Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gruha Lakshmi Scheme: ಈ ಮಹಿಳೆಯರ ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಕ್ಯಾನ್ಸಲ್! ನಿಮಗು ಹೀಗೆ ಆಗಬಾರದು ಅಂದ್ರೆ ಈ ಕೆಲಸ ಮಾಡಿ

ಇದಕ್ಕೆ ಕಾರಣಗಳು ಹಲವು.. ಅರ್ಜಿ ಸಲ್ಲಿಸಿರುವ 1.18 ಕೋಟಿ ಮಹಿಳೆಯರ ಪೈಕಿ ಎಲ್ಲರಿಗೂ ಗೃಹಲಕ್ಷ್ಮಿ ಯೋಜನೆಯ ಸೌಲಭ ಸಿಕ್ಕಿಲ್ಲ. ಕೆಲವರಿಗೆ ರೇಷನ್ ಕಾರ್ಡ್ ಸಮಸ್ಯೆ,

Gruha Lakshmi Scheme: ರಾಜ್ಯದಲ್ಲಿ ಮನೆ ನಡೆಸಿಕೊಂಡು ಹೋಗುವಂಥ ಮಹಿಳೆಯರಿಗೆ ಸಹಾಯ ಆಗಲಿ ಅನುಕೂಲ ಆಗಲಿ ಎಂದು, ಮನೆಯನ್ನು ನಿರ್ವಹಿಸಿಸಲು ಬೇಕಾಗುತ್ತದೆ ಎಂದು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿರುವ ಕಾಂಗ್ರೆಸ್ ಸರ್ಕಾರ ಪ್ರತಿ ತಿಂಗಳು ಹೆಣ್ಣುಮಕ್ಕಳ ಬ್ಯಾಂಕ್ ಖಾತೆಗೆ ₹2000 ರೂಪಾಯಿಗಳನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡುತ್ತಿದೆ. ಆದರೆ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ. ಹೌದು, ಕೆಲವರು ಅಪ್ಲೈ ಮಾಡಿ, ಎಲ್ಲಾ ದಾಖಲೆ ಮಾಹಿತಿ ಕೊಟ್ಟಿದ್ದರು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

ಗೃಹಲಕ್ಷ್ಮಿ ಯೋಜನೆಯ ಹಣ ಬರದೇ ಇರೋದು ಯಾಕೆ? (Gruha Lakshmi Scheme)

ಇದಕ್ಕೆ ಕಾರಣಗಳು ಹಲವು.. ಅರ್ಜಿ ಸಲ್ಲಿಸಿರುವ 1.18 ಕೋಟಿ ಮಹಿಳೆಯರ ಪೈಕಿ ಎಲ್ಲರಿಗೂ ಗೃಹಲಕ್ಷ್ಮಿ ಯೋಜನೆಯ ಸೌಲಭ ಸಿಕ್ಕಿಲ್ಲ. ಕೆಲವರಿಗೆ ರೇಷನ್ ಕಾರ್ಡ್ ಸಮಸ್ಯೆ, ಇನ್ನು ಕೆಲವರಿಗೆ ಆಧಾರ್ ಕಾರ್ಡ್ ಸಮಸ್ಯೆ, ಬ್ಯಾಂಕ್ ಅಕೌಂಟ್ ಸಮಸ್ಯೆ ಹೀಗೆ ಅನೇಕ ಕಾರಣಗಳಿಗೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರದೇ ಇರಬಹುದು. ಒಂದು ವೇಳೆ ಈಗಾಗಲೇ ನಿಮಗೆ 5 ಕಂತುಗಳ ಹಣ ಬಂದಿದ್ರೆ ಯಾವುದೇ ತೊಂದರೆ ಇಲ್ಲದೇ 6ನೇ ಕಂತಿನ ಹಣ ಕೂಡ ಬರುತ್ತದೆ.

Gruha Jyothi Scheme: ಗೃಹಜ್ಯೋತಿ ಯೋಜನೆ ಬಗ್ಗೆ ಹೊಸ ಅಪ್ಡೇಟ್! ಬಾಡಿಗೆ ಮನೆಯಲ್ಲಿರೋರಿಗೆ ಸಿಹಿ ಸುದ್ದಿ! ಇನ್ನು ಮುಂದೆ ಕರೆಂಟ್ ಚಿಂತೆ ದೂರ.

ಆದರೆ ಇನ್ನೂ ಕೂಡ ಒಂದು ಕಂತಿನ ಹಣ ಕೂಡ ಬಂದಿಲ್ಲ ಅಂದ್ರೆ ಸಮಸ್ಯೆ ಉಂಟಾಗಿರಬಹುದು. ಸರ್ಕಾರವು ಮಹಿಳೆಯರ ಸಮಸ್ಯೆಗಳನ್ನು ಸರಿಪಡಿಸಿ, ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಅರ್ಹತೆ ಇರುವ ಎಲ್ಲರಿಗೂ ಸಿಗಬೇಕು ಎಂದು ಸರ್ಕಾರ ಕೆಲವು ಕಾರ್ಯಕ್ರಮಗಳನ್ನು ಮಾಡಿತು, ಆದರೆ ಅಷ್ಟೆಲ್ಲಾ ಮಾಡಿದರು ಇನ್ನು ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅಂದ್ರೆ ಈ ಕೆಲಸಗಳನ್ನು ಮಾಡಿ, ಆಗ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಖಂಡಿತವಾಗಿ ಬರುತ್ತದೆ.

NCPI ಮ್ಯಾಪಿಂಗ್:

ಆಧಾರ್ ಕಾರ್ಡ್ ಜೊತೆಗೆ ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್ ಲಿಂಕ್ ಆಗಿರುವುದು ಕಡ್ಡಾಯ ಎನ್ನುವುದು ನಮಗೆಲ್ಲ ಗೊತ್ತೇ ಇದೆ. ಅದರ ಜೊತೆಗೆ NCPI ಮ್ಯಾಪಿಂಗ್ ಆಗಿರುವುದು ಕೂಡ ಕಡ್ಡಾಯ ಆಗಿದೆ. ಹಾಗಾಗಿ ಒಂದು ವೇಳೆ ನೀವು NCPI ಮಾಡಿಸಿಲ್ಲ ಎಂದರೆ, ಈ ಕೂಡಲೇ ಮಾಡಿಸಿ. NCPI ಮಾಡಿಸಿದರೆ, ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಬರುವುದರಲ್ಲಿ ಸಂಶಯವಿಲ್ಲ .

ತೆರಿಗೆ ಪಾವತಿದಾರರಿಗೆ ಇಲ್ಲ ಗೃಹಲಕ್ಷ್ಮಿ ಹಣ:

ಸರ್ಕಾರ ಈಗಾಗಲೇ ತಿಳಿಸಿರುವ ಹಾಗೆ ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ, ತೆರಿಗೆ ಪಾವತಿ ಮಾಡುವವರಿಗೆ ಗೃಹಲಕ್ಶ್ಮಿ ಯೋಜನೆಯ ಹಣ ಸಿಗುವುದಿಲ್ಲ. ಒಂದು ವೇಳೆ ನೀವು ತೆರಿಗೆ ಪಾವತಿ ಮಾಡದೆ ಇರುವವರಾಗಿದ್ದರು ಸಹ ನಿಮಗೆ ಹಣ ಬಂದಿಲ್ಲ ಅಂದರೆ, ತಾಲ್ಲೂಕು ಕಚೇರಿಯಲ್ಲಿ ನೀವು ತೆರಿಗೆ ಪಾವತಿ ಮಾಡುತ್ತಿಲ್ಲ ಎನ್ನುವುದಕ್ಕೆ ದೃಢೀಕರಣ ಪತ್ರ ಮಾಡಿಸಿ, ಅದನ್ನು submit ಮಾಡಿ, ಈ ಕೆಲಸ ಮಾಡಿದರು ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ.

Gruha Lakshmi Money: ಗೃಹಲಕ್ಷ್ಮೀ ಯೋಜನೆಯ ಹಣ ಈ ದಿನ ನಿಮ್ಮ ಖಾತೆಗೆ ಜಮಾ ಆಗಲಿದೆ! ಮಾಹಿತಿ ನೀಡಿದ ಸಿ ಎಂ ಸಿದ್ದರಾಮಯ್ಯ!

ರೇಶನ್ ಕಾರ್ಡ್ ಚೆಕ್ ಮಾಡಿ:

ಶ್ರೀಮಂತರು, ಉಳ್ಳವರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಪಡೆದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ವಿಚಾರದಲ್ಲಿ ಸರ್ಕಾರಕ್ಕೆ ಜನರಿಂದ ಮೋಸ ಆಗುತ್ತಿರುವುದು ಗೊತ್ತಾಗಿದ್ದು, ಇಂಥವರಿಗೆ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ.

The money of the 6th tranche of these women’s Gruha Lakshmi Yojana is cancelled!

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment