Yuva Nidhi Status: ಯುವನಿಧಿ ಯೋಜನೆಯ ಹಣ ಇನ್ನು ಬಂದಿಲ್ವಾ? ಹಣ ಯಾವಾಗ ಬರುತ್ತೆ ಎಂದು ತಿಳಿಯಲು ಈ ರೀತಿ ಸುಲಭವಾಗಿ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡಿ.
ಕೆಲವರಿಗೆ ಮೊದಲ ಕಂತಿನ ಹಣ ಕೂಡ ಬಂದಿದೆ. ಆದರೆ ಇನ್ನೂ ಕೂಡ ಹಲವು ಫಲಾನುಭವಿಗಳಿಗೆ ಯುವನಿಧಿ ಯೋಜನೆಯ ಮೊದಲ ಕಂತಿನ ಹಣ ಬಂದಿಲ್ಲ.
Yuva Nidhi Status: ರಾಜ್ಯದಲ್ಲಿ ಆಳ್ವಿಕೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ್ದ ಭರವಸೆಯ ಯೋಜನೆಗಳಲ್ಲಿ ಕೊನೆಯ ಗ್ಯಾರೆಂಟಿ ಯೋಜನೆ ಯುವನಿಧಿ ಯೋಜನೆ ಆಗಿದೆ (Yuva Nidhi). ಈ ಯೋಜನೆಯನ್ನು ಓದಿದ್ದು ಕೆಲಸ ಸಿಗದೆ ನಿರುದ್ಯೋಗಿಗಳಾಗಿರುವ ಯುವಕ ಯುವತಿಯರಿಗಾಗಿ ಜಾರಿಗೆ ತರಲಾಗಿದೆ. 2023ರಲ್ಲಿ ಡಿಗ್ರಿ ಮತ್ತು ಡಿಪ್ಲೊಮಾ ಮುಗಿಸಿ ಕೆಲಸ ಸಿಗದೆ ಇರುವವರಿಗೆ ಕ್ರಮವಾಗಿ ₹3000 ಮತ್ತು ₹1500 ಸಹಾಯಧನ ಕೊಡಲಾಗುತ್ತಿದೆ. ಡಿಸೆಂಬರ್ ನಲ್ಲಿ ಈ ಯೋಜನೆಯ ಅರ್ಜಿ ಸಲ್ಲಿಕೆ ಶುರುವಾಗಿತು.
ಯುವನಿಧಿ ಯೋಜನೆಗೆ ಅಪ್ಲೈ ಮಾಡಿದ್ದೀರಾ?
ಕೆಲವರಿಗೆ ಮೊದಲ ಕಂತಿನ ಹಣ ಕೂಡ ಬಂದಿದೆ. ಆದರೆ ಇನ್ನೂ ಕೂಡ ಹಲವು ಫಲಾನುಭವಿಗಳಿಗೆ ಯುವನಿಧಿ ಯೋಜನೆಯ ಮೊದಲ ಕಂತಿನ ಹಣ ಬಂದಿಲ್ಲ. ಒಂದು ವೇಳೆ ನಿಮಗೂ ಕೂಡ ಹಣ ಬಂದಿಲ್ಲ ಅಂದ್ರೆ ಮೊದಲಿಗೆ ನಿಮ್ಮ Application Status Check ಮಾಡುವುದು ಒಳ್ಳೆಯದು. ಅಲ್ಲಿ ನಿಮ್ಮ ಅರ್ಜಿ ಸ್ವೀಕೃತಿ ಆಗಿದ್ಯಾ? ಎಂದು ಗೊತ್ತಾಗುವುದರ ಜೊತೆಗೆ ಹಣ ವರ್ಗಾವಣೆ ಸ್ಟೇಟಸ್ ಹೇಗಿದೆ ಎನ್ನುವುದನ್ನು ತಿಳಿಯಬಹುದು.
ಯುವನಿಧಿ ಅಪ್ಲಿಕೇಶನ್ ಸ್ಟೇಟಸ್ ತಿಳಿಯುವ ವಿಧಾನ:
- ಯುವನಿಧಿ ಯೋಜನೆಗೆ ಅಪ್ಲೈ ಮಾಡುವಾಗ ನಿಮ್ಮ ಫೋನ್ ನಂಬರ್ ಕೊಟ್ಟಿರುತ್ತೀರಿ, Application Status ಚೆಕ್ ಮಾಡುವುಡಕ್ಕೆ ಈ ಫೋನ್ ನಂಬರ್ ಮುಖ್ಯವಾಗಿ ಬೇಕಾಗುತ್ತದೆ, ಇಲ್ಲದಿದ್ದರೆ ಸ್ಟೇಟಸ್ ಚೆಕ್ ಮಾಡಲು ಆಗುವುದಿಲ್ಲ.
- ಯುವನಿಧಿ ಯೋಜನೆಗೆ ಅಪ್ಲೈ ಮಾಡಿದ ಬಳಿಕ ನಿಮಗೆ ಒಂದು ಅರ್ಜಿ ಉಲ್ಲೇಖ ಸಂಖ್ಯೆ ಕೊಡಲಾಗಿರುತ್ತದೆ. ಈ ನಂಬರ್ ಅನ್ನು ನೀವು ಹುಷಾರಾಗಿ ಇಟ್ಟುಕೊಳ್ಳಬೇಕು. ಇದರಿಂದಲೇ ನಿಮಗೆ ಎಲ್ಲಾ ಮಾಹಿತಿ ಗೊತ್ತಾಗುವುದು.
- ನಿಮಗೆ ನೀಡಿರುವ ಉಲ್ಲೇಖ ಸಂಖ್ಯೆ ಗೊತ್ತಿಲ್ಲ ಎಂದರೆ, ನೀವು ಅಪ್ಲೈ ಮಾಡಿರುವುದು ಯಾವಾಗ ಎಂದು Date ಮೂಲಕ ಆಯ್ಕೆ ಮಾಡಿದರೆ, ಆ ತಿಂಗಳು ಯಾವೆಲ್ಲಾ ಅರ್ಜಿಗಳು ಸಲ್ಲಿಕೆ ಆಗಿದೆ ಎನ್ನುವುದರ ಲಿಸ್ಟ್ ತೋರಿಸುತ್ತದೆ.
Yuva Nidhi Status Check:
ಹಂತ – 1 ಸರ್ಕಾರದ ಯುವನಿಧಿ ಯೋಜನೆಯ ವೆಬ್ಸೈಟ್ ಆಗಿರುವ ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಬೇಕು.
ಹಂತ – 2 ಇಲ್ಲಿ Apply for Service ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಫೋನ್ ನಂಬರ್ ಹಾಕಿ, ಕ್ಯಾಪ್ಚ ಕೋಡ್ ಹಾಕಿ, ಫೋನ್ ಗೆ ಬರುವ ಓಟಿಪಿ ನಮೂದಿಸಿ.
ಹಂತ – 3 ಈಗೊಂದು ಹೊಸ ಪೇಜ್ ಓಪನ್ ಆಗುತ್ತದೆ. ಅಲ್ಲಿ View Status of Application ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಇಲ್ಲಿ ಸಿಗುವ ಮತ್ತೊಂದು ಆಯ್ಕೆ, View Status of Application ಅಥವಾ Track Application Status ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.
ಹಂತ – 4 ಯುವನಿಧಿ ಅರ್ಜಿ ಸಲ್ಲಿಸಿದ ನಂತರ ನಿಮಗೆ ಕೊಟ್ಟಿರುವ ಉಲ್ಲೇಖ ಸಂಖ್ಯೆಯನ್ನು ಇಲ್ಲಿ ನಮೂದಿಸಿ, Get Data ಆಪ್ಶನ್ ಸೆಲೆಕ್ಟ್ ಮಾಡಿ.
ಹಂತ – 5 ಈಗ ನೀವು ಅಪ್ಲಿಕೇಶನ್ ಸ್ಟೇಟಸ್ ಯಾವ ಸ್ಟೇಜ್ ನಲ್ಲಿದೆ ಎಂದು ನೋಡುತ್ತೀರಿ. Under Process ಅಥವಾ Delivered ಎಂದು ಇರುತ್ತದೆ.
ಹಂತ – 6 ಇನ್ನಷ್ಟು ಮಾಹಿತಿ ಎನ್ನುವ ಆಯ್ಕೆ ಸೆಲೆಕ್ಟ್ ಮಾಡಿದಾಗ, ನಿಮ್ಮ ಅಪ್ಲಿಕೇಶನ್ ಬಗ್ಗೆ ಪೂರ್ತಿ ಮಾಹಿತಿ ಸಿಗುತ್ತದೆ.
ಅಧಿಕೃತ ವೆಬ್ಸೈಟ್ – https://sevasindhugs.karnataka.gov.in/
Check your Yuva Nidhi application status here if you haven’t received money.