Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Ashwamedha Bus: ಬೆಂಗಳೂರು-ಮೈಸೂರು ಪ್ರಯಾಣಕ್ಕೆ ಅಶ್ವಮೇಧ ಬಸ್ ಹಾಜರ್! ಅತ್ಯುನ್ನತ ಸೇವೆ ಒದಗಿಸುತ್ತಿರುವ ಈ ವಿಶೇಷ ಬಸ್ ಸೇವೆ ಹೇಗೆ? ಟಿಕೆಟ್ ದರ ಎಷ್ಟು?

ದೂರದ ಪ್ರಯಾಣಕ್ಕೆ, ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಪ್ರಯಾಣ ಮಾಡುವವರಿಗಾಗಿ ಅಶ್ವಮೇಧ ಬಸ್ ಜಾರಿಗೆ ಬಂದಿದ್ದು,

Ashwamedha Bus: ನಮ್ಮ ರಾಜ್ಯ ಸರ್ಕಾರವು ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ಒಳ್ಳೆಯ ಸೇವೆ ಒದಗಿಸಬೇಕು, ಪ್ರಯಾಣದ ಅನುಭವ ಅತ್ಯುತ್ತಮವಾಗಿರಬೇಕು ಎನ್ನುವ ಕಾರಣಕ್ಕೆ ಹೊಸದಾದ ಬಸ್ ಗಳನ್ನು ಸೇವೆಗೆ ತರುತ್ತಿದೆ. ಅದೇ ನಿಟ್ಟಿನಲ್ಲಿ ಈಗ ಅಶ್ವಮೇಧ ಬಸ್ ಸೇವೆ ಆರಂಭವಾಗಿದೆ. ಕಳೆದ ವಾರ ಈ ಹೊಸ ಬಸ್ ಗಳ ಕಾರ್ಯಾಚರಣೆ ಶುರುವಾಗಿದ್ದು, ಬೇರೆ ಬೇರೆ ಜಿಲ್ಲೆಗಳ ನಡುವೆ ಅಶ್ವಮೇಧ ಬಸ್ ಪ್ರಯಾಣ ನಡೆಯಲಿದೆ, ಸಧ್ಯಕ್ಕೆ 100 ಅಶ್ವಮೇಧ ಬಸ್ ಗಳ ಚಾಲನೆ ಶುರುವಾಗಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಅಶ್ವಮೇಧ ಬಸ್ – Ashwamedha Bus:

  • ದೂರದ ಪ್ರಯಾಣಕ್ಕೆ, ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಪ್ರಯಾಣ ಮಾಡುವವರಿಗಾಗಿ ಅಶ್ವಮೇಧ ಬಸ್ ಜಾರಿಗೆ ಬಂದಿದ್ದು, ಇದರಲ್ಲಿ ಪ್ರಯಾಣ ಮಾಡುವ ಅನುಭವ ಇನ್ನು ಚೆನ್ನಾಗಿರಲಿದೆ. ಕಳೆದ ವಾರ ಅಶ್ವಮೇಧ ಬಸ್ ಗಳ ಸಂಚಾರ ಶುರುವಾಗಿದ್ದು, ಪ್ರಸ್ತುತ ಬೆಂಗಳೂರು ಮತ್ತು ಹಾಸನ ಜಿಲ್ಲೆಗಳ ನಡುವಿನ ಪ್ರಯಾಣಕ್ಕೆ 10 ಬಸ್ ಗಳನ್ನು ನಿಗದಿ ಪಡಿಸಲಾಗಿದೆ. ಅಷ್ಟೇ ಅಲ್ಲದೇ ಬೆಂಗಳೂರು ಮತ್ತು ಮೈಸೂರು ನಡುವೆ ಕೂಡ ಅಶ್ವಮೇಧ ಬಸ್ ಗಳ ಸಂಚಾರ ನಡೆಯಲಿದೆ.

ಅಶ್ವಮೇಧದಲ್ಲಿ ಪಾಯಿಂಟ್ ಟು ಪಾಯಿಂಟ್ ಸೇವೆ:

  • ಅಶ್ವಮೇಧ ಬಸ್ ಗಳ ಸೇವೆ ವಿಶೇಷವಾಗಿ ಇರಲಿದ್ದು, ಇದರಲ್ಲಿ ನಿಮಗೆ ಪಾಯಿಂಟ್ ಟು ಪಾಯಿಂಟ್ ಎಕ್ಸ್ಪ್ರೆಸ್ ಸೇವೆ ಸಿಗಲಿದೆ. ಈ ಬಸ್ ಗಳ ಸಂಚಾರ ಸಮಯ, ಟಿಕೆಟ್ ದರ ಇದೆಲ್ಲದರ ಬಗ್ಗೆ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ.

Karnataka Weather Report: ರಾಜ್ಯದಲ್ಲಿ ಮುಂದಿನ 6 ದಿನಗಳು ಭಾರೀ ಮಳೆ! ಎಲ್ಲರೂ ಎಚ್ಚರಿಕೆಯಿಂದ ಇರಿ

ಮೈಸೂರಿನಿಂದ ಬೆಂಗಳೂರಿಗೆ 15 ಬಸ್ ಗಳು:

  • ಅಶ್ವಮೇಧ ಎಲೆಕ್ಟ್ರಿಕ್ ಬಸ್ ಆಗಿದೆ. ಮೈಸೂರಿನ KSRTC ಇಲಾಖೆ ಬೆಂಗಳೂರು ಮತ್ತು ಮೈಸೂರು ನಡುವೆ 20 ಅಶ್ವಮೇಧ ಬಸ್ ಗಳನ್ನು ಸಂಚಾರಕ್ಕಾಗಿ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಸರ್ಕಾರವು ಸಧ್ಯಕ್ಕೆ ಮೊದಲ ಹಂತದಲ್ಲಿ 15 ಬಸ್ ಗಳನ್ನು ಬೆಂಗಳೂರು ಮೈಸೂರು ಜಿಲ್ಲೆಗಳಲ್ಲಿ ಓಡಾಡಲು ಅನುಮತಿ ನೀಡಿದೆ. ಮೈಸೂರು-ಬೆಂಗಳೂರು, ಹುಣಸೂರು-ಬೆಂಗಳೂರು, ಕೆ.ಆರ್.ನಗರ-ಬೆಂಗಳೂರು ಈ ಮಾರ್ಗದಲ್ಲಿ ಅಶ್ವಮೇಧ ಬಸ್ ಗಳ ಸೇವೆ ಶುರುವಾಗಿದೆ.
  • ಈಗ ಮೈಸೂರಿನಲ್ಲಿ 14 ಎಲೆಕ್ಟ್ರಿಕ್ ಬಸ್ ಗಳು ಕೆಲಸ ಮಾಡುತ್ತಿದ್ದು, ಇನ್ನು 30 ಬಸ್ ಗಳು ಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ. ಮತ್ತೊಂದು ಮುಖ್ಯವಾದ ವಿಷಯ ಏನು ಎಂದರೆ, ಮೈಸೂರು-ಹುಣಸೂರು, ಮೈಸೂರು-ಹೆಚ್.ಡಿ ಕೋಟೆ ಊರುಗಳ ನಡುವೆ ಕೂಡ ಅಶ್ವಮೇಧ ಬಸ್ ಸಂಚಾರ ಶೀಘ್ರದಲ್ಲೇ ಶುರುವಾಗಲಿದೆ.

ಟಿಕೆಟ್ ದರ ಹೇಗಿದೆ?

  • ಅಶ್ವಮೇಧ ಬಸ್ ನ ಟಿಕೆಟ್ ದರದ ಬಗ್ಗೆ ಹೇಳುವುದಾದರೆ ಇದು ಎಲ್ಲಾ ಪ್ರಯಾಣಿಕರಿಗೆ ಸಂತೋಷ ತರುವಂಥ ವಿಷಯ ಆಗಿದೆ. ಹಿಂದಿದ್ದ ಟಿಕೆಟ್ ದರವೇ ಇರಲಿದ್ದು, ಅಶ್ವಮೇಧ ಬಸ್ ನಲ್ಲಿ ಪ್ರಯಾಣಿಸಲು ಹೆಚ್ಚುವರಿ ಟಿಕೆಟ್ ವೆಚ್ಚ ಇರುವುದಿಲ್ಲ. ಈ ಬಸ್ ನ ಥೀಮ್ ‘ಮರುಪರಿವರ್ತನೆಯ ಪ್ರಯಾಣ’ ಎಂದು, ಅಶ್ವಮೇಧ ಬಸ್ ನ ಎತ್ತರ 3.42 ಮೀಟರ್ ಆಗಿದೆ.

Karnataka Job Fair: ರಾಜ್ಯದಲ್ಲಿ ನಡೆಯಲಿದೆ ದೊಡ್ಡ ಉದ್ಯೋಗ ಮೇಳ! ಹೊಸ ಹೆಲ್ಪ್ ಲೈನ್ ಶುರು!

ಫೆಬ್ರವರಿ 5ರಂದು ಲಾಂಚ್ ಆದ ಅಶ್ವಮೇಧ:

  • ಸಿಎಂ ಸಿದ್ದರಾಮಯ್ಯ ಅವರು ಫೆಬ್ರವರಿ 5ರಂದು ಬೆಂಗಳೂರಿನ ವಿಧಾನಸೌಧದ ಎದುರು ಅಶ್ವಮೇಧ ಬಸ್ ಅನ್ನು ಲಾಂಚ್ ಮಾಡಿದರು. ಇದು 52 ಸೀಟರ್ ಬಸ್ ಆಗಿದ್ದು, ಒಳಗಡೆ ವಿಶೇಷವಾಗಿದೆ..ಬಕೆಟ್ ಅಂತೆ ವಿನ್ಯಾಸ ಆಗಿರುವ ಸೀಟ್ ಗಳನ್ನು ಹೊಂದಿದೆ. ಬಸ್ ನಲ್ಲಿ ಎಮರ್ಜೆನ್ಸಿ ಎಕ್ಸಿಟ್ ಇದ್ದು, ಆಟೊಮ್ಯಾಟಿಕ್ ಡೋರ್ ಗಳಿವೆ. ಇನ್ನು ವಿಶೇಷ ವ್ಯವಸ್ಥೆಗಳಿವೆ.

Ashwamedha bus travels Bengaluru-Mysore! This customized bus service provides higher service how? How much is the ticket?

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment