Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Aadhaar Card Status: ನಿಮ್ಮ ಆಧಾರ್ ಕಾರ್ಡ್ ಫೇಕ್ ಆಗಿದ್ಯಾ? ಅಥವಾ ಸರಿಯಾಗಿದ್ಯಾ? ಈ ರೀತಿ ಸುಲಭವಾಗಿ ಚೆಕ್ ಮಾಡಿ

ಆದರೆ ನಿಮ್ಮ ಬಳಿ ಇರುವ ಆಧಾರ್ ಕಾರ್ಡ್ ಅಸಲಿಯೋ ನಕಲಿಯೋ ಎಂದು ತಿಳಿದಿರುವುದು ಬಹಳ ಮುಖ್ಯವಾಗುತ್ತದೆ. ಈಗ ಟೆಕ್ನಾಲಜಿ ಎಷ್ಟು ಮುಂದುವರೆದಿದೆ ಎಂದರೆ,

Aadhaar Card Status: ಭಾರತೀಯ ನಾಗರೀಕರ ಬಳಿ ಇರಬೇಕಾದ ಮುಖ್ಯವಾದ ಗುರುತಿನ ಚೀಟಿ ಆಧಾರ್ ಕಾರ್ಡ್. ಯುಐಡಿಎಐ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ನೋಡಿಕೊಳ್ಳುತ್ತದೆ. ಪ್ರತಿ ವ್ಯಕ್ತಿಗೆ 12 ಸಂಖ್ಯೆಗಳ ಬೇರೆ ಬೇರೆ ಆಧಾರ್ ನಂಬರ್ ಅನ್ನು ನೀಡಲಾಗಿದೆ. ಈಗ ನಮ್ಮ ಯಾವುದೇ ಕೆಲಸವು ಆಧಾರ್ ಇಲ್ಲದೇ ನಡೆಯುವುದಿಲ್ಲ. ಸರ್ಕಾರಕ್ಕೆ ಸಂಬಂಧಿಸಿದ ಕೆಲಸ, ಬ್ಯಾಂಕ್ ವ್ಯವಹಾರ, ಸಿಮ್ ಖರೀದಿ ಹೀಗೆ ಸಣ್ಣ ಕೆಲಸದಿಂದ ದೊಡ್ಡ ಕೆಲಸವರೆಗು ಎಲ್ಲದಕ್ಕೂ ಆಧಾರ್ ಕಾರ್ಡ್ ಬೇಕೇ ಬೇಕು..

ಆಧಾರ್ ಕಾರ್ಡ್ ಅಸಲಿಯೋ ನಕಲಿಯೋ?

ಆದರೆ ನಿಮ್ಮ ಬಳಿ ಇರುವ ಆಧಾರ್ ಕಾರ್ಡ್ ಅಸಲಿಯೋ ನಕಲಿಯೋ ಎಂದು ತಿಳಿದಿರುವುದು ಬಹಳ ಮುಖ್ಯವಾಗುತ್ತದೆ. ಈಗ ಟೆಕ್ನಾಲಜಿ ಎಷ್ಟು ಮುಂದುವರೆದಿದೆ ಎಂದರೆ, ಯಾವುದನ್ನು ಬೇಕಾದರೂ ಫೇಕ್ ಮಾಡಬಹುದು. ಹಾಗಾಗಿ ನಿಮ್ಮ ಆಧಾರ್ ಕಾರ್ಡ್ ಸರಿಯಾಗಿದೆಯಾ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಒಂದು ವೇಳೆ ನೀವು ಕೂಡ ನಿಮ್ಮ ಬಳಿ ಇರುವ ಆಧಾರ್ ಕಾರ್ಡ್ ಅಸಲಿನಾ ಅಥವಾ ನಕಲಿನಾ ಎಂದು ತಿಳಿಯಬೇಕು ಎಂದರೆ ಈ ರೀತಿ ಮಾಡಿ..

ಆಧಾರ್ ಕಾರ್ಡ್ ಫೇಕ್ ಇರಬಹುದಾ? ತಿಳಿಯುವ ವಿಧಾನ:

1. ಮೊದಲಿಗೆ ಯುಐಡಿಎಐ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ myaadhaar.uidai.gov.in/verifyAadhaar

2. ನಿಮ್ಮ ಆಧಾರ್ ಕಾರ್ಡ್ ನಂಬರ್ ಇಂದ ಈ ವೆಬ್ಸೈಟ್ ಗೆ Login ಆಗಬೇಕು.

3. ಈಗ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಗೆ ಒಂದು ಓಟಿಪಿ ಬರುತ್ತದೆ, ಅದನ್ನು ಎಂಟರ್ ಮಾಡಿ.

4. Login ಆದ ನಂತರ E services ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

5. ಈಗ ಇನ್ನಷ್ಟು ಆಯ್ಕೆಗಳನ್ನು ನೋಡುತ್ತೀರಿ, ಅದರಲ್ಲಿ Verify Aadhar Number ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

6. ಈಗ ನೀವು ಇನ್ನೊಂದು ಸಾರಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ಎಂಟರ್ ಮಾಡಬೇಕಾಗುತ್ತದೆ.

7. ಈಗ ಇನ್ನೊಂದು ಹೊಸ ಪೇಜ್ ಓಪನ್ ಆಗುತ್ತದೆ, ಅಲ್ಲಿ ಬರುವ ಮಾಹಿತಿಯನ್ನು ನೋಡಿದರೆ ನಿಮ್ಮ ಆಧಾರ್ ಕಾರ್ಡ್ ಅಸಲೀನಾ ಅಥವಾ ನಕಲಿನಾ ಎಂದು ಗೊತ್ತಾಗುತ್ತದೆ.

ನಿಮ್ಮ ಹತ್ತಿರ ಇರುವ ಆಧಾರ್ ಕಾರ್ಡ್ ಮತ್ತು ಬೇರೆ ಮಾಹಿತಿಗಳು ಅಕಸ್ಮಾತ್ ನಕಲಿ ಆಗಿದ್ಯಾ ಎಂದು ಚೆಕ್ ಮಾಡಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ಎಲ್ಲಾ ದಾಖಲೆಗಳ ಪರಿಶೀಲನೆ ಮಾಡುವುದು ನಿಮಗೆ ಒಳ್ಳೆಯದು.

Is your Aadhaar card fake? Or right? Check easily like this.

Leave a comment