Swamy Vivekananda: ಸ್ವಾಮಿ ವಿವೇಕಾನಂದರವರ ಮರಣ ರಹಸ್ಯವೇನು?? ಸ್ವಯಂ ಸಾವನ್ನು ಕರುಣಿಸಿಕೊಂಡ್ರಾ ಯೂಥ್ ಐಕಾನ್!!
ಹೀಗಿರುವಾಗ ಅವರು ಮೃತಪಟ್ಟ 1902 ರ ಜುಲೈ ನಾಲ್ಕರಂದು ವಿವೇಕಾನಂದರು ಮುಂಜಾನೆ ಬೇಗನೆ ಎದ್ದು ಬೇಲೂರು ಮಠದ ಪ್ರಾರ್ಥನ ಮಂದಿರಕ್ಕೆ ಹೋಗಿ ಬರೋಬ್ಬರಿ ಮೂರು ಗಂಟೆಗಳ ಕಾಲ ಧ್ಯಾನ ಮಾಡಿದರು.
Swamy Vivekananda: ಸ್ನೇಹಿತರೆ ಸ್ವಾಮಿ ವಿವೇಕಾನಂದರು ನಮ್ಮ ಭಾರತ ದೇಶದಲ್ಲಿ ಹಿಂದುತ್ವವನ್ನು ಪುನರ್ ಉತ್ತರಿಸಲು ಹರಸಾಹಸ ಪಟ್ಟಿದ್ದಾರೆ. ಅಲ್ಲದೆ ದೇಶದಾದ್ಯಂತ ತನ್ನ ನೆಚ್ಚಿನ ಗುರುವಾದ ರಾಮಕೃಷ್ಣ ಪರಮಹಂಸರವರ ಹೆಸರಿನಲ್ಲಿ ರಾಮಕೃಷ್ಣ ಮಿಷನ್ ಸ್ಥಾಪಿಸಿ ಕೇವಲ ಭಾರತದೇಶ ಮಾತ್ರವಲ್ಲದೆ ಇಡೀ ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಅತ್ಯದ್ಭುತ ಕೆಲಸಗಳನ್ನು ಮಾಡಿದವರು.
ಹೀಗಿರುವಾಗ ಅವರು ಮೃತಪಟ್ಟ 1902 ರ ಜುಲೈ ನಾಲ್ಕರಂದು ವಿವೇಕಾನಂದರು ಮುಂಜಾನೆ ಬೇಗನೆ ಎದ್ದು ಬೇಲೂರು ಮಠದ ಪ್ರಾರ್ಥನ ಮಂದಿರಕ್ಕೆ ಹೋಗಿ ಬರೋಬ್ಬರಿ ಮೂರು ಗಂಟೆಗಳ ಕಾಲ ಧ್ಯಾನ ಮಾಡಿದರು. ತದನಂತರ ವಿವೇಕಾನಂದರು ತಮ್ಮ ಶಿಷ್ಯರಿಗೆ ಶುಕ್ಲ ಯಜುರ್ವೇದ, ಸಂಸ್ಕೃತ ವ್ಯಾಕರಣ, ಯೋಗ ವೇದಾಂತ ಶಾಸ್ತ್ರಗಳನ್ನು ಬೋಧಿಸಿದರು. ಅನಂತರ ಯಾರು ಮಾತನಾಡಿಸಬೇಡಿ ಎಂದು ತನ್ನ ಶಿಷ್ಯನಿಗೆ ಹೇಳಿ ಸಂಜೆ 7:00 ಗೆ ಹೋಗಿ ಮತ್ತೆ ಜ್ಞಾನದಲ್ಲಿ ಕುಳಿತರು. ಹೀಗೆ ಧ್ಯಾನಮಾಡುತ್ತಾ 9 ಗಂಟೆ 20 ನಿಮಿಷಕ್ಕೆ ಸ್ವಾಮಿ ವಿವೇಕಾನಂದರು ಕೊನೆಯುಸಿರೆಳೆದರು.
ಮಠದಲ್ಲಿ ಇರುವವರೆಲ್ಲರೂ ವಿವೇಕಾನಂದರು ಮಹಾಸಮಾಧಿ ಹೊಂದಿದರೂ ಎಂದು ವಾದಿಸಿದರೆ, ಇತ್ತಾ ವೈದ್ಯರು ಅಪಾರ ಜ್ಞಾನಭಂಡಾರವನ್ನು ತುಂಬಿಕೊಂಡಿದ್ದಂತಹ ಅವರ ಮೆದುಳು ಹೊಡೆದು ಹೋಗಿ ಸಾ’ವು ಸಂಭವಿಸಿದೆ ಎಂದು ತಿಳಿಸಿದರು. ಹೀಗೆ ವಿವೇಕಾನಂದರು ಮಹಾಸಮಾಧಿ ಹೊಂದುವಂತಹ ಕಾಲದಲ್ಲಿ ಅವರ ಬ್ರಹ್ಮ ರಂಧ್ರಗಳ ಮೇಲೆ ಒತ್ತಡ ಬಿದ್ದ ಕಾರಣ ಮೆದುಳುಗಳಲ್ಲಿ ಇರುವಂತಹ ನರಗಳು ಹೊಡೆದು ಅವರು ಸಾವನ್ನಪ್ಪಿದ್ದಾರೆ ಎಂದು ವಿವೇಕಾನಂದ ಶಿಷ್ಯರ ಮಾತಾಗಿದೆ.
ವಯಸ್ಸು 40 ಕಳಿಯದಿದ್ದರೂ ಕೂಡ ಜಗತ್ತಿಗೆ ನೀಡಬೇಕಿದ್ದ ಎಲ್ಲಾ ಬೋಧನೆಗಳನ್ನು ನೀಡಿ ಮಾಡಬೇಕಿದ್ದಂತಹ ಎಲ್ಲಾ ಒಳ್ಳೆಯ ಕಾರ್ಯಗಳನ್ನು ನಿರ್ವಹಿಸಿ ಮಹಾಸಮಾಧಿ ಹೊಂದಿದಂತಹ ಸ್ವಾಮಿ ವಿವೇಕಾನಂದರವರನ್ನು ಬೇಲೂರಿನ ಸಮೀಪ ಇರುವಂತಹ ಗಂಗಾ ನದಿಯ ತೀರದಲ್ಲಿ ಗಂಧದ ಮರಗಳ ತುಂಡುಗಳನ್ನು ಬಳಸಿ ಅಂತ್ಯ ಸಂಸ್ಕಾರ ಮಾಡಲಾಯಿತು. ಇಂತಹ ಮಹಾನ್ ಜ್ಞಾನಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮಾಡಿದ ತಿಳಿಸಿ.
What is the secret of Swami Vivekananda’s death?