Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Malayalam Actresses: ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿರುವ ಮಲೆಯಾಳಂ ನಟಿಯರು..!!

ನಟಿ ಬಾಮಾ ಅವರು ಮೇ 23 1988 ರಂದು ಕೇರಳದಲ್ಲಿ ಜನಿಸಿದ್ದಾರೆ. ಇವರು ರಾಕಿಂಗ್ ಸ್ಟಾರ್ ಯಶ್ ಅವರ ಜೊತೆಗೆ ಮೊದಲಾಸಲ ಎನ್ನುವ ಚಿತ್ರದಲ್ಲಿ ನಟಿಸಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.

Get real time updates directly on you device, subscribe now.

Malayalam Actresses: ಸಾಕಷ್ಟು ಮಲೆಯಾಳಂ ನಟಿಯರು ನಮ್ಮ ಸ್ಯಾಂಡಲ್ ವುಡ್ ಗೆ ಬಂದು ಕೆಲ ಸಿನಿಮಾಗಳಲ್ಲಿ ನಟಿಸಿ ತುಂಬಾನೆ ಫೇಮಸ್ಸಾಗಿದ್ದಾರೆ. ಕೆಲವರು 1 ಅಥವಾ 2 ಸಿನಿಮಾಗಳಲ್ಲಿ ನಟಿಸಿ ಮಿಂಚಿ ಮರೆಯಾದರೆ ಇನ್ನೂ ಕೆಲ ನಟಿಯರು ಸ್ಯಾಂಡಲ್ ವುಡ್ ನಲ್ಲಿಯೇ ನೆಲೆಸಿದ್ದಾರೆ. ಅಂತಹ ಜನಪ್ರಿಯ ಆಗಿರುವ ಮಲೆಯಾಳಂ ನಟಿಯರು ಯಾರು ಎಂದು ಇಲ್ಲಿ ನೋಡೋಣ ಬನ್ನಿ.

ನಟಿ ಭಾವನಾ ಭಾವನಾ ಅವರು ಜೂನ್ 6 1986 ರಂದು ತ್ರಿಶೂರ್ ನಲ್ಲಿ ಜನಿಸಿದ್ದಾರೆ. ಇವರು ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅವರ ಜೊತೆಗೆ ಜಾಕಿ ಚಿತ್ರದ ಮೂಲಕ ನಟಿಸಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇದಾದ ಮೇಲೆ ವಿಷ್ಣುವರ್ಧನ, ರೋಮಿಯೋ, ಯಾರೇ ಕೂಗಾಡಲಿ, ಟೋಪಿವಾಲಾ, ಬಚ್ಚನ್, ಮೈತ್ರಿ, ಮುಕುಂದ ಮುರಾರಿ, ಚೌಕ, ಇನ್ಸ್ ಪೆಕ್ಟರ್ ವಿಕ್ರಂ, ಟಗರು, 99, ಶ್ರೀಕೃಷ್ಣ ಅಟ್ ಜಿಮೇಲ್ ಡಾಟ್ ಕಾಂ, ಭಜರಂಗಿ 2, ಗೋವಿಂದ ಗೋವಿಂದ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

 

ನಟಿ ಬಾಮಾ ಅವರು ಮೇ 23 1988 ರಂದು ಕೇರಳದಲ್ಲಿ ಜನಿಸಿದ್ದಾರೆ. ಇವರು ರಾಕಿಂಗ್ ಸ್ಟಾರ್ ಯಶ್ ಅವರ ಜೊತೆಗೆ ಮೊದಲಾಸಲ ಎನ್ನುವ ಚಿತ್ರದಲ್ಲಿ ನಟಿಸಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇದಾದ ಮೇಲೆ ಶೈಲೂ, ಆಟೋರಾಜ, ಬರ್ಫಿ, ಅಪ್ಪಯ್ಯ, ಅಂಬರ ಅರ್ಜುನ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

ನಟಿ ಪಾರ್ವತಿ ಮೆನನ್ ಅವರು ಏಪ್ರಿಲ್ 7 1988 ರಂದು ಕೋಜಿಕೋಡ್ ನಲ್ಲಿ ಜನಿಸಿದ್ದಾರೆ. ಇವರು ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಮಿಲನ ಸಿನಿಮಾದಲ್ಲಿ ನಟಿಸಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇದಾದ ಮೇಲೆ ಮಳೆ ಬರಲಿ ಮಂಜು ಇರಲಿ, ಪೃಥ್ವಿ, ಅಂದರ್ ಬಾಹರ್ ಎನ್ನುವ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ನಟಿ ಮೀರಾ ಜಾಸ್ಮಿನ್ ಅವರು ಫೆಬ್ರವರಿ 15 1982 ರಂದು ಕೇರಳದಲ್ಲಿ ಜನಿಸಿದ್ದಾರೆ. ಇವರು ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಮೌರ್ಯ ಚಿತ್ರದಲ್ಲಿ ನಟಿಸಿ ಕನ್ನಡ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದರು. ತದನಂತರ ಅರಸು, ದೇವರು ಕೊಟ್ಟ ತಂಗಿ, ಇಜ್ಜೋಡು, ಹೂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ನಟಿ ನವ್ಯಾ ನಾಯರ್ ಅವರು ಅಕ್ಟೋಬರ್ 14 1985 ರಂದು ಚಪ್ಪಡ್ ನಲ್ಲಿ ಜನಿಸಿದ್ದಾರೆ. ಇವರು ಡಿ ಬಾಸ್ ಜೊತೆಗೆ ಗಜ ಚಿತ್ರದಲ್ಲಿ ನಟಿಸಿ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿದರು. ತದನಂತರ ನಮ್ ಯಜಮಾನ್ರು, ಭಾಗ್ಯದ ಬಳೆಗಾರ, ಬಾಸ್, ದೃಶ್ಯ, ದೃಶ್ಯ 2 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ನಟಿ ನಯನತಾರಾ ಅವರು ನವೆಂಬರ್ 18 1984 ರಂದು ತಿರುವಲ್ಲಾದಲ್ಲಿ ಜನಿಸಿದ್ದಾರೆ. ಇವರು ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆಗೆ ಸೂಪರ್ ಎನ್ನುವ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ನಟಿ ಪ್ರಿಯಾಮಣಿ ಅವರು ಜೂನ್ 4 1984 ರಂದು ಜನಿಸಿದ್ದಾರೆ. ಇವರು ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ರಾಮ್ ಚಿತ್ರದಲ್ಲಿ ನಟಿಸಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟರು. ತದನಂತರ ವಿಷ್ಣುವರ್ಧನ, ಕೋಕೋ, ಅಣ್ಣಾಬಾಂಡ್, ಲಕ್ಷ್ಮಿ, ರನ್ನ, ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ, ಕಲ್ಪನಾ 2, ದನ ಕಾಯೋನು, ಇದೊಳ್ಳೆ ರಾಮಾಯಣ, ಚೌಕ, ಧ್ವಜ, ನನ್ನ ಪ್ರಕಾರ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ನಟಿ ಅಮಲಾ ಪೌಲ್ ಅವರು ಅಕ್ಟೋಬರ್ 26 1991 ರಂದು ಆಲುವದಲ್ಲಿ ಜನಿಸಿದ್ದಾರೆ. ಇವರು ಕನ್ನಡದಲ್ಲಿ ಕಿಚ್ಚ ಸುದೀಪ್ ಅವರ ಜೊತೆ ಹೆಬ್ಬುಲಿ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ನಟಿ ಅನುಪಮ ಪರಮೇಶ್ವರನ್ ಅವರು ಫೆಬ್ರವರಿ 18 1996 ರಂದು ಕೇರಳದಲ್ಲಿ ಜನಿಸಿದ್ದಾರೆ. ಇವರು ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ನಟ ಸಾರ್ವಭೌಮ ಚಿತ್ರದ ಮೂಲಕ ನಟಿಸಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.

ನಟಿ ಕಾರ್ತಿಕಾ ನಾಯರ್ ಅವರು ಜೂನ್ 27 1992 ರಂದು ತಿರುವನಂತಪುರಂನಲ್ಲಿ ಜನಿಸಿದ್ದಾರೆ. ಇವರು ಕನ್ನಡದಲ್ಲಿ ಡಿ ಬಾಸ್ ಅವರ ಜೊತೆಗೆ ಬೃಂದಾವನ ಚಿತ್ರದಲ್ಲಿ ಅಭಿನಯಿಸಿದ್ದಾರೆ…

Malayalam actresses who are famous in Sandalwood

ಶಿವಣ್ಣನ ಮನೆಯಲ್ಲಿ ಪ್ರಿಯಾಮಣಿ ಕುಟುಂಬ..!! ಏನೇನೆಲ್ಲಾ ಹಂಚಿಕೊಂಡರು ನೋಡಿ ಈ ವಿಡಿಯೋ !!

Summary in English: Many Malayalam actresses came to our Sandalwood and acted in some movies and became very famous. Some have starred in 1 or 2 movies and faded away, while some actresses remain in Sandalwood. Let’s see here who are such popular Malayalam actresses.

Get real time updates directly on you device, subscribe now.

Leave a comment