Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

KPTCL Recruitment: ಕೆಪಿಟಿಸಿಎಲ್ ನಲ್ಲಿ ಇಂಜಿನಿಯರ್ ಗಳ ನೇಮಕಾತಿ! 404 ಹುದ್ದೆಗಳ ಭರ್ತಿಗೆ ಅವಕಾಶ!

ಈ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪಿ. ಎಸ್. ದಿನೇಶ್ ಕುಮಾರ್ ಹಾಗೂ ನ್ಯಾಯಮೂರ್ತಿ ಟಿ. ಜಿ. ಶಿವಶಂಕರೇಗೌಡ ಅವರು ಜೊತೆಗಿರುವ ನೇತೃತ್ವದಲ್ಲಿ ಈ ಮೇಲ್ಮನವಿ ಬಗ್ಗೆ ಪರಿಶೀಲನೆ ನಡೆದಿದ್ದು,

KPTCL Recruitment: ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ನಲ್ಲಿ ಬಹಳ ಸಮಯದಿಂದ ಖಾಲಿ ಇದ್ದ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಸಲ್ಲಿಸಿದ್ದ ಅರ್ಜಿಗೆ ಈಗ ಹೈಕೋರ್ಟ್ ಇಂದ ಒಪ್ಪಿಗೆ ಸಿಕ್ಕಿದೆ. ಎರಡು ಕಡೆಗಳ ವಾದಗಳನ್ನು ಕೇಳಿದ ಬಳಿಕ ಕೋರ್ಟ್ ಇಂದ ಸಧ್ಯಕ್ಕೆ ನೇಮಕಾತಿ ಬಗ್ಗೆ ತಾತ್ಕಾಲಿಕ ಆದೇಶ ನೀಡಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ ಕೊನೆಯ ತೀರ್ಪು ಎಲ್ಲವನ್ನು ಸರಿಯಾಗಿ ನಿರ್ಧಾರ ಮಾಡುತ್ತದೆ.

ಫೆಬ್ರವರಿ 4ರಂದು ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಕೋರ್ಟ್ ಗೆ ಹಾಕಿದ್ದ ಅರ್ಜಿಯನ್ನು ರದ್ದು ಪಡಿಸಲಾಗಿತ್ತು. ಆದರೆ ಮುಖ್ಯವಾದ ಈ ಅರ್ಜಿಯನ್ನು ರದ್ದು ಪಡಿಸಿದ್ದು ಯಾಕೆ ಎಂದು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಕೆ.ಆರ್ ಪೇಟೆ ಗೆ ಸೇರಿದ ಹುಡುಗಿ ಶ್ರುತಿ ಹಾಗೂ ಇನ್ನು 50 ಜನ ಅಭ್ಯರ್ಥಿಗಳು ಸೇರಿ ಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿದರು.

ಈ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪಿ. ಎಸ್. ದಿನೇಶ್ ಕುಮಾರ್ ಹಾಗೂ ನ್ಯಾಯಮೂರ್ತಿ ಟಿ. ಜಿ. ಶಿವಶಂಕರೇಗೌಡ ಅವರು ಜೊತೆಗಿರುವ ನೇತೃತ್ವದಲ್ಲಿ ಈ ಮೇಲ್ಮನವಿ ಬಗ್ಗೆ ಪರಿಶೀಲನೆ ನಡೆದಿದ್ದು, ಎರಡು ಕಡೆಯ ವಾದ ವಿವಾದಗಳು ಕೇಳಿದ ಬಳಿಕ ಆ ಥರದ ಆದೇಶ ನೀಡಿದೆ. 2023ರ ಜನವರಿ 3ರಂದು ಅರ್ಹತೆ ಹೊಂದಿರುವವರ ಪಟ್ಟಿಯನ್ನು ಬಿಡುಗಡೆ ಮಾಡಿ, ಅದರಲ್ಲಿ 404 ಹುದ್ದೆಗಳಿಗೆ ಆಯ್ಕೆ ಸಹ ಆಗಿತ್ತು, ಇವುಗಳ ಪೈಕಿ 313 ಮೂಲ ವೃಂದ, 91 ಕಲ್ಯಾಣ ಕರ್ನಾಟಕ ವೃಂದದ ಆಯ್ಕೆ ಆಗಿತ್ತು.

ಆ ಎಲ್ಲಾ ಅಭ್ಯರ್ಥಿಗಳಿಗೆ ಈಗ ಒಂದು ಆದೇಶವನ್ನು ತುರ್ತು ಪರಿಸ್ಥಿತಿಯ ಹಾಗೆ ಕೊಡಬೇಕು ಎಂದು ಹೈಕೋರ್ಟ್ ಗೆ ಮನವಿ ಸಲ್ಲಿಸಲಾಗಿತ್ತು. ಅಭ್ಯರ್ಥಿಗಳಿಗೆ ಕೊಡುವಂಥ ತಾತ್ಕಾಲಿಕ ನೇಮಕಾತಿಯ ಮತ್ತೊಂದು ಸಾರಿ ಕೋರ್ಟ್ ನ ತೀರ್ಪಿಗೆ ಗುರಿಯಾಗುತ್ತದೆ ಎಂದು ಆದೇಶಗಳಲ್ಲಿ ತಿಳಿಸಬೇಕು ಎಂದು ಕೋರ್ಟ್ ಹೇಳಿದೆ. ಅದೇ ಅಭ್ಯರ್ಥಿಗಳು ಮೇಲ್ಮನವಿಯಲ್ಲಿ ಕೂಡ ಆಯ್ಕೆಯಾದರೆ, ಸೇವಾ ಹಿರಿತನ ಮತ್ತು ರೂಸ್ಟರ್ ಎರಡನ್ನು ಪಾಲಿಸಬೇಕು ಎಂದು ತಿಳಿಸಲಾಗಿದೆ. ಹಾಗೆಯೇ ಮಾರ್ಚ್ 13ಕ್ಕೆ ಈ ಕೇಸ್ ವಿಚಾರಣೆಯನ್ನು ಮುಂದಕ್ಕೆ ಹಾಕಲಾಗಿದೆ.

Recruitment of Engineers in KPTCL! Opportunity to fill 404 posts!

Leave a comment