Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gruha Lakshmi Money: ಗೃಹಲಕ್ಷ್ಮೀ ಯೋಜನೆಯ ಹಣ ಈ ದಿನ ನಿಮ್ಮ ಖಾತೆಗೆ ಜಮಾ ಆಗಲಿದೆ! ಮಾಹಿತಿ ನೀಡಿದ ಸಿ ಎಂ ಸಿದ್ದರಾಮಯ್ಯ!

ಹೌದು, ಈ ಯೋಜನೆಯ ಲಾಭ ಪಡೆಯಲು ಕೆಲವು ಅರ್ಹತೆಗಳನ್ನು ಮಹಿಳೆಯರು ಪೂರೈಸಬೇಕು ಎಂದು ರಾಜ್ಯ ಸರ್ಕಾರವು ಈಗಾಗಲೆ ತಿಳಿಸಿದೆ. ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿ ಮಹಿಳೆಯಾಗಿರಬೇಕು

Gruha Lakshmi Money: ರಾಜ್ಯ ಸರ್ಕಾರವು ರಾಜ್ಯದ ಜನರ ಸುರಕ್ಷತೆ ಹಾಗೂ ಅವರ ಆರ್ಥಿಕ ಪರಿಸ್ಥಿತಿ ಸ್ಥಿರಗೊಳಿಸುವ ಪ್ರಯತ್ನದಲ್ಲಿ ಕೆಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇನ್ನು ಮಹಿಳೆಯರಿಗಾಗಿ ಕೆಲವು ವಿಶೇಷವಾದ ಯೋಜನೆಗಳನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದ್ದು, ಮಹಿಳೆಯರನ್ನು ಸ್ವಾವಲಂಬಗಳಾಗಿ ಮಾಡಲು ಗೃಹ ಲಕ್ಷ್ಮೀ, ಶಕ್ತಿ ಯೋಜನೆ ಅಂತಹ ಯೋಜನೆಗಳಿಗೆ ರಾಜ್ಯ ಸರಕಾರ ಚಾಲನೆ ನೀಡಿದೆ. ಗೃಹ ಲಕ್ಷ್ಮೀ (Gruha Lakshmi) ಯೋಜನೆಯ ಅಡಿಯಲ್ಲಿ ರಾಜ್ಯದ ಮಹಿಳೆಯರ ಖಾತೆಗೆ ಸರ್ಕಾರದಿಂದ ನೇರವಾಗಿ 2000 ರೂಗಳನ್ನು ಜಮಾ ಮಾಡಲಾಗುತ್ತಿದೆ.

ಈಗಾಗಲೆ ರಾಜ್ಯದ 70% ಮಹಿಳೆಯರು ಹಣ ಪಡೆದಿದ್ದರೆ.

ಈಗಾಗಲೆ ಈ ಯೋಜನೆಗೆ ಸಿ ಎಂ ಸಿದ್ದರಾಮಯ್ಯ ಅವರು ಆಗಸ್ಟ್ ತಿಂಗಳಿನಲ್ಲಿ ಚಾಲನೆ ನೀಡಿದ್ದು, ಲಕ್ಷಾಂತರ ಮಹಿಳೆಯರ ಖಾತೆಗೆ 2000 ರೂಗಳನ್ನು ಜಮಾ ಮಾಡಲಾಗಿದೆ. ಸದ್ಯ ರಾಜ್ಯದ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆದು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೆ ರಾಜ್ಯದ 70% ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದು, ಇನ್ನು ಮಿಕ್ಕ 30% ಮಹಿಳೆಯರು ಈ ಯೋಜನೆಯ ಲಾಭದಿಂದ ವಂಚಿತರಾಗಿದ್ದಾರೆ.

Gruha lakshmi money will be credited to your account on this day
Images are credited to their original sources.

ಹೌದು, ಈ ಯೋಜನೆಯ ಲಾಭ ಪಡೆಯಲು ಕೆಲವು ಅರ್ಹತೆಗಳನ್ನು ಮಹಿಳೆಯರು ಪೂರೈಸಬೇಕು ಎಂದು ರಾಜ್ಯ ಸರ್ಕಾರವು ಈಗಾಗಲೆ ತಿಳಿಸಿದೆ. ಪಡಿತರ ಚೀಟಿಯಲ್ಲಿ (Ration card) ಮನೆಯ ಯಜಮಾನಿ ಮಹಿಳೆಯಾಗಿರಬೇಕು, ಬ್ಯಾಂಕ್ ಪಾಸ್ ಬುಕ್ (Bank Passbook) ಮತ್ತು ಪಡಿತರ ಚೀಟಿಗೆ ಅವರ ಆಧಾರ್ ಕಾರ್ಡ್ ಲಿಂಕ್ (Aadhaar Card Link) ಆಗಿರುವುದು ಕಡ್ಡಾಯ. ಈ ಎಲ್ಲಾ ಕಾರ್ಯಗಳು ನಡೆದಿದ್ದರೆ, ಅಂತಹ ಮಹಿಳೆಯ ಖಾತೆಗೆ ನೇರವಾಗಿ 2000 ರೂಗಳನ್ನು ಡಿಬಿಟಿ ಮೂಲಕ ಸರ್ಕಾರವು ಹಣ ಜಮಾ ಮಾಡಲಿದೆ.

ಆದರೆ ಇದೀಗ ಇನ್ನು ಕೆಲವರ ಖಾತೆಗೆ ಹಣ ಜಮಾ ಆಗಿಲ್ಲ.

ಇನ್ನು ಈಗಾಗಲೆ ಅನೇಕ ಮಹಿಳೆಯರು ಮೊದಲನೆಯ ಕಂತಿನ ಹಣವನ್ನು ಪಡೆದಿದ್ದಾರೆ. ಇದೀಗ ಎರಡನೇ ಕಂತಿನ ಹಣವನ್ನು ಅಕ್ಟೋಬರ್ ತಿಂಗಳಿನ ಎರಡನೇ ವಾರದಲ್ಲಿ ಪಡೆಯುವುದಾಗಿ ಸರ್ಕಾರ ಮಾಹಿತಿ ನೀಡಿತ್ತು, ಆದರೆ ಇದೀಗ ಇನ್ನು ಕೆಲವರ ಖಾತೆಗೆ ಹಣ ಜಮಾ ಆಗಿಲ್ಲ. ಈ ಸಮಸ್ಯೆಗೆ ಕಾರಣವನ್ನೂ ಇದೀಗ ಸ್ವತಃ ಸಿದ್ದರಾಮಯ್ಯ ಅವರೇ ತಿಳಿಸಿದ್ದಾರೆ. ಮಹಿಳೆಯರು ಮೊದಲನೆಯ ಕಂತಿನ ಹಣ ಪಡೆದಿದ್ದರೂ ಸಹ ಅವರ ಖಾತೆಗಳಲ್ಲಿ ಕೆಲವು ತಪ್ಪುಗಳನ್ನು ಇರುವ ಕಾರಣ ಅವರು ಎರಡನೇ ಕಂತಿನ ಹಣ ಪಡೆದಿಲ್ಲ ಎಂದಿದ್ದಾರೆ. ತಮ್ಮ ಖಾತೆಗಳಲ್ಲಿ ಯಾವುದೇ ತಪ್ಪು ಇದ್ದರೆ ಅದನ್ನು ಶೀಘ್ರದಲ್ಲಿ ಸರಿ ಮಾಡಿಸಿಕೊಂಡು ಮತ್ತೆ ಅವರು ಎರಡನೇ ಕಂತಿನ ಹಣವನ್ನು ಪಡೆಯಬಹುದು ಎಂದಿದ್ದಾರೆ.

Gruha lakshmi money will be credited to your account on this day
Images are credited to their original sources.

ಹಣ ಯಾವಾಗ ಜಮಾ ಆಗುತ್ತೆ.

ಇನ್ನು ಸರ್ಕಾರದ ವೆಬ್ ಸೈಟ್ ಗಳಲ್ಲಿ ಕೆಲವು ಸಮಸ್ಯೆಗಳು ಕಂಡು ಬಂದ ಕಾರಣ ಗೃಹ ಲಕ್ಷ್ಮೀ ಯೋಜನೆಯ ಹಣ ಇನ್ನು ಜಮಾ ಆಗಿಲ್ಲ. ಶೀಘ್ರದಲ್ಲೇ ಈ ತಾಂತ್ರಿಕ ಸಮಸ್ಯೆಗಳನ್ನು ಸರಿ ಪಡಿಸಿ ಮಹಿಳೆಯರ ಖಾತೆಗೆ ಡಿಬಿಟಿ (DBT) ಮೂಲಕ ಹಣವನ್ನು ಜಮಾ ಮಾಡುವುದಾಗಿ ಮುಖ್ಯಮಂತ್ರಿ ಸಿ ಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Gruha lakshmi money will be credited to your account on this day.

Leave a comment