Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Metro Coach Update: ಏಪ್ರಿಲ್ ಇಂದ ಬರಲಿದೆ ಮೊದಲ ಮೆಟ್ರೋ ಕೋಚ್, ಏನಿದರ ಸ್ಪೆಷಾಲಿಟಿ?

ವಂದೇ ಮೆಟ್ರೋ ರೈಲನ್ನು ವಿಶೇಷವಾಗಿ ಒಂದು ನಗರದಿಂದ ಇನ್ನೊಂದು ನಗರಕ್ಕೆ ಅತ್ಯಂತ ವೇಗವಾಗಿ ಹೋಗುವುದಕ್ಕೆ ನಿರ್ಮಾಣ ಮಾಡಲಾಗುತ್ತಿದೆ.

Get real time updates directly on you device, subscribe now.

Metro Coach Update: ಕೆಲ ದಿನಗಳಿಂದ ನಮ್ಮ ದೇಶದಲ್ಲಿ ವಂದೇ ಮೆಟ್ರೋ ರೈಲು ಲಾಂಚ್ ಆಗುತ್ತದೆ ಎಂದು ಹೇಳಲಾಗಿತ್ತು. ವಂದೇ ಭಾರತ್ ಥರವೇ ಇರಲಿರುವ ವಂದೇ ಮೆಟ್ರೋ ಸೆಮಿ ಹೈ ಸ್ಪೀಡ್ ಟ್ರೇನ್ ಆಗಿರಲಿದೆ ಎನ್ನುವ ಸುದ್ದಿ ಓಡಾಡಿ, ಜನರಿಗೆ ಈ ಟ್ರೇನ್ ಬಗ್ಗೆ ಕುತೂಹಲ ಕೂಡ ಜಾಸ್ತಿಯಾಯಿತು. ಇದೀಗ ವಂದೇ ಮೆಟ್ರೋ ರೈಲಿನ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದ್ದು, ಮೊದಲನೆಯ ಮೆಟ್ರೋ ಕೋಚ್ ಮಾಡೆಲ್ ಏಪ್ರಿಲ್ ನಲ್ಲಿ ತಯಾರಾಗಲಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

ಏಪ್ರಿಲ್ ನಲ್ಲಿ ವಂದೇ ಮೆಟ್ರೋ ಮೊದಲ ಕೋಚ್ (Metro Coach Update)

ಪಂಜಾಬ್ ರಾಜ್ಯದ ಕಪುರ್ತಲಾ ಎನ್ನುವ ಪ್ರದೇಶದಲ್ಲಿ ಇರುವಂಥ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ಈ ರೈಲಿನ ಉತ್ಪಾದನೆ ನಡೆಯುತ್ತಿದ್ದು, ಏಪ್ರಿಲ್ ತಿಂಗಳಿನಲ್ಲಿ ವಂದೇ ಮೆಟ್ರೋ ರೈಲಿನ ಮೊದಲ ಮಾದರಿ ಕೋಚ್ ಉತ್ಪಾದನೆ ಆಗಬಹುದು ಎಂದು ಸಂಸ್ಥೆಯ ಜೆನೆರಲ್ ಮ್ಯಾನೇಜರ್ ಆಗಿರುವ ಎಸ್.ಶ್ರೀನಿವಾಸ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Intercity ಪ್ರಯಾಣಕ್ಕೆ ವಂದೇ ಮೆಟ್ರೋ:

ವಂದೇ ಮೆಟ್ರೋ ರೈಲನ್ನು ವಿಶೇಷವಾಗಿ ಒಂದು ನಗರದಿಂದ ಇನ್ನೊಂದು ನಗರಕ್ಕೆ ಅತ್ಯಂತ ವೇಗವಾಗಿ ಹೋಗುವುದಕ್ಕೆ ನಿರ್ಮಾಣ ಮಾಡಲಾಗುತ್ತಿದೆ. ವಂದೇ ಭಾರತ್ ಟ್ರೇನ್ ಮಾದರಿಯಲ್ಲೇ ಇದು ಕೂಡ ತಯಾರಾಗುತ್ತಿದ್ದು, ಭಾರತದಲ್ಲಿ ಇಂಟರ್ ಸಿಟಿ ಓಡಾಡಕ್ಕೆ ಸೆಮಿ ಹೈ ಸ್ಪೀಡ್ ಟ್ರೇನ್ ಆಗಿರಲಿದೆ ವಂದೇ ಮೆಟ್ರೋ..250 ಕಿಮೀ ಒಳಗೆ ಇರುವಂಥ ಸಿಟಿಗಳಿಗೆ ಸುಲಭವಾಗಿ ಪ್ರಯಾಣ ಮಾಡಬಹುದು.

National Disaster Relief Fund: ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ! ರೈತರಿಗೆ 14 ಕೋಟಿ ಪರಿಹಾರ ಹಣ ಬಿಡುಗಡೆ!

16 ವಂದೇ ಮೆಟ್ರೋ ಕೋಚ್ ಶೀಘ್ರದಲ್ಲೇ ತಯಾರಿಕೆ:

ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಅನುಸಾರ 16 ವಂದೇ ಮೆಟ್ರೋ ಕೋಚ್ ಗಳ ತಯಾರಿಕೆ 2024-25ನೇ ಸಾಲಿನಲ್ಲಿ ನಡೆಯಲಿದೆ. ಈ ವಂದೇ ಮೆಟ್ರೋ ರೈಲುಗಳು ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸುತ್ತದೆ. ಎಸಿ ಕೋಚ್ ಗಳನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ. ಜನದಟ್ಟಣೆ ಇರುವ ನಗರಗಳಿಂದ, ಮತ್ತೊಂದು ನಗರಕ್ಕೆ ಕಡಿಮೆ ಸಮಯದಲ್ಲಿ ಹೋಗುವುದಕ್ಕೆ ವಂದೇ ಮೆಟ್ರೋ ರೈಲು ಅನುಕೂಲ ನೀಡಲಿದೆ. ಏಪ್ರಿಲ್ ತಿಂಗಳಲ್ಲಿ ಈ ರೈಲಿನ ಮಾಡೆಲ್ ತಯಾರಾಗಲಿದೆ.

ವಂದೇ ಮೆಟ್ರೋ ಕೋಚ್ ಹೇಗಿರಲಿದೆ?

ವಂದೇ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಅತ್ಯುತ್ತಮವಾದ ಅನುಭವ ಕೊಡುವ ಉದ್ದೇಶ ಹೊಂದಿದೆ ಸರ್ಕಾರ. ಈ ರೈಲಿನಲ್ಲಿ ಪ್ರಯಾಣ ಆರಾಮದಾಯಕವಾಗಿ ಇರಲಿದ್ದು, ಒಂದು ಕೋಚ್ ನಲ್ಲಿ 280 ಜನ ಪ್ರಯಾಣ ಮಾಡಬಹುದು. ಒಂದು ಕೋಚ್ ನಲ್ಲಿ 180 ಸೀಟ್ ಗಳು ಇರಲಿದ್ದು, ಎಲ್ಲಾ ಸೀಟ್ ಗಳು ಫಿಲ್ ಆಗಿ ಹೋದರು ಸಹ, ಇನ್ನು 180 ಜನರು ನಿಂತು ಟ್ರಾವೆಲ್ ಮಾಡುವ ಸಾಮರ್ಥ್ಯ ಹೊಂದಿದೆ.

ಪ್ರಯಾಣಿಕರಿಗೆ ಟ್ಯಾಕ್ ಬ್ಯಾಕ್ ವ್ಯವಸ್ಥೆ:

ವಂದೇ ಮೆಟ್ರೋ ರೈಲಿನ್ 3×3 ಬೆಂಚ್ ರೀತಿಯ ಸೀಟ್ ಗಳನ್ನು ಡಿಸೈನ್ ಮಾಡಲಾಗುತ್ತಿದೆ. ಇದರಿಂದ ಪ್ರಯಾಣ smooth ಆಗಿರಲಿದೆ. ಈ ರೈಲಿನ ಮತ್ತೊಂದು ಪ್ರಮುಖವಾಗಿ ವಿಶೇಷತೆ ಏನು ಎಂದರೆ, ವಂದೇ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವವರಿಗೆ ವಾಹನ ಚಾಲಕರ ಹತ್ತಿರ ಏನಾದರೂ ಎಮರ್ಜೆನ್ಸಿ ವಿಚಾರ ತಿಳಿಸಬೇಕು ಎಂದರೆ ಅದಕ್ಕಾಗಿ ಟಾಕ್ ಬ್ಯಾಕ್ ವಿಶೇಷತೆಯನ್ನು ಸಹ ನೀಡಲಾಗುತ್ತಿದೆ. ಅಕಸ್ಮಾತ್ ಆಗಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡರೆ ಅಥವಾ ತುರ್ತು ಪರಿಸ್ಥಿತಿ ಎದುರಾದರೆ, ಅದಕ್ಕಾಗಿ ಹೊಗೆ ನಿಯಂತ್ರಣಕ್ಕಾಗಿ 14 ಸೆನ್ಸಾರ್ ಗಳನ್ನು ಅಳವಡಿಸಲಾಗಿದೆ.

Chief Minister Vridhjan Pension Scheme: ಸರ್ಕಾರದಿಂದ ವೃದ್ಧರಿಗಾಗಿ ಮತ್ತೊಂದು ಹೊಸ ಪೆನ್ಷನ್ ಯೋಜನೆ! ಎಲ್ಲಾ ಹಿರಿಯರಿಗೂ ಮಾಹಿತಿ ನೀಡಿ, ಮನೆಯಲ್ಲಿ ಕುಳಿತು ಪಡೆಯಿರಿ ಹಣ.

ಶೌಲಾಚಾಯಕ್ಕೆ ವೀಲ್ ಚೇರ್:

ವಿಶೇಷಚೇತನರು ಅಂಗವಿಕಲರು ಪ್ರಯಾಣ ಮಾಡುತ್ತಿದ್ದರೆ ಅವರಿಗೆ ಅನುಕೂಲ ಆಗುವ ಹಾಗೆ ಶೌಚಾಲಯಕ್ಕೆ ವೀಲ್ ಚೇರ್ ನಲ್ಲೇ ಹೋಗಬಹುದು. ಹಾಗೆಯೇ ವಿಶೇಷವಾಗಿ ಕವಚದ ವ್ಯವಸ್ಥೆ ಮಾಡಲಾಗಿದೆ. ಜಗಳ ತಡೆಯುವುದಕ್ಕೆ ಕವಚ ವ್ಯವಸ್ಥೆ ಮಾಡಲಾಗಿದೆ. ವಂದೇ ಮೆಟ್ರೋ ರೈಲುಗಳು ಹಾಪರ್ ರೀತಿಯಲ್ಲಿ ವಿಶಾಲವಾಗಿ ತೆರೆಯುತ್ತದೆ. ದೊಡ್ಡ ಬಾಗಿಲು, ದೊಡ್ಡ ಪ್ರವೇಶ ದ್ವಾರ ಇರಲಿದೆ. ಈ ವಂದೇ ಮೆಟ್ರೋ ರೈಲಿನ ಡೋರ್ ಗಳು ಆಟೊಮ್ಯಾಟಿಕ್ ಆಗಿ ಚಲಿಸುತ್ತದೆ. ಟಚ್ ಫ್ರೀ ಡೋರ್ಸ್ ಇರಲಿದೆ.

Metro Coach Update: The first Metro Coach to come in April—what’s the specialty?

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

 

Get real time updates directly on you device, subscribe now.

Leave a comment