Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Indian Currency: ಭಾರತದಲ್ಲಿ ನೋಟುಗಳ ಚಲಾವಣೆ ಶುರುವಾಗಿದ್ದು ಹೇಗೆ ಗೊತ್ತ, 10 ಸಾವಿರ ನೋಟು ಕೂಡ ಇತ್ತು.

ಭಾರತದಲ್ಲಿ ರಾಜರ ಆಳ್ವಿಕೆ ಇದ್ದಾಗ ನಾಣ್ಯಗಳ ಚಲಾವಣೆ ಅಧಿಕವಾಗಿ ಇತ್ತು . ಆಗ ಇವಾಗಿನ ಹಾಗೆ ರೂಪಾಯಿ ಗಳ ಕಾಲ ಅಲ್ಲ . ಆಗ 10 ಪೈಸೆ , 20 ಪೈಸೆ , 1 ಆಣೆ, ಅಂತಹ ನಾಣ್ಯಗಳು ಇದ್ದವು.

Indian Currency: ಇವತ್ತಿನ ಮೊಬೈಲ್ ಕಾಲದಲ್ಲಿ ನಮಗೆ ಹಣ ಚಲಾವಣೆ ಮಾಡುವ ಸಂದರ್ಭವೂ ತೀರಾ ಕಡಿಮೆ. ಒಂದು ದಿನದಲ್ಲಿ ನಾವು ಲಕ್ಷ ಗಟ್ಟಲೆ ಹಣವನ್ನು ನೀಡಲು ಅಥವಾ ಪಡೆಯಲು ಆನ್ಲೈನ್ ಪೇಮೆಂಟ್ (Online Payment ) ಮಾಡುತ್ತೇವೆ. ದಿನದ ಚಿಕ್ಕಪುಟ್ಟ ವ್ಯವಹಾರಗಳು ನಾವು ಸ್ಕ್ಯಾನ್ (Scan ) ಮಾಡಿ ಇರುವ ಸ್ಥಳದಿಂದ ವರ್ಗಾವಣೆ ಮಾಡಲು ಸಾಧ್ಯ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 

ಆದರೆ ಒಂದು 5-6 ವರುಷಗಳ ಹಿಂದೆ ಮೊಬೈಲ್ ಯುಗ ಇಷ್ಟೊಂದು ಪ್ರಚಲಿತದಲ್ಲಿ ಇರಲಿಲ್ಲ. ಆಗ ಎಲ್ಲಾ ಕಡೆಯೂ ನೋಟು ಹಾಗೂ ನಾಣ್ಯಗಳ ಚಲಾವಣೆ ಆಗುತ್ತಿತ್ತು. ಈಗಲೂ ಹಳ್ಳಿ ಪ್ರದೇಶದಲ್ಲಿ ನೋಟಿನ ಚಲಾವಣೆ ಇದ್ದೆ ಇದೆ. ಅಂಥ ನೋಟು ಭಾರತಕ್ಕೆ ಬಂದಿದ್ದು ಯಾವಾಗ ಎಂಬುದು ಮಾತ್ರ ಅಚ್ಚರಿಯ ವಿಷಯ.

ಯಾವಾಗ ಬಂತು ನೋಟ್ ಚಲಾವಣೆ :- (Indian Currency)

ಭಾರತದಲ್ಲಿ ರಾಜರ ಆಳ್ವಿಕೆ ಇದ್ದಾಗ ನಾಣ್ಯಗಳ ಚಲಾವಣೆ ಅಧಿಕವಾಗಿ ಇತ್ತು . ಆಗ ಇವಾಗಿನ ಹಾಗೆ ರೂಪಾಯಿ ಗಳ ಕಾಲ ಅಲ್ಲ. ಆಗ 10 ಪೈಸೆ , 20 ಪೈಸೆ , 1 ಆಣೆ, ಅಂತಹ ನಾಣ್ಯಗಳು ಇದ್ದವು. ರೂಪಾಯಿ ಗಳ ನಾಣ್ಯ ದೊಡ್ಡ ದೊಡ್ಡ ಸಿರಿವಂತರ ಬಳಿ ಮಾತ್ರ ಇತ್ತು. ಹೀಗೆ ಕಾಲ ಬದಲಾವಣೆ ಆಗುತ್ತಾ ಡಚ್ಚರು ಪೋರ್ಚುಗೀಸರು ಭಾರತಕ್ಕೆ ದಾಳಿ ಮಾಡಿದರು . ಅವರ ನಂತರ ಭಾರತಕ್ಕೆ ಬಂದಿದ್ದು ಆಂಗ್ಲರು ,ಆಂಗ್ಲರು ಭಾರತಕ್ಕೆ ಬಂದ ಮೇಲೆ ಭಾರತದಲ್ಲಿ ಹಲವಾರು ಬದಲಾವಣೆಗಳು ಆಯಿತು.

ಇದನ್ನು ಓದಿ:- SIP Ideas: ಮ್ಯೂಚುವಲ್ ಫಂಡ್  ನಲ್ಲಿ ದಿನಕ್ಕೆ 200 ರೂನಂತೆ ಇನ್ವೆಸ್ಟ್  ಮಾಡಿದರೆ 25 ವರುಷಗಳ ನಂತರ ಪಡೆಯುವ ಹಣ ಎಷ್ಟು ಕೋಟಿ ? 

ಭಾರತಕ್ಕೆ ನೋಟ್ ಬಂದು 150 ವರುಷ ಆಯಿತು ಎಂದು ಒಂದು ವರದಿ ಹೇಳುತ್ತದೆ. ಆಗ ಬ್ರಿಟಿಷರ ಅಧೀನದಲ್ಲಿ ಭಾರತ ಇತ್ತು. 1938 ರಲ್ಲಿ ಹುಟ್ಟಿಕೊಂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India ) ನೋಟ್ ತಯಾರಿಸುವ ಹಾಕು ಬಿಡುಗಡೆ ಮಾಡುವ ಹಕ್ಕನ್ನು ಪಡೆದುಕೊಂಡಿತು. ಬ್ಯಾಂಕ್ ಆಫ್ ಹಿಂದೂಸ್ತಾನ್ ಜನರಲ್ ಬ್ಯಾಂಕ್ ( Bank of Hindustan General Bank ) ಮತ್ತು ಬ್ಯಾಂಕ್ ಆಫ್ ಬೆಂಗಾಲ್ ( Bank of Bengal) 18 ನೇ ಶತಮಾನದ ಬಂಗಾಳದಲ್ಲಿ ಭಾರತಕ್ಕೆ ಕಾಗದದ ನೋಟ್ ಅನ್ನು ಪರಿಚಯಿಸಿತು.

Reserve Bank of India
Image Source: Reserve Bank of India

1938 ಕ್ಕೂ ಮೊದಲು ಅಂದರೆ 1861 ರಲ್ಲಿ ಭಾರತಕ್ಕೆ ಮೊದಲ ನೋಟ್ ಬಂದಿತ್ತು . ಮೊದಲು ಭಾರತಕ್ಕೆ ಪರಿಚಯ ಆಗಿದ್ದು 10 ರೂಪಾಯಿ ನೋಟು. ಆಗ ಕಾಗದ ನೋಟ್ ತಯಾರಿಸುವ ಜವಾಬ್ದಾರಿಯನ್ನು ಮಿಂಟ್ ಮಾಸ್ಟರ್, ಅಕೌಂಟೆಂಟ್ ಜನರಲ್ ಮತ್ತು ಕರೆನ್ಸಿ ಮ್ಯಾನೇಜರ್ಗೆ ನೀಡಲಾಗಿತ್ತು . ನಂತರ ಹತ್ತು ವರುಷಗಳ ನಂತರ ಅಂದರೆ 1872 ರಲ್ಲಿ 5 ರೂಪಾಯಿ ನೋಟು ಬಂತು . ಅದಾದ ಬಳಿಕ ಅಂದರೆ 1899ರಲ್ಲಿ 10,000 ರೂಪಾಯಿ ನೋಟು ಸಹ ಚಲಾವಣೆಗೆ ಬಿಡಲಾಗಿತ್ತು . 1900 ರಲ್ಲಿ, 100 ರೂಪಾಯಿ ಬಂತು.

ಇದನ್ನು ಓದಿ:-  ರೈತರಿಗೆ ಸಿಹಿ ಸುದ್ದಿ, ಬರಗಾಲದಿಂದ ಕಂಗಲಾಗಿದ್ದ ರೈತರಿಗೆ  ಸಿಗಲಿದೆ 2 ಸಾವಿರ ಹಣ, ಈ ರೀತಿ ಹಣ ಪಡೆದುಕೊಳ್ಳಿ.

ಅದಾದ 5 ವರುಷಗಳ ಅಂತರದಲ್ಲಿ ಅಂದರೆ 1905 ರಲ್ಲಿ, 50 ರ ನೋಟು ಬಂತು ನಂತರ 1 907 ರಲ್ಲಿ 500 , 1909 ರಲ್ಲಿ 1000 ರೂಪಾಯಿ , 1 ರೂಪಾಯಿ ಮತ್ತು 2.5 ರೂಪಾಯಿ ನೋಟುಗಳು 1917 ರಲ್ಲಿ ಚಲಾವಣೆಯಲ್ಲಿ ಇತ್ತು . ಆದರೆ ಕಾಲ ಬದಲಾವಣೆ ಆದಂತೆ ಕೆಲವು ನೋಟುಗಳ ಚಲಾವಣೆ ನಿಂತಿತು.. ಈಗ ಭಾರತದ ನೋಟು ಚಲಾವಣೆಯ ಅಧಿಕಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India ) ವಹಿಸಿಕೊಂಡಿದೆ. ಈಗಲೂ ಕೆಲವು ಕಾರಣಗಳಿಂದ ನೋಟ್ ಗಳ ಬದಲಾವಣೆ ಆಗುತ್ತಲೇ ಇದೆ.

Do you know how paper currency notes were started in India?

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment