Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

2024 Union Budget ನಲ್ಲಿ ರೈತರಿಗೆ ಸಿಕ್ಕ ಕೊಡುಗೆಗಳೇನು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

16ನೇ ಕಂತಿನ ಹಣ ಶೀಘ್ರದಲ್ಲೇ ಜಮೆ ಆಗಲಿದೆ ಎಂದು ಮಾಹಿತಿ ಸಿಕ್ಕಿದೆ. ಈ ಯೋಜನೆಯ ಪ್ರಸ್ತುತ ಸ್ಥಿತಿ ಹೀಗಿರುವಾಗ, ಈ ಮಧ್ಯಂತರ ಬಜೆಟ್ ನಲ್ಲಿ ಸರ್ಕಾರವು ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ

2024 Union Budget: ಪಿಎಮ್ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಫೆಬ್ರವರಿ 1ರಂದು 2024-25ನೇ ಸಾಲಿನ ಬಜೆಟ್ ಮಂಡನೆ (Union Budget) ಮಾಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಿದ್ದು, ಈ ಬಜೆಟ್ ನಲ್ಲಿ ರೈತರಿಗೆ ಭಾರಿ ಕೊಡುಗೆ ಸಿಕ್ಕಿದೆ. ವಿಶೇಷವಾಗಿ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi Yojana) ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದ್ದು, ರೈತರಿಗೆ ಏನೆಲ್ಲಾ ಲಾಭವಾಗಲಿದೆ ಎಂದು ಪೂರ್ತಿಯಾಗಿ ತಿಳಿಯೋಣ..

PM Kisan Samman Nidhi Yojana:

2019ರಲ್ಲಿ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ವಿಶೇಷವಾಗಿ ರೈತರಿಗಾಗಿ ಜಾರಿಗೆ ತರಲಾಯಿತು. ಈ ಯೋಜನೆಯಲ್ಲಿ ಫಲಾನುಭವಿ ರೈತರಿಗೆ 3 ಕಂತುಗಳಲ್ಲಿ ಪ್ರತಿ ವರ್ಷ ₹6000 ಡಿಬಿಟಿ ಮೂಲಕ ವರ್ಗಾವಣೆ ಆಗುತ್ತಿದೆ. ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್, ಡಿಸೆಂಬರ್-ಮಾರ್ಚ್.. ಒಂದು ವರ್ಷದ ಮೂರು ತ್ರೈಮಾಸಿಕ ರೂಪದಲ್ಲಿ ಪ್ರತಿ ಕಂತಿನಲ್ಲಿ ₹2000 ರೂಪಾಯಿ ಬರಲಿದೆ. ಈಗಾಗಲೇ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15 ಕಂತುಗಳ ಹಣ ರೈತರ ಖಾತೆಗೆ ಜಮೆ ಆಗಿದೆ.

16ನೇ ಕಂತಿನ ಹಣ ಶೀಘ್ರದಲ್ಲೇ ಜಮೆ ಆಗಲಿದೆ ಎಂದು ಮಾಹಿತಿ ಸಿಕ್ಕಿದೆ. ಈ ಯೋಜನೆಯ ಪ್ರಸ್ತುತ ಸ್ಥಿತಿ ಹೀಗಿರುವಾಗ, ಈ ಮಧ್ಯಂತರ ಬಜೆಟ್ ನಲ್ಲಿ ಸರ್ಕಾರವು ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಬಗ್ಗೆ ಹೊಸದಾಗಿ ಏನಾದರೂ ಘೋಷಣೆ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು, ಆದರೆ ಬಜೆಟ್ ನಲ್ಲಿ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಬದಲಾವಣೆ ಆಗಿಲ್ಲ, ಆದರೆ ರೈತರಿಗೆ ಸಂಬಂಧಿಸಿದ ಬೇರೆ ಯೋಜನೆಗಳ ಬಗ್ಗೆ ತಿಳಿಸಲಾಗಿದೆ..

ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಹೆಚ್ಚಳ?

ಕೆಲ ದಿನಗಳಿನಿಂದಲು ನಿರ್ಮಲಾ ಸೀತಾರಾಮನ್ (Nirmala Sitharaman) ಅವರು 6ನೇ ಬಾರಿ ಬಜೆಟ್ ಮಂಡನೆ ಮಾಡುವಾಗ, ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೊತ್ತವನ್ನು ₹6000 ಇಂದ ₹9000 ಕ್ಕೆ ಏರಿಕೆ ಮಾಡಲಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಆ ರೀತಿ ಆಗಿಲ್ಲ. ಆದರೆ ಈ ಯೋಜನೆಯ 16ನೇ ಕಂತಿನ ಹಣ ಜಮೆ ಆಗೋದು ಯಾವಾಗ ಎಂದು ಮಾಹಿತಿ ಸಿಕ್ಕಿದೆ.

2024 Union Budget- Farmer
What are the contributions to the farmers in the 2024 Union Budget?

16ನೇ ಕಂತಿನ ಹಣ ಬಿಡುಗಡೆ ದಿನಾಂಕ:

ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 16ನೇ ಕಂತಿನ ಹಣ ಬಿಡುಗಡೆ ಆಗೋದು ಯಾವಾಗ ಎಂದು ರೈತರಲ್ಲಿ ಪ್ರಶ್ನೆ ಇತ್ತು, ಈಗ ಸಿಕ್ಕಿರುವ ಮಾಹಿತಿಯ ಅನುಸಾರ, ಫೆಬ್ರವರಿ ತಿಂಗಳಿನ ಅಂತಿಮ ವಾರದಲ್ಲಿ ಅಥವಾ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 16ನೇ ಕಂತಿನ ಹಣ ಬಿಡುಗಡೆ ಆಗಲಿದೆ. ಈ ಸಮಯದ ಒಳಗೆ ರೈತರು ಆನ್ಲೈನ್ ಮೂಲಕ ಇಕೆವೈಸಿ (Ekyc) ಮಾಡಿಸಿಕೊಂಡಿರಬೇಕು, ಈ ಕೆಲಸ ಆಗಿದ್ದರೆ ಮಾತ್ರ ರೈತರ ಖಾತೆಗೆ 16ನೇ ಕಂತಿನ ಹಣ ಜಮೆ ಆಗುತ್ತದೆ.

ಪಿಎಮ್ ಕಿಸಾನ್ ಯೋಜನೆ ಸಹಾಯವಾಣಿ (PM Kisan Scheme Helpline)

ಒಂದು ವೇಳೆ ರೈತರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿಲ್ಲ ಎಂದರೆ, ಸರ್ಕಾರದ ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಿ ದೂರು ನೀಡಬಹುದು, 1800115526 ಅಥವಾ 011-23381092 ಇದು ಹೆಲ್ಪ್ ಲೈನ್ ನಂಬರ್ ಆಗಿದ್ದು, ಎರಡು ಕೂಡ ಟೋಲ್ ಫ್ರೀ ಆಗಿರುತ್ತದೆ.

ರೈತರಿಗೆ ಬೇರೆ ಸೌಲಭ್ಯಗಳು:

ಇನ್ನುಮುಂದೆ ರೈತರಿಗೆ ಹೊಸ ಟೆಕ್ನಾಲಜಿ ಸಹಾಯ ಮಾಡುತ್ತದೆ, ನ್ಯಾನೋ ಯೂರಿಯಾವನ್ನು ಈಗಾಗಲೇ ವಿಸ್ತರಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆತ್ಮನಿರ್ಭರ್ ಆಯಿಲ್ ಸೀಡ್ ಅಭಿಯಾನ ಕೂಡ ಶುರುವಾಗಿದೆ, ಈ ಯೋಜನೆಯಲ್ಲಿ ಎಣ್ಣೆ ಬೀಜಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ.

ಹೈನುಗಾರಿಕೆ ರೈತರಿಗೆ ಲಾಭ:

ಹೈನುಗಾರಿಕೆ ಮಾಡುತ್ತಿರುವ ರೈತರಿಗೆ ಹಾಲು ಜಾಸ್ತಿ ಮಾಡಲು ಯೋಜನೆಯನ್ನು ಜಾರಿಗೆ ತರಲಾಗಿದೆ. ಮೀನುಗಾರರಿಗಾಗಿ ಮತ್ಸ್ಯ ಸಂಪದ ಯೋಜನೆಯನ್ನು ಜಾರಿಗೆ ತರಲಾಗಿದೆ, ಈ ಮೂಲಕ ಮೀನುಗಾರಿಕೆಗೆ ಪ್ರೋತ್ಸಾಹ ನೀಡಲಿದೆ ಸರ್ಕಾರ.

What are the contributions to the farmers in the 2024 Union Budget?

Leave a comment