Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Home Loan: ಅತಿಕಡಿಮೆ ಬಡ್ಡಿದರದಲ್ಲಿ ಹೋಮ್ ಲೋನ್ ಕೊಡುವ ಬ್ಯಾಂಕ್ ಗಳಿವು! ಮನೆ ಕಟ್ಟುವ ಕನಸು ಇನ್ನು ಜೀವಂತ!

ನಮ್ಮ ದೇಶದಲ್ಲಿ ಜನರ ನಂಬಿಕೆ ಮತ್ತು ವಿಶ್ವಾಸ ಗಳಿಸಿರುವ ಪ್ರಮುಖವಾದ ಬ್ಯಾಂಕ್ SBI. ಗ್ರಾಹಕರಿಗೆ ಅನುಕೂಲ ನೀಡುವ SBI ನಲ್ಲಿ ಹೋಮ್ ಲೋನ್ ಗಳು 8.55% ಬಡ್ಡಿದರದಿಂದ ಶುರುವಾಗುತ್ತದೆ.

Home Loan: ಒಂದು ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವುದು ಬಹಳಷ್ಟು ಜನರ ಕನಸು. ಆದರೆ ಆರ್ಥಿಕ ಸಮಸ್ಯೆಗಳ ಕಾರಣಕ್ಕೆ ಅವರುಗಳು ಸ್ವಂತ ಮನೆ ಮಾಡಿಕೊಳ್ಳಲು ಸಾಧ್ಯ ಆಗಿರುವುದಿಲ್ಲ. ಹಣ ಕಡಿಮೆ ಇದ್ದಾಗ ಹೆಚ್ಚಿನ ಜನರು ಲೋನ್ ಮೊರೆ ಹೋಗುತ್ತಾರೆ. ಬ್ಯಾಂಕ್ ಗಳಲ್ಲಿ ಲೋನ್ ಪಡೆದರೆ, ಪ್ರತಿ ತಿಂಗಳು EMI ಕಟ್ಟಬೇಕು, ಅದಕ್ಕೆ ಒಂದಷ್ಟು ಪ್ರೊಸಿಜರ್ ಗಳು ಇರುತ್ತದೆ. ಒಂದು ವೇಳೆ ನೀವು ಹೋಮ್ ಲೋನ್ ಪಡೆಯುವ ಪ್ಲಾನ್ ಮಾಡುತ್ತಿದ್ದರೆ, ಈ ಬ್ಯಾಂಕ್ ಗಳಲ್ಲಿ ನಿಮಗೆ ಕಡಿಮೆ ಬಡ್ಡಿಯಲ್ಲಿ ಲೋನ್ ಸಿಗುತ್ತದೆ, ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

SBI Home Loan:

ನಮ್ಮ ದೇಶದಲ್ಲಿ ಜನರ ನಂಬಿಕೆ ಮತ್ತು ವಿಶ್ವಾಸ ಗಳಿಸಿರುವ ಪ್ರಮುಖವಾದ ಬ್ಯಾಂಕ್ SBI. ಗ್ರಾಹಕರಿಗೆ ಅನುಕೂಲ ನೀಡುವ SBI ನಲ್ಲಿ ಹೋಮ್ ಲೋನ್ ಗಳು 8.55% ಬಡ್ಡಿದರದಿಂದ ಶುರುವಾಗುತ್ತದೆ. ಸಾಲ ಮರುಪಾವತಿಗೆ 30 ವರ್ಷಗಳವರೆಗು ಆಯ್ಕೆ ಇರುತ್ತದೆ. ನೀವು ಸಾಲ ಎಷ್ಟು ಪಡೆಯುತ್ತೀರೋ ಅಷ್ಟರಲ್ಲಿ 0.35% ಹಣ ಹೋಮ್ ಲೋನ್ ಪ್ರಕಿಯೆ ಶುಲ್ಕ ಆಗಿರುತ್ತದೆ. ಮಹಿಳೆಯರಿಗೆ ಬಡ್ಡಿದರದಲ್ಲಿ 0.05% ಕಡಿಮೆ ಆಗುತ್ತದೆ. SBI ನಲ್ಲಿ ಪೂರ್ಣಪಾವತಿ ದಂಡವನ್ನು ಪೂರ್ತಿ ಮನ್ನಾ ಮಾಡಲಾಗುತ್ತದೆ.. ಹೆಚ್ಚಿನ ಜನರು ಆಯ್ಕೆ ಮಾಡುವ ಬ್ಯಾಂಕ್ ಇದು.

Udyogini Loan Scheme: ಮಹಿಳೆಯರು ಸ್ವಂತ ಉದ್ಯಮ ಶುರು ಮಾಡಲು ಸಿಗಲಿದೆ ₹3 ಲಕ್ಷದವರೆಗು ದಾಖಲೆರಹಿತ ಸಾಲ! ಸರ್ಕಾರದಿಂದ ಮಹಿಳೆಯರಿಗೆ ಬಂಪರ್ ಆಫರ್!

HDFC Home Loan:

ಇದು ಕೂಡ ನಮ್ಮ ದೇಶದ ಒಳ್ಳೆಯ ಬ್ಯಾಂಕ್ ಆಗಿದ್ದು, HDFC ನಲ್ಲಿ ಹೋಮ್ ಲೋನ್ ಬಡ್ಡಿದರ 8.60% ಇಂದ ಶುರುವಾಗುತ್ತದೆ. 30 ವರ್ಷಗಳ ಸಾಲಮರುಪಾವತಿ ಅವಧಿ ಇರಲಿದ್ದು, 1 ಲಕ್ಷಕ್ಕೆ 762 ರೂಪಾಯಿಯ ಹಾಗೆ ಇಎಂಐ ಲೆಕ್ಕ ಹಾಕಲಾಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಲೋನ್ ಸಂಸ್ಕರಣೆ ಶುಲ್ಕ 3000 ರೂಪಾಯಿಗಳ ಒಳಗಿರುತ್ತದೆ. ಕೆಲಸ ಇಲ್ಲದವರಿಗೂ ಸಾಲ ಸಿಗುವ ಸಾಧ್ಯತೆ ಇದೆ.

ICICI Home Loan:

ಈ ಬ್ಯಾಂಕ್ ನಲ್ಲಿ ಸಹ ಹೋಮ್ ಲೋನ್ ಮೇಲಿನ ಬಡ್ಡಿದರ ಶುರುವಾಗುವುದು 8.60% ಇಂದ. 30 ವರ್ಷಗಳ ಸಾಲ ಮರುಪಾವತಿ ಅವಧಿಯ ಜೊತೆಗೆ ಹೋಮ್ ಲೋನ್ ಪಡೆಯಬಹುದು. ಈ ಬ್ಯಾಂಕ್ ನಲ್ಲಿ ಫ್ಲೋಟಿಂಗ್ ದರದ ಅನುಸಾರ ಪ್ರೊಸೆಸಿಂಗ್ ಶುಲ್ಕ ಇರುವುದಿಲ್ಲ. ಇದು ನೀವು ಪಡೆಯುವ ಸಾಲದಲ್ಲಿ 0 ಇಂದ 0.50% ವರೆಗು ಇರುತ್ತದೆ. ಈ ಬ್ಯಾಂಕ್ ನಲ್ಲಿ ICICI PMAY ಯೋಜನೆಗಳಿದ್ದು, ಮನೆ ಕೊಂಡುಕೊಳ್ಳಲು ಸಹಾಯ ಮಾಡುತ್ತದೆ. ಹೋಮ್ ಲೋನ್ ಇದು ಒಳ್ಳೆಯ ಬ್ಯಾಂಕ್.

Axis Bank Home Loan:

ಈ ಬ್ಯಾಂಕ್ ನಲ್ಲಿ ಹೋಮ್ ಲೋನ್ ಪಡೆಯಲು ಫ್ಲೋಟಿಂಗ್ ರೇಟ್ ಲೋನ್ ಮೇಲೆ 6.90% ಬಡ್ಡಿಯಿಂದ, ಸ್ಥಿರ ಆಧಾರಿತ ಲೋನ್ ಮೇಲೆ 12% ಇಂದ ಬಡ್ಡಿದರ ಶುರುವಾಗುತ್ತದೆ. ಇಲ್ಲಿ ನಿಮಗೆ ಹೋಮ್ ಲೋನ್ ಅನ್ನು ಫ್ಲೋಟಿಂಗ್ ದರದ ಆಧಾರದ ಮೇಲೆ 30 ವರ್ಷಗಳವರೆಗು ಸಾಲ ಮರುಪಾವತಿ ಅವಧಿಯನ್ನು ಜಾಸ್ತಿ ಮಾಡಬಹುದು. ಸ್ಥಿರ ಸಾಲಗಳ ಮರುಪಾವತಿ ಅವಧಿಯನ್ನು 20 ವರ್ಷಕ್ಕೆ ಹೆಚ್ಚಿಸಬಹುದು. ಇಲ್ಲಿ ನಿಮ್ಮ ಸಾಲದ ಮೊತ್ತದ 1% ಅನ್ನು ಪ್ರೊಸೆಸಿಂಗ್ ಫೀಸ್ ಆಗಿ ಪಾವತಿ ಮಾಡಬೇಕು. ಹಾಗೆಯೇ ಲಾಗಿನ್ ವೇಳೆ ₹2500 ರೂಪಾಯಿಗಳನ್ನು GST ಆಗಿ ಪಾವತಿ ಮಾಡಬೇಕು.

Government Subsidy Loan: ನಿಮಗೆ ಸ್ವಂತ ವ್ಯಾಪಾರ ಮಾಡುವ ಕನಸಿದ್ದರೆ ಚಿಂತೆ ಬಿಡಿ, ಈ ರೀತಿ ಅರ್ಜಿ ಸಲ್ಲಿಸಿ ಸಾಕು, ಸರ್ಕಾರವೇ ಕೊಡುತ್ತೆ 50% ಸಬ್ಸಿಡಿಯೊಂದಿಗೆ ವ್ಯಾಪಾರ ಸಾಲ.

Bank of Baroda Home Loan:

ಈ ಬ್ಯಾಂಕ್ ನಲ್ಲಿ ಹೋಮ್ ಲೋನ್ ಬಡ್ಡಿದರ 7.95% ಇಂದ ಶುರುವಾಗುತ್ತದೆ. ಸಾಲ ಮರುಪಾವತಿ ಅವಧಿ 30 ವರ್ಷ ಆಗಿರುತ್ತದೆ..ಈ ಬ್ಯಾಂಕ್ ನಲ್ಲಿ ಸಾಲದ ಮೊತ್ತದಲ್ಲಿ 0.25 ಪ್ರೊಸೆಸಿಂಗ್ ಫೀಸ್ ಇರಲಿದ್ದು, 10 ಕೋಟಿ ವರೆಗು ಸಾಲ ಪಡೆಯಬಹುದು. ಫ್ಲೋಟಿಂಗ್ ಬಡ್ಡಿದರದಲ್ಲಿ ಯಾವುದೇ ಪೂರ್ವಪಾವತಿ ದಂಡವನ್ನು ಸಹ ವಿಧಿಸುವುದಿಲ್ಲ.ಈ ಬ್ಯಾಂಕ್ ನಲ್ಲಿ ನೀವು ಲೋನ್ ಪಾವತಿ ಮಾಡುವ ಅವಧಿಯಲ್ಲಿ 5 ಸಾರಿ ಟಾಪ್ ಅಪ್ ಪಡೆಯಬಹುದು.

ಹೋಮ್ ಲೋನ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

1. ಅಪ್ಲಿಕೇಶನ್ ಫಾರ್ಮ್
2. ಆಧಾರ್ ಕಾರ್ಡ್
3. ಐಡಿ ಪ್ರೂಫ್
4. ವಾಸಸ್ಥಳ ದೃಢೀಕರಣ ಪತ್ರ
5. 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
6. ಪರ್ಸನಲ್ ಆಸ್ತಿ ಘೋಷಣೆ
7. ಆಸ್ತಿ ದಾಖಲೆ
8. ಸ್ಯಾಲರಿ ಸರ್ಟಿಫಿಕೇಟ್
9. ಫಾರ್ಮ್ 16
10. ಎರಡು ವರ್ಷಗಳ ಐಟಿ ರಿಟರ್ನ್ಸ್
11. ಬ್ಯುಸಿನೆಸ್ ಅಡ್ರೆಸ್
12. ಮುಂದಿನ ಆದಾಯ ತೆರಿಗೆ ಪಾವತಿ ಬಗ್ಗೆ ದೃಢೀಕರಣ.

New RBI Rules for Loans: ಬ್ಯಾಂಕ್ ನಲ್ಲಿ ಸಾಲ ಮಾಡಿ ಸಾಲ ತೀರಿಸಲು ಕಷ್ಟ ಪಡುತ್ತಿದ್ದರೆ ಚಿಂತೆ ಬಿಟ್ಟುಬಿಡಿ, ಮೊದಲು RBI ನ ಈ ಹೊಸ ರೂಲ್ಸ್ ಅನ್ನು ಇಂದೇ ತಿಳಿಯಿರಿ.

Lists of low-interest home loan-giving banks.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment