ರಸ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತದೆ ನೋಡಿ
5)ಐದನೆಯದಾಗಿ ಹಣ್ಣುಗಳು ತಿನ್ನುವುದು. ಎಷ್ಟೋ ಜನ ಊಟ ಮಾಡಿದ ತಕ್ಷಣ ಹಣ್ಣುಗಳನ್ನು ತಿನ್ನುತ್ತಾರೆ ಆದರೆ ಇದು ದೇಹದಲ್ಲಿ ಗಾಳಿಯನ್ನು ತುಂಬಿಸಿ ದಪ್ಪವಾಗಲು ಸಹಾಯ ಮಾಡುತ್ತದೆ. ಆದ್ದರಿಂದ ದೇಹ ಊದಿಕೊಳ್ಳುತ್ತದೆ. ಹಾಗಾಗಿ ಊಟ ಮಾಡಿದ ಒಂದರಿಂದ ಎರಡು ಗಂಟೆಗಳ ನಂತರ ಹಣ್ಣು ಹಂಪಲುಗಳನ್ನು ಸೇವಿಸಬೇಕು.
6)ಆರನೆಯದಾಗಿ ಧೂಮಪಾನ ಮಾಡುವುದು ಹೇಳಬೇಕಾದರೆ ಧೂಮಪಾನ ಮಾಡುವುದು ತಪ್ಪು ಆದರೆ ಊಟ ಮಾಡಿದ ನಂತರ ಧೂಮಪಾನ ಮಾಡುವುದರಿಂದ ಒಂದು ಸಿಗರೇಟ್ ಹತ್ತು ಸಿಗರೇಟ್ ಗಳಿಗೆ ಸಮಾನವಾಗಿರುತ್ತದೆ. ಯಾವುದೇ ಕಾರಣಕ್ಕೂ ಸಹ ಊಟ ಮಾಡಿದ ಮೇಲೆ ಧೂಮಪಾನವನ್ನು ಮಾಡಬೇಡಿ.
7)ಏಳನೇದು ಈಜುವುದು. ಊಟ ಮಾಡಿದ ತಕ್ಷಣ ದೇಹಕ್ಕೆ ಪೋಷಕಾಂಶಗಳು ಅತ್ಯವಶ್ಯಕವಾಗಿರುತ್ತದೆ. ಊಟ ಮಾಡಿದ ತಕ್ಷಣವೇ ನೀವು ನೀರಿನಲ್ಲಿ ಈಜುವುದರಿಂದ ದೇಹಕ್ಕೆ ಆಯಾಸವನ್ನುಂಟು ಮಾಡುತ್ತದೆ. ಅಷ್ಟೇ ಅಲ್ಲದೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.
8)ಎಂಟನೇದು ನೀರು ಕುಡಿಯುವುದು. ಒಂದು ವೇಳೆ ನೀವು ತಿಂದ ತಕ್ಷಣ ನೀರು ಕುಡಿದರೆ ಅದು ಕೆಲವೊಮ್ಮೆ ಅನ್ನನಾಳಕ್ಕೂ ಹೋಗುವ ಸಾಧ್ಯತೆಗಳು ಇದೆ. ಆದ್ದರಿಂದ ನೀರು ಕುಡಿಯಬಾರದು ಒಂದು ವೇಳೆ ಅರ್ಥ ಅತ್ಯವಶ್ಯಕವಾಗಿ ಇದ್ದರೆ ಮಾತ್ರ ಒಂದೆರಡು ಸಿಪ್ ನೀರನ್ನು ಕುಡಿಯಬಹುದು ಅಷ್ಟೆ.
9)ಒಂಬತ್ತನೇಯದಾಗಿ ಬೆಲ್ಟ್ ಸಡಿಲ ಗೊಳಿಸುವುದು. ನೀವು ಆಗ ಮಾತ್ರ ಹೊಟ್ಟೆ ತುಂಬಾ ಊಟ ಮಾಡಿರುತ್ತೀರಾ. ಹಾಗಾಗಿ ಹೊಟ್ಟೆಯ ಬೆಲ್ಟ್ ಸ್ವಲ್ಪ ಟೈಟ್ ಆಗಿರುವುದರಿಂದ ಬೆಲ್ಟ್ ಅನ್ನು ಸರಿಲಗೊಳಿಸುತ್ತೀರಾ. ಅದು ಯಾವುದೇ ಕಾರಣಕ್ಕೂ ಸಹ ಮಾಡಬಾರದು ಇದರಿಂದ ಹಲವಾರು ಎಫೆಕ್ಟ್ ಗಳು ಆಗುತ್ತವೆ.
ಇನ್ನು ಹಲ್ಲಿ ಒಂದು ನಿಮ್ಮ ಮನೆಯಲ್ಲಿ ಮನೆಯಲ್ಲಿ ಇರಲ್ಲ..!! ಹಲ್ಲಿ ಯನ್ನೂ ಹೊಡಿಸುವ ಸೂಪರ್ ಹಿಟ್ ಟಿಪ್ಸ್…
10) ಹತ್ತನೆಯದಾಗಿ ಇವುಗಳನ್ನು ಸೇವಿಸಬಾರದು ಅವು ಯಾವುವು ಎಂದರೆ ಕೂಲ್ ಡ್ರಿಂಕ್ಸ್ ಕುಡಿಯುವುದು. ಅಥವಾ ಐಸ್ ಕ್ರೀಮ್ ಸೇವಿಸುವುದು ಮತ್ತೆ ಎಷ್ಟೋ ಜನರಿಗೆ ಊಟ ಮಾಡಿದ ನಂತರ ಸಿಹಿ ತಿಂಡಿಗಳನ್ನು ತಿನ್ನಬೇಕು ಎಂದು ಅನಿಸಿತ್ತಿರುತ್ತದೆ. ಅದನ್ನು ಎಂದಿಗೂ ಸಹ ಮಾಡಬಾರದು.