Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Google Pay : ಜೂನ್ 4ರಿಂದ ಗೂಗಲ್ ಪೇ ಅಪ್ಲಿಕೇಶನ್ ಬಂದ್! ಹಣ ವಹಿವಾಟಿಗೆ ಮಾಡೋದೇನು?

ಗೂಗಲ್ ಪೇ ಅಪ್ಲಿಕೇಶನ್ ಹಾಗೂ ವಹಿವಾಟು ಸ್ಟಾಪ್ ಆಗಲಿದ್ದು, ಇದರ ಬದಲಾಗಿ Google Pay Wallet ಅಪ್ಲಿಕೇಶನ್ ಬಳಕೆ ಮಾಡಬಹುದು. ನಿಮ್ಮ ಅಕೌಂಟ್ ನಲ್ಲಿರುವ ಹಣವನ್ನು ಗೂಗಲ್ ಪೇ ವ್ಯಾಲೆಟ್ ಗೆ ವರ್ಗಾಯಿಸಿಕೊಂಡು ಅದರಿಂದ ಹಣಕಾಸಿನ ವಹಿವಾಟುಗಳನ್ನು ನಡೆಸಬಹುದು ಎನ್ನುವ ಮಾಹಿತಿ ಗೂಗಲ್ ಕಡೆಯಿಂದ ಅಧಿಕೃತವಾಗಿ ಲಭ್ಯವಾಗಿದೆ.

Google Pay : ಈಗ ಪ್ರಪಂಚದ ಎಲ್ಲಾ ಕಡೆ ಜನರು ಹೆಚ್ಚಾಗಿ ಡಿಜಿಟಲ್ ಪಾವತಿಯನ್ನೇ ಮಾಡುತ್ತಾರೆ. ಡಿಜಿಟಲ್ ಆಗಿ ಹಣದ ವಹಿವಾಟು ನಡೆಸುವುದು ಸುಲಭ, ಯಾವಾಗಲೂ ಕೈಯಲ್ಲಿ ಕ್ಯಾಶ್ ಇಟ್ಟಿಕೊಳ್ಳಬೇಕು ಎನ್ನುವ ಹಾಗಿಲ್ಲ. ಎಲ್ಲಾ ಕಡೆ, ಸಣ್ಣ ಪುಟ್ಟ ಅಂಗಡಿಗಳಲ್ಲಿ ಕೂಡ ಯುಪಿಐ ಸ್ಕ್ಯಾನರ್ ಗಳು ಇರುತ್ತದೆ. ಹಾಗಾಗಿ ಸುಲಭವಾಗಿ ಆನ್ಲೈನ್ ಯುಪಿಐ ಪೇಮೆಂಟ್ ಮಾಡಬಹುದು. ಯುಪಿಐ ಎಂದು ಬಂದರೆ ಮೊದಲು ನಮಗೆ ನೆನಪಾಗುವುದು ಗೂಗಲ್ ಪೇ ಅಪ್ಲಿಕೇಶನ್..

Google Pay

ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಹಲವೆಡೆ ಜನರು ಗೂಗಲ್ ಪೇ ಅಪ್ಲಿಕೇಶನ್ ಬಳಸಿ ಹಣಕಾಸಿನ ವಹಿವಾಟು ನಡೆಸುತ್ತಾರೆ. ಗೂಗಲ್ ಪೇ ಇದ್ದರೆ ನಮ್ಮ ಬಳಿ ಹಣ ಕ್ಯಾಶ್ ಇಲ್ಲ ಎನ್ನುವ ಚಿಂತೆಯೇ ಇರುವುದಿಲ್ಲ. ನಮ್ಮ ದೇಶದಲ್ಲೇ ಕೋಟ್ಯಾಂತರ ಮಂದಿ ಗೂಗಲ್ ಪೇ ಬಳಕೆದಾರರಿದ್ದಾರೆ. ಆದರೆ ಇದೀಗ ಗೂಗಲ್ ಪೇ ಕಡೆಯಿಂದ ವಿಶ್ವ ಗೂಗಲ್ ಪೇ ಗ್ರಾಹಕರಿಗೆ ಒಂದು ಶಾಕಿಂಗ್ ಸುದ್ದಿ ಕೇಳಿಬಂದಿದೆ. ಅದೇನು ಎಂದರೆ, 2024ರ ಜೂನ್ 4ರಿಂದ ಗೂಗಲ್ ಪೇ ವಹಿವಾಟು ಸ್ಟಾಪ್ ಆಗಲಿದೆ.

ಗೂಗಲ್ ಪೇ ಅಪ್ಲಿಕೇಶನ್ ಹಾಗೂ ವಹಿವಾಟು ಸ್ಟಾಪ್ ಆಗಲಿದ್ದು, ಇದರ ಬದಲಾಗಿ Google Pay Wallet ಅಪ್ಲಿಕೇಶನ್ ಬಳಕೆ ಮಾಡಬಹುದು. ನಿಮ್ಮ ಅಕೌಂಟ್ ನಲ್ಲಿರುವ ಹಣವನ್ನು ಗೂಗಲ್ ಪೇ ವ್ಯಾಲೆಟ್ ಗೆ ವರ್ಗಾಯಿಸಿಕೊಂಡು ಅದರಿಂದ ಹಣಕಾಸಿನ ವಹಿವಾಟುಗಳನ್ನು ನಡೆಸಬಹುದು ಎನ್ನುವ ಮಾಹಿತಿ ಗೂಗಲ್ ಕಡೆಯಿಂದ ಅಧಿಕೃತವಾಗಿ ಲಭ್ಯವಾಗಿದೆ. ಆದರೆ ಭಾರತೀಯರು ಈ ಬಗ್ಗೆ ಚಿಂತೆ ಪಡುವ ಅಗತ್ಯವಿಲ್ಲ..

Also Read: Gmail Accounts : G-Mail ಬಂದ್ ಆಗಲಿದೆಯಾ? ಎಕ್ಸ್ ಮೇಲ್ ನ ಸ್ಪಷ್ಟನೆ ಏನು??

Google Pay Rules for Americans:

ಗೂಗಲ್ ಪೇ ಇಂಥದ್ದೊಂದು ಬದಲಾವಣೆ ತಂದಿರುವುದು ಅಮೆರಿಕಾ ದೇಶದ ಜನರಿಗೆ. ಹೌದು, ಅಲ್ಲಿನ ಜನರು ಕೂಡ ಹಣಕಾಸಿನ ವಹಿವಾಟುಗಳಿಗೆ ಗೂಗಲ್ ಪೇ ಮಫ್ ಅವಲಂಬಿಸಿದ್ದರು. ಅವರಿಗೆಲ್ಲಾ ಗೂಗಲ್ ಇಂದ ಹೊರಬಂದಿರುವ ಈ ಹೊಸ ಮಾಹಿತಿ ನಿರಾಶೆ ಮಾಡಿದೆ. ಅಮೆರಿಕಾ ಜನರು ಜೂನ್ 4 4ರಿಂದ ಗೂಗಲ್ ಪೇ ಬಳಸುವ ಹಾಗಿಲ್ಲ.

Indians and Singapore Poeple are Safe:

ಭಾರತ ಮತ್ತು ಸಿಂಗಾಪುರದ ನಿವಾಸಿಗಳಿಗೆ ಗೂಗಲ್ ಪೇ ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ವಿಶ್ವದ ಈ ಎರಡು ದೇಶಗಳಲ್ಲಿ ಮಾತ್ರ ಗೂಗಲ್ ಪೇ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಹಾಗಾಗಿ ನೀವು ಗೂಗಲ್ ಪೇ ಬಳಕೆ ಮಾಡುವ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಗೂಗಲ್ ಪೇ ಕೇವಲ ಹಣಕಾಸಿನ ವಹಿವಾಟು ಮಾತ್ರವಲ್ಲ, ಇನ್ನು ಹೆಚ್ಚಿನ ಕೆಲಸಗಳನ್ನು ಮಾಡುತ್ತದೆ. ಬಿಲ್ ಪಾವತಿ, ರೀಚಾರ್ಜ್, ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ಮಾಹಿತಿ ಲಿಂಕ್ ಸೇರಿದಂತೆ ಅನೇಕ ಕೆಲಸಗಳನ್ನು ಮಾಡುತ್ತದೆ.

ಹಾಗಾಗಿ ಈ ಎರಡು ದೇಶಗಳಲ್ಲಿ ಗೂಗಲ್ ಪೇ ವಿಚಾರಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಇನ್ನು ಅಮೆರಿಕಾ ಜನರು ಗೂಗಲ್ ಪೇ ಸ್ಟಾಪ್ ಆದ ಬಳಿಕ ಗೂಗಲ್ ಪೇ ವೆಬ್ಸೈಟ್ ಗೆ ಹೋಗಿ ಅಕೌಂಟ್ ನಲ್ಲಿರುವ ಹಣವನ್ನು ಗೂಗಲ್ ಪೇ ವ್ಯಾಲೆಟ್ ಗೆ ಟ್ರಾನ್ಸ್ಫರ್ ಮಾಡಿಕೊಳ್ಳಬಹುದು.

Also Read: Galaxy Z Fold 6: ದೊಡ್ಡ ದೊಡ್ಡ ಸ್ಮಾರ್ಟ್ಫೋನ್ ಗಳಿಗೆ ಸೆಡ್ಡು ಹೊಡೆಯಲು ಬಂದೆ ಬಿಡ್ತು ಸ್ಯಾಮಸಂಗ್ ನ ಹೊಸ ಫೋನ್, ಟಿವಿಯಂತ ಪರದೆ, ಬರೆಯಲು ಪೆನ್ ಸೌಲಭ್ಯ.

Leave a comment