Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Home Loan: ಈ ಟಾಪ್ 5 ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿಗೆ ಸಿಗಲಿದೆ ಹೋಮ್ ಲೋನ್! ಮನೆ ಕಟ್ಟುವವರಿಗೆ ಸಿಹಿ ಸುದ್ದಿ!

ಇದು ನಮ್ಮ ದೇಶದ ಜನರ ನಂಬಿಕೆ ಗಳಿಸಿರುವ ಅತಿದೊಡ್ಡ ಖಾಸಗಿ ಬ್ಯಾಂಕ್ ಗಳಲ್ಲಿ ಒಂದು. HDFC ನಲ್ಲಿ ಹೋಮ್ ಲೋನ್ ಬಡ್ಡಿದರ 8.49% ಇಂದ ಶುರುವಾಗುತ್ತದೆ.

Get real time updates directly on you device, subscribe now.

Home Loan: ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವುದು ಬಹಳಷ್ಟು ಜನರ ಕನಸು, ಅದಕ್ಕಾಗಿ ಹಗಲು ರಾತ್ರಿ ಎನ್ನದೇ ಶ್ರಮ ಹಾಕಿ ದುಡಿಯುತ್ತಾರೆ. ಕೆಲವರು ಹೋಮ್ ಲೋನ್ (Home Loan) ಮೂಲಕ ಮನೆ ಕಟ್ಟಿ ಇಎಂಐ (EMI) ಮೂಲಕ ಸಾಲ ತೀರಿಸುತ್ತಾರೆ. ಈಗ ಸರ್ಕಾರ ಕೂಡ ಮನೆ ಕಟ್ಟಬೇಕು ಎನ್ನುವ ಜನರ ಕನಸು ನನಸಾಗಿಸಲು ಸಬ್ಸಿಡಿ ಹೋಮ್ ಲೋನ್ (Subsidy Home Loan) ಗಳನ್ನು ನೀಡುತ್ತಿದೆ. ಬ್ಯಾಂಕ್ ಗಳು ಸಹ ಹೋಮ್ ಲೋನ್ ಗೆ ಒಳ್ಳೆಯ ಕೊಡುಗೆಗಳನ್ನು ತರುತ್ತಿದೆ, ಹಾಗಿದ್ದಲ್ಲಿ ಉತ್ತಮ ಹೋಮ್ ಲೋನ್ ಪ್ಲಾನ್ ಹೊಂದಿರುವ 5 ಪ್ರಮುಖ ಬ್ಯಾಂಕ್ ಗಳು ಯಾವುವು ಎಂದು ತಿಳಿಯೋಣ..

HDFC Bank:

ಇದು ನಮ್ಮ ದೇಶದ ಜನರ ನಂಬಿಕೆ ಗಳಿಸಿರುವ ಅತಿದೊಡ್ಡ ಖಾಸಗಿ ಬ್ಯಾಂಕ್ ಗಳಲ್ಲಿ ಒಂದು. HDFC ನಲ್ಲಿ ಹೋಮ್ ಲೋನ್ ಬಡ್ಡಿದರ 8.49% ಇಂದ ಶುರುವಾಗುತ್ತದೆ. ಸಾಲ ಮರುಪಾವತಿಗೆ 30 ವರ್ಷಗಳ ಸಮಯ ಇರುತ್ತದೆ. ಇದನ್ನು ಹೊರತುಪಡಿಸಿ, ಬೇರೆ ಶುಲ್ಕ, ಸಂಸ್ಕರಣ ಶುಲ್ಕಕ್ಕೆ ₹5000 ವರೆಗು ಖರ್ಚಾಗುತ್ತದೆ.

Kotak Mahindra Bank:

ಈ ಬ್ಯಾಂಕ್ ನಲ್ಲಿ ಜನರಿಗೆ ಹೋಮ್ ಲೋನ್ ಬಡ್ಡಿ 8.85% ಇಂದ ಶುರುವಾಗುತ್ತದೆ, ಸಾಲ ಮರುಪಾವತಿಯನ್ನು 20 ವರ್ಷಗಳಲ್ಲಿ ಮಾಡಬಹುದು. ಸ್ವಂತ ಕೆಲಸ ಮಾಡುತ್ತಿರುವವರಿಗೆ 8.90% ಬಡ್ಡಿದರಲ್ಲಿ ಹೋಮ್ ಲೋನ್ ಶುರುವಾಗುತ್ತದೆ, ನಿಮ್ಮ ಆಸ್ತಿಯ ಮೌಲ್ಯದಲ್ಲಿ 90% ವರೆಗು ಲೋನ್ ಪಡೆಯಬಹುದು.

SBI:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಇದು ಕೂಡ ನಮ್ಮ ದೇಶದ ಅತಿದೊಡ್ಡ ಬ್ಯಾಂಕ್ ಗಳಲ್ಲಿ ಒಂದು. ಇಲ್ಲಿ ಹೋಮ್ ಲೋನ್ ಬಡ್ಡಿದರ ಶುರು ಆಗುವುದು 9.15% ಇಂದ, 30 ವರ್ಷಗಳ ಸಾಲ ಮರುಪಾವತಿ ಅವಧಿ ಇರುತ್ತದೆ. ಹಾಗೆಯೇ SBI ನಲ್ಲಿ 0.35% ಪ್ರಕ್ರಿಯೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಇಲ್ಲಿ ನಿಮಗೆ ಹೋಮ್ ಲೋನ್ ಮೇಲೆ ಹೆಚ್ಚು ಆಫರ್ಸ್ ಸಿಗುತ್ತದೆ. ಇನ್ಯಾವುದಕ್ಕೂ ಹಣ ಪಾವತಿ ಮಾಡುವ ಅವಶ್ಯಕತೆ ಇಲ್ಲ.

City Bank:

ಈ ಬ್ಯಾಂಕ್ ನಲ್ಲಿ 8.45% ಬಡ್ಡಿದರದಿಂದ ಹೋಮ್ ಲೋನ್ ಶುರುವಾಗುತ್ತದೆ. ಸಿಟಿ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿಗೆ 10 ಕೋಟಿ ವರೆಗು ಸಾಲ ಸಿಗುತ್ತದೆ. ಮರುಪಾವತಿ ಅವಧಿ 25 ವರ್ಷ ಆಗಿದ್ದು, ಆಸ್ತಿ ಮೌಲ್ಯದಲ್ಲಿ 80% ವರೆಗು ಸಾಲ ಪಡೆಯಬಹುದು.

Union Bank:

ಈ ಬ್ಯಾಂಕ್ ನಲ್ಲಿ ಹೋಮ್ ಲೋನ್ ಬಡ್ಡಿದರ 8.70% ಇಂದ ಶುರುವಾಗುತ್ತದೆ. ಸಾಲದ ಮೊತ್ತದಲ್ಲಿ 0.05% ಹಣವನ್ನು ಸಂಸ್ಕರಣಾ ಶುಲ್ಕವಾಗಿ ಪಾವತಿ ಮಾಡಬೇಕು. ಇನ್ಯಾವುದೇ ಹೆಚ್ಚು ಹಣ ಪಾವತಿ ಮಾಡುವ ಹಾಗಿಲ್ಲ. ನೀವು ಪಡೆಯುವ ಸಾಲಕ್ಕೆ ಪೂರ್ವಪಾವತಿ ಮಾಡುವ ಆಯ್ಕೆ ಇದೆ.

ಹೋಮ್ ಲೋನ್ ಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು, ನಿಮ್ಮ ಹತ್ತಿರದ ಬ್ಯಾಂಕ್ ಬ್ರಾಂಚ್ ಗೆ ಭೇಟಿ ನೀಡಬಹುದು.

Home loans will be available at low interest in these top 5 banks!

Get real time updates directly on you device, subscribe now.

Leave a comment