Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನೆನೆಸಿದ ಕಡಲೆಕಾಯಿಯ ಆರೋಗ್ಯ ಲಾಭವೇನು ಗೊತ್ತಾ? ತಿಳಿದರೆ ನಿಜಕ್ಕೂ ಇವತ್ತಿನಿಂದಲೆ ತಿನ್ನಲು ಶುರು ಮಾಡುವಿರಿ, ಎಷ್ಟು ಲಾಭಗಳಿವೆ ಗೊತ್ತೇ ಗ್ರೇಟ್ ಅಂತೀರಾ !!

Health benefits of soaked peanuts

ಬಡವರ ಬಾದಾಮಿ ಎಂದೇ ಕರೆಯಲ್ಪಡುವ ನೆಲಗಡೆಯಲ್ಲೆಯಲ್ಲಿ(Peanuts) ಇಷ್ಟೆಲ್ಲಾ ಆರೋಗ್ಯದಾಯಕ ಲಾಭಗಳು(health benefits) ಇದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಹಾಗಿದ್ದರೆ ಅದರಲ್ಲಿ ಅಂತದ್ದು ಏನಿದೆ ಎಂದು ಬನ್ನಿ ತಿಳಿಯೋಣ. ಕಡಲೆಕಾಯಿಯನ್ನು ರಾತ್ರಿ ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಹಾಕ ಬೇಕು, ಒಂದು ಬೌಲ್ ನೀರಿಗೆ ಒಂದು ಮುಷ್ಟಿಯಷ್ಟು ಕಡಲೆ ಬೀಜಗಳನ್ನು ಸೇರಿಸಿ ನೆನಸಿದರೆ ಬೆಳಿಗ್ಗೆ ಅವು ಸ್ವಲ್ಪ ದೊಡ್ಡದಾಗಿ ಮೊಳಕೆ ಬರುತ್ತವೆ ಆಗ ಅವು ತಿನ್ನಲು ಯೋಗ್ಯವಾಗಿ ಇರುತ್ತವೆ. ಮುಂದೆ ಅದರ ಲಾಭ ತಿಳಿಯೋಣ.

Screenshot 20230521 180640
image credited to original source

ನೆಲಗಡಲೆಯನ್ನು ಇತ್ತೀಚೆಗೆ ಕೆಲವು ಆಹಾರ ಪದಾರ್ಥಗಳಲ್ಲಿಯೂ ಕೂಡ ಬಳಸಲಾಗುತ್ತಿದೆ. ಉದಾಹರಣೆಗೆ ಚಿತ್ರಾನ್ನ ಪುಳಿಯೋಗರೆ(lemon rice puliyogare) ಅವಲಕ್ಕಿ ಉಪ್ಪಿಟ್ಟು (upma)ಹೀಗೆ ಬಳಸುವುದರಿಂದ ಅವುಗಳ ರುಚಿ ಮತ್ತಷ್ಟು ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೆ ಇದರಲ್ಲಿ ಅತಿ ಹೆಚ್ಚಿನದಾಗಿ ಕೊಬ್ಬಿನಂಶ ನಾರಿನಂಶ(healthy fiber) ರಂಜಕ ವಿಟಮಿನ್ ಬಿ ಮೆಗ್ನೀಷಿಯಂ(Magnesium) ಇಷ್ಟೆಲ್ಲಾ ಇರುವುದರಿಂದಲೇ ಇದು ಅಷ್ಟು ರುಚಿ ಕೊಡುತ್ತಿದ್ದು ಹಾಗೂ ಆರೋಗ್ಯಕ್ಕೆ ಅಷ್ಟೇ ಒಳ್ಳೆಯದಾಗಿ ಕೆಲಸ ನಿರ್ವಹಿಸುತ್ತದೆ.

ನಿಮ್ಮ ಬ್ಲಡ್ ಗ್ರೂಪ್ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಮತ್ತು ಸ್ವಭಾವವನ್ನು ಹೇಳಬಹುದು! ನಿಮ್ಮ ಬ್ಲಡ್ ಗ್ರೂಪ್ ಯಾವುದು ?? ನೋಡಿ ಇಲ್ಲಿದೆ ಉತ್ತರ !!

ನಮ್ಮ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆಯೇ ಬಾದಾಮಿಯನ್ನು(soaked almonds) ನೆನೆಸಿ ತಿನ್ನುವುದರಿಂದ ಹಲವು ಪ್ರಯೋಜನಗಳಿವೆ ಹಾಗಾದರೆ ನೆಲಗಡಲೆಯನ್ನು ನೆನೆಸಿ ತಿನ್ನುವುದರಿಂದ ಯಾವ ಯಾವ ರೀತಿಯ ಪ್ರಯೋಜನಗಳಿವೆ ಎಂದು ತಿಳಿಯೋಣ. ಮೊದಲನೆಯದಾಗಿ ಜೀರ್ಣಕ್ರಿಯೆ(digestion) ಉತ್ತಮವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ವಯಸ್ಸಿಗೆ ಸಂಬಂಧವಿಲ್ಲದಂತೆಯೇ ಗ್ಯಾಸ್ಟಿಕ್ ಹಾಗೂ ತಿಂದಊಟವು ಜೀರ್ಣವಾಗದೇ ಇರುವುದು ಎಲ್ಲರಲ್ಲೂ ಕಾಣುತ್ತಿದ್ದೇವೆ. ಆದರೆ ನೆಲಗಡಲೆಯನ್ನು ರಾತ್ರಿ ನೆನೆಸಿ ಬೆಳಗ್ಗೆ ಎದ್ದ ತಕ್ಷಣ ತಿನ್ನುವುದರಿಂದ ಎಲ್ಲ ರೀತಿಯ ಜೀರ್ಣ ಸಮಸ್ಯೆಗಳಿಂದ ನಾವು ದೂರವಾಗಿರಬಹುದು.

ಎರಡನೆಯದಾಗಿ ಹೃದಯ ಸಮಸ್ಯೆ ಇತ್ತೀಚೆಗೆ ನಾವು ತಿನ್ನುವ ಆಹಾರ ಎಷ್ಟು ಕಳಪೆಯಾಗಿದೆ ಎನ್ನುವುದು ನಮ್ಮ ನಿಮ್ಮೆಲ್ಲರಿಗೂ ತಿಳಿದಿದೆ. ಆದ್ದರಿಂದಲೇ ಅತಿ ಹೆಚ್ಚಿನದಾಗಿ ಹಾರ್ಟ್ ಅಟ್ಯಾಕ್ ನಾವು ನೋಡುತ್ತಿದ್ದೇವೆ. ಆದರೆ ಈ ನೆನೆಸಿದ ನೆಲಗಡಲೆಯನ್ನು ತಿನ್ನುವುದರಿಂದ ಹೃದಯ ಸಮಸ್ಯೆ ಸರಿ ಹೋಗಿ ರಕ್ತವನ್ನು ಶುದ್ದಿಗೊಳಿಸುತ್ತದೆ.

ಹೋಟೆಲ್ ನಲ್ಲಿ ಗ್ರಾಹಕ ಕೊಟ್ಟ ಟಿಪ್ಸ್ ನಿಂದ ಈ ವ್ಯಕ್ತಿ ಏನು ಮಾಡಿದ್ದಾನೆ ನೋಡಿದ್ರೆ ಶಾಕ್ ಆಗ್ತೀರಾ..!!

ಮೂರನೆಯದಾಗಿ ಬೆನ್ನು ನೋವು ಇತ್ತೀಚಿನ ದಿನಗಳಲ್ಲಿ ನಮ್ಮ ನಿಮ್ಮೆಲ್ಲರಿಗೂ ತಿಳಿದೇಇದೆ. ನಾವು ಕುಳಿತುಕೊಳ್ಳುವ ಬಂಗಿ ಆಗಿರಬಹುದು ಅಥವಾ ಮಲಗಿಕೊಳ್ಳುವ ರೀತಿಯಲ್ಲಿ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ರಾಮಬಾಣವಾಗಿ ನೆಲಗಡಲೆ ಹಾಗೂ ಬೆಲ್ಲವನ್ನು ಮಿಕ್ಸ್ ಮಾಡಿ ತಿನ್ನುವುದರಿಂದ ಬೆನ್ನು ನೋವನ್ನು ನಾವು ದೂರ ಇಡಬಹುದು.

ನಾಲ್ಕನೆಯದಾಗಿ ಕಟ್ಟು ಮಸ್ತಿನ ಮೈಕಟ್ಟು ಇತ್ತೀಚಿನ ಯುವಕರೆಲ್ಲ ಕಟ್ಟು ಮಸ್ತಿನ ಮೈ ಕಟ್ಟು ಬೇಕು ಎಂದು ಹೇಳಿ ಜಿಮ್ ಗೆ ಹೋಗುವುದು ಹಾಗೂ ಅಲ್ಲಿ ಸಿಗುವಂತಹ ಕೆಮಿಕಲ್ ಪ್ರೋಟೀನ್ಸ್ ಅನ್ನು ಬಳಸುತ್ತಿದ್ದಾರೆ. ಅದರ ಬದಲು ರಾತ್ರಿ ನೆನೆಸಿಟ್ಟ ನೆಲಗಡಲೆಯನ್ನು ತಿನ್ನುವುದರಿಂದ ಹಾಗೂ ನೆಲಗಡಲೆಯನ್ನು ಮೊಳಕೆ ಬರಿಸಿ ತಿನ್ನುವುದರಿಂದ ಅದರಲ್ಲಿ ಪ್ರೊಟೀನ್ ನ ಅಂಶ ಹೆಚ್ಚಾಗಿರುವುದರಿಂದ ಮೂಳೆಗಳ ಬೆಳವಣಿಗೆ ಅತಿ ಹೆಚ್ಚಾಗಿ ಇರುತ್ತದೆ. ಅಷ್ಟೇ ಅಲ್ಲದೆ ಇದು ಕ್ಯಾನ್ಸರ್ ಕಣಗಳ ಬೆಳವಣಿಗೆಗೂ ಕೂಡ ತಡೆ ಹಾಕುತ್ತದೆ.Health benefits of soaked peanuts

86f415d273236ff60e6be7d083d0482e
Image credited to original source

 

Leave a comment