Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಶಿವಣ್ಣ ಜೊತೆ ಗಡಿಬಿಡಿ ಕೃಷ್ಣ ಚಿತ್ರದಲ್ಲಿ ನಟಿಸಿದ್ದ ಈ ಖ್ಯಾತ ನಟಿ ನೆನಪಿದೆಯಾ?? ಈಗ ಹೇಗಿದ್ದಾರೆ, ಎಲ್ಲಿದ್ದಾರೆ ಕುಟುಂಬ ಹೇಗಿದೆ ನೋಡಿ !!

Get real time updates directly on you device, subscribe now.

ಇತರ ಭಾಷೆಯ ಸಾಕಷ್ಟು ನಟಿಯರು ಕನ್ನಡದಲ್ಲಿ ಬಂದು ಅಭಿನಯಿಸಿದ್ದಾರೆ. ಅದರಲ್ಲಿ ಕೆಲವರನ್ನಂತೂ ಸಿಮಿಪ್ರಿಯರು ಮರೆಯುವುದಿಲ್ಲ. ಅಂಥವರಲ್ಲಿ ನಟಿ ಇಂದ್ರಜಾ ಕೂಡ ಒಬ್ಬರು. ನಟಿ ಇಂದ್ರಜಾ ಕನ್ನಡದಲ್ಲಿ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಲಿಲ್ಲ ಆದರೆ ಅಭಿನಯಿಸಿದ ಸಿನಿಮಾದ ಮೂಲಕ ಜನರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ಹಾಗಾದರೆ ನಟಿ ಇಂದ್ರಜಾ ಈಗೆಲ್ಲಿದ್ದಾರೆ ಏನು ಮಾಡುತ್ತಿದ್ದಾರೆ? ಎಂಬ ಮಾಹಿತಿಗಳನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ.

ಸುಮಾರು 90ರ ದಶಕದ ದಕ್ಷಿಣ ಭಾರತದ ಫೇಮಸ್ ನಟಿಯರಲ್ಲಿ ಒಬ್ಬರು ಇಂದ್ರಜಾ. ತೆಲುಗು ಮೂಲದ ನಟಿ ಇಂದ್ರಜಾ, 1978 ಜೂನ್ 30ರಂದು ಚೆನ್ನೈನಲ್ಲಿ ಜನಿಸಿದರು. ಸಂಗೀತದ ಹಿನ್ನೆಲೆ ಹೊಂದಿದ್ದ ಇಂದ್ರಜಾ ಅವರು ಕುಟುಂಬದವರಂತೆ ಸಂಗೀತ ಹಾಗೂ ನೃತ್ಯದಲ್ಲಿ ಬಾಲ್ಯದಿಂದಲೇ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿದ್ದರು. ಹಾಗಾಗಿ ಹಾಡುವುದನ್ನು ಹಾಗೂ ನೃತ್ಯವನ್ನು ಬಾಲ್ಯದಿಂದಲೇ ಕರಗತ ಮಾಡಿಕೊಂಡಿದ್ದರು.

ನಟಿ ಇಂದ್ರಜಾ ಅವರು 1993ರಲ್ಲಿ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾ ಒಂದರಲ್ಲಿ ಅಭಿನಯಿಸುವುದರ ಮೂಲಕ ಬಾಲ ನಟಿಯಾಗಿ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ಆದರೆ ನಟಿ ಇಂದ್ರಜಾ ಗುರುತಿಸಿಕೊಂಡಿದ್ದು ತೆಲುಗು ಚಿತ್ರರಂಗದಲ್ಲಿ. ತೆಲುಗು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿ ಇಂದ್ರಜಾ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಬಟ್ಟಲು ಕಂಗಳ ಚೆಲುವೆ ನಟಿ ಇಂದ್ರಜಾ ಮನಮೋಹಕ ನಟಿ. ಇವರು ಸಾಕಷ್ಟು ಅತ್ಯುತ್ತಮ ಪಾತ್ರಗಳನ್ನು ನಿಭಾಯಿಸಿದ್ದಾರೆ. 90ರ ದಶಕದ ದಕ್ಷಿಣ ಭಾರತದ ಹಾಟ್ ಫೇವರೇಟ್ ನಟಿ ಆಗಿದ್ದರು ಅಂದ್ರೆ ತಪ್ಪಾಗಲ್ಲ. ಅತ್ಯಂತ ಸ್ಪುರದ್ರೂಪಿಯಾಗಿತುವ ನಟಿ ಇಂದ್ರಜಾ ಅವರು ಕನ್ನಡದಲ್ಲಿ ನಟ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರ ಜೊತೆಗೆ ಗಡಿಬಿಡಿ ಕೃಷ್ಣ ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಕನ್ನಡಿಗರಿಗೂ ಅಚ್ಚುಮೆಚ್ಚಿನ ನಟಿ ಎನಿಸಿದ್ದಾರೆ.

indraja actress absar

 

ಇದಾದ ಬಳಿಕ ಇಂದ್ರಜಾ ಅವರಿಗೆ ಕನನ್ಡದಲ್ಲಿ ಸಾಕಷ್ಟು ಅವಕಾಶಗಳು ಒಲಿದು ಬಂದವು. ಕೂಲಿ ರಾಜ, ಅವಳೇ ನನ್ನ ಹುಡುಗಿ, ದ ಕ್ಕಿಲ್ಲರ್ ಮುಂದೆ ಐತೆ ಮಾರಿ ಹಬ್ಬ, ಖಡ್ಗ ಮೊದಲಾದ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿ ಕನ್ನಡದಲ್ಲಿಯೂ ಅತ್ಯುತ್ತಮ ಅಭಿನೇತ್ರಿ ಎನಿಸಿಕೊಂದರು ನಟಿ ಇಂದ್ರಜಾ. ಕನ್ನಡದಲ್ಲಿ ನಟನೆಯ ಮೂಲಕ ತಮ್ಮದೇ ಛಾಪು ಮೂಡಿಸಿರುವ ನಟಿ ಇಂದ್ರಜಾ ಇಂದಿಗೂ ನಟನಾ ವೃತ್ತಿಯನ್ನು ಮುಂದುವರೆಸಿಕೊಂಡು ಬರುತ್ತಿರುವುದು ವಿಶೇಷ.

ಇನ್ನು ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನವರಸ ನಾಯಕ ಜಗ್ಗೇಶ್, ಶಶಿಕುಮಾರ್ ಮೊದಲಾದ ಎಲ್ಲಾ ಖ್ಯಾತ ನಟರಾ ಜೊತೆಗೆ ತೆರೆ ಹಂಚಿಕೊಂಡ ನಟಿ ಇಂದ್ರಜಾ 90-2000 ಸಮಯದ ಬಹುಬೇಡಿಕೆಯ ನಟಿಯೂ ಆಗಿದ್ದರು. ತಮಿಳು, ತೆಲುಗು, ಕನ್ನಡ ಮಲಯಾಳಂ ಹೀಗೆ ಎಲ್ಲಾ ಭಾಷೆಯಲ್ಲಿಯೂ ಸುಮಾರು 80ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿದ್ದಾರೆ ನಟಿ ಇಂದ್ರಜಾ.

ಇಂದ್ರಜಾ ಅವರು ಇದೀಗ ತೆಲಗುವಿನಲ್ಲಿ ಪೋಷಕ ನಟಿಯಾಗಿ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಗಂಡ ಹಾಗೂ ಮಕ್ಕಳ ಜೊತೆಗೆ ಸುಖವಾಗಿ ಸಂಸಾರ ನಡೆಸುತ್ತಿರುವ ಇಂದ್ರ ಜನ ಈಗಲೂ ತಮ್ಮ ನಟನಾ ವೃತ್ತಿ ಜೀವನವನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಖುಷಿಯ ವಿಚಾರ. ಸ್ನೇಹಿತರೆ ನೀವು ಗಡಿಬಿಡಿ ಕೃಷ್ಣ ಸಿನಿಮಾ ನೋಡಿದ್ರೆ ನಟಿ ಇಂದ್ರಜಾ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ.

Get real time updates directly on you device, subscribe now.

Leave a comment