Remake Movies: ಅತಿ ಹೆಚ್ಚು ರಿಮೇಕ್ ಸಿನಿಮಾಗಳಲ್ಲಿ ನಟಿಸಿರುವ ಸೌತ್ ಇಂಡಿಯನ್ ಟಾಪ್ ನಟರು ಯಾರು ಗೊತ್ತೇ ?? ರಜನಿ 60, ವಿಜಯ್ 20, ಸುದೀಪ್ ಎಷ್ಟು ಗೊತ್ತೇ ??
ಶಿವರಾಜ್ ಕುಮಾರ್ ಸೆಂಚುರಿ ಸ್ಟಾರ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಆನಂದ್ ಸಿನಿಮಾದ ಮೂಲಕ ಸಿನಿಮಾ ಪಯಣ ಆರಂಭಿಸಿದರು. 3
Remake Movies: ನಮಸ್ಕಾರ ಸ್ನೇಹಿತರೇ, ಯಾವುದೇ ಒಂದು ಸಿನಿಮಾರಂಗದಲ್ಲಿ ಆದರೂ ಆ ಭಾಷೆಯಲ್ಲಿ ಬಿಡುಗಡೆಯಾದ ಸಿನಿಮಾವನ್ನು ಮತ್ತೊಂದು ಭಾಷೆಯಲ್ಲಿ ಮರು ಚಿತ್ರೀಕರಣ ಅಂದರೆ ರೀಮೇಕ್ ಮಾಡುವುದು ಸಹಜ. ಹಾಗೆಯೇ ನಟರು ಸಹ ತಮ್ಮ ಪ್ರಶಂಸೆ ಹೆಚ್ಚಿಸಿಕೊಳ್ಳಲು ಮತ್ತು ಕಥೆ ಚೆನ್ನಾಗಿದ್ದರೆ ಅದನ್ನು ಮಾಡಿ ಪ್ರಖ್ಯಾತಿಗೊಳಿಸಲು ಸೀನಿಮಾವನ್ನು ರಿಮೇಕ್ ಮಾಡಲು ಒಪ್ಪಿಕೊಳ್ಳುತ್ತಾರೆ. ಹಾಗೆ ನೋಡುವುದಾದರೆ ಸೌತ್ ಇಂಡಿಯಾದ ನಟರೆಲ್ಲ ರಿಮೇಕ್ ಸಿನಿಮಾಗಳನ್ನು ಅತಿ ಹೆಚ್ಚು ಮಾಡಿ ಯಶಸ್ಸನ್ನು ಕಂಡಿದ್ದು , ಯಾವ ನಟ ಅತಿ ಹೆಚ್ಚು ರಿಮೇಕ್ ಸಿನಿಮಾಗಳನ್ನು ಮಾಡಿದ್ದಾರೆ ಮತ್ತು ಅಭಿನಯಿಸಿದ್ದಾರೆ ಎಂದು ನೋಡೋಣ ಬನ್ನಿ.
ಮೊದಲಿಗೆ ಕಮಲ್ ಹಾಸನ್ ಇವರು ಜೂನಿಯರ್ ಆರ್ಟಿಸ್ಟ್ ಆಗಿ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದ್ದು ಸೌತ್ ಮತ್ತು ಹಿಂದಿ ಭಾಷೆ ಸೇರಿದಂತೆ ಸುಮಾರು 250ಕ್ಕು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಇವರು 61 ರಿಮೇಕ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ರಜಿನಿಕಾಂತ್ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮಿಳು ಅಪೂರ್ವ ರಾಗನ್ಕಲ್ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟವರು. ಕನ್ನಡ ಹಿಂದಿ ತೆಲುಗು ಮಲಯಾಳಂ ಸುಮಾರು 260ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರು ಸುಮಾರು 60 ರಿಮೇಕ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ರವಿಚಂದ್ರನ್ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರು ಜೂನಿಯರ್ ಆರ್ಟಿಸ್ಟ್ ಆಗಿ ಸಿನಿಮಾರಂಗಕ್ಕೆ ಪಾದರ್ಪಣೆ ಮಾಡಿದ್ದು ಇವರು ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದು ಅವುಗಳಲ್ಲಿ 53 ರಿಮೇಕ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಚಿರಂಜೀವಿ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರು ಪುನದಿರಿ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟವರು. ಈ ವರೆಗೆ ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಇವರು 38 ರಿಮಿಕ್ಸ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಮೋಹನ್ ಲಾಲ್ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಸುಮಾರು 350ಕ್ಕು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದು 34 ರಿಮೇಕ್ ಸಿನಿಮಾಗಳಲ್ಲಿ ಮೋಹನ್ ಲಾಲ್ ರವರು ಬಣ್ಣ ಹಚ್ಚಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಾಯವ್ವ ಸಿನಿಮಾ ಮೂಲಕ ಸಿನಿ ಜೀವನ ಪ್ರಾರಂಭಿಸಿದ್ದು ಹೀರೋ ಆಗಿ ಈವರೆಗೂ 50ಕ್ಕು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಇವರು ಸುಮಾರಿ 23 ರಿಮೇಕ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಶಿವರಾಜ್ ಕುಮಾರ್ ಸೆಂಚುರಿ ಸ್ಟಾರ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಆನಂದ್ ಸಿನಿಮಾದ ಮೂಲಕ ಸಿನಿಮಾ ಪಯಣ ಆರಂಭಿಸಿದರು. 35 ವರ್ಷಗಳ ಕಾಲ ಸಿನಿಮಾ ರಂಗದಲ್ಲಿ 120ಕ್ಕು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದು 28 ರಿಮೇಕ್ ಸಿನಿಮಾಗಳನ್ನು ಮಾಡಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಅವರು ನಟರಾಗಿ ನಿರ್ದೇಶಕರಾಗಿ
ನಿರ್ಮಾಪಕರಾಗಿ ಉತ್ತಮ ಯಶಸ್ಸನ್ನು ಗಳಿಸಿದ್ದು 50ಕ್ಕು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಉಪೇಂದ್ರ ಅವರು 27 ರಿಮೇಕ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಅಕ್ಕಿನೇನಿ ನಾಗಾರ್ಜುನ್ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಲೀಡರ್ಗಳಲ್ಲಿ ಅಭಿನಯಿಸಿದ್ದು 21 ರಿಮೇಕ್ ಸಿನಿಮಾಗಳಿಗೆ ಬಣ್ಣ ಹಾಕಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ್ ಅವರು ಮೆಜೆಸ್ಟಿಕ್ ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟಿದ್ದು ಹೀರೋ ಆಗಿ ಇವರು ಸುಮಾರು 50ಕ್ಕು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದು 16 ರಿಮೇಕ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ತಲಪತಿ ವಿಜಯ್ ತಮಿಳಿನ ಸೂಪರ್ ಸ್ಟಾರ್ ತಲಾಪತಿ ವಿಜಯ್ ಎಂದೇ ಫೇಮಸ್ ಆಗಿರುವ ಇವರು ಚಿಲ್ಡ್ ಆರ್ಟಿಸ್ಟ್ ಆಗಿ ಸಿನೆಮಾ ಇಂಡಸ್ಟ್ರಿ ಗೆ ಎಂಟ್ರಿ ಕೊಟ್ಟಿದ್ದು ಇವರು ಸುಮಾರು 65 ಹೆಚ್ಚು ಸಿನೆಮಾ ಗಳಲ್ಲಿ ಅಭಿನಹಿಸಿದ್ದು 14 ರಿಮೇಕ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಅವರು ಚೆಲ್ಲಾಟ ಸಿನಿಮಾದ ಮೂಲಕ ಹೀರೋ ಹಾಗೆ ಸಿನಿಮಾ ಕೆರಿಯರ್ ಪ್ರಾರಂಭಿಸಿದ್ದು, ಹೀರೋ ಆಗಿ ಇಲ್ಲಿ ವರೆಗೂ 40ಕ್ಕು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದು 13 ರಿಮೇಕ್ ಸಿನಿಮಾಗಳನ್ನು ಗಣೇಶ್ ಅವರು ಮಾಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹುಟ್ಟುತ್ತಲೇ ಸಿನಿಮಾರಂಗವನ್ನು ಪ್ರಾರಂಭಿಸಿದ್ದು ಅಪ್ಪು ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟ ಇವರು ಸುಮಾರು 30ಕ್ಕೂ ಸಿನಿಮಾಗಳಲ್ಲಿ ಅಭಿನಯಿಸಿದ್ದು 9 ರಿಮೇಕ್ ಸಿನಿಮಾಗಳಲ್ಲಿ ಪುನೀತ್ ರಾಜಕುಮಾರ್ ಅವರು ಅಭಿನಯಿಸಿದ್ದಾರೆ. ಇದಿಷ್ಟು ಸೌತ್ ಆಕ್ಟರ್ಸ್ಗಳು ಯಾರೆಲ್ಲ ರಿಮೇಕ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಎನ್ನುವ ಮಾಹಿತಿ…
Know the top South Indian actors who have starred in most remakes?
ಓದಲು ಹೆಚ್ಚಿನ ಸುದ್ದಿಗಳು:
ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ಟಾಪ್ ಸಿನಿಮಾಗಳು ಯಾವ್ಯಾವು ಗೊತ್ತಾ ಇದರಲ್ಲಿ ನಿಮ್ಮ ಹೆಚ್ಚಿನ ಚಿತ್ರ ಯಾವುದು??