Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Bank Cheque : ಬ್ಯಾಂಕ್ ಚೆಕ್ ಗಳ ಹಿಂದೆ ಯಾಕೆ ಸಹಿ ಹಾಕಬೇಕು? ನಿಜವಾದ ಕಾರಣ ಏನು ಗೊತ್ತಾ?

ಚೆಕ್ ಮೇಲೆ ಹೆಸರು, ಅಕೌಂಟ್ ಡೀಟೇಲ್ಸ್, ಮೊತ್ತ ಎಷ್ಟು ಎಂದು ಬರೆದು ಚೆಕ್ ನ ಬಲಗಡೆ ಸೈನ್ ಹಾಕಬೇಕು. ಇದೆಲ್ಲವನ್ನು ಮಾಡಿದ್ದರು ಕೂಡ, ಚೆಕ್ ಹಿಂಭಾಗದಲ್ಲಿ ಕೂಡ ಸೈನ್ ಹಾಕಬೇಕು. ಇದು ಕೂಡ ಬ್ಯಾಂಕ್ ನಿಯಮ ಆಗಿದೆ.

Bank Cheque: ನಮ್ಮ ದೈನಂದಿನ ಚಟುವಟಿಕೆಗಳು ಸಾಕಷ್ಟಿರುತ್ತದೆ, ಅದರ ಮಧ್ಯೆ ನಾವು ಆ ಚಟುವಟಿಕೆಗಳ ವಿಚಾರಕ್ಕೆ ಇರುವ ನಿಯಮಗಳ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳೋದಕ್ಕೆ ಹೋಗೋದಿಲ್ಲ. ಆ ಕೆಲಸ ಇರುವ ಹಾಗೆ ಮಾಡಿಕೊಂಡು ಹೋಗುತ್ತೇವೆ ಅಷ್ಟೇ. ಆದರೆ ಕೆಲವು ನಿಯಮಗಳ ಹಿಂದಿನ ಕಾರಣಗಳನ್ನು ತಿಳಿದುಕೊಳ್ಳುವುದರಿಂದ ನಮ್ಮ ಕೆಲಸಗಳಿಗೆ ಇನ್ನಷ್ಟು ಒಳ್ಳೆಯದು. ಅಂಥದ್ದೊಂದು ಮುಖ್ಯವಾದ ಕೆಲಸದ ಬಗ್ಗೆ ಇಂದು ತಿಳಿಯೋಣ…

ಬ್ಯಾಂಕ್ ನಿಯಮ:

ನಮ್ಮ ಕೆಲಸಗಳು, ವೃತ್ತಿ, ವ್ಯವಹಾರ ಇದೆಲ್ಲದರಲ್ಲಿ ಮುಖ್ಯವಾದದ್ದು ಹಣಕಾಸಿನ ವ್ಯವಹಾರಗಳು, ಅವುಗಳ ಬಗ್ಗೆ ನಾವು ಸರಿಯಾಗಿ ಗಮನ ಕೊಡಲಿಲ್ಲ ಅಂದ್ರೆ ನಮಗೆ ನಷ್ಟ ಆಗುವ ಸಾಧ್ಯತೆ ಇರುತ್ತದೆ. ಅಂತೆಯೇ ಬ್ಯಾಂಕ್ ಗಳು ಕೂಡ ಹಣದ ವ್ಯವಹಾರಕ್ಕೆ ಸಂಬಂಧಿಸಿದ ಹಾಗೆ ಅನೇಕ ನಿಯಮಗಳನ್ನು ಜಾರಿಗೆ ತಂದಿದೆ. ಅವುಗಳನ್ನು ನಾವೆಲ್ಲರೂ ಪಾಲಿಸಬೇಕು. ಈಗಿನ ಡಿಜಿಟಲ್ ಯುಗದಲ್ಲಿ ನಾವೆಲ್ಲರೂ ಕೂಡ ಆನ್ಲೈನ್ ಮಾಡುತ್ತೇವೆ. ಆದರೆ ಕೆಲವು ಕೆಲಸಗಳಿಗೆ ಚೆಕ್ ಮೂಲಕವೇ ವ್ಯವಹಾರ ಮಾಡಲಾಗುತ್ತದೆ.

Bank Cheque :

ದೊಡ್ಡ ಕಂಪನಿಗಳ ವ್ಯವಹಾರ, ಕಚೇರಿಗಳ ವ್ಯವಹಾರ ಇದೆಲ್ಲವೂ ಕೂಡ ನಡೆಯುವುದು ಚೆಕ್ ಮೂಲಕ. ಬ್ಯಾಂಕ್ ಗೆ ಚೆಕ್ ಹಾಕುವ ವಿಚಾರಕ್ಕೆ ಬ್ಯಾಂಕ್ ವತಿಯಿಂದ ಕೆಲವು ನಿಯಮಗಳಿವೆ. ಅವುಗಳು ಏನೇನು ಎಂದರೆ, ಚೆಕ್ ಮೇಲೆ ಹೆಸರು, ಅಕೌಂಟ್ ಡೀಟೇಲ್ಸ್, ಮೊತ್ತ ಎಷ್ಟು ಎಂದು ಬರೆದು ಚೆಕ್ ನ ಬಲಗಡೆ ಸೈನ್ ಹಾಕಬೇಕು. ಇದೆಲ್ಲವನ್ನು ಮಾಡಿದ್ದರು ಕೂಡ, ಚೆಕ್ ಹಿಂಭಾಗದಲ್ಲಿ ಕೂಡ ಸೈನ್ ಹಾಕಬೇಕು. ಇದು ಕೂಡ ಬ್ಯಾಂಕ್ ನಿಯಮ ಆಗಿದೆ. ಒಂದು ವೇಳೆ ಚೆಕ್ ನಲ್ಲಿ ಒಂದು ಸಣ್ಣ ತಪ್ಪು ನಡೆದರು ಸಹ ಚೆಕ್ ರಿಜೆಕ್ಟ್ ಆಗುತ್ತದೆ..

ಬ್ಯಾಂಕ್ ಚೆಕ್ ನಿಯಮ:

ಚೆಕ್ ಮೇಲೆ ನಾವು ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಬರೆದಿದ್ದರು ಸಹ, ಮತ್ತೊಮ್ಮೆ ಚೆಕ್ ಹಿಂದೆ ಸೈನ್ ಮಾಡಬೇಕು ಅಂತ ಹೇಳೋದು ಯಾಕೆ? ಇದರ ಬಗ್ಗೆ ಯೋಚನೆ ಮಾಡಿದ್ದೀರಾ? ಇಂದು ಈ ಪ್ರಶ್ನೆಗೆ ಉತ್ತರ ತಿಳಿಯೋಣ..

ಚೆಕ್ ಹಿಂದೆ ಸಹಿ ಹಾಕುವುದರ ಹಿಂದಿನ ನಿಯಮ:

ಚೆಕ್ ಹಿಂದೆ ಸೈನ್ ಮಾಡಿಸುವುದಕ್ಕೆ ಒಂದು ಮುಖ್ಯ ಕಾರಣವಿದೆ. ಚೆಕ್ ನಲ್ಲಿ ಎಲ್ಲಾ ವಿವರ ಬರೆದು, ಮ್ಯಾನೇಜರ್ ಇಂದ ಹಣ ಪಡೆದು, ನಂತರ ಮತ್ತೆ ಬಂದು ಹಣ ಪಡೆದಿಲ್ಲ ಮತ್ತೆ ಹಣವನ್ನು ಕೊಡಬೇಕು ಎಂದು ಕೇಳಿದರೆ? ಈ ಥರದ ಸಮಸ್ಯೆ ಆಗಬಾರದು ಎಂದು ಬ್ಯಾಂಕ್ ಸಿಬ್ಬಂದಿಗಳು ಚೆಕ್ ಹಿಂದೆ ಸೈನ್ ಹಾಕಬೇಕು ಎಂದು ಹೇಳುತ್ತಾರೆ.

ಮತ್ತೊಂದು ಪ್ರಮುಖ ಕಾರಣ ಒಂದು ವೇಳೆ ನೀವು ಸೈನ್ ಹಾಕಿದ್ದು, ಆ ಚೆಕ್ ಕಳೆದು ಹೋದರೆ, ಅದನ್ನು ಪಡೆದ ವ್ಯಕ್ತಿ ಬ್ಯಾಂಕ್ ಗೆ ಹಣ ಪಡೆಯಲು ಬಂದಾಗ ಆತನಿಗೆ ಮತ್ತೆ ಸೈನ್ ಮಾಡಲು ಹೇಳಲಾಗುತ್ತದೆ. ಒಂದು ವೇಳೆ ಆತನಿಂದ ಸೈನ್ ಮಾಡಲು ಆಗದೆ ಹೋದಾಗ, ಮೋಸ ಮಾಡುತ್ತಿರುವುದಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ. ಈ ರೀತಿ ಮೋಸ ಆಗುವುದನ್ನು ಸಹ ತಡೆಯಬಹುದು. ಈ ಎಲ್ಲಾ ಕಾರಣಗಳಿಂದ ಚೆಕ್ ಹಿಂದೆ ಸೈನ್ ಮಾಡಲು ಹೇಳುತ್ತಾರೆ.

Also Read: RD Interest Rate: RD ಯೋಜನೆಗೆ ಯಾವ ಬ್ಯಾಂಕ್ ನಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

Leave a comment