Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Kalika Bhagya Scholarship 2024: ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕಲಿಕಾ ಭಾಗ್ಯ ಯೋಜನೆಯಲ್ಲಿ ಸಿಗಲಿದೆ 75,000 ವಿಧ್ಯಾರ್ಥಿ ವೇತನ

ಬಿಎಸ್ಸಿ ನರ್ಸಿಂಗ್ ಅಥವಾ ಜಿಎನ್ಎಂ ಅಥವಾ ಎಂ ಎನ್ ಎಂ ಅಥವಾ ಪ್ಯಾರಾ ಮೆಡಿಕಲ್ ಓದುತ್ತಿರುವ ಮಕ್ಕಳಿಗೆ 40,000 ರೂಪಾಯಿ

Kalika Bhagya Scholarship 2024: ಕಾರ್ಮಿಕರ ಮಕ್ಕಳ ಜೀವನಕ್ಕೆ ಸಹಾಯ ಆಗುವ ದೃಷ್ಟಿಯಿಂದ ಸರಕಾರವು ಕಾರ್ಮಿಕ ಮಕ್ಕಳ ಉನ್ನತ ವಿಧ್ಯಾಭ್ಯಾಸಕ್ಕೆ 5,000 ರೂಪಾಯಿ ಇಂದ 50,000 ರೂಪಾಯಿಗಳ ವರೆಗೆ ಸ್ಕಾಲರ್ಶಿಪ್ ನೀಡಲು ಮುಂದಾಗಿದೆ. ಈ ಸ್ಕಾಲರ್ಶಿಪ್ ಕಟ್ಟಡ ಮತ್ತು ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಯೋಜನೆ ಜಾರಿ ಆಗಲಿದೆ. ಈಗಾಗಲೇ ಕಾರ್ಮಿಕ ಕಲ್ಯಾಣ ಇಲಾಖೆಯಲ್ಲಿ ಕಾರ್ಮಿಕ ಕಾರ್ಡ್ ಪಡೆದ ಕಾರ್ಮಿಕರ ಇಬ್ಬರು ಮಕ್ಕಳಿಗೆ ಈ ಸ್ಕಾಲರ್ಶಿಪ್ ಸಿಗಲಿದೆ.

ಮೂರು ವರ್ಷದ ಮಕ್ಕಳಿಂದ ಪಿಎಚ್ಡಿ (PHD) ಓದುತ್ತಿರುವ ವಿದ್ಯಾರ್ಥಿಗಳು ಕಲಿಕಾ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಹಾಗಾದರೆ ಯಾವ ತರಗತಿಗೆ ಏಷ್ಟು ಸ್ಕಾಲರ್ಶಿಪ್ ಹಣ ಸಿಗುತ್ತದೆ ಎಂದು ತಿಳಿಯೋಣ.

ವಿದ್ಯಾರ್ಥಿ ವೇತನದ ಪಟ್ಟಿ ಹೀಗಿದೆ :-

1. ನರ್ಸರಿ ಓದುವ ಮಕ್ಕಳಿಗೆ 5,000 ರೂಪಾಯಿ

2. ಒಂದರಿಂದ ನಾಲ್ಕನೇ ತರಗತಿ ಓದುವ ಮಕ್ಕಳಿಗೆ ( 1st standard to 4th standard) 5,000 ರೂಪಾಯಿ

3. ಐದನೇ ತರಗತಿಯಿಂದ ಎಂಟನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ( 5th to 8th standard students ) 8,000 ರೂಪಾಯಿ

4. ಒಂಬತ್ತು ಮತ್ತು ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ( 9th and 10th standard students ) 12,000 ರೂಪಾಯಿ

5. ಪಿಯುಸಿ ವಿದ್ಯಾರ್ಥಿಗಳಿಗೆ 15,000 ರೂಪಾಯಿ

6. ಪಾಲಿಟೆಕ್ನಿಕ್ ಅಥವಾ ಡಿಪ್ಲೊಮಾ ಅಥವಾ ಐಟಿಐ ಓದುವ ವಿದ್ಯಾರ್ಥಿಗಳಿಗೆ 20,000 ರೂಪಾಯಿ

7. ಬಿಎಸ್ಸಿ ನರ್ಸಿಂಗ್ ಅಥವಾ ಜಿಎನ್ಎಂ ಅಥವಾ ಎಂ ಎನ್ ಎಂ ಅಥವಾ ಪ್ಯಾರಾ ಮೆಡಿಕಲ್ ಓದುತ್ತಿರುವ ಮಕ್ಕಳಿಗೆ 40,000 ರೂಪಾಯಿ

8. ಡಿ ಎಡ್ (D.ed) ಓದುತ್ತಿರುವವರಿಗೆ 25,000 ರೂಪಾಯಿ

9. ಬಿ.ಎಡ್ (B.ed) ಓದುವ ವಿದ್ಯಾರ್ಥಿಗಳಿಗೆ 35,000 ರೂಪಾಯಿ

10. ಯಾವುದೇ ಪದವಿ ಓದುವ ವಿದ್ಯಾರ್ಥಿಗೆ ಪ್ರತಿ ವರುಷ 25,000 ರೂಪಾಯಿ

11.ಎಲ್. ಎಲ್. ಬಿ ಅಥವಾ ಎಲ್.ಎಲ್. ಎಂ ಓದುತ್ತಿರುವವರಿಗೆ 30,000 ರೂಪಾಯಿ

12. ಮಾಸ್ಟರ್ ಡಿಗ್ರಿ ವಿದ್ಯಾರ್ಥಿಗಳಿಗೆ (MBA, MCOM, MSC, MCA, CA , CS, CMA etc.. ) 35,000 ರೂಪಾಯಿ

13. ಇಂಜಿನಿಯರ್ ಡಿಗ್ರೀ ಗೆ 50,000 ರೂಪಾಯಿ

14. M.tech ಅಥವಾ ಸಮನಾದ ಉನ್ನತ ಶಿಕ್ಷಣ ಓದುತ್ತಿರುವ ವಿದ್ಯಾರ್ಥಿಗಳಿಗೆ 60,000 ರೂಪಾಯಿ

15. ಎಂ. ಡಿ (M.D.) ಓದುತ್ತಿರುವ ವಿದ್ಯಾರ್ಥಿಗಳಿಗೆ 75,000 ರೂಪಾಯಿ

16. ಪಿ.ಹೆಚ್. ಡಿ. ( PHD.) ಓದುತ್ತಿರುವ ವಿದ್ಯಾರ್ಥಿಗಳಿಗೆ 25,000 ರೂಪಾಯಿ

17. ಎಂ. ಫಿಲ್ ಓದುವ ವಿದ್ಯಾರ್ಥಿಗಳಿಗೆ 25,000 ರೂಪಾಯಿ

18. ಐಐಟಿ ಅಂತಹ ಸರಕಾರದ ಮಾನ್ಯತೆ ಪಡೆದ ಕೋರ್ಸ್ ಗಳಿಗೆ ಅಲ್ಲಿನ ಬೋಧನಾ ಶುಲ್ಕ ದ ಮೊತ್ತವನ್ನು ವಿದ್ಯಾರ್ಥಿ ವೇತನ ರೂಪದಲ್ಲಿ ನೀಡುತ್ತಾರೆ.

Kalika Bhagya Scholarship 2024

Leave a comment