LankaPay UPI: ಭಾರತದ UPI QR Code ಅನ್ನು ಶ್ರೀಲಂಕಾ, ಮಾರಿಷಸ್‌ನಲ್ಲಿ ಕೂಡ ಪರಿಚಯಿಸಲಾಗಿದೆ, ಇನ್ನು ಮುಂದೆ ಶ್ರೀಲಂಕದಲ್ಲೂ ವರ್ಕ್ ಆಗುತ್ತೆ UPI, ಮೋದಿ ಸರ್ಕಾರ ಎಲ್ಲವನ್ನು ಬದಲಿಸುತ್ತಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ, ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ (Pravind Jugnauth) ಮತ್ತು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ (Ranil Wickremesinghe) ಸಹಯೋಗದಲ್ಲಿ
LankaPay UPI: ಭಾರತದಲ್ಲಿ ಪ್ರಚಲಿತದಲ್ಲಿ ಇರುವ ಒಂದು ಪೇಮೆಂಟ್ ಅಪ್ಲಿಕೇಶನ್ ಅಂದರೆ ಅದು UPI. ಭಾರತದಲ್ಲಿ ಯಾವುದೇ ಮಾಲ್ ಅಥವಾ ಅಂಗಡಿ ಹೋಟೆಲ್ ಗಳಲಿ ಈಗ UPI ಪೇಮೆಂಟ್ ಅಪ್ಲಿಕೇಶನ್ ಕಂಡುಬರುತ್ತದೆ. ಆದರೆ ಭಾರತೀಯರು ಹೊರದೇಶಕ್ಕೆ ಪ್ರವಾಸಕ್ಕೆ ಅಥವಾ ಅಲ್ಲಿ ಕೆಲಸಕ್ಕೆ ಅಥವಾ ಕಲಿಕೆಗೆ ತೆರಳಿದರೆ ಆ ದೇಶದ ಕರೆನ್ಸಿ ಗೆ ಕನ್ವರ್ಟ್ ಆಗಿ ನಂತರ ಹಣವನ್ನು ಅಲ್ಲಿನ ಕರೆನ್ಸಿ ಗೆ ಕೊಡಬೇಕು. ಆದರೆ ಈಗ ಶ್ರೀಲಂಕಾ ದೇಶಕ್ಕೆ ಭಾರತೀಯರು ಹೋದರೆ ಹಣ ನೀಡಲು ಭಾರತದ UPI ಬಳಸಿ ಹಣ ನೀಡಲು ಸಾಧ್ಯವಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ, ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ (Pravind Jugnauth) ಮತ್ತು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ (Ranil Wickremesinghe) ಸಹಯೋಗದಲ್ಲಿ ಸೋಮವಾರ ನಡೆದ ವರ್ಚುವಲ್ ಸಮಾರಂಭದಲ್ಲಿ ಶ್ರೀಲಂಕಾ ಮತ್ತು ಮಾರಿಷಸ್‌ನಲ್ಲಿ ಭಾರತದ UPI ಗೆ ಚಾಲನೆ ನೀಡಿದ್ದಾರೆ. ಹಾಗೆಯೇ ಮಾರಿಷಸ್ ಮತ್ತು ಶ್ರೀಲಂಕಾದಲ್ಲಿ ಭಾರತದ ರುಪೇ (RuPay) ಕಾರ್ಡ್ ಸಹ ಇನ್ನೂ ಮುಂದೆ ಬಳಸಬಹುದಾಗಿದೆ. ಶ್ರೀಲಂಕಾ ಮತ್ತು ಮಾರಿಷಸ್ ನಲ್ಲಿ UPI ಪಾವತಿಯ ಬಳಕೆಗೆ RBI ಹಾಗೂ NPCI ಇಂಟರ್‌ನ್ಯಾಶನಲ್ ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ಮತ್ತು ಲಂಕಾಪೇಯ ಸಹಕಾರ ಇದೆ.
ಶ್ರೀಲಂಕಾದಲ್ಲಿ UPI QR code ಬಳಸುವುದು ಹೇಗೆ? :-
ಶ್ರೀಲಂಕಾದಲ್ಲಿ ಭಾರತದ UPI ಸೇವೆಗಳನ್ನು ಶ್ರೀಲಂಕಾದ LankaPay ಮೂಲಕ ಸರಳವಾಗಿ ಹಣ ವರ್ಗಾವಣೆ ಮಾಡಬಹುದು.
ಸ್ಟೆಪ್ 1: ಶ್ರೀಲಂಕಾಕ್ಕೆ ಭೇಟಿ ನೀಡುವ ಭಾರತೀಯರು ಶ್ರೀಲಂಕಾದಲ್ಲಿ QR ಕೋಡ್ ಮೂಲಕ ವ್ಯಾಪಾರಿ ಪಾವತಿಗಳನ್ನು ಮಾಡಲು ತಮ್ಮ ಆದ್ಯತೆಯ UPI ಅಪ್ಲಿಕೇಶನ್‌ನಲ್ಲಿ ಸೆಟ್ಟಿಂಗ್ ಗೆ ಹೋಗಿ UPI ಇಂಟರ್ನ್ಯಾಷನಲ್ ಅನ್ನು ಸಕ್ರಿಯಗೊಳಿಸಬೇಕು.
ಸ್ಟೆಪ್ 2: LankaPay QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು.
ಸ್ಟೆಪ್ 3: ಪೇ ಮಾಡುವ ಹಣದ ಮೊತ್ತವನ್ನು ನಮೂದಿಸಿ
ಸ್ಟೆಪ್ 4: UPI ಪಿನ್ ನಂಬರ್ ಹಾಕಿ ಹಣವನ್ನು ನೀಡಬಹುದು.
ಮರಿಷಿಯಸ್ ನಲ್ಲಿ UPI QR code ಬಳಸುವುದು ಹೇಗೆ? :-
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಮಾರಿಷಸ್ ಭಾರತ ಮತ್ತು ಮಾರಿಷಸ್‌ನಲ್ಲಿ UPI QR ಕೋಡ್ ಆಧಾರಿತ ಪಾವತಿ ಅಪ್ಲಿಕೇಶನ್ ಎಲ್ಲರ ಸಹಕಾರದಿಂದ ಮಾರಿಷಸ್ ನಲ್ಲಿ UPI ಬಳಕೆ ಬಹಳ ಸುಲಭವಾಗಿದೆ. ಪ್ರತಿ ವರ್ಷ 5,000 ಭಾರತೀಯ ಪ್ರವಾಸಿಗರು ಮಾರಿಷಸ್‌ಗೆ ಭೇಟಿ ನೀಡುತ್ತಾರೆ ಹಾಗೆಯೇ 30,000 ಮಾರಿಷಸ್ ನಾಗರಿಕರು ಭಾರತಕ್ಕೆ ಪ್ರವಾಸಕ್ಕೆ ಬರುತ್ತಾರೆ.
Chia Seed Benefits: ಬೇಸಿಗೆಯಲ್ಲಿ ಚಿಯಾ ಬೀಜದ ಸೇವನೆಯಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಸ್ಟೆಪ್ 1: ಮರಿಷಿಯಸ್ ಗೆ ಭೇಟಿ ನೀಡುವ ಭಾರತೀಯ ಪ್ರಜೆಗಳು ಶ್ರೀಲಂಕಾದಲ್ಲಿ QR ಕೋಡ್ ಮೂಲಕ ವ್ಯಾಪಾರಿ ಪಾವತಿಗಳನ್ನು ಮಾಡಲು ತಮ್ಮ ಆದ್ಯತೆಯ UPI ಅಪ್ಲಿಕೇಶನ್‌ನಲ್ಲಿ ಸೆಟ್ಟಿಂಗ್ ಗೆ ಹೋಗಿ UPI ಇಂಟರ್ನ್ಯಾಷನಲ್ ಅನ್ನು ಸಕ್ರಿಯಗೊಳಿಸಬೇಕು.
ಸ್ಟೆಪ್ 2: QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು.
ಸ್ಟೆಪ್ 3: ಪೇ ಮಾಡುವ ಹಣದ ಮೊತ್ತವನ್ನು ನಮೂದಿಸಿ
ಸ್ಟೆಪ್ 4: UPI ಪಿನ್ ನಂಬರ್ ಹಾಕಿ ಹಣ ವರ್ಗಾವಣೆ ಮಾಡಿ.
India’s UPI QR Code has also been introduced in Sri Lanka, Mauritius