Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಯೆ ಮೊದಲ ಬಾರಿಗೆ ಹೊಸ ತಂತ್ರಜ್ಞಾನ ಬಳಸಿದ ಕನ್ನಡದ ಸಿನಿಮಾ ಯಾವುದು ಗೊತ್ತೇ ?? ಈವಾಗ ಏನು ಇಲ್ಲ!!

ನಮಸ್ಕಾರ ಸ್ನೇಹಿತರೇ, ಸಿನಿಮಾ ಇಂಡಸ್ಟ್ರಿ ಅನ್ನೋದು ಒಂದು ಕಲರ್ ಫುಲ್ಕ ಇಲ್ಲಿ ಪ್ರತಿದಿನ ಹೊಸ ಹೊಸದಾದಂತಹ ಟೆಕ್ನಿಷಿಯನ್ಗಳು ಕ್ಯಾಮರಗಳು ಮತ್ತು ಹೊಸ ಹೊಸದಾದಂತ ಟೆಕ್ನಾಲಜಿಗಳನ್ನು ಅಳವಡಿಸಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಟೆಕ್ನಾಲಜಿ ತುಂಬಾ ಮುಂದುವರೆದಿದ್ದು ಹೊಸ ಹೊಸ ಟೆಕ್ನಾಲಜಿ ಬಳಸಿ ಸಿನಿಮಾ ಮಾಡುವುದು ತುಂಬಾ ಸುಲಭದ ಕೆಲಸವಾಗಿದೆ. ಹಾಗಾದರೆ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಸಹ ಹೊಸ ಹೊಸ ಸಿನಿಮಾ ಟೆಕ್ನಾಲಜಿಗಳನ್ನು ಮೊದಲ ಬಾರಿಗೆ ಕಾರ್ಯರೂಪಕ್ಕೆ ತಂದಿದ್ದು ಜೊತೆಗೆ ಸಕ್ಸೆಸ್ ಕಂಡಿದ್ದು ಯಾವ ಯಾವ ಸಿನಿಮಾಗಳು ಎಂದು ನೋಡೋಣ ಬನ್ನಿ.

ನಾಗರ ಹಾವು ಭಾರತದಲ್ಲಿ ಮೊದಲ ಬಾರಿಗೆ ಸ್ಲೋ ಮೋಷನ್ ಅಲ್ಲಿ ಚಿತ್ರಿಸಿದ ಮೊದಲ ಹಾಡು ಅದು ನಮ್ಮ ಕನ್ನಡದ ಹಾಡಾಗಿದ್ದು ಇದು ಮೊದಲ ಸಿನಿಮವಾಗಿದೆ. ಸಿಂಗಾಪುರ್ ನಲ್ಲಿ ರಾಜ ಕುಳ್ಳ ಸಂಪೂರ್ಣವಾಗಿ ವಿದೇಶದಲ್ಲಿ ಛತ್ರಿಕರಿಸಿದ ಕನ್ನಡದ ಮೊಟ್ಟ ಮೊದಲ ಸಿನಿಮಾ ಇದಾಗಿದ್ದು ಈ ಸಿನಿಮಾ ಸುಮಾರು 45 ವರ್ಷಗಳ ಹಿಂದೆ 1978ರಲಿ ಬಿಡುಗಡೆಯಾಗಿದ್ದು ಪ್ರಖ್ಯಾತಿಗಳಿಸಿದ ಸಿನಿಮವಾಗಿದೆ.

ಒಂದು ಮುತ್ತಿನ ಕಥೆ ಭಾರತದ ಮೊದಲ ಅಂಡರ್ ವಾಟರ್ ಟೆಕ್ನಾಲಜಿ ಸೀಕ್ವೆಸ್ಟ್ ಇರುವ ಸಿನಿಮಾ 1988 ರಾಲ್ಲಿ ಬಿಡುಗಡೆಯಾದ ಕರಾಟೆ ಕಿಂಗ್ ಶಂಕರ್ ನಾಗ್ ಅವರ ನಿರ್ದೇಶನದ ಸಿನಿಮವಾಗಿದ್ದು , ಈ ಸಿನಿಮಾಗೆ ಲಂಡನ್ ನಲ್ಲಿ ತಯಾರಿಸಲಾದ ಕೃತಕ ಅಕ್ಟೋಪಸ್ ಅನ್ನು ಬಳಸಲಾಗಿದ್ದು ಯಾವುದೇ ರೀತಿಯ ಆಕ್ಸಿಜನ್ ಮಾಸ್ಕ್ ಬಳಸದೆ ಡಾಕ್ಟರ್ ರಾಜಕುಮಾರ್ ಅವರು ಫೈಟ್ ಸೀನ್ ಅನ್ನು ಮಾಡುತ್ತಾರೆ. ಇದನ್ನು ಮಾಲ್ಡಿವ್ ಸಮುದ್ರದಲ್ಲಿ ಕೆನಡಾದಿಂದ ತರಿಸಲಾಗಿದ್ದ ಕ್ಯಾಮೆರಾದಿಂದ ಜರ್ಮನ್ ಫೋಟೋಗ್ರಾಫರ್ ಶೂಟ್ ಮಾಡಿದ್ದಾರೆ.

ಶಾಂತಿ ಕ್ರಾಂತಿ ಈ ಚಿತ್ರವನ್ನು ಏಕಕಾಲದಲ್ಲಿ ನಾಲ್ಕು ಭಾಷೆಯಲ್ಲಿ ಬಿಡುಗಡೆ ಮಾಡಲಾಯಿತು. ಆ ಕಾಲದಲ್ಲಿ ಒಂದೇ ಸೇಟ್ ಅಲ್ಲಿ 4 ಸಿನಿಮಾಗಳನ್ನು ಮಾಡಿದ ಪ್ಯಾನ್ ಇಂಡಿಯಾ ಸಿನಿಮ ಇದಾಗಿದ್ದು ಈ ಸಿನಿಮಾದ ಟೋಟಲ್ ಬಜೆಟ್ 10 ಕೋಟಿಯಾಗಿದ್ದು ಅತಿ ಹೆಚ್ಚು ಬಜೆಟ್ ನಲ್ಲಿ ನಿರ್ಮಿಸಲಾದ ಭಾರತದ ಮೊಟ್ಟ ಮೊದಲ ಸಿನಿಮಾ ಇದಾಗಿದೆ.

AK 47 ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಡಿಎಸ್ ಸೌಂಡ್ ಸಿಸ್ಟಮ್ ಯೂಸ್ ಮಾಡಿದ ಸೆಂಚುರಿ ಸ್ಟಾರ್ ಶಿವಣ್ಣ ಅವರ AK 47 ಸಿನೆಮಾ ಇದು ಶಿವಣ್ಣ ಅವರು ಅಭಿನಯಿಸಿರುವ ಐವತ್ತನೇ ಸಿನಿಮಾ ವಾಗಿದ್ದು ಈ ಸಿನಿಮಾ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಸಹ ಮಾಡಿದೆ.

ಓಂ ಭಾರತದಲ್ಲಿ ಮೊದಲ ಬಾರಿಗೆ 550ಕ್ಕು ಹೆಚ್ಚು ಬಾರಿ ಮರು ಬಿಡುಗಡೆಗೊಂಡು ದಾಖಲೆ ಮಾಡಿರುವ ಸಿನಿಮಾ ಅದು ನಮ್ಮ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದ ಸಿನಿಮಾ ವಾಗಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪ್ರೇಮ ಅವರು ಅಭಿನಯಿಸಿರುವ ಓಂ ಚಿತ್ರ 1995 ರೆಲ್ಲಿ ಬಿಡುಗಡೆಯಾಗಿದ್ದು ಬಹಳ ಒಳ್ಳೆಯ ಯಶಸ್ಸನ್ನು ಗಳಿಸಿದ ಸಿನಿಮಾ.

ಮುಂಗಾರು ಮಳೆ 50 ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಕನ್ನಡದ ಮೊದಲ ಸಿನಿಮಾ ಮುಂಗಾರು ಮಳೆ.ಇದು 2006 ರಲಿ ಬಿಡುಗಡೆಯಾಗಿದ್ದು ಯೋಗರಾಜ್ ಭಟ್ಟ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ. ಮಲ್ಟಿಪ್ಲೆಕ್ಸ್ ನಲ್ಲಿ ಒಂದು ವರ್ಷ ಮತ್ತು ಪಿವಿಆರ್ ನಲ್ಲಿ 800 ದಿನಗಳ ಕಾಲ ಪ್ರದರ್ಶನ ಕಂಡ ಭಾರತದ ಮೊಟ್ಟ ಮೊದಲ ಸಿನಿಮಾನಾಗಿದ್ದು ಈ ಸಿನಿಮಾದ ಒಟ್ಟು ಕಲೆಕ್ಷನ್ 50 ರಿಂದ 70 ಕೋಟಿ. ಇದಿಷ್ಟು ಕನ್ನಡ ಸಿನಿಮಾರಂಗದ ಅತಿ ಹೆಚ್ಚು ಪ್ರದರ್ಶನ ಕಂಡ ಸಿನಿಮಾ ಮತ್ತು ಟೆಕ್ನಾಲಜಿ ಬಳಸಿ ತಂತ್ರಜ್ಞಾನದಿಂದ ಚಿತ್ರಕರಿಸಿದ ಸಿನಿಮಾಗಳು…

Leave a comment