Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಜಮೀನುಗಳಿಗೆ ರಸ್ತೆ ಭಾಗ್ಯ ಘೋಷಣೆ, ಈ ರೀತಿ ಮಾಡಿ ಸಾಕು.

Government schemes for farmers: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿ ಆಗಿರುವ ಸಿಎಂ ಸಿದ್ದರಾಮಯ್ಯನವರು ನಮ್ಮವಲ ನಮ್ಮ ರಸ್ತೆ ಯೋಜನೆ ಅಡಿಯಲ್ಲಿ ಯಾರ ಜಮೀನುಗಳಿಗೆ ರಸ್ತೆ ಭಾಗ್ಯ ಇಲ್ಲವೋ ಅಂತಹ ರೈತರುಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ಇಂದಲೇ ಅಂತಹ ಜಮೀನುಗಳಿಗೆ ವಾಹನಗಳು ಸಂಚಾರ ಮಾಡಲು ರಸ್ತೆ ಓಡಾಡಲು ಅವಕಾಶ ಮಾಡಿಕೊಟ್ಟಿದೆ.

ಕರ್ನಾಟಕ ರಾಜ್ಯದಲ್ಲಿ ಇರುವ ಎಲ್ಲಾ ರೈತರಿಗೆ ಇದೊಂದು ಒಳ್ಳೆಯ ಸುವರ್ಣ ಅವಕಾಶವಾಗಿದ್ದು ರೈತರು ತಮ್ಮ ಜಮೀನುಗಳಿಗೆ ಹೋಗಲು ಬರಲು ಬೇರೆಯವರ ಜಮೀನುಗಳ ಮೇಲೆ ಹೋಗಬೇಕಾಗಿತ್ತು. ಆದರೆ ಅಕ್ಕ ಪಕ್ಕದ ಜಮೀನಿನ ಮಾಲೀಕರ ಕಿರಿಕಿರಿಯಿಂದಾಗಿ ಎಷ್ಟೋ ಜನ ರೈತರು ಎಂದಿಗೂ ಕೂಡ ತಮ್ಮ ಜಮೀನುಗಳಿಗೆ ಸರಿಯಾದ ರೀತಿಯ ರಸ್ತೆ ಮಾರ್ಗ ಇಲ್ಲದೆ ಅಕ್ಕ-ಪಕ್ಕದ ಜಮೀನಿನ ಮೇಲೆ ಹೋಗಬೇಕಾಗುತ್ತದೆ.

ಆದರೆ ಇನ್ನು ಮುಂದೆ ಪ್ರತಿಯೊಬ್ಬ ರೈತನ ಕೂಡ ಯಾವ ಮೂಲಾಜು ಇಲ್ಲದೆ ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಅಡಿಯಲ್ಲಿ ಬರೋಬ್ಬರಿ 23 ಅಡಿಗಳ ರಸ್ತೆಯನ್ನು ಮಾಡಿಸಿಕೊಂಡು ಓಡಾಡುವ ಸುವರ್ಣ ಅವಕಾಶ ರೈತರಿಗೆ ಇದಾಗಿದೆ. ನೀವು ಕೂಡ ನಿಮ್ಮ ಹೊಲ ಜಮೀನುಗಳಿಗೆ ಹೋಗಲು ಬರಲು ಸರಿಯಾದ ರೀತಿಯ ರಸ್ತೆ ಮಾರ್ಗ ಇಲ್ಲವಾದರೆ ಸರ್ಕಾರದಿಂದ ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಅಡಿಯಲ್ಲಿ ಹೇಗೆ ನೀವು ಫಲಾನುಭವಿಗಳಾಗಬಹುದು ಮತ್ತು ಅದಕ್ಕೆ ಬೇಕಾಗಿರುವ ದಾಖಲೆಗಳು ಏನು ಮತ್ತು ಹೇಗೆ ಸಲ್ಲಿಸುವುದು ಎಂದು ಸಂಪೂರ್ಣವಾಗಿ ತಿಳಿಯಿರಿ.

ಮೊದಲಿಗೆ ನೀವು ನಿಮಗೆ ರಸ್ತೆ ಇಲ್ಲದಿರುವುದಾಗಿ ಒಂದು ಅರ್ಜಿಯನ್ನು ಬರೆದು ನಿಮ್ಮ ಗ್ರಾಮ ಪಂಚಾಯಿತಿಗೆ ಕೊಟ್ಟರೆ ಅದನ್ನು ಪರಿಶೀಲನೆ ಮಾಡಿ ನಿಮ್ಮ ಹೊಲಕ್ಕೆ ಹೋಗಲು ದಾರಿ ಮಾಡಿಕೊಡಲಾಗುತ್ತದೆ. ನಿಮ್ಮ ಜಮೀನಿನ ಸರ್ವೆ ನಂಬರ್ ನಿಮ್ಮ ಜಮೀನಿನ ಉದ್ದಳತೆ ಹಾಗೂ ನಿಮ್ಮ ಜಮೀನಿಗೆ ಸಂಬಂಧಪಟ್ಟ ಎಲ್ಲ ದಾಖಲೆ ವಿವರಗಳನ್ನು ನೀವು ಅಲ್ಲಿ ಬರೆಯಬೇಕು.

ಇದಾದ ನಂತರ ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ನಿಮ್ಮ ಅರ್ಜಿಯನ್ನು ಪರಿಶೀಲನೆ ಮಾಡಿ ಇದಕ್ಕೆ ಅನುಮೋದನೆ ಕೊಡಲಾಗುತ್ತದೆ. ಇದನ್ನು ವಾರ್ಷಿಕ ಯೋಜನೆಯ ಅಡಿಯಲ್ಲಿ ಗ್ರಾಮ ಪಂಚಾಯಿತಿ ಸೇರಿಸುತ್ತದೆ. ಆ ಮೂಲಕವಾಗಿ ನಿಮಗೆ ಅನುದಾನ ನೀಡುವುದರ ಬಗ್ಗೆ ಚರ್ಚೆ ಮಾಡಲಾಗುತ್ತದೆ. ನಂತರ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಿ ನಿಮ್ಮ ರಸ್ತೆಗೆ ಹೋಗಲು ಬರಲು ಎಷ್ಟು ಹಣ ಖರ್ಚಾಗುತ್ತದೆ ಎಂದು ಪರಿಶೀಲನೆ ಮಾಡಿ ಅದನ್ನು ನಿಮಗೆ ಮಂಜೂರು ಮಾಡಲಾಗುತ್ತದೆ.

ನಂತರ ಇಷ್ಟೆಲ್ಲಾ ಆದಮೇಲೆ ಗ್ರಾಮ ಪಂಚಾಯಿತಿಯಿಂದ ಒಬ್ಬ ವ್ಯಕ್ತಿ ಬಂದು ನಿಮ್ಮ ಜಮೀನನ್ನು ಅಳತೆ ಮಾಡಿ ಅದಕ್ಕೆ ಬೇಕಾಗುವ ಕೂಲಿ ಕೆಲಸರ ಸಂಖ್ಯೆ ಜೊತೆಗೆ ಬೇಕಾಗುವ ಎಲ್ಲಾ ಸಾಮಗ್ರಿಗಳ ಲೆಕ್ಕವನ್ನು ಬರೆದುಕೊಳ್ಳುತ್ತಾರೆ. ಇಂತಹ ಕೆಲಸಗಳನ್ನು ಮಾಡಲು ಸಾಮಾನ್ಯವಾಗಿ ಜಾಬ್ ಕಾರ್ಡ್ ಇರುವ ಕೂಲಿ ಕೆಲಸಗಾರರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಇನ್ನು ರಸ್ತೆಗೆ ಬೇಕಾಗುವ ಎಲ್ಲ ವಸ್ತುಗಳನ್ನು ಯಂತ್ರಗಳ ಮೂಲಕ ಕತ್ತರಿಸಿಕೊಳ್ಳಲಾಗುತ್ತದೆ. ನೀವೇನಾದರೂ ನಿಮ್ಮ ಜಮೀನುಗಳಿಗೆ ರಸ್ತೆ ಇಲ್ಲದಿದ್ದರೆ ನೀವು ನಿಮ್ಮ ಊರಿನ ಗ್ರಾಮ ಪಂಚಾಯಿತಿಗಳಿಗೆ ತೆರಳಿ ಅವರು ಕೇಳುವ ಎಲ್ಲಾ ದಾಖಲೆಗಳನ್ನು ಕೊಟ್ಟು ರಸ್ತೆ ಮಾಡಿಸಿಕೊಳ್ಳಬಹುದಾಗಿದೆ…

Leave a comment