Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Arecanut Saplings: ಅಡಿಕೆ ಕೃಷಿಗೆ ಸರಿಯಾದ ಸಸಿ ಯಾವುದು? ಅದರ ಆಯ್ಕೆ ಮಾಡೋದು ಹೇಗೆ? ಪೂರ್ತಿ ಮಾಹಿತಿ ಇಲ್ಲಿದೆ

ಈ ಪ್ರಶ್ನೆಗೆ ಇಂದು ಸರಿಯಾದ ಉತ್ತರ ತಿಳಿಯೋಣ.. ಮೊದಲನೆಯದಾಗಿ ನಾವು ತಿಳಿಯಬೇಕಾದ ವಿಚಾರ, ಅಡಿಕೆ ಸಸಿಗಳನ್ನು ನಾವು 2 ರೀತಿಯಲ್ಲಿ ಬೆಳೆಯುತ್ತೇವೆ.

Arecanut Saplings: ಕೃಷಿ ಮಾಡುವುದರಿಂದ ನಷ್ಟ ಒಂದೇ ಅಲ್ಲ, ವಾಣಿಜ್ಯ ಬೆಳೆಗಳನ್ನು ಬೆಳೆದರೆ ಕೃಷಿಕರು ಕೂಡ ಅದ್ಭುತವಾಗಿ ಲಾಭ ಗಳಿಸಬಹುದು. ಹಾಗಾಗಿ ರೈತರು ಕೂಡ ಈಗ ವಾಣಿಜ್ಯ ಬೆಳೆಗಳ ಕಡೆಗೆ ಆಸಕ್ತಿ ಹೆಚ್ಚಿಸಕೊಂಡಿದ್ದಾರೆ. ಅಡಿಕೆ ಮತ್ತು ತೆಂಗು ಈ ಎರಡು ಕೂಡ ವಾಣಿಜ್ಯ ಬೆಳೆ ಆಗಿದ್ದು, ಹೆಚ್ಚಿನ ಜನರು ಅಡಿಕೆ ಬೆಳೆ ಬೆಳೆಯುವುದಕ್ಕೆ ಶುರು ಮಾಡಿದ್ದು, ಅಡಿಕೆ ಬೆಳೆಯ ವಿಚಾರದಲ್ಲಿ ರೈತರಿಗೆ ಕೆಲವು ಗೊಂದಲವಿದೆ, ಅದರಲ್ಲಿ ಮುಖ್ಯವಾದದ್ದು ಅಡಿಕೆ ಕೃಷಿಗೆ ಯಾವ ರೀತಿಯ ಅಡಿಕೆ ಸಸಿ ಸೂಕ್ತ ಎನ್ನುವುದು..

ಈ ಪ್ರಶ್ನೆಗೆ ಇಂದು ಸರಿಯಾದ ಉತ್ತರ ತಿಳಿಯೋಣ. ಮೊದಲನೆಯದಾಗಿ ನಾವು ತಿಳಿಯಬೇಕಾದ ವಿಚಾರ, ಅಡಿಕೆ ಸಸಿಗಳನ್ನು ನಾವು 2 ರೀತಿಯಲ್ಲಿ ಬೆಳೆಯುತ್ತೇವೆ. ಒಂದು ಭೂಮಿಯಲ್ಲಿ ನಾಟಿ ಮಾಡಿ ಬೆಳೆಯುವುದು ಇದಕ್ಕೆ ತೆಂಡೆ ಸಸಿಗಳನ್ನು ಬಳಸುತ್ತಾರೆ. ಮತ್ತೊಂದು ಪ್ಲಾಸ್ಟಿಕ್ ಬ್ಯಾಗ್ ಅಥವಾ ಪ್ಲಾಸ್ಟಿಕ್ ಕವರ್ ಗಳಲ್ಲಿ ನಾಟಿ ಮಾಡಿ ಬೆಳೆಸುವುದು, ಇದಕ್ಕೆ ಪ್ಯಾಕೆಟ್ ಸಸಿಗಳನ್ನು ಬಳಸುತ್ತಾರೆ. ಆದರೆ ಈ ಥರ ಬೆಳೆಯುವ ಬೆಳೆಯನ್ನು ಕೆಲವರು ಸರಿ ಎನ್ನುತ್ತಾರೆ, ಇನ್ನು ಕೆಲವರಿಗೆ ಸರಿ ಎನ್ನಿಸುವುದಿಲ್ಲ.

ಪ್ಯಾಕೆಟ್ ಸಸಿ (Packet saplings):

ಇವುಗಳ ಪೈಕಿ ಮೊದಲು, ಪ್ಯಾಕೆಟ್ ಸಸಿಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ. ಪ್ಲಾಸ್ಟಿಕ್ ಕವರ್ ಅಥವಾ ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ ಬೆಳೆಯುವುದಕ್ಕಾಗಿ ಇರುವ ಸಸಿಗಳನ್ನು ಪ್ಯಾಕೆಟ್ ಸಸಿಗಳು ಎನ್ನುತ್ತಾರೆ. 500 ಗ್ರಾಮ್, 1 ಕೆಜಿ, 2ಕೆಜಿ ತೂಕದ ಬ್ಯಾಗ್ ಗಳಲ್ಲಿ, ಮರಳು, ಗೊಬ್ಬರ, ಕಾಂಪೋಸ್ಟ್, ಕೆಂಪು ಮಣ್ಣು, ಇದೆಲ್ಲದರ ಉತ್ತಮ ಮಿಶ್ರಣವನ್ನು ಬ್ಯಾಗ್ ನಲ್ಲಿ ತುಂಬಿ, ಅದರ ಮೇಲ್ಭಾಗದಲ್ಲಿ ಸಸಿಯನ್ನು ನೆಡಲಾಗುತ್ತದೆ. ಒಂದು ವಾರದಲ್ಲಿ 2 ರಿಂದ 3 ಸಾರಿ ಈ ಬ್ಯಾಗ್ ಗಳಿಗೆ ನೀರು ಹಾಕಬೇಕು.

ಪ್ಯಾಕೆಟ್ ನಲ್ಲಿ ಗಿಡ ಬೆಳೆಸುವುದು ಒಳ್ಳೆಯ ಆಯ್ಕೆನಾ?

ಪ್ಯಾಕೆಟ್ ಸಸಿಗಳ ಪ್ರಪಂಚ ಹಾಗೂ ಇವು ಬೆಳೆಯುವ ವಿಧಾನ್ ಸಂಪೂರ್ಣವಾಫಿ ಬೇರೆ ರೀತಿಯೇ ಇರುತ್ತದೆ. ಈ ಗಿಡ ನೆಟ್ಟಿರುವ ಪ್ಲಾಸ್ಟಿಕ್ ಕವರ್ ಅದರ ಪೂರ್ತಿ ಜಾಗ ಆಗಿರುತ್ತದೆ. ಈ ಗಿಡಗಳಿಗೆ ಮಣ್ಣಿನ ಗುಣ, ವಿನ್ಯಾಸ ಏನು ಕೂಡ ಗೊತ್ತಿರುವುದಿಲ್ಲ. ಹಾಗೆಯೇ ಬೇರು ಕೂಡ ಇದ್ಯಾವುದನ್ನು ತಿಳಿಯುವುದಿಲ್ಲ. ಗಿಡಕ್ಕೆ ಕೊಡುವ ಗೊಬ್ಬರ ಮತ್ತು ನೀರು ಉಪಯೋಗಿಸಿಕೊಂಡು ಬೆಳೆಯುತ್ತದೆ ಅಷ್ಟೇ. ಗಿಡ ಚೆನ್ನಾಗಿ ಬೆಳೆಯುತ್ತದೆ, ಆದರೆ ಅವುಗಳಿಗೆ ಮಣ್ಣಿನ ಸತ್ವ ಗೊತ್ತಿರುವುದಿಲ್ಲ.

ಈ ಗಿಡಗಳನ್ನು ನೀವು ಬೇರೆಡೆ ನೆಡಬಹುದು. ಆದರೆ ಈ ಗಿಡಗಳನ್ನು ನೆಲದಲ್ಲಿ ನೆಟ್ಟಾಗ, ಭೂಮಿಯ ಗುಣ, ಸೂರ್ಯನ ಕಿರಣ ಇದೆಲ್ಲವೂ ಇರುವುದರಿಂದ ಈ ಗಿಡಗಳಿಗೆ ಬೆಳೆಯಲು ಕಷ್ಟ ಆಗಬಹುದು. ಈ ಕಾರಣಕ್ಕೆ ಬೆಳವಣಿಗೆ ಕಡಿಮೆ ಆಗುವ ಹಾಗೂ ಗಿಡ ಒಣಗಿ ಹೋಗುವ ಸಾಧ್ಯತೆ ಜಾಸ್ತಿ ಇರುತ್ತದೆ.

ತೆಂಡೆ ಸಸಿಗಳು (Coconut saplings):

ಭೂಮಿಯಲ್ಲಿ ನಾಟಿ ಮಾಡಿ ಬೆಳೆಯುವ ಸಸಿಯನ್ನು ತೆಂಡೆ ಸಸಿಗಳು ಅಥವಾ ತೇವಡೆ ಸಸಿಗಳು ಎಂದು ಕರೆಯುತ್ತಾರೆ. ಈ ಗಿಡಗಳನ್ನು ಭೂಮಿಯ ಮೇಲ್ಭಾಗದಲ್ಲಿ ನಾಟಿ ಮಾಡುವ ಕಾರಣ, ಭೂಮಿ, ಸೂರ್ಯ, ಸುತ್ತಲಿನ ಪರಿಸರ ಎಲ್ಲದಕ್ಕೂ ಹೊಂದಿಕೊಂಡು ಬೆಳೆಯುತ್ತದೆ. ಬೇರುಗಳು ದೊಡ್ಡದಾಗಿ ಬೆಳೆಯುತ್ತದೆ. ಭೂಮಿಯ ಒಳಗೆ ಸಿಗುವ ಲವಣಾಂಶಗಳನ್ನು ಹೀರಿ ಬೆಳೆಯುತ್ತದೆ.

ಭೂಮಿಯಲ್ಲಿರುವ ಸೂರ್ಯ, ಭೂಮಿ, ತಾಪಮಾನ, ಬಿಸಿಲು, ಮಳೆ ಈ ಎಲ್ಲಾ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡು, ಅದಕ್ಕೆ ಹೊಂದಿಕೊಂಡು ಬೆಳೆಯುತ್ತದೆ, ಆ ಸಮಸ್ಯೆಗಳು ಗೊತ್ತಿರುತ್ತದೆ. ಈ ಗಿಡಗಳನ್ನು ನೀವು ಭೂಮಿಯಿಂದ ಆಚೆ ತೆಗೆಯಲು ಸ್ಕ್ವೇರ್ ಶೇಪ್ ನಲ್ಲಿ ಹೆಗೆದು ಹೊರತೆಗೆಯಬೇಕು. ಇದು ಸ್ವಲ್ಪ ಕಠಿಣ ಕೆಲಸ, ಸ್ವಲ್ಪ ಹೆಚ್ಚು ಕಡಿಮೆ ಆದರೂ, ಗಿಡ ಹಾಳಾಗುತ್ತದೆ. ಹಾಗಾಗಿ ಹುಷಾರಾಗಿ ಗಿಡಗಳನ್ನು ಕಿತ್ತು, ತೆಂಡೆಗೆ ಹಾನಿಯಾಗದ ಹಾಗೆ ನಾಟಿ ಕೆಲಸ ಮಾಡಿ ಮುಗಿಸಬೇಕು.

ಈ ಎರಡರಲ್ಲಿ ಯಾವುದು ಬೆಸ್ಟ್ ಎಂದರೆ, ಈ ಎರಡಕ್ಕೂ ಅದರದ್ದೇ ಆದ ಮೌಲ್ಯವಿದೆ. ತೆಂಡೆ ಸಸಿ, ಪ್ಯಾಕೆಟ್ ಸಸಿ ಎರಡರ ಗುಣ ಬೇರೆ, ನಾಟಿ ಮಾಡುವ ರೀತಿ ಬೇರೆ. ಎರಡು ಒಂದೇ ಥರದ ಸಸಿಯಾದರು, ಅವುಗಳಿಗೆ ಇರುವ ಬೇಡಿಕೆ ಬೇರೆ ರೀತಿ ಇರುತ್ತದೆ.

Leave a comment