Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Actress Shilpa: ನಟಿ ಶಿಲ್ಪ ಮಗಳು ಹೇಗಿದ್ದಾಳೆ ಈ ನಟಿ ಈಗ ಯಾವ ಕೆಲಸ ಮಾಡುತ್ತಿದ್ದಾರೆ ಗೊತ್ತಾ?

ಹೌದು ಇವರು ಮೊದಲು 1992 ರಲ್ಲಿ ಮಲಯಾಳಂ ನಲ್ಲಿ ತಲಸ್ಥಾನಮ್ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿಮಾ ಪಯಣವನ್ನು ಶುರು ಮಾಡಿಕೊಂಡರು. ಇದಾದ ಮೇಲೆ ಇವರು ಸಾಕಷ್ಟು ಮಲಯಾಳಂ ಹಿಟ್ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

Actress Shilpa: ಮಲಯಾಳಂ ನ ಖ್ಯಾತ ನಟಿ ಶಿಲ್ಪಾ ಅವರನ್ನು ಎಲ್ಲರೂ ಹೆಚ್ಚಾಗಿ ಚಿಪ್ಪಿ ಎಂದೇ ಕರೆಯುತ್ತಾರೆ. ಇವರು ಜೂನ್ 1 1975 ರಂದು ತಿರುವನಂತಪುರಂನಲ್ಲಿ ಜನಿಸಿದ್ದಾರೆ. ಇವರ ತಂದೆ ತಾಯಿಯ ಹೆಸರು ತನ್ಕಂ ಮತ್ತು ಶಾಜಿ ಎಂದು. ಇನ್ನೂ ಶಿಲ್ಪ ಅವರು ಕೇವಲ ಮಲಯಾಳಂನಲ್ಲಿ ಮಾತ್ರವಲ್ಲ ಕೆಲ ಸಿನಿಮಾಗಳನ್ನು ಕನ್ನಡ ಭಾಷೆಯಲ್ಲಿ ಕೂಡ ಅಭಿನಯ ಮಾಡಿದ್ದಾರೆ.

ಹೌದು ಇವರು ಮೊದಲು 1992 ರಲ್ಲಿ ಮಲಯಾಳಂ ನಲ್ಲಿ ತಲಸ್ಥಾನಮ್ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿಮಾ ಪಯಣವನ್ನು ಶುರು ಮಾಡಿಕೊಂಡರು. ಇದಾದ ಮೇಲೆ ಇವರು ಸಾಕಷ್ಟು ಮಲಯಾಳಂ ಹಿಟ್ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇನ್ನು ನಮ್ಮ ಕನ್ನಡದಲ್ಲಿ 1996 ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆಗೆ ಜನುಮದ ಜೋಡಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯ ಮಾಡಿದ್ದಾರೆ.

ಇನ್ನು ಇವರು ನಟಿಸಿದ ಮೊದಲನೆಯ ಚಿತ್ರಕ್ಕೆ ಬೆಸ್ಟ್ ಆಕ್ಟ್ರೆಸ್ಸ್ ಆಗಿ ಫಿಲಂ ಫೇರ್ ಅವಾರ್ಡ್ ಕೂಡ ದೊರಕಿದೆ. ಇದಾದ ಮೇಲೆ ಕಲ್ಯಾಣಿ, ಮುದ್ದಿನ ಕಣ್ಮಣಿ, ಲಕ್ಷ್ಮಿ ಮಹಾಲಕ್ಷ್ಮಿ, ವಿಮೋಚನೆ, ಮುಂಗಾರಿನ ಮಿಂಚು, ಚಿಕ್ಕ, ಸುವ್ವಿ ಸುವ್ವಾಲಿ, ಬಿಸಿ ರಕ್ತ, ಭೂಮಿ ತಾಯಿಯ ಚೊಚ್ಚಲ ಮಗ, ಮೇಘ ಬಂತು ಮೇಘ, ಪ್ರೇಮಾಚಾರಿ, ಅರುಣೋದಯ, ನಾನೇನು ಮಾಡಿಲ್ಲ, ಇದು ಎಂಥ ಪ್ರೇಮವಯ್ಯ, ಖಡ್ಗ, ಧರ್ಮದೇವತೆ, ಪಾಂಡವ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

ಇನ್ನು ಶಿಲ್ಪ ಅವರು ಮಲಯಾಳಂನ ಖ್ಯಾತ ನಿರ್ದೇಶಕ ಆಗಿರುವ ಎಮ್ ರೇಂಜಿತ್ ಅವರನ್ನು 2001 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಅವಂತಿಕ ಎನ್ನುವ ಏಕೈಕ ಮಗಳು ಸಹ ಇದ್ದಾರೆ. ಇನ್ನು ಇವರ ಮಗಳು ನೋಡುವುದಕ್ಕೆ ಥೇಟ್ ಶಿಲ್ಪ ಅವರಂತೆಯೇ ಇದ್ದಾರೆ. ಇನ್ನು ಶಿಲ್ಪ ಅವರು ಕೊನೆಯದಾಗಿ ನಟಿಸಿದ ಸಿನಿಮಾ ಕೂಡ ಕನ್ನಡದಲ್ಲೇ. ಇದಾದ ಮೇಲೆ ಇವರು ನಿರ್ಮಾಣ ಸಂಸ್ಥೆಯನ್ನು ಶುರು ಮಾಡುವುದಕ್ಕೆ ಕೈ ಜೋಡಿಸಿದರು.

ಹೌದು ಶಿಲ್ಪ ಅವರು ಸ್ವತಃ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಿ ತಮ್ಮ ಪತಿಯ ನಿರ್ದೇಶನದಲ್ಲಿ ಕೆಲ ಸಿನಿಮಾಗಳನ್ನು ನಿರ್ಮಾಣ ಮಾಡಿದರು. ಆದರೆ ಅದರಲ್ಲಿ ಅಷ್ಟಾಗಿ ಯಶಸ್ಸು ಕಾಣಲಿಲ್ಲ. ಹೀಗಾಗಿ ಇದರಿಂದ ಇವರಿಗೆ ಆರ್ಥಿಕ ಸಮಸ್ಯೆಯು ಉಂಟಾಯಿತು. ಇದಾದ ಮೇಲೆ ಶಿಲ್ಪ ಅವರು ಮಲಯಾಳಂ ನ ಕೆಲ ದಾರವಾಹಿಗಳಲ್ಲಿ ನಟಿಸುವುದಕ್ಕೆ ಶುರು ಮಾಡಿಕೊಂಡರು.

ಇದರಿಂದ ಇವರಿಗೆ ತಕ್ಕಮಟ್ಟಿಗೆ ಆರ್ಥಿಕ ಸಮಸ್ಯೆಯನ್ನು ನೀಗಿಸಿಕೊಂಡು ಮತ್ತೆ ದಾರವಾಹಿಗಳನ್ನು ನಿರ್ಮಾಣ ಮಾಡುವುದಕ್ಕೆ ಶುರು ಮಾಡಿಕೊಂಡರು. ಇದರಲ್ಲಿ ಇವರು ಯಶಸ್ಸನ್ನು ಸಾಧಿಸಿ ಮಲಯಾಳಂನಲ್ಲಿ ಒಂದು ಮತ್ತು ತಮಿಳಿನಲ್ಲಿ ಒಂದು ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಶಿಲ್ಪಾ ಅವರು ಖ್ಯಾತ ನಿರ್ಮಾಪಕರಾಗಿ ಕೂಡ ಈಗ ಗುರುತಿಸಿಕೊಂಡಿದ್ದಾರೆ…

How is actress Shilpa’s daughter? Do you know what work this actress is doing now?

ಜನುಮದ ಜೋಡಿ ನಟಿ ಶಿಲ್ಪಾ ಅವರ ಮನೆ ಹೇಗಿದೆ ಗೊತ್ತಾ?? ಎಷ್ಟು ಅದ್ದೂರಿಯಾಗಿದೆ ನೋಡಿ!!

Leave a comment