ಗ್ರಾಮೀಣ ಪ್ರದೇಶ ಬಿಟ್ಟು ನಗರಗಳಿಗೆ ವಲಸೆ ಹೋಗುತ್ತಿರುವ ರೈತರಿಗೆ ಕಾಂಗ್ರೆಸ್ ಇನ್ನೊಂದು ಗ್ಯಾರಂಟಿ ಸ್ಕೀಮ್ ಕೊಡುತ್ತಿದೆ.
Karnataka Government scheme for Farmers: ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶ ಹಾಗೂ ಭಾಗಗಳಲ್ಲಿ ಕೃಷಿ ಚಟುವಟಿಕೆ ಬಹಳ ಕಡಿಮೆಯಾಗುತ್ತಾ ಬರುತ್ತಿದೆ. ಒಂದು ಕಾಲದಲ್ಲಿ ಕುಲಕಸುಬು ಕೃಷಿ ಎನಿಸಿಕೊಂಡಿದ್ದ ವೃತ್ತಿ ಈಗ ಕಣ್ಮರೆ ಆಗುತ್ತಿದ್ದು ಅದಕ್ಕೆ ನಾವು ಅನೇಕ ರೀತಿಯ ಕಾರಣಗಳನ್ನು ಕೂಡ ನೋಡಬಹುದು.
ಇವತ್ತಿನ ದಿನಗಳಲ್ಲಿ ನಗರ ಪ್ರದೇಶದ ಜನಜೀವನ ಶೈಲಿಗಳು ಗ್ರಾಮೀಣ ಪ್ರದೇಶದ ಜನರನ್ನು ಬಹಳ ಆಕರ್ಷಣೆ ಮಾಡಿ ಕರೆಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಇದ್ದುಕೊಂಡು ಮೈಕೈ ನೋವು ಮಾಡಿಕೊಂಡು ಕೃಷಿ ಮಾಡಿ ಇರುವುದಕ್ಕಿಂತ ನಗರ ಪ್ರದೇಶದಲ್ಲಿ ಎಸಿ ಚೇಂಬರ್ ಇರುವ ರೂಮ್ನಲ್ಲಿ ಕೆಲಸ ಮಾಡುವುದು ಉತ್ತಮ ಎಂದು ಎಲ್ಲರೂ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.
ಈಗಾಗಲೇ ಎಷ್ಟೋ ಜನರು ಕೃಷಿ ಕೆಲಸವನ್ನು ಬಿಟ್ಟು ಗ್ರಾಮೀಣ ಪ್ರದೇಶವನ್ನು ತೊರೆದು ನಗರ ಪ್ರದೇಶವನ್ನು ಸೇರಿಕೊಂಡಿದ್ದು ಹಾಗಾಗಿ ಈ ರೀತಿಯ ವಲಸೆ ಹೋಗುವ ಮನೋಭಾವವನ್ನು ನಿಲ್ಲಿಸುವ ಸಲುವಾಗಿ ರಾಜ್ಯದಲ್ಲಿ ರಾಜ್ಯ ಸರ್ಕಾರವು ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಬಹುದು.
ರಾಜ್ಯ ಸರ್ಕಾರದ ಸರ್ಕಾರಿ ಜಮೀನನ್ನು ಗುರುತು ಮಾಡಿ ಅಂತಹ ಜಾಗವನ್ನು ಹಿಂದುಳಿದ ವರ್ಗಕ್ಕೆ ಅಲ್ಪಸಂಖ್ಯಾತರಿಗೆ ಮತ್ತು ದಲಿತರಿಗೆ ನೀಡಲು ರಾಜ್ಯ ಸರ್ಕಾರದ ಸಹಕಾರಿ ಕೃಷಿ ಈ ನೂತನ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ.
ಈ ಬಗ್ಗೆ ಸ್ವತಹ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾಕ್ಟರ್ ಎಚ್ ಸಿ ಮಹದೇವಪ್ಪ ಅವರು ಅಧಿಕೃತ ಮಾಹಿತಿಯನ್ನು ಕೂಡ ನೀಡಿದ್ದಾರೆ. ರಾಜ್ಯ ಸರ್ಕಾರದಿಂದ ಈ ಒಂದು ಯೋಜನೆಗೆ ಅನುದಾನ ವಿವಿಧ ಇಲಾಖೆಗಳಿಂದ ಬರುತ್ತಿದೆ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಹಿಂದುಳಿದ ವರ್ಗಕ್ಕೆ ನೀಡಲಾಗುವ ಜಾರಿಗೆ ಸರ್ಕಾರ ಈಗಾಗಲೇ ನಿರ್ಧಾರ ಕೈಗೊಂಡಿತ್ತು.
ಮೊದಲು ಮೈಸೂರಿನಲ್ಲಿ ಈ ಒಂದು ಯೋಜನೆಯನ್ನು ಅರ್ಥಪೂರ್ಣವಾಗಿ ಮಾಡಲಿದೆ. ಈ ಯೋಜನೆಯ ಕೆಲಸಕ್ಕೂ ಮುನ್ನ ಕೆಲವೊಂದಿಷ್ಟು ಸರಕಾರಿ ಕೆಲಸಗಳ ಆಯೋಗ ಗುಂಪುಗಳಾಗಿದ್ದು ನಂತರ ಎಷ್ಟು ಎಕರೆ ಜಮೀನು ನೀಡುವುದು ಎಂದು ನಂತರ ವಿವರವನ್ನು ನೀಡಲಾಗುತ್ತದೆ. ಕನಿಷ್ಠ ಒಂದು ಕುಟುಂಬದಲ್ಲಿರುವ ಐದರಿಂದ ಆರು ಜನಕ್ಕೆ 1.67 ಎಕರೆ ಜಮೀನನ್ನು ನೀಡಬಹುದು ಎಂದು ಅಂದಾಜು ಮಾಡಲಾಗಿದ್ದು ಅದೇ ರೀತಿ ಸರ್ಕಾರದ ಜಮೀನು ಇಲ್ಲ ವಾದ ಪಕ್ಷದಲ್ಲಿ.
ಕನಿಷ್ಠ 50 ಎಕರೆ ಸರ್ಕಾರಿ ಜಮೀನು ಎಂದು ಖರೀದಿ ಮಾಡಿ ಅದನ್ನು ಬಡವರಿಗೆ ಅಲ್ಪಸಂಖ್ಯಾತರಿಗೆ ಹಾಗೂ ಹಿಂದುಳಿದ ವರ್ಗಕ್ಕೆ ನೀಡುವ ಯೋಜನೆ ಕೂಡ ಈಗಾಗಲೇ ಸರ್ಕಾರದ ಮುಂದಿದೆ. ಇಷ್ಟೆಲ್ಲಾ ಆದರೆ ಗ್ರಾಮೀಣ ಪ್ರದೇಶ ತೊರೆಯುತ್ತಿರುವ ಜನರಿಗೆ ಯಾವುದೇ ರೀತಿಯ ವಲಸೆ ಹೋಗುವ ಯೋಚನೆ ಬರುವುದಿಲ್ಲ ಜೊತೆಗೆ ಸರಕಾರದಿಂದ ಬೇಕಾಗಿರುವ ಕೃಷಿ ಚಟುವಟಿಕೆಗೆ ಎಲ್ಲಾ ಸಹಾಯಗಳನ್ನು ಕೂಡ ಸರಕಾರ ಮಾಡಿಕೊಡುತ್ತದೆ…