Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

RD Interest Rate: RD ಯೋಜನೆಗೆ ಯಾವ ಬ್ಯಾಂಕ್ ನಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

ಇದೊಂದು ಉಳಿತಾಯ ಯೋಜನೆ ಆಗಿದ್ದು, ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ನಲ್ಲಿ RD ಯೋಜನೆ ತೆರೆದು ಉಳಿತಾಯ ಮಾಡುವುದಕ್ಕೆ ಶುರು ಮಾಡಬಹುದು.

RD Interest Rate: ತಮ್ಮ ಬಳಿ ಇರುವ ಹಣವನ್ನು ಹೂಡಿಕೆ ಮಾಡಿ, ಮುಂದೆ ಒಳ್ಳೆಯ ರಿಟರ್ನ್ಸ್ ಪಡೆಯಬೇಕು ಎಂದುಕೊಂಡಿರುವವರಿಗೆ RD ಯೋಜನೆ ಸರಿಯಾದ ಆಯ್ಕೆ ಎಂದರೆ ತಪ್ಪಲ್ಲ. ಯಾವುದೇ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ನಲ್ಲಿ RD ಹೂಡಿಕೆ ಖಾತೆ ತೆರೆಯಬಹುದು. ನಿಮತ್ವ ಉತ್ತಮ ಆದಾಯ ಕೊಡುವ ವಿಶೇಷವಾದ ಯೋಜನೆಯಲ್ಲಿ RD ಯೋಜನೆ ಪ್ರಮುಖವಾದದ್ದು. ಹಾಗಿದ್ದರೆ ಈ ಯೋಜನೆಯ ವಿಶೇಷತೆ ಏನು? ಹೆಚ್ಚಿನ ಜನರು RD ಯೋಜನೆಯಲ್ಲೇ ಹೂಡಿಕೆ ಮಾಡುವುದು ಯಾಕೆ? ಯಾವ ಬ್ಯಾಂಕ್ ಗಳಲ್ಲಿ RD ಯೋಜನೆಗೆ ಹೆಚ್ಚು ಬಡ್ಡಿ ಸಿಗುತ್ತದೆ? ಎಲ್ಲವನ್ನು ತಿಳಿಯೋಣ..

RD ಯೋಜನೆ ಅಂದರೇನು?

ಇದೊಂದು ಉಳಿತಾಯ ಯೋಜನೆ ಆಗಿದ್ದು, ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ನಲ್ಲಿ RD ಯೋಜನೆ ತೆರೆದು ಉಳಿತಾಯ ಮಾಡುವುದಕ್ಕೆ ಶುರು ಮಾಡಬಹುದು. ಇಲ್ಲಿ ನೀವು ಪ್ರತಿ ತಿಂಗಳು ಇಂತಿಷ್ಟು ಎಂದು ಹಣ ಪಾವತಿ ಮಾಡಬೇಕಾಗುತ್ತದೆ. RD ಹೂಡಿಕೆಗೆ ಸೇವಿಂಗ್ಸ್ ಅಕೌಂಟ್ ಗಿಂತ ಜಾಸ್ತಿ ಮತ್ತು FD ಗಿಂತ ಕಡಿಮೆ ಬಡ್ಡಿ ಸಿಗುತ್ತದೆ. ಹಾಗಾಗಿ ಹೂಡಿಕೆಗೆ ಇದು ಒಳ್ಳೆಯ ಆಯ್ಕೆ ಆಗಿದ್ದು, ಹೆಚ್ಚು ಜನರು RD ಯೋಜನೆಯಲ್ಲಿ ಹೂಡಿಕೆ ಮಾಡುತ್ತಾರೆ. ಬಹುತೇಕ ಎಲ್ಲಾ ಬ್ಯಾಂಕ್ ಗಳಲ್ಲಿ RD ಯೋಜನೆಗೆ 7% ಗಿಂತ ಜಾಸ್ತಿ ಬಡ್ಡಿ ಸಿಗುತ್ತದೆ. ಹಾಗಿದ್ದಲ್ಲಿ, ನಮ್ಮ ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ RD ಯೋಜನೆಗೆ ಎಷ್ಟು ಬಡ್ಡಿ ಸಿಗುತ್ತದೆ ಎಂದು ತಿಳಿಯೋಣ..

RD Interest Rate in SBI:

SBI ನಲ್ಲಿ RD ಯೋಜನೆಯ ಮೂಲಕ ಹೂಡಿಕೆ ಮಾಡುವ ಸಾಮಾನ್ಯ ಜನರಿಗೆ 6.5% ಇಂದ 7% ವರೆಗು ಬಡ್ಡಿ ಸಿಗುತ್ತದೆ. ಹಿರಿಯ ನಾಗರೀಕರಿಗೆ 7.35 ಇಂದ 7.5% ವರೆಗು ಬಡ್ಡಿ ಸಿಗುತ್ತದೆ. RD ಯೋಜನೆಯಲ್ಲಿ ತಿಂಗಳಿಗೆ ಮಿನಿಮಮ್ ₹100 ರೂಪಾಯಿ ಹೂಡಿಕೆ ಮಾಡಬಹುದು. 1 ರಿಂದ 10 ವರ್ಷಗಳ ಅವಧಿಗೆ RD ಹೂಡಿಕೆ ಮಾಡಬಹುದು. ಈ ಹೊಸ ಬಡ್ಡಿದರ 2023ರ ಡಿಸೆಂಬರ್ 27ರಿಂದ ಜಾರಿಗೆ ಬಂದಿದೆ.

SBI ಬಡ್ಡಿದರ ಹೀಗಿದೆ:

  • 1 ರಿಂದ 2 ವರ್ಷಕ್ಕಿಂತ ಕಡಿಮೆ ಅವಧಿಗೆ: 6.80%
  • 2 ರಿಂಸ 3 ವರ್ಷಕ್ಕಿಂತ ಕಡಿಮೆ ಅವಧಿಗೆ: 7.00%
  • 3 ರಿಂದ 5 ವರ್ಷಕ್ಕಿಂತ ಕಡಿಮೆ ಅವಧಿಗೆ: 6.50%
  • 5 ರಿಂದ 10 ವರ್ಷಗಳ ಅವಧಿಗೆ: 6.50%

RD Interest Rate in HDFC:

HDFC ಬ್ಯಾಂಕ್ ನಲ್ಲಿ 6 ತಿಂಗಳಿನಿಂದ 10 ವರ್ಷಗಳ ಅವಧಿಗೆ RD ಯೋಜನೆಯಲ್ಲಿ ಠೇವಣಿ ಮಾಡಬಹುದು. HDFC ಬ್ಯಾಂಕ್ ನಲ್ಲಿ RD ಹೂಡಿಕೆಗೆ ಮಿನಿಮಮ್ ₹1000 ಠೇವಣಿ ಶುರು ಮಾಡಬೇಕು. ಸಾಮಾನ್ಯ ಗ್ರಾಹಕರಿಗೆ 4.5% ಇಂದ 7% ವರೆಗು, ಹಿರಿಯ ನಾಗರೀಕರಿಗೆ 5% ಇಂದ 7.75% ವರೆಗು ಬಡ್ಡಿದರ ಅನ್ವಯವಾಗುತ್ತದೆ. ಹೊಸ ಬಡ್ಡಿದರ ಜಾರಿಗೆ ಬಂದಿರುವುದು 2023ರ ಜನವರಿ 24ರಿಂದ..

HDFC ಬಡ್ಡಿದರ:

  • 6 ತಿಂಗಳ ಅವಧಿ: 4.50%
  • 9 ತಿಂಗಳ ಅವಧಿ: 5.75%
  • 12 ತಿಂಗಳ ಅವಧಿ: 6.60%
  • 15 ತಿಂಗಳ ಅವಧಿ: 7.10%
  • 24 ತಿಂಗಳ ಅವಧಿ: 7.00%
  • 27 ತಿಂಗಳ ಅವಧಿ: 7.00%
  • 36 ತಿಂಗಳ ಅವಧಿ: 7.00%
  • 39 ತಿಂಗಳ ಅವಧಿ: 7.00%
  • 48 ತಿಂಗಳ ಅವಧಿ: 7.00%
  • 60 ತಿಂಗಳ ಅವಧಿ: 7.00%
  • 90 ತಿಂಗಳ ಅವಧಿ: 7.00%
  • 120 ತಿಂಗಳ ಅವಧಿ: 7.00%

RD Interest Rate in ICICI:

ಈ ಬ್ಯಾಂಕ್ ನಲ್ಲಿ ಕೂಡ ಗ್ರಾಹಕರಿಗೆ RD ಯೋಜನೆಗೆ ಉತ್ತಮ ಬಡ್ಡಿ ಸಿಗುತ್ತದೆ. ಸಾಮಾನ್ಯ ಗ್ರಾಹಕರಿಗೆ 4.75 ಇಂದ 7.10% ಬಡ್ಡಿ, ಹಿರಿಯ ನಾಗರೀಕರಿಗೆ 5.25 ಇಂದ 7.60% ಬಡ್ಡಿ ಸಿಗುತ್ತದೆ. ಈ ಬ್ಯಾಂಕ್ ನಲ್ಲೂ 6 ತಿಂಗಳಿನಿಂದ 10 ವರ್ಷಗಳವರೆಗು RD ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇಲ್ಲಿ ಮಿನಿಮಮ್ ₹500 ರೂಪಾಯಿ RD ಹೂಡಿಕೆ ಮಾಡಬಹುದು. ಹೊಸ ಬಡ್ಡಿದರ 2023ರ ಫೆಬ್ರವರಿ ಇಂದ ಜಾರಿಯಲ್ಲಿದೆ.

ICICI ಬಡ್ಡಿದರ:

  • 6 ತಿಂಗಳ ಅವಧಿ: 4.75%
  • 9 ತಿಂಗಳ ಅವಧಿ: 6.00%
  • 12 ತಿಂಗಳ ಅವಧಿ: 6.70%
  • 15 ತಿಂಗಳ ಅವಧಿ: 7.10%
  • 18 ತಿಂಗಳ ಅವಧಿ: 7.10%
  • 21 ತಿಂಗಳ ಅವಧಿ: 7.10%
  • 24 ತಿಂಗಳ ಅವಧಿ: 7.10%
  • 27 ತಿಂಗಳ ಅವಧಿ: 7.00%
  • 30 ತಿಂಗಳ ಅವಧಿ: 7.00%
  • 33 ತಿಂಗಳ ಅವಧಿ: 7.00%
  • 36 ತಿಂಗಳ ಅವಧಿ: 7.00%
  • 3 ವರ್ಷದಿಂದ 5 ವರ್ಷಗಳ ಅವಧಿ: 7.00%
  • 5 ವರ್ಷದಿಂದ 10 ವರ್ಷಗಳ ಅವಧಿ: 6.90%

Which bank gives higher interest rates on recurrent deposits? Complete details are explained.

Leave a comment