Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಬೇರೇನೂ ಬೇಡ ಜಸ್ಟ್ ಈ ಎರಡು ವಸ್ತುಗಳು ಇದ್ದಾರೆ ಸಾಕು ಥಟ್ ಅಂತ 5 ನಿಮಿಷದಲ್ಲಿ ಮಾಡಿ ಮುಗಿಸಿ ಈ ಸ್ಪೆಷಲ್ ಪಲ್ಯ.

Special Dish: You don't need anything else, just having these two items is enough. Make it in 5 minutes and finish this special dish.

Special  Dish: ಎಸ್ಟೋ ಜನರಿಗೆ ಅಡುಗೆ ಮಾಡುವುದಕ್ಕೆ ಬರುವುದಿಲ್ಲ. ಅಂತವರು ಸಹ ಈ ರೆಸಿಪಿಯನ್ನು ಟ್ರೈ ಮಾಡಬಹುದು ಮತ್ತು ಬ್ಯಾಚುಲರ್ಸ್ ಆಗಿದ್ದರೂ ಸಹ ಈ ರೆಸಿಪಿ ಅನ್ನು ಟ್ರೈ ಮಾಡಬಹುದು. ಹಾಗಾದರೆ ಹೇಗೆ ಮಾಡಬೇಕು ಎಂಬುದನ್ನು ತಿಳಿಯೋಣ ಬನ್ನಿ.

ಪಲ್ಯ ಮಾಡಲು ಬೇಕಾದ ಪದಾರ್ಥಗಳು.

ಮೊದಲಿಗೆ ಇದಕ್ಕೆ ಬೇಕಾದಂತಹ ಮುಖ್ಯ  ಪದಾರ್ಥಗಳು ಯಾವುವು ಎಂದರೆ ಈರುಳ್ಳಿ ಮತ್ತು ಕ್ಯಾಪ್ಸಿಕಂ. ಹೌದು ಕಾಲು ಕೆಜಿ ಅಷ್ಟು ಸಣ್ಣಗೆ ಹೆಚ್ಚಿಕೊಂಡಂತಹ ಈರುಳ್ಳಿ ಮತ್ತು ಒಂದರಿಂದ ಎರಡು ಕ್ಯಾಪ್ಸಿಕಂ ಇದ್ದರೆ ಸಾಕು ಈ ಪಲ್ಯವನ್ನು ಮನೆಯಲ್ಲಿರುವ ವಸ್ತುಗಳಿಂದಲೇ  ಅತಿ ರುಚಿಕರವಾಗಿ ಮಾಡಿಕೊಳ್ಳಬಹುದು.

ಪೋಸ್ಟ್ ಆಫೀಸ್ ಇಂದ ಬಂತು ಸಿಹಿ ಸುದ್ದಿ 8 ನೇ ತರಗತಿ ಪಾಸ್ ಆದವರಿಗೆ 63 ಸಾವಿರ ಸಂಬಳ, ಅಂಚೆ ಇಲಾಖೆಯಲ್ಲಿ ಈ ರೀತಿ ಅರ್ಜಿ ಸಲ್ಲಿಸಿ ಸಾಕು.

ಮೊದಲಿಗೆ ಒಂದು ಬಾಣಲೆಯಲ್ಲಿ ಒಂದು ಸ್ಪೂನ್ ನಷ್ಟು ಎಣ್ಣೆ ಹಾಕಿ ನಂತರ ಅದಕ್ಕೆ ಅರ್ಧ ಚಮಚದಷ್ಟು ಜೀರಿಗೆಯನ್ನು ಹಾಕಬೇಕು. ನಂತರ ಉದ್ದಕ್ಕೆ ಕಟ್ ಮಾಡಿಕೊಂಡಿರುವಂತಹ ಈರುಳ್ಳಿಯನ್ನು ಹಾಕಿ ಅದರಲ್ಲಿ ಸ್ವಲ್ಪ ಹಸಿ ವಾಸನೆ ಹೋಗುವವರೆಗೂ ಹುರಿದುಕೊಳ್ಳಬೇಕು.

ಈರುಳ್ಳಿ ಸ್ವಲ್ಪ ಕಲರ್ ಚೇಂಜ್ ಆದ ನಂತರ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಅದು ಸಹ ಹಸಿ ವಾಸನೆಯನ್ನು ಹೋಗಿಕೊಳ್ಳುವವರೆಗೂ ಹುರಿದುಕೊಳ್ಳಬೇಕು. ಒಂದು ವೇಳೆ ನಿಮ್ಮ ಮನೆಯಲ್ಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಇಲ್ಲದಿದ್ದರೆ ಶುಂಠಿ ಬೆಳ್ಳುಳ್ಳಿಯನ್ನು ಸಣ್ಣಗೆ ಚಚ್ಚಿ ಕೊಂಡು ಸಹ ಬಳಸಿಕೊಳ್ಳಬಹುದು.

Mushroom Masala: ಚಿಕನ್ ತರ ಇರುತ್ತೆ ಈ ಮಶ್ರೂಮ್ ಮಸಾಲ, ಥಟ್ ಅಂತ 5 ನಿಮಿಸಿದಲ್ಲಿ ಮಾಡಿ ಮುಗಿಸಿ, ಬ್ಯಾಚಲರ್ಸ್ ಗೆ ಹಬ್ಬದ ಊಟ.

ನಂತರ ಅದಕ್ಕೆ ಸಣ್ಣಗೆ ಕಟ್ ಮಾಡಿಕೊಂಡಿರುವಂತಹ ಕ್ಯಾಪ್ಸಿಕಂ ಅನ್ನು ಹಾಕಿ ಎರಡು ನಿಮಿಷ ಹುರಿದುಕೊಂಡು ಅದರೊಳಗೆ ಕಾಲು ಟೀ ಸ್ಪೂನ್ ಅರಶಿನ ಒಂದು ಟೀ ಸ್ಪೂನ್ ಧನ್ಯ ಪುಡಿ ಒಂದು ಟೀ ಸ್ಪೂನ್ ಅಚ್ಚಕಾರದ ಪುಡಿ ಅರ್ಧ ಟೀ ಸ್ಪೂನ್ ಜೀರಿಗೆ ಪುಡಿ ಅರ್ಧ ಟೀ ಸ್ಪೂನ್ ಗರಂ ಮಸಾಲಾ ಹಾಕಿಕೊಂಡು ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಂಡರೆ ಸಾಕು ಬಿಸಿಬಿಸಿಯಾದಂತಹ ಒಂದು ಮಸಾಲ ಪಲ್ಯ ರೆಡಿಯಾಗುತ್ತದೆ.

Hair Care Tips: ಸ್ನಾನ ಮಾಡಿದ ಬಳಿಕ ನಿಮಗೆ ಈ ಅಭ್ಯಾಸವಿದ್ದರೆ ತಕ್ಷಣ ಅದನ್ನು ಬದಲಾಯಿಸಿಕೊಳ್ಳಿ. ಇಲ್ಲದಿದ್ದರೆ ತಲೆಯಲ್ಲಿ ಕೂದುಲು ಉದುರುವ ಸಮಸ್ಯೆ ಹೆಚ್ಚಾಗಬಹುದು.

ಈ ಪಲ್ಯವನ್ನು ಅಕ್ಕಿ ರೊಟ್ಟಿ ಅಥವಾ ಜೋಳದ ರೊಟ್ಟಿ ಇಲ್ಲದಿದ್ದರೆ ಬಿಸಿಬಿಸಿ ಅನ್ನದ ಜೊತೆಗೆ ತಿನ್ನಬಹುದು. ಅಷ್ಟೇ ಅಲ್ಲದೆ ಇದು ಸೈಡ್ ಡಿಶ್ ಆಗಿರುವುದರಿಂದ ಪಲ್ಯವಾಗಿಯೂ ಸಹ ಉಪಯೋಗಿಸಿಕೊಳ್ಳಬಹುದು. ಬ್ಯಾಚುಲರ್ಸ್ ಅಂತೂ ಹೇಳಿ ಮಾಡಿಸಿದಂತಹ ಒಂದು ರೆಸಿಪಿ ಆಗಿದೆ. ಇದರ ವಿಡಿಯೋ ವನ್ನು ನೋಡಲು ನೀವು ಇಚ್ಛಿಸಿದರೆ ಇಲ್ಲಿ ನೀಲಿ ಅಕ್ಷರ ದಲ್ಲಿ ಇರುವ ಲಿಂಕ್ ಮುಖಾಂತರ ವಿಡಿಯೋವನ್ನು ನೋಡಬಹುದು. ಪಲ್ಯ ಮಾಡುವ ವಿಡಿಯೋ ಇಲ್ಲಿದೆ

Capsicum onion palya
Image credit Rekha aduge YouTube.

 

Leave a comment