Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Central Budget 2024: 1 ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ಫ್ರೀ ವಿದ್ಯುತ್! ಗೃಹಜ್ಯೋತಿಗೆ ಠಕ್ಕರ್ ಕೊಡಲಿದೆ ಕೇಂದ್ರದ ಹೊಸ ಯೋಜನೆ

ಮತ್ತೊಂದು ಮುಖ್ಯವಾದ ವಿಶೇಷವಾದ ವಿಷಯ, ಈ ಯೋಜನೆಯ ಫಲವನ್ನು ಮಧ್ಯಮ ವರ್ಗದವರು, ಬಡವರು ಯಾರು ಬೇಕಾದರೂ ತಮ್ಮ ಮನೆಗೆ ಸೋಲಾರ್ ಪ್ಯಾನೆಲ್ ಹಾಕಿಸಿಕೊಳ್ಳಬಹುದು.

Central Budget 2024: ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಜನರಿಗೆ ಅನುಕೂಲ ಮಾಡಿಕೊಡುವುದಕ್ಕೆ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಕೋಟ್ಯಾಂತರ ಜನರಿಗೆ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ಸಿಗುತ್ತಿದೆ. ಈ ಯೋಜನೆಗೆ ಠಕ್ಕರ್ ಕೊಡುವ ಹಾಗೆ ಇದೀಗ ಕೇಂದ್ರದಿಂದ ಹೊಸ ಯೋಜನೆಯ ಬಗ್ಗೆ ಬಜೆಟ್ ಮಂಡನೆ ದಿನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ..

ಪಿಎಮ್ ಸೂರ್ಯೋದಯ ಯೋಜನೆ – PM Suryoday Yojana:

ಇದು ಪಿಎಮ್ ನರೇಂದ್ರಮೋದಿ ಅವರ ಕೇಂದ್ರ ಸರ್ಕಾರ ಹೊಸ ಯೋಜನೆಯ ಜೊತೆಗೆ ಬಂದಿದೆ. ಈ ಯೋಜನೆಯ ಮೂಲಕ ನಮ್ಮ ರಾಜ್ಯದಲ್ಲಿ 300 ವಿದ್ಯುತ್ ಘಟಕಗಳನ್ನು ಶುರು ಮಾಡುವ ಆಲೋಚನೆ ನಡೆಸಿದೆ. ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದು, ಸುಮಾರು 1 ಕೋಟಿ ಮನೆಗಳ ಮೇಲೆ ಸೋಲಾರ್ ಪ್ಯಾನೆಲ್ ಹಾಕಿಸುವ ಪ್ಲಾನ್ ಹೊಂದಿದೆ ಸರ್ಕಾರ ಎಂದು ತಿಳಿಸಿದ್ದಾರೆ.

ಮತ್ತೊಂದು ವಿಶೇಷತೆ ಏನು ಎಂದರೆ, ನಿರ್ಮಲಾ ಸೀತಾರಾಮನ್ ಅವರು ಹೇಳಿರುವ ಮಾತಿನ ಅನುಸಾರ, ಉಚಿತವಾಗಿ ಸೋಲಾರ್ ವಿದ್ಯುತ್ ಘಟಕಗಳ ಸ್ಥಾಪನೆ ನಡೆಯಲಿದೆ, ಈ ಯೋಜನೆಯ ಫಲಾನುಭವಿಗಳಿಗೆ ಕರೆಂಟ್ ಬಿಲ್ ಕಟ್ಟುವ ತಲೆನೋವು ಇರುವುದಿಲ್ಲ. ಅವರ ಖರ್ಚು ಕಡಿಮೆ ಆಗಿ, ಆರ್ಥಿಕ ಸಮಸ್ಯೆ ಇಳಿಕೆ ಆಗುತ್ತದೆ. ಸರ್ಕಾರ ಒದಗಿಸುವ ಸೌರ ಫಲಕಗಳನ್ನು ಜನರು ಸುಲಭವಾಗಿ ತಮ್ಮ ಮನೆಯಲ್ಲಿ ಖಾಲಿ ಇರುವ ಜಾಗದಲ್ಲಿ ಸೋಲಾರ್ ಪ್ಯಾನೆಲ್ ಹಾಕಿಸಿಕೊಳ್ಳಬಹುದು, ಇದಕ್ಕಾಗಿ ನಿಮ್ಮ ಬಳಿ ಹೊಸ ಜಾಗ ಇರಬೇಕು ಎನ್ನುವ ನಿಯಮ ಇಲ್ಲ.

ಎಲ್ಲಾ ವರ್ಗದವರಿಗೂ ಸೌಲಭ್ಯ:

ಮತ್ತೊಂದು ಮುಖ್ಯವಾದ ವಿಶೇಷವಾದ ವಿಷಯ, ಈ ಯೋಜನೆಯ ಫಲವನ್ನು ಮಧ್ಯಮ ವರ್ಗದವರು, ಬಡವರು ಯಾರು ಬೇಕಾದರೂ ತಮ್ಮ ಮನೆಗೆ ಸೋಲಾರ್ ಪ್ಯಾನೆಲ್ ಹಾಕಿಸಿಕೊಳ್ಳಬಹುದು. ಮನೆಯ ಮೇಲ್ಚಾವಣಿ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಲಾಗುತ್ತದೆ ಎಂದು ಖುದ್ದು ಪಿಎಮ್ ಅವರು ತಿಳಿಸಿದ್ದರು. ಪ್ರತಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್ ಸಿಗುತ್ತದೆ ಎಂದಿದ್ದರು. ನಮ್ಮ ದೇಶದ 1ಕೋಟಿ ಮನೆಗಳಿಗೆ ಈ ಸೌಲಭ್ಯ ನೀಡುವ ಗುರಿ ಹೊಂದಿರುವ ಬಗ್ಗೆ ಹೇಳಿದರು..

ಈ ಯೋಜನೆಗೆ ಸಂಬಂಧಪಟ್ಟ ಹಾಗೆ ಹೆಚ್ಚು ಮಾಹಿತಿ ಪಡೆಯಲು ಟಾಟಾ ಪವರ್, ಎಚ್‌ಪಿಎಲ್ ಎಲೆಕ್ಟ್ರಿಕ್, ಆರ್‌ಇಸಿ, ಬೊರೊಸಿಲ್ ರಿನ್ಯೂವಬಲ್, ಸ್ಟರ್ಲಿಂಗ್ ಮತ್ತು ವಿಲ್ಸನ್ ರಿನ್ಯೂವಬಲ್ ಮತ್ತು ವೆಬ್‌ ಸೋಲ್ ಈ ಶೇರ್ ಗಳ ಬಗ್ಗೆ ಗಮನಿಸಿ. ಈ ಯೋಜನೆಯ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳಿ.

300 units of free electricity every month for 1 crore households, central government budget new update

Karnataka Budget 2024: ಫೆಬ್ರವರಿ 16ರಂದು ರಾಜ್ಯ ಸರ್ಕಾರದಿಂದ ಬಜೆಟ್ ಮಂಡನೆ, ಜನತೆಗೆ ಏನೆಲ್ಲಾ ಸಿಗಬಹುದು ಗೊತ್ತೇ?

Leave a comment