Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

GramaOne Registration: ನಿಮ್ಮ ಊರಲ್ಲಿ ನೀವೇ ಗ್ರಾಮ ಒನ್ ಕಚೇರಿ ತೆರೆಯಲು ಅವಕಾಶ ನೀಡಿದೆ ಸರ್ಕಾರ! ಕೂಡಲೇ ಅರ್ಜಿ ಸಲ್ಲಿಸಿ

ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನಿಸುವ ಮೂಲಕ ಯುವಕರಲ್ಲಿ ಉದ್ಯೋಗದ ಅವಕಾಶ ಮಾಡಿಕೊಡುವುದು ಸರ್ಕಾರದ ಉದ್ದೇಶ ಆಗಿದೆ.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಎರಡು ಕೂಡ ನಮ್ಮ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಇರಬಾರದು ಎಂದು ಸಾಕಷ್ಟು ಪ್ರಯತ್ನ ಪಡುತ್ತಿದೆ. ಅದೇ ನಿಟ್ಟಿನಲ್ಲಿ ಉದ್ಯೋಗ ಕಲ್ಪಿಸುವ ಕೆಲಸವನ್ನು ಸಹ ಮಾಡುತ್ತಿದೆ. ಇದೀಗ ಸರ್ಕಾರದಿಂದ ನಿರುದ್ಯೋಗಿ ಯುವಕರಿಗೆ ಮತ್ತೊಂದು ಒಳ್ಳೆಯ ಅವಕಾಶ ಸಿಗುತ್ತಿದೆ. ಅದು ಗ್ರಾಮ ಒನ್ ಕೇಂದ್ರ ತೆರೆಯುವ ಅವಕಾಶ ಆಗಿದೆ. ಇದನ್ನು ಸರ್ಕಾರವೇ ನೀಡುತ್ತಿದ್ದು, ಕೆಲಸ ಇಲ್ಲದವರಿಗೆ ಒಳ್ಳೆಯ ಅವಕಾಶ ಆಗಿದೆ..

ಗ್ರಾಮ ಒನ್ ಕೇಂದ್ರ – GramaOne Registration:

ಗ್ರಾಮ ಒನ್ ಕೇಂದ್ರದ ಪರಿಚಯ ನಿಮಗೆಲ್ಲ ಇದ್ದೇ ಇರುತ್ತದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಈ ಎರಡಕ್ಕೂ ಸಂಬಂಧಪಟ್ಟ, ಜನರಿಗೆ ಅನುಕೂಲ ಅಗುವಂಥ ಯೋಜನೆಗಳು, ಸೌಲಭ್ಯಗಳು ಇದೆಲ್ಲದರ ಬಗ್ಗೆ ಮಾಹಿತಿ ಸಿಗುವ ಕೇಂದ್ರವೇ ಗ್ರಾಮ ಒನ್ ಕೇಂದ್ರ ಆಗಿರುತ್ತದೆ. ಒಂದು ಹಳ್ಳಿಯಲ್ಲಿ ಒಂದು ಗ್ರಾಮ ಒನ್ ಕೇಂದ್ರ ಆದರೂ ಇರಬೇಕು ಎನ್ನುವುದು ಸರ್ಕಾರ ಉದ್ದೇಶ ಆಗಿದೆ. ಹಾಗಾಗಿ ಹೆಚ್ಚಿನ ಗ್ರಾಮ ಒನ್ ಕೇಂದ್ರಗಳನ್ನು ನಿರ್ಮಾಣ ಮಾಡಬೇಕು ಎಂದು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಅರ್ಜಿ ಆಹ್ವಾನಿಸಿದೆ.

ನಿಮ್ಮ ಸ್ವಂತ ಗ್ರಾಮ ಒನ್ ಕೇಂದ್ರ ತೆರೆಯಿರಿ:

ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನಿಸುವ ಮೂಲಕ ಯುವಕರಲ್ಲಿ ಉದ್ಯೋಗದ ಅವಕಾಶ ಮಾಡಿಕೊಡುವುದು ಸರ್ಕಾರದ ಉದ್ದೇಶ ಆಗಿದೆ. ಒಂದು ವೇಳೆ ನೀವು ಸ್ವಂತ ಬ್ಯುಸಿನೆಸ್ ಮಾಡಬೇಕು ಎಂದುಕೊಂಡಿದ್ದರೆ, ಗ್ರಾಮ ಒನ್ ಕೇಂದ್ರ ತೆರೆಯುವುದು ಒಳ್ಳೆಯ ಆಯ್ಕೆ. ಇದರಿಂದ ನಿಮಗೂ ಕೆಲಸ ಸಿಕ್ಕ ಹಾಗೆ ಆಗುತ್ತದೆ ಜೊತೆಗೆ ಜನರಿಗೂ ಸಹಾಯ ಆಗುತ್ತದೆ. ಹಾಗಾಗಿ ಆಸಕ್ತಿ ಇರುವವರು ಅರ್ಜಿ ಸಲ್ಲಿಸಿ, ಸರ್ಕಾರದ ಒಪ್ಪಿಗೆ ಪಡೆದು ಗ್ರಾಮ ಒನ್ ಕೇಂದ್ರ ತೆರೆಯಬಹುದು.

ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು:

ಮಡಿಕೇರಿಯ ಹೊಸ್ಕೇರಿ, ಹಾಕತ್ತೂರು ಮತ್ತು ಕರಿಕೆ, ನಿಟ್ಟೂರು, ಬಲ್ಯಮಂಡೂರು, ಕೆ ಬಡಗ, ಬಿ ಶೆಟ್ಟಿಗೇರಿ, ಕಿರುಗೂರು ಮತ್ತು ಪೊನ್ನಂಪೇಟೆಯ ನಾಲ್ಕೇರಿ, ಬೆಟ್ಟದಳ್ಳಿ ಮತ್ತು ಸೋಮವಾರಪೇಟೆಯ ಗರ್ವಾಲೆ, ಕಾಕೋಟು ಪರಂಬು, ಬೇಟೋಳಿ ಮತ್ತು ವಿರಾಜಪೇಟೆಯ ಅಮ್ಮತ್ತಿ ತಾಲ್ಲೂಕು ಇದಿಷ್ಟು ಕಡೆಗಳಲ್ಲಿ 14 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸ್ಥಳಗಳಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಹಾಕುವುದಕ್ಕೆ ಅಧಿಸೂಚನೆ ನೀಡಲಾಗಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

ಒಂದು ವೇಳೆ ನೀವು ಕೂಡ ಗ್ರಾಮ ಕಚೇರಿ ತೆರೆದು ನಿಮ್ಮ ಊರಿನ, ನಿಮ್ಮ ಸಮೀಪ ಇರುವ ಜನರಿಗೆ ಸರ್ಕಾರದ ಮಾಹಿತಿ ತಲುಪಿಸಿ, ಅವರಿಗೆಲ್ಲಾ ಸಹಾಯ ಮಾಡುವುದರ ಜೊತೆಗೆ ನೀವು ಬ್ಯುಸಿನೆಸ್ ಮಾಡುವ ಮನಸ್ಸು ಹೊಂದಿದ್ದರೆ, https://kal-mys.gramaone.karnataka.gov.in/ ಈ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಫೆಬ್ರವರಿ 15.

GramaOne Registration Terms and Conditions and Application Process

Karnataka Budget 2024: ಫೆಬ್ರವರಿ 16ರಂದು ರಾಜ್ಯ ಸರ್ಕಾರದಿಂದ ಬಜೆಟ್ ಮಂಡನೆ, ಜನತೆಗೆ ಏನೆಲ್ಲಾ ಸಿಗಬಹುದು ಗೊತ್ತೇ?

Leave a comment