Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Sugriva: ರಾಮ ರಾವಣರ ಯುದ್ಧದಲ್ಲೀ ರಾಮನಿಗೆ ಸಹಾಯ ಮಾಡಿದ ಸುಗ್ರೀವನ ಬಗ್ಗೆ ನಿಮಗೆ ಗೊತ್ತೇ? ಈ ಪುಣ್ಯ ದಿನದಂದು ನಿಮಗೊಂದು ಮಾಹಿತಿ.

ಆದರೆ ರಕ್ಕಸ ಮತ್ತು ವಾಲಿಯ ನಡುವಿನ ಯುದ್ಧದಲ್ಲಿ ಸತ್ತಿದ್ದು ರಕ್ಕಸ ಆಗಿರುತ್ತಾನೆ. ಕೆಲ ದಿನಗಳ ನಂತರ ಸುಗ್ರೀವ ರಾಜ್ಯಕ್ಕೆ ವಾಪಸ್ ಬರುತ್ತಾನೆ.

Sugriva: ಸೀತೆಯನ್ನು ರಾವಣ ಕದ್ದೊಯ್ದು ತನ್ನ ಆಸ್ಥಾನದಲ್ಲಿ ಇರಿಸಿಕೊಂಡಿದ್ದ . ಆದರೆ ಸೀತೆಯನ್ನು ರಾವಣನ ಕಪಿಮುಷ್ಟಿಯಿಂದ ಬಿಡಿಸಿಕೊಂಡು ಬರಲು ರಾಮನಿಗೆ ಸಹಾಯಕ್ಕೆ ಬಂದ ಸ್ನೇಹಿತ ಸುಗ್ರೀವ. ರಾಮನ ಭಂಟ ಹನುಮಂತ ಸಿಕ್ಕಿದ್ದು ಸುಗ್ರೀವನ ಸ್ನೇಹದಿಂದ. ಪಂಚವಟಿ ಯಲ್ಲಿ ಸೀತೆಯ ಸುಳಿವು ಸಿಗದೇ ಇದ್ದಾಗ ಜಟಾಯುವಿನಿಂದ ಸೀತೆಯು ಇರುವ ಜಾಗವೂ ತಿಳಿಯುತ್ತದೆ. ರಾವಣ ಸೀತೆಯನ್ನು ಅಪಹರಣ ಮಾಡಿದ ಸುದ್ದಿ ಕೇಳಿ ಜಟಾಯುವಿನ ಮರಣದ ದುಃಖದಲ್ಲಿಯೆ ಕಾಡಿನಲ್ಲಿ ಸಂಚರಿಸುತ್ತಾರೆ. .

ಸುಗ್ರೀವ ಮತ್ತು ವಾಲಿಯ ಕಥೆ :- (Sugriva)

ವಾಲಿ ಮತ್ತೆ ಸುಗ್ರೀವ ಸಹೋದರರು . ಇವರು ವಾನರರು. ಒಂದು ದಿನ ವಾಲಿ ಹಾಗು ಒಬ್ಬ ರಕ್ಕಸನ ನಡುವೆ ಬಹು ದೊಡ್ಡ ಕದನವಾಗುತ್ತದೆ. ಈ ಕದನದಲ್ಲಿ ರಾಕ್ಕಸನ ಬೆನ್ನಟ್ಟಿ ವಾಲಿ ಒಂದು ಗುಹೆಯ ಒಳಗೆ ಹೋಗುತ್ತಾನೆ. ಕದನ ನಡೆಯುವಾಗ ಸುಗ್ರೀವ ಗುಹೆಯ ಹೊರಗೆ ಕಾಯುತ್ತಿರುತ್ತಾನೆ. ಆದರೆ ಬಹಳ ಸಮಯವಾದರೂ ವಾಲಿ ಬರುವುದಿಲ್ಲ. ಆದರೆ ಗುಹೆಯಿಂದ ರಕ್ತ ಹರಿದು ಬರುತ್ತದೆ. ಆಗ ಸುಗ್ರೀವ ರಕ್ಕಸ ವಾಲಿಯನ್ನ ಸಾಯಿಸಿದ ಎಂದು ಭಾವಿಸಿ ಗುಹೆ ಮುಚ್ಚುವಂತೆ ಕಲ್ಲೊಂದನ್ನ ಇಟ್ಟು ರಾಜ್ಯಕ್ಕೆ ಮರಳಿ ಬರುತ್ತಾನೆ. ವಾಲಿ ಇಲ್ಲ ತಾನೆ ರಾಜ್ಯದ ಅಧಿಪತಿ ಎಂದು ತಿಳಿದು ರಾಜ್ಯಭಾರ ಮಾಡುತ್ತಾ ಇರುತ್ತಾನೆ.

ಆದರೆ ರಕ್ಕಸ ಮತ್ತು ವಾಲಿಯ ನಡುವಿನ ಯುದ್ಧದಲ್ಲಿ ಸತ್ತಿದ್ದು ರಕ್ಕಸ ಆಗಿರುತ್ತಾನೆ. ಕೆಲ ದಿನಗಳ ನಂತರ ಸುಗ್ರೀವ ರಾಜ್ಯಕ್ಕೆ ವಾಪಸ್ ಬರುತ್ತಾನೆ. ತನ್ನ ಜಾಗದಲ್ಲಿ ತಮ್ಮ ರಾಜ್ಯಭಾರ ಮಾಡುತ್ತಿರುವುದನ್ನ ನೋಡ, ತನಗೆ ಮೋಸ ಮಾಡಿದ್ದಾನೆ ಎಂದು ಅಂದುಕೊಂಡು ಸುಗ್ರೀವನನ್ನ ರಾಜ್ಯದಿಂದ ಹೊರಗ್ ಹಾಕಿ , ಸುಗ್ರೀವನ ಹೆಂಡತಿಯನ್ನ ಬಲವಂತವಾಗಿ ತಮ್ಮ ಬಳಿ ಇಟ್ಟುಕೊಳ್ಳುತ್ತಾನೆ. ಅಣ್ಣ ನೀಡುವ ಹಿಂಸೆ ತಾಳಲಾರದೆ ರಾಜ್ಯ ಬಿಟ್ಟು ಬಂದ ಸುಗ್ರೀವ ಅಲ್ಲಿಯೇ ಕಾಡಿನಲ್ಲಿ ವಾಸವಾಗಿರುತ್ತಾನೆ. ಅವನ ಜೊತೆ ಕೆಲ ವಾನ ಸೈನ್ಯವೂ ಇರುತ್ತದೆ.

ರಾಮ ಸುಗ್ರೀವರ ಪರಿಚಯ :-

ರಾಮ ಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ಹಲವಾರು ಪ್ರದೇಶವನ್ನು ದಾಟಿ ಕಿಷ್ಕಿಂದೆ ಎಂಬ ನಗರಕ್ಕೆ ಹೋಗ್ತಾರೆ. ಸುಗ್ರೀವ ಹೇಗಾದರೂ ಮಾಡಿ ವಾಲಿಯ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎಂದು ಪ್ರಯತ್ನ ಮಾಡುತ್ತಾ ಇರುತ್ತಾನೆ. . ಆಗ ಅಲ್ಲಿ ಅವನಿಗೆ ರಾಮ ಲಕ್ಷ್ಮಣ ಭೇಟಿ ಆಗುತ್ತದೆ. . ರಾಮ ತನ್ನ ಪರಿಚಯ ಮತ್ತು ಸೀತೆಯನ್ನ ರಾವಣ ಕದ್ದೊಯ್ದ ವಿಷಯ ಹೇಳುತ್ತಾನೆ. ಸೀತೆ ರಾವಣ ಕರೆದೊಯ್ದ ಮಾರ್ಗದಲ್ಲಿ ರಾಮ ಬರುತ್ತಾನೆ ಎಂಬ ಭರವಸೆಯಲ್ಲಿ ತನ್ನೆಲ್ಲ ಆಭರಣಗಳನ್ನು ದಾರಿಯಲ್ಲಿ ಎಸೆದು ಹೋಗಿರುತ್ತಾಲೆ. ಅದು ವಾನರ ಸೇನೆಗೆ ಸಿಕ್ಕಿರುತ್ತದೆ.

ಸೀತೆಯನ್ನು ರಾವಣನಿಂದ ಬಿಡಿಸಿಕೊಂಡು ಬರಲು ರಾಮನಿಗೆ ಸುಗ್ರೀವನ ಸಹಾಯ ಬೇಕಾಗಿತ್ತು. ಹಾಗೂ ಸುಗ್ರೀವನಿಗೆ ಅಣ್ಣ ವಾಲಿಯೊಂದಿಗೆ ಜಯ ಸಾಧಿಸಲು ರಾಮನಂತಹ ಪರಾಕ್ರಮಿಗಳ ಬೆಂಬಲ ಬೇಕಿತ್ತು. ಆಗ ಇಬ್ಬರ ನಡುವೆ ಒಪ್ಪಂದ ಆಗುತ್ತದೆ.
ಆ ಒಪ್ಪಂದದ ಪ್ರಕಾರ ಸುಗ್ರೀವ ಮತ್ತು ವಾಲಿಯ ನಡುವಿನ ಯುದ್ಧದಲ್ಲಿ ರಾಮ ಮರೆಯಲಿ ನಿಂತು ವಾಲಿಯನ್ನು ಕೊಲ್ಲುತ್ತಾನೆ. ಮಾತಿಗೆ ತಪ್ಪದ ರಾಮನ ಸಹಾಯಕ್ಕೆ ಸುಗ್ರೀವ ತನ್ನ ಸೇನೆಯ ಜೊತೆ ಸೀತೆಯನ್ನು ಹುಡುಕಿ ರಾಮನಿಗೆ ಜಯ ಸಿಗುವಲ್ಲಿ ಸಹಾಯ ಮಾಡುತ್ತಾರೆ.

Do you know about Sugriva who helped Rama in the battle of Rama and Ravana?

ಓದಲು ಹೆಚ್ಚಿನ ಸುದ್ದಿಗಳು:

ನಿಮಗೂ ಕೂಡ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಚುನಾವಣೆ ಸ್ಪರ್ಧಿಸಲು ಆಸಕ್ತಿ ಇದ್ದೀಯ ಆಗಿದ್ರೆ ಈ ರೀತಿ ಮಾಡಿ, ಇಷ್ಟು ದಾಖಲಾತಿ ಇದ್ದರೆ ಸಾಕು.

Leave a comment