Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನೀವೇನಾದರೂ ಮೂರೇ ದಿನಗಳಲ್ಲಿ ಬೆಳ್ಳಗಾಗಬೇಕು ಎಂಬ ಯೋಜನೆಯಲ್ಲಿದ್ದೀರಾ?? ಹಾಗಾದ್ರೆ ಈ ಮೂರೂ ಸಿಂಪಲ್ ಮನೆ ಮದ್ದನ್ನು ಫಾಲೋ ಮಾಡಿ!! ಖಂಡಿತ ಹಾಲಿನಲ್ಲಿ ಸ್ನಾನ ಮಾಡಿದಂತೆ ಹೊಳೆಯುತ್ತಿರುತ್ತೀರಾ!!

ಇತ್ತೀಚಿನ ದಿನಗಳಲ್ಲಿ ಹುಡುಗರಿಗಾಗಲಿ ಅಥವಾ ಹುಡುಗಿಯರಿಗಾಗಲಿ ಯಾರಿಗೆ ತಾನೇ ಬೆಳ್ಳಗೆ ಅಥವಾ ಮೊಡವೆ ಇಲ್ಲದೆ ಇರುವಂತಹ ಮುಖವನ್ನು ಪಡೆಯಲು ಇಷ್ಟ ಇರುವುದಿಲ್ಲ. ಈ ಆಸೆ ನಿಮಗೂ ಏನಾದರೂ ಇದ್ದರೆ ಈ ವಿಷಯ ನಿಮಗಾಗಿಯೇ. ಮನೆಯಲ್ಲಿ ಸಿಂಪಲ್ ಆಗಿ ಮಾಡಬಹುದಾದ ಈ ಒಂದು ಟೋನರ್ ಹಚ್ಚಿದರೆ ಸಾಕು ಮೂರೇ ದಿನಗಳಲ್ಲಿ ನೀವು ಬೆಳ್ಳಗೆ ಹಾಗೂ ಯಾವುದೇ ರೀತಿಯ ಮಡವೆಗಳು ಇಲ್ಲದ ಕಾಂತಿಯುತ ತ್ವಚೆಯನ್ನು ಪಡೆಯಬಹುದಾಗಿದೆ. ಹಾಗಾದ್ರೆ ಅದನ್ನು ತಯಾರಿಸುವುದು ಹೇಗೆ? ಅದಕ್ಕೆ ಬೇಕಾಗುವಂತಹ ವಸ್ತುಗಳು ಯಾವ್ಯಾವು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಮೊದಲಿಗೆ ಐದು ಚಮಚದಷ್ಟು ಹಾಲನ್ನು ತೆಗೆದುಕೊಳ್ಳಬೇಕು, ಹಸಿ ಹಾಲಿನಲ್ಲಿ ವಿಟಮಿನ್ B ಹಾಗೂ ಅತಿ ಹೆಚ್ಚಿನ ಪ್ರೋಟೀನ್ ಇರುತ್ತದೆ. ಅಷ್ಟೇ ಅಲ್ಲದೆ ಇದು ಮುಖವನ್ನು ಹೊಳಪಾಗಿರಲು ಸಹಾಯ ಮಾಡುತ್ತದೆ, ಕಣ್ಣಿನ ಕೆಳಗಡೆ ಪಿಗ್ಮೆಂಟೇಶನ್ ಅಥವಾ ಡಾರ್ಕ್ ಸರ್ಕಲ್ ಇದ್ದಲ್ಲಿ ಅದನ್ನು ರಿಮೂವ್ ಮಾಡಲು ಇದು ತುಂಬಾ ಸಹಾಯಕವಾಗಿದೆ. ನಂತರ ಆ ಹಾಲಿಗೆ ಅಲೋವೆರ ಜೆಲ್ ಅನ್ನು ಹಾಕಿ, ಬಳಸುವ ಅಲೋವೆರಾ ನೈಸರ್ಗಿಕವಾಗಿ ಇದ್ದರೆ ಇನ್ನೂ ಒಳ್ಳೆಯದು.

ಅದು ಪಿಂಪಲ್ಸ್ ಅನ್ನು ರಿಮೋವ್ ಮಾಡೋದು ಅಷ್ಟೇ ಅಲ್ಲದೆ ಗ್ಲೋ ಬರಲು ಸಹಾಯ ಮಾಡುತ್ತದೆ. ಹಾಲು ಹಾಗೂ ಅಲೋವೆರಾ ಮಿಕ್ಸ್ ಮಾಡಿ ಎರಡು ನಿಮಿಷ ಬಿಡಿ. ಏಕೆಂದರೆ ಅಲೋವೆರ ಜೆಲ್ ನಲ್ಲಿ ಇರುವಂತಹ ಅಂಶಗಳು ಹಾಲಿನೊಂದಿಗೆ ಚೆನ್ನಾಗಿ ಬೆರೆಯುತ್ತದೆ. ನಂತರ ಇದಕ್ಕೆ ಒಂದು ವಿಟಮಿನ್ ಇ ಕ್ಯಾಪ್ಸುಲ್ ಅನ್ನು ಹಾಕಿ ವಿಟಮಿನ್ ಇ ಕ್ಯಾಪ್ಸುಲ್ ಬದಲಿಗೆ ನೀವು ಟಿಟ್ರೀ ಆಯಿಲ್ ಇತರ ಯಾವುದೇ ರೀತಿಯ ಆಯಿಲ್ಗಳನ್ನು ನೀವು ಬಳಸಬಹುದು.

ಈ ಆಯಿಲ್ ಮುಖವನ್ನು ಸದಾ ಕಾಲ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ಹಾಲು, ಅಲೋವೆರ ಜೆಲ್, ವಿಟಮಿನ್ ಇ ಕ್ಯಾಪ್ಸುಲ್ ಹಾಕಿ ಸರಿಯಾದ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಎರಡು ನಿಮಿಷಗಳ ಕಾಲ ಅದನ್ನು ಹಾಗೆ ಬಿಟ್ಟು ಅನಂತರ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಕಣ್ಣಿನ ಕೆಳಗಡೆ ಇರುವಂತಹ ಡಾಗ್ ಸರ್ಕಲ್ಸ್ ಕಪ್ಪು ಕಲೆಗಳಲ್ಲಿ ಎಲ್ಲವೂ ಮಾಯವಾಗುತ್ತದೆ.

ಹಾಲು ಅಲೋವೆರ ಜೆಲ್ ವಿಟಮಿನ್ ಇ ಕ್ಯಾಪ್ಸುಲ್ ಜೊತೆಗೆ ಒಂದು ಸ್ಪೂನ್ ಜೇನುತುಪ್ಪವನ್ನು ಬೆರೆಸಿದರೆ ಮುಖವು ಇನ್ನೂ ಕಾಂತಿಯುಕ್ತವಾಗಿ ಹೊಳೆಯುತ್ತದೆ. ಹಾಗೂ ಬೇಸಿಗೆಯಲ್ಲಿ ನಿಮ್ಮ ಮುಖದ ಮೇಲೆ ಉಂಟಾಗಿರುವಂತಹ ಟ್ಯಾನ್ ಎಲ್ಲವನ್ನು ಹೊಡೆದೋಡಿಸಿ ಮುಖ ಹೊಳೆಯುವಂತೆ ಮಾಡುತ್ತದೆ ಹೀಗಾಗಿ ಈ ಸಣ್ಣ ಮನೆ ಮದ್ದನ್ನು ಹಿಂದೆ ಟ್ರೈ ಮಾಡಿ ಹಾಗೂ ಅದರ ಪರಿಣಾಮ ನೀವೇ ಕಂಡುಕೊಳ್ಳಿ.

Leave a comment