ಬಾಳೆದಿಂಡಿನ ಹೊಸ ರೆಸಿಪಿ ಮಕ್ಕಳು ದೊಡ್ಡವರು ಎಲ್ಲರೂ ಇಷ್ಟಪಡುವ ಬ್ರೇಕ್ ಫಾಸ್ಟ್ ಮಾಡುವ ಸುಲಭ ವಿಧಾನ.
Banana stem recipe : ಬಾಳೆದಿಂಡು ಅಥವಾ ಬಾಳೆಕಂದು ನಿಂದ ಪಲ್ಯ ಗೊಜ್ಜು ಸಾಂಬಾರ್ ಈ ಎಲ್ಲವೂ ನಮಗೆ ತಿಳಿದೇ ಇದೆ. ಆದರೆ ಇಲ್ಲಿ ತಿಳಿಸಿಕೊಡುವಂತಹ ಹೊಸ ರೆಸಿಪಿ ಏನು ಎಂದರೆ ಬಾಳೆ ದಿಂಡಿನಿಂದ ಮಾಡುವಂತಹ ದೋಸೆ ಸಾಮಾನ್ಯವಾಗಿ ದೋಸೆಯನ್ನು ಉದ್ದಿನಬೇಳೆಯನ್ನು ಬಳಸಿ ಮಾಡುವುದು ಹವ್ಯಾಸವಾಗಿದೆ. ಆದರೆ ಈ ರೀತಿ ಒಮ್ಮೆ ಮಾಡಿ ನೋಡಿ ಮನೆಯಲ್ಲಿ ಎಲ್ಲರಿಗೂ ಸಹ ಇಷ್ಟವಾಗುವಂತಹ ಒಂದು ರೆಸಿಪಿಯಾಗಿದೆ. ಅಷ್ಟೇ ಅಲ್ಲದೆ ಚಿಕ್ಕವರು ದೊಡ್ಡವರಾಗಲಿ ಎಲ್ಲರೂ ಸಹ ಇಷ್ಟಪಟ್ಟು ತಿನ್ನುತ್ತಾರೆ. ಹಾಗಾದರೆ ಬಾಳೆದಿಂಡಿನ ದೋಸೆಯನ್ನು ಹೇಗೆ ತಯಾರಿಸಬೇಕು ಎಂಬುದನ್ನು ನೋಡೋಣ ಬನ್ನಿ.
ಮೊದಲಿಗೆ ಒಂದು ತುಂಡಿನಷ್ಟು ಬಾಳೆ ಕಂದನ್ನು ತೆಗೆದುಕೊಳ್ಳಬೇಕು. ಅದನ್ನು ಬಾಳೆ ಕಂದಿನ ಎಳೆ ಬರುವವರೆಗೂ ಸಿಪ್ಪೆಯನ್ನು ಬಿಡಿಸುತ್ತಲೇ ಇರಬೇಕು
ನಂತರ ಅದನ್ನು ಸಣ್ಣ ಸಣ್ಣ ಹೋಳುಗಳನ್ನಾಗಿ ಕತ್ತರಿಸಿಕೊಳ್ಳಬೇಕು.
ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿಕೊಂಡು ಮೂರು ಚಮಚ ದನಿಯಾ ಒಂದುವರೆ ಚಮಚ ಜೀರಿಗೆ ಐದರಿಂದ ಆರು ಬ್ಯಾಡಿಗೆ ಮೆಣಸಿನಕಾಯಿ ಒಂದು ಚೂರು ಬೆಲ್ಲ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಒಂದು ಮೀಡಿಯಂ ಸೈಜ್ ಈರುಳ್ಳಿಯನ್ನು ನಂತರ ಸ್ವಲ್ಪ ಹುಣಸೆ ಹಣ್ಣನ್ನು ಹಾಕಿ ಮೊದಲು ಒಂದು ರೌಂಡ್ ರುಬ್ಬಿಕೊಳ್ಳಬೇಕು.
ನಂತರ ಅದರೊಳಗೆ ಮೂರು ಕಪ್ ನಷ್ಟು ದೋಸೆ ಅಕ್ಕಿಯನ್ನು ಹಾಕಿ ಮೆದುವಾಗಿ ರುಬ್ಬಿಕೊಳ್ಳಬೇಕು. ಈ ರೀತಿ ರುಬ್ಬಿಕೊಂಡ ನಂತರ ಅದಕ್ಕೆ ಉದ್ದಿನ ದೋಸೆಗೆ ಯಾವ ರೀತಿ ನೀರು ಹಾಕುತ್ತಿರೋ ಅದಕ್ಕಿಂತ ಸ್ವಲ್ಪ ತೆಳ್ಳಗೆ ನೀರನ್ನು ಹಾಕಿಕೊಳ್ಳಬೇಕು. ಇದನ್ನು ಕಾದ ಎಂಚಿನ ಮೇಲೆ ದೋಸೆಯ ರೀತಿ ಹಾಕಿ ಎರಡರಿಂದ ಮೂರು ನಿಮಿಷಗಳ ಕಾಲ ಬೇಯಿಸಿಕೊಂಡರೆ ಸಾಕು ಯಾವುದೇ ತಳ ಹಿಡಿಯದೆ ಗರಿಗರಿಯಾಗಿ ದೋಸೆಯು ಬರುತ್ತದೆ.
ಅಷ್ಟೇ ಅಲ್ಲದೆ ನೀವು ಅದರೊಳಕ್ಕೆ ಮತ್ತಷ್ಟು ನೀರನ್ನು ಸೇರಿಸಿ ನೀರ್ದೋಸೆಯ ರೀತಿ ಸಹ ಇದನ್ನು ಮಾಡಿಕೊಳ್ಳಬಹುದು. ಅದು ಸಹ ತುಂಬಾ ಗರಿಗರಿಯಾಗಿ ಬರುತ್ತದೆ ಅದರೊಳಗೆ ಅತಿ ಹೆಚ್ಚಿನದಾಗಿ ಅಕ್ಕಿ ಮತ್ತು ಧನಿಯಾ ಈ ರೀತಿ ಬಳಸಿರುವುದರಿಂದ ಬಾಳೆದಿಂಡಿನಿಂದ ಮಾಡಿದ್ದಾರೆ ಎಂದು ಗೊತ್ತಾಗುವುದಿಲ್ಲ ಅಷ್ಟು ಚೆನ್ನಾಗಿರುತ್ತೆ. ಅಷ್ಟೇ ಅಲ್ಲದೆ ವರ್ಷಕ್ಕೊಮ್ಮೆ ಬಾಳೆ ದಿಂಡಿನ ರೆಸಿಪಿಯನ್ನು ತಿನ್ನುವುದರಿಂದ ಅದರಲ್ಲಿ ಅತಿ ಹೆಚ್ಚಿನದಾಗಿ ಫೈಬರ್ ಇರುತ್ತದೆ . ಇದು ಕಿಡ್ನಿ ಸ್ಟೋನ್ ಅನ್ನು ಕೂಡ ಬರೆದಂತೆ ತಡೆಯುತ್ತದೆ. ಡಯಾಬಿಟಿಸ್ ಪೇಷಂಟ್ ಗಳಿಗೆ ಇದು ಮಾಡಿಸಿದಂತಹ ರಾಮಬಾಣವಾಗಿದೆ.
ಬಾಳೆದಿಂಡಿನ ದೋಸೆ ಮಾಡುವ ವಿಧಾನ.ವಿಡಿಯೋ