Savings Account Limit : ಬ್ಯಾಂಕ್ ಅಕೌಂಟ್ ಇದೆ ಎಂದು ಎಷ್ಟಾದರು ಹಣ ಇಡೋಕಾಗಲ್ಲ! ಮಿತಿ ಮೀರಿದರೆ ಬೀಳುತ್ತೆ ಟ್ಯಾಕ್ಸ್!
Savings Account Limit : ನಾವು ಸಂಪಾದನೆ ಮಾಡುವ ಹಣವನ್ನು ಅಥವಾ ಕೈಗೆ ಯಾವುದಾದರು ದುಡ್ಡು ಸಿಕ್ಕಾಗ ಕ್ಯಾಶ್ ಆಗಿ ಇಟ್ಟುಕೊಂಡಿದ್ದರೆ, ಅದು ಹೇಗೆ ಖರ್ಚಾಗಿ ಬಿಡುತ್ತದೆ ಎಂದು ಹೇಳೋದಕ್ಕೆ ಕೂಡ ಸಾಧ್ಯವಿಲ್ಲ.
Savings Account Limit : ನಾವು ಸಂಪಾದನೆ ಮಾಡುವ ಹಣವನ್ನು ಅಥವಾ ಕೈಗೆ ಯಾವುದಾದರು ದುಡ್ಡು ಸಿಕ್ಕಾಗ ಕ್ಯಾಶ್ ಆಗಿ ಇಟ್ಟುಕೊಂಡಿದ್ದರೆ, ಅದು ಹೇಗೆ ಖರ್ಚಾಗಿ ಬಿಡುತ್ತದೆ ಎಂದು ಹೇಳೋದಕ್ಕೆ ಕೂಡ ಸಾಧ್ಯವಿಲ್ಲ. ಯಾವುದಾದರೂ ಒಂದು ವಿಷಯಕ್ಕೆ ಖರ್ಚಾಗುತ್ತದೆ. ಹಾಗಾಗಿ ಹಣವನ್ನು ಸುರಕ್ಷಿತವಾಗಿ ಬ್ಯಾಂಕ್ ಅಕೌಂಟ್ ನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಬ್ಯಾಂಕ್ ಸೇವಿಂಗ್ಸ್ ಅಕೌಂಟ್ ನಲ್ಲಿ ಹಣ ಉಳಿತಾಯ ಮಾಡಿದರೆ, ಬಡ್ಡಿ ಸಿಗುವುದರ ಜೊತೆಗೆ ಹಣ ಕೂಡ ಸುರಕ್ಷಿತವಾಗಿರುತ್ತದೆ.
Savings Account Limit
ನಿಮ್ಮ ಹತ್ತಿರದ ಯಾವುದೇ ಬ್ಯಾಂಕ್ ನಲ್ಲಿ ನೀವು ಸೇವಿಂಗ್ಸ್ ಅಕೌಂಟ್ ತೆರೆಯಬಹುದು. ಸೇವಿಂಗ್ಸ್ ಅಕೌಂಟ್ ನಲ್ಲಿ ಇಡುವ ಹಣಕ್ಕೆ ನಿಮಗೆ ಸ್ವಲ್ಪ ಮೊತ್ತದ ಬಡ್ಡಿ ಸಿಗುತ್ತದೆ. ಹಾಗೆಯೇ ಸೇವಿಂಗ್ಸ್ ಅಕೌಂಟ್ ನಲ್ಲಿ ಇಡೋದಕ್ಕೆ ಹಣದ ಲಿಮಿಟ್ ಇದ್ಯಾ ಎನ್ನುವ ಪ್ರಶ್ನೆ ಕೂಡ ಮೂಡುತ್ತದೆ. ಅದಕ್ಕೆ ಉತ್ತರ ಏನು ಎಂದರೆ, ಸೇವಿಂಗ್ಸ್ ಅಕೌಂಟ್ ನಲ್ಲಿ ಹಣ ಉಳಿತಾಯ ಮಾಡೋದಕ್ಕೆ ಯಾವುದೇ ಮಿತಿಯನ್ನು ಇಟ್ಟಿಲ್ಲ. ನೀವು ಎಷ್ಟು ಮೊತ್ತವನ್ನಾದರು ಹೂಡಿಕೆ ಮಾಡಬಹುದು. ಆದರೆ ಇಂತಿಷ್ಟು ಮೊತ್ತ ಮೀರಿದರೆ, ನೀವು ಟ್ಯಾಕ್ಸ್ ಕಟ್ಟಬೇಕು.
ಸೇವಿಂಗ್ಸ್ ಅಕೌಂಟ್ ವಹಿವಾಟಿನ ಮೊತ್ತ ಮೀರಿದರೆ…
ಬ್ಯಾಂಕ್ ನಲ್ಲಿ ಇರುವ ಸೇವಿಂಗ್ಸ್ ನಲಿ ನೀವು ಎಷ್ಟು ಮೊತ್ತವನ್ನಾದರೂ ಹೂಡಿಕೆ ಮಾಡಬಹುದು. ಆದರೆ ಒಂದು ವರ್ಷದ ಅವಧಿಯಲ್ಲಿ ನಿಮ್ಮ ಸೇವಿಂಗ್ಸ್ ಅಕೌಂಟ್ ನಲ್ಲಿ 10 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆದರೆ, ಆಗ ನೀವು ಸರ್ಕಾರಕ್ಕೆ ಉತ್ತರ ನೀಡಬೇಕಾಗುತ್ತದೆ. 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವ್ಯವಹಾರ ನಡೆದರೆ, ನಿಮ್ಮ ಬಳಿ ಅದಕ್ಕೆ ಸರಿಯಾದ ದಾಖಲೆ ಇರಬೇಕು..ಇಲ್ಲದೇ ಹೋದರೆ ನೀವು ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಹಾಗೆಯೇ 10 ವರ್ಷಗಳ ಅವಧಿಯಲ್ಲಿ ಸರ್ಕಾರ ನಿಮಗೆ ಯಾವಾಗ ಬೇಕಾದರೂ ಇದರ ಬಗ್ಗೆ ನೋಟಿಸ್ ಕಳಿಸಬಹುದು. ಆಗ ನೀವು ಸರಿಯಾದ ದಾಖಲೆ ಒದಗಿಸಿಲ್ಲ ಎಂದರೆ, ಕಾನೂನಿನ ಕ್ರಮ ತೆಗೆದುಕೊಳ್ಳಬಹುದು.
Also Read: RD Interest Rate: RD ಯೋಜನೆಗೆ ಯಾವ ಬ್ಯಾಂಕ್ ನಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!
ಯಾರಿಗೆಲ್ಲಾ ಇರಲಿದೆ ಈ ನಿಯಮ?
ಪ್ರತಿ ವರ್ಷವು ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುವ ಜನರು ಈ ನಿಯಮ ಪಾಲಿಸುವ ಅಗತ್ಯವಿಲ್ಲ. ಅವರು ಸೇವಿಂಗ್ಸ್ ಅಕೌಂಟ್ ನಲ್ಲಿ ಎಷ್ಟೇ ಕೋಟಿ ಸೇವ್ ಮಾಡಿದರು, ಪ್ರತಿ ವರ್ಷ ಆ ಹಣಕ್ಕೆ ಬರುವ ಬಡ್ಡಿ ಮೊತ್ತಕ್ಕೆ ಟ್ಯಾಕ್ಸ್ ಕಟ್ಟುತ್ತಾರೆ. ಆದರೆ ನೀವು ಬಡ್ಡಿ ಮೊತ್ತವನ್ನು ಮತ್ತು ಟ್ಯಾಕ್ಸ್ ಅನ್ನು ಸರಿಯಾದ ಸಮಯಕ್ಕೆ ಕಟ್ಟಬೇಕಾಗುತ್ತದೆ. ಇದು ಸರ್ಕಾರದ ನಿಯಮ ಆಗಿದ್ರ್.
ಇಷ್ಟು ಬಡ್ಡಿ ಮೊತ್ತ ಪಡೆದರೆ ಟ್ಯಾಕ್ಸ್ ಕಟ್ಟಬೇಕು:
ಈಗ ಬಹುತೇಕ ಎಲ್ಲಾ ಬ್ಯಾಂಕ್ ಗಳಲ್ಲಿ ಸೇವಿಂಗ್ಸ್ ಅಕೌಂಟ್ ಮೇಲೆ 2.70% ಇಂದ 4% ವರೆಗು ಬಡ್ಡಿ ಕೊಡಲಾಗುತ್ತದೆ. ನಿಮ್ಮ ಅಕೌಂಟ್ ಗೆ ಬರುವ ಬಡ್ಡಿಮೊತ್ತ ₹10,000 ವರೆಗು ಇದ್ದರು ಸಹ ಟ್ಯಾಕ್ಸ್ ಕಟ್ಟುವ ಅವಶ್ಯಕತೆ ಇಲ್ಲ. ಆದರೆ ನಿಮಗೆ ಬರುವ ಬಡ್ಡಿ ₹10,000 ಕ್ಕಿಂತ ಜಾಸ್ತಿ ಆದರೆ ಟ್ಯಾಕ್ಸ್ ಕಟ್ಟಬೇಕು. ಇದು ಸೆಕ್ಷನ್ 80TTA ನಿಯಮ ಆಗಿದೆ. FD, ಮ್ಯೂಚುವಲ್ ಫಂಡ್, ಶೇರ್ ಈ ಎಲ್ಲಾ ಹೂಡಿಕೆಗಳ ಮೇಲೆ ಕೂಡ ಇದೇ ನಿಯಮ ಆಗಿರುತ್ತದೆ..ನಿಮ್ಮ ಅಕೌಂಟ್ ನಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆದರೆ, ನೀವು ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಗೆ ತಿಳಿಸಬೇಕು. ಯಾವುದೇ ತರಹ ಹೆಚ್ಚುವರಿ ಆದಾಯಕ್ಕೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ.
Also Read: Credit Card : ಕ್ರೆಡಿಟ್ ಕಾರ್ಡ್ ರದ್ದುಗೊಳಿಸುವಾಗ ಈ ಅಂಶಗಳನ್ನು ಮರೆಯಬೇಡಿ!