Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಒಂದೇ ಸಿನಿಮಾದಲ್ಲಿ ಜೊತೆಯಾಗಿ ನಟಿಸಿರುವ ಕನ್ನಡ ಚಿತ್ರರಂಗದ ಫೇಮಸ್ ಅಣ್ಣತಮ್ಮಂದಿರು, ಯಾರ್ ಯಾರು ಗೊತ್ತೇ ?? ನಿಮ್ಮ ನೆಚ್ಚಿನ ಜೋಡಿ ಯಾರು ??

ನಮಸ್ಕಾರ ಸ್ನೇಹಿತರೇ, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಒಡಹುಟ್ಟಿದ ಸಹೋದರರು ಸೇರಿದಂತೆ ಒಂದೇ ಕುಟುಂಬದ ಸಾಕಷ್ಟು ಕಲಾವಿದರು ಸಿನಿವಾರಂಗದಲ್ಲಿ ಕೆಲಸ ಮಾಡುವುದನ್ನು ಅಥವಾ ನಟಿಸುವುದನ್ನು ನಾವು ನೀವೆಲ್ಲರೂ ಈಗಾಗಲೇ ನೋಡಿದ್ದೇವೆ. ಅಂತಹ ನಟರು ಒಂದೇ ಸಿನಿಮಾದಲ್ಲಿ ಅಭಿನಯಿಸುವುದು ಅಭಿಮಾನಿಗಳ ದೊಡ್ಡ ಕನಸಾಗಿದ್ದು ಅದೇ ರೀತಿ ಸ್ಯಾಂಡಲ್ವುಡ್ ನ ಅಣ್ಣತಮ್ಮಂದಿರು ಒಂದೇ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದು ಹಾಗಾದರೆ ಯಾರೆಲ್ಲ ಅಣ್ಣ ತಮ್ಮಂದಿರು ಒಂದೇ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ ಎಂದು ಇಲ್ಲಿ ತಿಳಿಯೋಣ ಬನ್ನಿ.

ಮೊದಲನೆಯದಾಗಿ ಹೇಳುವುದಾದರೆ ರವಿಶಂಕರ್, ಸಾಯಿ ಕುಮಾರ್ ಮತ್ತು ಅಯ್ಯಪ್ಪ. ನಟನೆ ಅಷ್ಟೇ ಅಲ್ಲದೆ ತಮ್ಮ ಅದ್ಭುತ ಕಂಠದ ಮೂಲಕ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಗಳಿಸಿರುವ ಈ ಮೂವರು ಸಹ ತುಂಬಾ ಪ್ರಖ್ಯಾತಿಯಾಗಿದ್ದಾರೆ. ಈ ಮೂವರು ಸಹ ಭರಾಟೆ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಇನ್ನು ಅಯ್ಯಪ್ಪ ಮತ್ತು ರವಿಶಂಕರ್ ಅವರು ಮಾಸ್ಟರ್ ಪೀಸ್ ಸಿನಿಮಾದಲ್ಲಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಶ್ರೀಮುರಳಿ ಮತ್ತು ವಿಜಯ ರಾಘವೇಂದ್ರ ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಚಿನ್ನಾರಿ ಮುತ್ತ ಎಂದು ಹೆಸರು ಪಡೆದಿರುವ ರಾಘವೇಂದ್ರ ಅವರು ಇವರಿಬ್ಬರೂ ಸಹೋದರರು ಆಗಿದ್ದು ಇವರಿಬ್ಬರೂ ಮೊದಲ ಬಾರಿಗೆ ಮಿಂಚಿನ ಓಟ ಎಂಬ ಸಿನಿಮಾದಲ್ಲಿ ಪ್ರಪ್ರಥಮ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಶಂಕರ್ ನಾಗ್ ಮತ್ತು ಅನಂತನಾಗ್ ಕನ್ನಡ ಶನಿವಾರದಲ್ಲಿ ತಮ್ಮ ಅಮೋಘ ಮತ್ತು ಅದ್ಭುತ ಅಭಿನಯದಿಂದ ಕನ್ನಡದ ಅಭಿಮಾನಿಗಳನ್ನು ಗಳಿಸಿಕೊಂಡಿದ್ದ ಈ ಇಬ್ಬರು ಸಹೋದರರು ನಟರಾಗಿ ಉತ್ತಮ ಯಶಸ್ಸನ್ನು ಪಡೆದಿದ್ದು ಶಂಕರ್ ನಾಗ್ ಅವರು ಡೈರೆಕ್ಟರ್ ಆಗಿ ಸಹ ಪ್ರಖ್ಯಾತಿಗಳಿಸಿದರು. ಅನಂತ್ ನಾಗ್ ಮತ್ತು ಶಂಕರ್ ನಾಗ್ ಅವರು ಇವರಿಬ್ಬರೂ ಮಿಂಚಿನ ಓಟ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ.

ದರ್ಶನ್ ಮತ್ತು ದಿನಕರ್ ಸ್ಯಾಂಡಲ್ ವುಡ್ ನಲ್ಲಿ ಬಾಕ್ಸ್ ಆಫೀಸ್ ಸುಲ್ತಾನೇ ಎಂದು ಹೆಸರು ಗಳಿಸಿರುವ ದರ್ಶನ್ ತೂಗುದೀಪ ಶ್ರೀನಿವಾಸ್ ಮತ್ತು ಅವರ ತಮ್ಮ ದಿನಕರ ಶ್ರೀನಿವಾಸ್ ಚಕ್ರವರ್ತಿ ಎಂಬ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ದಿನಕರ್ ಅವರು ಡೈರೆಕ್ಟರ್ ಆಗಿದ್ದು ದರ್ಶನವರ ಜೊತೆಗೆ ಮೊದಲ ಬಾರಿಗೆ ಚಕ್ರವರ್ತಿ ಸಿನಿಮಾದಲ್ಲಿ ದಿನಕರ ಅವರು ಸಹ ಬಣ್ಣ ಹಚ್ಚಿದ್ದಾರೆ.
ರವಿಚಂದ್ರನ್ ಮತ್ತು ಬಾಲಾಜಿ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರು ಆಕ್ಟರ್ ಮತ್ತು ಡೈರೆಕ್ಟರ್ ಆಗಿ ಒಳ್ಳೆಯ ಪ್ರಶಂಸೆ ಪಡೆದಿದ್ದು ಇವರ ತಮ್ಮ ಬಾಲಾಜಿ ಸಹ ಒಳ್ಳೆಯ ನಟರಾಗಿದ್ದು ಇವರಿಬ್ಬರು ಅಹಂ ಪ್ರೇಮಾಸ್ಮಿ ಎಂಬ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ.

ಪುನೀತ್ ರಾಜಕುಮಾರ್ ರಾಘವೇಂದ್ರ ರಾಜಕುಮಾರ್ ಶಿವರಾಜ್ ಕುಮಾರ್ ವರನಟ ಡಾಕ್ಟರ್ ರಾಜಕುಮಾರ್ ಅವರ ಮೂವರು ಮಕ್ಕಳಾದ ಇವರು ಹುಟ್ಟುತ್ತಲೇ ಸಿನಿಮಾ ಇಂಡಸ್ಟ್ರಿಯ ಪಾದರ್ಪಣೆ ಮಾಡಿದ್ದು ನಂತರ ನಾಯಕ ನಟರಾಗಿ ಸಹ ಅಭಿನಯಿಸಿ ಉತ್ತಮ ಯಶಸ್ಸನ್ನು ಪಡೆದಿದ್ದಾರೆ. ಈ ಮೂವರ ಸಹೋದರರು ಪುನೀತ್ ರಾಜಕುಮಾರ್ ಅವರ ಜೇಮ್ಸ್ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದು ಇದರ ಮೂಲಕ ಮೂವರು ಸಹೋದರರು ಸ್ಕ್ರೀನ್ ಶೇರ್ ಮಾಡಿದ್ದಾರೆ.

ನವರಸ ನಾಯಕ ಜಗ್ಗೇಶ್ ಮತ್ತು ಕೋಮಲ್ ಇವರಿಬ್ಬರೂ ಸಹೋದರರು ಆಗಿದ್ದು ಇವರಿಬ್ಬರು ಮೇಕಪ್ ಕಾಸು ಇದ್ದೋನೆ ಬಾಸು ಮತ್ತು ಮನ್ಮಥ ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದಾರೆ…

Leave a comment