Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Pan Card: ಪಾನ್ ಕಾರ್ಡ್ ಹೆಸರಿನ ಬದಲಾವಣೆ ಆಗಬೇಕಾ? ಆನ್‌ಲೈನ್‌ ಅರ್ಜಿ ಹಾಕುವುದು ಹೇಗೆ ?

ಮದುವೆಯಾದ ಮಹಿಳೆಯರು ತಮ್ಮ ಹೆಸರು ಹಾಗೂ ವಿಳಾಸವನ್ನು ಬದಲಿಸಿಕೊಳ್ಳುತ್ತಾರೆ. ಆಗ ಬದಲಾವಣೆಯ ಅರ್ಜಿ ಹಾಕಬಹುದು. ಗಂಡನ ಹೆಸರನ್ನು ಸೇರಿಸಬೇಕಾಗುತ್ತದೆ.

Pan Card: ಪ್ಯಾನ್ ಕಾರ್ಡ್‌ನಲ್ಲಿ ಕೆಲವೊಮ್ಮೆ ಹೆಸರು ತಪ್ಪಾಗಿ ಇರುತ್ತದೆ ಅಥವಾ ಕೆಲವು ಕಾರಣಗಳಿಗಾಗಿ ನೀವು ನಿಮ್ಮ ಹೆಸರನ್ನು ಬದಲಾಯಿಸಬೇಕಾಗುತ್ತದೆ. ಅಂತಹ ಹಲವು ಸಂದರ್ಭಗಳಲ್ಲಿ ನಾವು ಹಲವು ಕಚೇರಿಗೆ ಭೇಟಿ ನೀಡಬೇಕಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ನಾವು ಕುಳಿತಲ್ಲಿಯೇ ಎಲ್ಲ ಸರಕಾರಿ ಸೇವೆಗಳನ್ನು ನಾವು ಇದ್ದಲ್ಲಿ ಪಡೆಯಬಹುದು. ಹೇಗೆ ಎಂದು ಯೋಚಿಸುತ್ತಿದ್ದೀರಾ ? ಹಾಗಾದರೆ ಈ ಲೇಖನ ನೋಡಿ.

ಆನ್ಲೈನ್ ಅರ್ಜಿ ಹಾಕುವುದು ಹೇಗೆ? (Pan Card)

1.ಮೊದಲನೆಯದಾಗಿ, ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ಹೋಗಿ.
2. “ಆನ್‌ಲೈನ್ ಸೇವೆಗಳು” ಟ್ಯಾಬ್ ಆಯ್ಕೆ ಮಾಡಿ
3. “PAN ಸೇವೆಗಳು” ಅಡಿಯಲ್ಲಿ, “PAN ಕಾರ್ಡ್ ಮರುಮುದ್ರಣ/ತಿದ್ದುಪಡಿ/ವಿಳಾಸ ಬದಲಾವಣೆಗಾಗಿ ವಿನಂತಿ” ಗೆ ಹೋಗಿ.
4. “ಆನ್‌ಲೈನ್‌ನಲ್ಲಿ ಅನ್ವಯಿಸು” ಆಯ್ಕೆ ಮಾಡಿ.
5.ಈಗ, ನಿಮ್ಮ ಪ್ಯಾನ್ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಲಿಂಗವನ್ನು ನಮೂದಿಸಿ.
6. ‘i am not a robot ‘ ಎಂದು ಕಾಣಿಸುತ್ತದೆ . ಅಲ್ಲಿ ಕ್ಲಿಕ್ ಮಾಡಿ
7. ನಂತರ ನಿಮ್ಮ ಈಗಿನ ಪಾನ್ ಕಾರ್ಡ್ ಹೆಸರನ್ನು ನಮೂದಿಸಿ
8. ಹೊಸದಾಗಿ ಸೇರಿಸುವ ಹೆಸರಿನ ವಿವರ ಅಥವಾ ವಿಳಾಸ ಹುಟ್ಟಿದ ದಿನಾಂಕ ಎಲ್ಲವನ್ನೂ ನಮೂದಿಸಿ
9. ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ

ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ (income tax department ) ನಿಮ್ಮ ಅರ್ಜಿಯನ್ನು ಪರಿಶೀಲಿಸಿ , ನಿನಗೆ ಹೊಸ ಪಾನ್ ಕಾರ್ಡ್ ನೀಡುತ್ತದೆ.

ಪಾನ್ ಕಾರ್ಡ್ ಬದಲಾಯಿಸಲು ಕೊಡಬಹುದಾದ ಕಾರಣಗಳು ;-

1. ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಎರಡು ಹೆಸರು ಒಂದೇ ಇರಬೇಕು ಎಂಬ ನಿಯಮ ಇದೆ. ಕೆಲವೊಮ್ಮೆ ಎರಡು ದಾಖಲೆಗಳಲ್ಲಿ ಇರುವ ಹೆಸರು ವ್ಯತ್ಯಾಸ ಇರುತ್ತದೆ. ಅಂತಹ ಸಂದರ್ಭದಲ್ಲಿ ಹೊಸ ಪಾನ್ ಕಾರ್ಡ್ ಗೆ ಅರ್ಜಿ ಹಾಕಬಹುದು.
2. ಮದುವೆಯಾದ ಮಹಿಳೆಯರು ತಮ್ಮ ಹೆಸರು ಹಾಗೂ ವಿಳಾಸವನ್ನು ಬದಲಿಸಿಕೊಳ್ಳುತ್ತಾರೆ. ಆಗ ಬದಲಾವಣೆಯ ಅರ್ಜಿ ಹಾಕಬಹುದು. ಗಂಡನ ಹೆಸರನ್ನು ಸೇರಿಸಬೇಕಾಗುತ್ತದೆ.
3.ಡೈವೋರ್ಸ್ ತೆಗೆದುಕೊಂಡವರು ಹೆಸರು ಮತ್ತು ಊರಿನ ಬದಲಾವಣೆ ಹಾಗೂ ಪತಿಯ ಹೆಸರನ್ನು ಕಾರ್ಡ್ ಇಂದ ತೆಗೆಸಲು ಅರ್ಜಿ ಹಾಕಬಹುದು.
4.ಕೆಲವರಿಗೆ ನಮಗೆ ತಂದೆ ತಾಯಿ ಇಟ್ಟಿರುವ ಹೆಸರು ಇಷ್ಟ ಇರುವುದಿಲ್ಲ . ಅಂತವರು ತಮ್ಮ ಹೆಸರನ್ನು ಚೇಂಜ್ ಮಾಡುವ ಅಭಿಲಾಷೆ ಹೊಂದಿರುತ್ತಾರೆ. ಅಂತವರು ಕೋರ್ಟ್ ಆರ್ಡರ್ ( court order ) ನೀಡಿ ಹೆಸರನ್ನು ಬದಲಾಯಿಸಿಕೊಳ್ಳಬಹುದು.

ಹೆಸರನ್ನು ಬದಲಾಯಿಸಲು ಸಲ್ಲಿಸಬೇಕಾದ ದಾಖಲೆ ಮತ್ತು ಶುಲ್ಕದ ವಿವರ :-

1) ನಿಮ್ಮ ಮೂಲ ಪಾನ್ ಕಾರ್ಡ್ ನಂಬರ್ ಹಾಗೂ ಹೆಸರು
2) ಆಧಾರ್ ಕಾರ್ಡ್ ನಂಬರ್
3) ಮೊಬೈಲ್ ಸಂಖ್ಯೆ
4) ಹೆಸರಿನ ಬದಲಾವಣೆಗೆ ಬೇಕಾದ ದಾಖಲೆ :- ಅಂದರೆ ಡೈವೋರ್ಸ್ ಪ್ರತಿ , ಮದುವೆಯ ರಿಜಿಸ್ಟರ್ ಕಾಪಿ (marriage rigister copy )
5) 100 ರೂಪಾಯಿಯ ಶುಲ್ಕದ ಮೊತ್ತ.

Leave a comment