Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Free Sewing Machine: ಕೇಂದ್ರ ಸರ್ಕಾರ ನೀಡುತ್ತಿದೆ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ, ಅಪ್ಲಿಕೇಶನ್ ಸಲ್ಲಿಸಲು ಬೇಕಾದ ದಾಖಲಾತಿ ಮತ್ತು ವಿಧಾನದ ಮಾಹಿತಿ ಇಲ್ಲಿದೆ.

ಹೊಲಿಗೆ ಯಂತ್ರಕ್ಕೇ ಎಂದು ಕೇಂದ್ರ ಸರಕಾರ ನೇರವಾಗಿ ನಿಮ್ಮ ಖಾತೆಗೆ 15 ಸಾವಿರ ರೂಪಾಯಿ ಹಾಕುತ್ತದೆ .

Free Sewing Machine 2024: ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಸ್ವಂತ ಉದ್ದಿಮೆ ಮಾಡಲು ಸಹಾಯ ಆಗಲೆಂದು ಕೇಂದ್ರ ಸರ್ಕಾರವು ಹಲವು ಯೋಜನೆಗಳು ಜಾರಿಗೆ ತಂದಿದೆ. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ ಉಚಿತವಾಗಿ ಹೊಲಿಗೆ ಮಶೀನ್ ಪಡೆಯಬಹುದು.

ಉಚಿತ ಮೆಷಿನ್ ಪಡೆಯಲು ಅಪ್ಲಿಕೇಶನ್ ಇರುವ ಮಾನದಂಡಗಳು :-

  • ಅಪ್ಲಿಕೇಶನ್ ಹಾಕಲು ಅರ್ಜಿದಾರರ ಕನಿಷ್ಟ ವಯಸ್ಸಿನ ಮೀತಿ 18 ವರ್ಷ.
  • *ಹೊಲಿಗೆ ತರಬೇತಿ ಪಡೆದಿರಬೇಕು ಅಥವಾ ಈಗಾಗಲೇ ಹೊಲಿಗೆ ಅಂಗಡಿಯನ್ನು ಹೊಂದಿರಬೇಕು.
  •  ಒಂದು ಕುಟುಂಬದ ಓರ್ವ ಸದಸ್ಯ ಮಾತ್ರ ಅರ್ಜಿ ಹಾಕಲು ಅರ್ಹರಾಗಿರುತ್ತಾರೆ.
  •  ಅರ್ಜಿದಾರ ಯಾವುದೇ Government office ನಲ್ಲಿ ಕೆಲಸ ಮಾಡುತ್ತಿರಬಾರದು.
  •  ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು.

ಅಪ್ಲಿಕೇಶನ್ ಹಾಕಲು ಬೇಕಾಗಿರುವ ದಾಖಲೆಗಳು:-

1. ಆಧಾರ್ ಕಾರ್ಡ್
2. ವಿಳಾಸದ ಪುರಾವೆ ಇರುವ ಯಾವುದೇ ಒಂದು ಗುರುತಿನ ಚೀಟಿ ( ಎಲೆಕ್ಷನ್ ಕಾರ್ಡ್ ,ರೇಶನ್ ಕಾರ್ಡ್)
3. ಬ್ಯಾಂಕ್ ಖಾತೆಯ ವಿವರ
4. ಆದಾಯ ಮತ್ತು ಜಾತಿ ಪ್ರಮಾಣಪತ್ರ
5. ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್

ಅಪ್ಲಿಕೇಶನ್ ಹಾಕುವುದು ಹೇಗೆ?

1. https://pmvishwakarma.gov.in/Login ವೆಬ್ಸೈಟ್ ಅಡ್ರೆಸ್ ಗೆ ಹೋಗಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಕೆಳಗೆ ಇರುವ ಕ್ಯಾಪ್ತ, (captcha) ಸಂಖ್ಯೆಯನ್ನು ಹಾಕಿ .
2. ಮುಖಪುಟದಲ್ಲಿ ನೊಂದಾಯಿಸುವುದು ಹೇಗೆ ಎಂಬ ಆಪ್ಷನ್ ಕ್ಲಿಕ್ ಮಾಡಿ
3.ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಹಾಕಿ
4. ಮೂರು ಹಂತಗಳನ್ನು ತೋರಿಸುತ್ತದೆ. ಸೂಚನೆಗಳನ್ನು ಓದಿ ನಿಮ್ಮ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿ.

5. ಇಲ್ಲವೇ ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರ ಅಥವಾ ಹತ್ತಿರದ CSC ಕಚೇರಿಗೆ ಭೇಟಿನೀಡಿ ನಿಮ್ಮ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿ .

ಉಚಿತ ಹೊಲಿಗೆ ಮಶೀನ್ ಜೊತೆ ಇನ್ನೇನು ಲಾಭಗಳಿವೆ. ?

ಹೊಲಿಗೆ ಯಂತ್ರಕ್ಕೇ ಎಂದು ಕೇಂದ್ರ ಸರಕಾರ ನೇರವಾಗಿ ನಿಮ್ಮ ಖಾತೆಗೆ 15 ಸಾವಿರ ರೂಪಾಯಿ ಹಾಕುತ್ತದೆ . ಇದರ ಜೊತೆಗೆ ಟೈಲರಿಂಗ್ ಶಾಪ್ ಓಪನ್ ಮಾಡಲು ಸರ್ಕಾರವು ₹20,000ದವರೆಗೆ ಸಾಲ ಸೌಲಭ್ಯವನ್ನು ಕೊಡುತ್ತದೆ.. . ಮಹಿಳೆಯರು ಮಾತ್ರವಲ್ಲ ಪುರುಷರು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ವಿಶ್ವಕರ್ಮ ಯೋಜನೆಯ ಪೂರ್ಣ ವಿವರ

ಕುಶಲ ಕಾರ್ಮಿಕ ವರ್ಗಕ್ಕೆ ಸಹಾಯ ನೀಡುವ ಆಲೋಚನೆಯಲ್ಲಿ ಹುಟ್ಟಿಕೊಂಡ ಯೋಜನೆ ಈ ವಿಶ್ವಕರ್ಮ ಯೋಜನೆ ಆಗಿದೆ. ಸಪ್ಟೆಂಬರ್ 17 2023 ರಂದು ಈ ಯೋಜನೆ ಜಾರಿಗೆ ಬಂದಿದೆ. ಈಗ ಈ ಯೋಜನೆಯ ಅಡಿಯಲ್ಲಿ 18ವಿವಿಧ ಕಾರ್ಮಿಕರ ಸಹಾಯಕ್ಕೆ ಕೇಂದ್ರ ಸರ್ಕಾರವು ಸಹಾಯಧನ ತರಬೇತಿ ಮತ್ತು ವ್ಯಾಪಾರಕ್ಕೆ ಸಹಾಯ ಮಾಡುತ್ತದೆ. ಬಡಗಿ , ಬೋಟ್ ಮೇಕರ್, ಆರ್ಮರ್, ಕಮ್ಮಾರ , ಕುಂಬಾರ , ಶಿಲ್ಪಿ , ಚಮ್ಮಾರ ಮೇಸನ್ , ಟೈಲರ್
ಮತ್ತು ಮೀನುಗಾರಿಕೆ ಗಳಂತಹ ಕುಶಲ ಕರ್ಮಿಗಳು ಈ ಯೋಜನೆಯು ಬಹಳ ಉಪಯೋಗ ಆಗಲಿದೆ.

Free Sewing Machine Scheme 2024

Leave a comment