Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಕಷ್ಟ ಪಡುತ್ತಿದ್ದರೆ; ಒಮ್ಮೆ ಈ ಆಹಾರಗಳನ್ನು ಜೊತೆಯಾಗಿ ಸೇವಿಸಿ ನೋಡಿ, ಕಡಿಮೆ ಖರ್ಚು ದುಪ್ಪಟ್ಟು ಲಾಭ.

If you are finding it difficult to lose weight; Try these foods together once, less expense doubles the gain.

ಈಗಿನ ಕಾಲದಲ್ಲಿ ಬಹುತೇಕ ಜನರು ಮನಸ್ಸಿನ ಸೌಂದರ್ಯಕ್ಕಿಂತ ದೇಹ ಸೌಂದರ್ಯದ ಬಗ್ಗೆ ಸಾಕಷ್ಟು ಗಮನಹರಿಸುತ್ತಾರೆ. ಅನೇಕ ಜನರು ತಮ್ಮ ದೇಹದ ತೂಕ ಹೆಚ್ಚಾದಂತೆ ಅದರ ಬಗ್ಗೆ ಚಿಂತಿಸಲು ಶುರು ಮಾಡುತ್ತಾರೆ. ತಮ್ಮ ದೇಹದ ತೂಕವನ್ನು ಕಡಿಮೆಯಾಗಿಸಿಕೊಂಡು, ಸಣ್ಣಗೆ ತೆಳ್ಳಗೆ ಕಾಣಲು ಸಾಕಷ್ಟು ಪ್ರಯತ್ನಿಸುತ್ತಾರೆ. ಕೆಲವರು ಸಾಕಷ್ಟು ವ್ಯಾಯಾಮ ಹಾಗೂ ತಮ್ಮ ಆಹಾರ ಪದ್ಧತಿಗಳನ್ನು ಸಹ ಬದಲಿಸಿಕೊಂಡು ದೇಹ ತೂಕ ಇಳಿಸಿಕೊಳ್ಳಲು ನಾನಾ ಕಷ್ಟಗಳನ್ನು ಪಡುತ್ತಾರೆ. ಇಂದು ನಾವು ತಿಳಿಸುವ ಕೆಲವು ಆಹಾರಗಳನ್ನು ಒಟ್ಟಾಗಿ ಸೇವಿಸುವುದರಿಂದ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ ಎಂದರೆ ನೀವು ನಂಬುತ್ತೀರಾ? ಹೌದು ನಂಬಲೇ ಬೇಕು ಈ ಕೆಲವು ಆಹಾರಗಳನ್ನು ಒಟ್ಟಾಗಿ ಸೇವಿಸುವುದರಿಂದ ನಿಮ್ಮ ದೇಹದ ತೂಕ ಕಡಿಮೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Krushi Bhagya : ರಾತ್ರೋರಾತ್ರಿ ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ, ಈ ರೀತಿ ಅರ್ಜಿಯನ್ನು ಸಲ್ಲಿಸಿದರೆ ಸಾಕು ರೈತರ ಬ್ಯಾಂಕ್ ಅಕೌಂಟ್ ಗೆ ನೇರ ಹಣ ಜಮಾವಣೆ.

ಪ್ರತಿದಿನ ಬೆಳಿಗ್ಗೆ ಗ್ರೀನ್ ಟೀ ಜೊತೆಗೆ ನಿಂಬೆರಸವನ್ನು ಸೇರಿಸಿ ಕುಡಿಯುವುದರಿಂದ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ. ಇದರಲ್ಲಿ ಹೆಚ್ಚಾಗಿ ಆ್ಯಂಟಿ ಆಕ್ಸಿಡೆಂಟ್ ಅಂಶ ಇದ್ದು, ಜೊತೆಗೆ ಇದರಲ್ಲಿ ಅತಿ ಕಡಿಮೆ ಕ್ಯಾಲೋರಿಸ್ ಇದೆ. ಇನ್ನು ಇವು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ನಿಮ್ಮ ಬಿಪಿಯನ್ನು ಸಹ ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ.

green tea with lemon
Respected images are credited to the original sources,

ಇನ್ನು ಪ್ರತಿ ನಿತ್ಯ ಸೇಬಿನ ಜೊತೆಗೆ ಪಿಸ್ತಾವನ್ನು ಸೇವಿಸುವುದು ದೇಹಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದರಲ್ಲಿ ಕಡಿಮೆ ಕ್ಯಾಲೋರಿಸ್ ಇದ್ದು, ಜೊತೆಗೆ ಇದರಲ್ಲಿ ಹೆಚ್ಚಿನ ಫೈಬರ್ ಅಂಶ ಇದೆ. ಇದು ನಿಮ್ಮ ದೇಹದ ತೂಕ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.

apple and pista
Respected images are credited to the original sources,

ಇನ್ನು ಪ್ರತಿ ನಿತ್ಯ ಜೀರಿಗೆ ನೀರನ್ನು ಸೇವಿಸುವುದರಿಂದ ನಿಮ್ಮ ದೇಹವನ್ನು ತಂಪಾಗಿ ಇಡುವುದರ ಜೊತೆಗೆ ಇದು ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇನ್ನು ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಇದ್ದು, ನಿಮ್ಮ ಜೀರ್ಣ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.

green tea with lemon
Respected images are credited to the original sources, 

ಇನ್ನು ಒಟ್ಮೀಲ್ ಜೊತೆಗೆ ವಾಲ್ನಟ್ಸ್ ಸೇರಿಸಿ ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಜೊತೆಗೆ ನಿಮ್ಮ ಜೀರ್ಣ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ ಎಂದು ಇತ್ತೀಚಿನ ಸಂಶೋಧನೆಯ ಮೂಲಕ ತಿಳಿದು ಬಂದಿದೆ.

oatmeal and wall nut
Respected images are credited to the original sources,

LPG GAS : ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಇದ್ದವರಿಗೆ ಇನ್ನು ಮುಂದೆ ಕೇವಲ 820 ರೂ ಗೆ ಗ್ಯಾಸ್ ಸಿಗಲಿದೆ, ಪೂರ್ತಿ ವಿವರ ಇಲ್ಲಿದೆ !!

Leave a comment