Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಬಿಗ್ ಬಾಸ್ ಸೀಸನ್ 9 ಕಂಟೆಸ್ಟೆಂಟ್ ಗಳ ಒಂದು ವಾರದ ಸ್ಯಾಲರಿ ಎಷ್ಟು ಗೊತ್ತಾ ?? ಯಪ್ಪಾ ಇಷ್ಟೊಂದ ಸೂಪರ್ !!

ಕಲರ್ಸ್ ಕನ್ನಡ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಸೀಸನ್ 9 ಈಗಾಗಲೇ ಶುರುವಾಗಿದೆ. ಇನ್ನು ಈ ಬಾರಿ ಇದಕ್ಕೆ ವಿಭಿನ್ನವಾದ ಕಂಟೆಸ್ಟೆಂಟ್ ಗಳನ್ನು ಆಯ್ಕೆ ಮಾಡಲಾಗಿದೆ. ಈ ಹಿಂದೆ ಬಿಗ್ ಬಾಸ್ ನಲ್ಲಿ ಬಂದ ಕೆಲ ಕಲಾವಿದರು ಮತ್ತು ಓಟಿಟಿಯಲ್ಲಿ ಭಾಗವಹಿಸಿದ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಹಾಗಾದರೆ ಬನ್ನಿ ಬಿಗ್ ಬಾಸ್ ಸೀಸನ್ 9 ಕಂಟೆಸ್ಟೆಂಟ್ ಗಳ ಒಂದು ವಾರದ ಸ್ಯಾಲರಿ ಎಷ್ಟೆಷ್ಟು ಎಂದು ನೋಡೋಣ..

ಕಮಲಿ ಧಾರಾವಾಹಿಯ ಮುಖಾಂತರ ಜನಪ್ರಿಯ ಆಗಿರುವ ಅಮೂಲ್ಯ ಗೌಡ ಅವರು ಒಂದು ವಾರಕ್ಕೆ 1.5 ಲಕ್ಷ ರೂ ಗಳ ಸಂಭಾವನೆಯನ್ನು ತೆಗೆದುಕೊಳ್ಳುತ್ತಾರೆ.

ಕನ್ನಡ ತುಳು ಕೊಂಕಣಿ ಸಿನಿಮಾಗಳಲ್ಲಿ ನಟಿಸಿರುವ ರೂಪೇಶ್ ಶೆಟ್ಟಿ ಅವರು ಮಂಗಳೂರಿನ ಆರ್.ಜೆ ಆಗಿ ಕೂಡ ಕೆಲಸ ಮಾಡಿದ್ದಾರೆ. ಇವರು ಒಂದು ವಾರಕ್ಕೆ 2 ಲಕ್ಷ ರೂ. ಗಳ ಸಂಭಾವನೆಯನ್ನು ಪಡೆಯುತ್ತಿದ್ದಾರೆ.

ಖ್ಯಾತ ನಿರೂಪಕಿ ಮತ್ತು ನಟಿ ಆಗಿರುವ ಅನುಪಮಾ ಗೌಡ ಅವರು ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಅಭಿನಯಿಸಿದ್ದಾರೆ. ಇವರು ಈ ಹಿಂದೆ ಬಿಗ್ ಬಾಸ್ ಸೀಸನ್ 5 ರಲ್ಲಿ ಕೂಡ ಭಾಗವಹಿಸಿದ್ದರು. ಇವರು ಒಂದು ವಾರಕ್ಕೆ 2.5 ಲಕ್ಷ ರೂ. ಗಳ ಸಂಭಾವನೆಯನ್ನು ತೆಗೆದುಕೊಳ್ಳುತ್ತಿದ್ದಾರೆ.

ಅಶ್ವಿನಿ ನಕ್ಷತ್ರ ಧಾರಾವಾಹಿಯ ಮುಖಾಂತರ ಫೇಮಸ್ ಆಗಿರುವ ಮಯೂರಿ ಕ್ಯಾತರಿ ಅವರು ಬೆಳ್ಳಿತೆರೆಯಲ್ಲಿ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರು ಒಂದು ವಾರಕ್ಕೆ 2 ಲಕ್ಷ ರೂ. ಗಳ ಸಂಭಾವನೆಯನ್ನು ಪಡೆಯುತ್ತಿದ್ದಾರೆ.

ಬಿಗ್ ಬಾಸ್ ಓಟಿಟಿಯಲ್ಲಿ ಭಾಗವಹಿಸಿದ್ದ ಆರ್ಯವರ್ಧನ್ ಗುರೂಜಿ ಅವರು ನಂಬರ್ ಶಾಸ್ತ್ರ ಹೇಳುವುದರಲ್ಲಿ ಜನಪ್ರಿಯರಾಗಿದ್ದಾರೆ. ಇವರು ಒಂದು ವಾರಕ್ಕೆ 1 ಲಕ್ಷ ರೂ. ಗಳ ಸಂಭಾವನೆಯನ್ನು ತೆಗೆದುಕೊಳ್ಳುತ್ತಿದ್ದಾರೆ.

ಜೋಶ್ ಚಿತ್ರದ ಮುಖಾಂತರ ಫೇಮಸ್ ಗಳಿಸಿರುವ ನಟ ರಾಕೇಶ್ ಅಡಿಗ ಅವರು ಈಗಾಗಲೇ ಬಿಗ್ ಬಾಸ್ ಓಟಿಟಿ ಯಲ್ಲಿ ಕೂಡ ಭಾಗವಹಿಸಿದ್ದಾರೆ. ಇವರು ಒಂದು ವಾರಕ್ಕೆ 2 ಲಕ್ಷ ರೂ. ಗಳ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ.

ಬಿಗ್ ಬಾಸ್ ಸೀಸನ್ ಎಂಟರಲ್ಲಿ ಈಗಾಗಲೇ ಭಾಗವಹಿಸಿದ ದಿವ್ಯ ಉರುಡುಗ ಅವರು ಇದರ ಮುಖಾಂತರ ತುಂಬ ಫೇಮಸ್ ಆದರು. ಇವರು ಈಗ ಒಂದು ವಾರಕ್ಕೆ 2 ಲಕ್ಷ ರೂ. ಗಳ ಸಂಭಾವನೆಯನ್ನು ತೆಗೆದುಕೊಳ್ಳುತ್ತಿದ್ದಾರೆ.

ಕನ್ನಡ ಪರ ಹೋರಾಟಗಾರ ಆಗಿರುವ ರೂಪೇಶ್ ರಾಜಣ್ಣ ಅವರು ಈಗಾಗಲೇ ಸಾಕಷ್ಟು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಇವರು ಒಂದು ವಾರಕ್ಕೆ 1 ಲಕ್ಷ ರೂ. ಗಳ ಸಂಭಾವನೆಯನ್ನು ತೆಗೆದುಕೊಳ್ಳುತ್ತಿದ್ದಾರೆ.

ಕಲಾವಿದ ಮತ್ತು ನಿರ್ದೇಶಕ ಆಗಿರುವ ಅರುಣ್ ಸಾಗರ್ ಅವರು ಈಗಾಗಲೇ ಬಿಗ್ ಬಾಸ್ ಸೀಸನ್ ಒಂದರಲ್ಲಿ ಭಾಗವಹಿಸಿದ್ದರು. ಇವರು ಒಂದು ವಾರಕ್ಕೆ 3 ಲಕ್ಷ ರೂ. ಗಳ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದು ಈ ಬಾರಿ ಕಂಟೆಸ್ಟೆಂಟ್ ಗಳಲ್ಲಿ ಇವರ ಹೆಚ್ಚು ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಪುಟ್ಟಗೌರಿ ಮದುವೆ ಧಾರಾವಾಹಿಯ ಮುಖಾಂತರ ಕಿರುತೆರೆಗೆ ಕಾಲಿಟ್ಟ ಸಾನಿಯಾ ಅಯ್ಯರ್ ಅವರು ಬಿಗ್ ಬಾಸ್ ಓಟಿಟಿಯಲ್ಲಿ ಕೂಡ ಭಾಗವಹಿಸಿದ್ದರು. ಇವರು ಒಂದು ವಾರಕ್ಕೆ 1.5 ಲಕ್ಷ ರೂ. ಗಳ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಸಿನೆಮಾ ರಿವ್ಯೂ ಕೊಟ್ಟು ಫೇಮಸ್ ಆಗಿರುವ ನವಾಜ್ ಅವರು ಬಿಗ್ ಬಾಸ್ ಸೀಸನ್ ಒಂಭತ್ತಕ್ಕೆ ಆಯ್ಕೆಯಾಗಿದ್ದು ಇವರು ಒಂದು ವಾರಕ್ಕೆ 50000 ರೂ. ಗಳ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ನಾಗಿಣಿ ಸೀರಿಯಲ್ ಮುಖಾಂತರ ಫೇಮಸ್ ಆಗಿರುವ ದೀಪಿಕಾ ದಾಸ್ ಅವರು ಈಗಾಗಲೇ ಬಿಗ್ ಬಾಸ್ ಸೀಸನ್ 7 ರಲ್ಲಿ ಕೂಡ ಭಾಗವಹಿಸಿದ್ದರು. ಇವರು ಒಂದು ವಾರಕ್ಕೆ 2 ಲಕ್ಷ ರೂ. ಗಳ ಸಂಭಾವನೆಯನ್ನು ತೆಗೆದುಕೊಳ್ಳುತ್ತಿದ್ದಾರೆ.

ಬಿಗ್ ಬಾಸ್ ಸೀಸನ್ ಎಂಟರಲ್ಲಿ ಭಾಗವಹಿಸಿದ್ದ ಪ್ರಶಾಂತ್ ಸಂಬರ್ಗಿ ಅವರು ಉದ್ಯಮಿಯಾಗಿದ್ದಾರೆ. ಇವರು ಒಂದು ವಾರಕ್ಕೆ 1.5 ಲಕ್ಷ ರೂ. ಗಳ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಐಶ್ವರ್ಯ ಪಿಸೆ ಅವರು ಕಳೆದ ಬಿಗ್ ಬಾಸ್ ಸೀಸನ್ ನಲ್ಲಿ ಭಾಗವಹಿಸಿದ್ದು ಇವರು ಕೂಡ ಅರವಿಂದ್ ಕೆಪಿ ಅವರಂತೆ ಬೈಕ್ ರೇಸರ್ ಆಗಿದ್ದಾರೆ. ಇವರು ಒಂದು ವಾರಕ್ಕೆ 1 ಲಕ್ಷ ರೂ. ಗಳ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಕಾವ್ಯಶ್ರೀ ಗೌಡ ಅವರು ಕಿರುತೆರೆಯಲ್ಲಿ ಒಳ್ಳೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ಮಾಡೆಲ್ ಕೂಡ ಹೌದು. ಇವರು ಒಂದು ವಾರಕ್ಕೆ 1.5 ಲಕ್ಷ ರೂ. ಗಳ ಸಂಭಾವನೆಯನ್ನು ತೆಗೆದುಕೊಳ್ಳುತ್ತಿದ್ದಾರೆ.

ದರ್ಶ್ ಚಂದ್ರಪ್ಪ ಅವರು ಉದ್ಯಮಿಯಾಗಿದ್ದು ಇದರ ಜತೆಗೆ ಕೆಲ ಧಾರಾವಾಹಿಗಳಲ್ಲೂ ಕೂಡ ಅಭಿನಯ ಮಾಡಿದ್ದಾರೆ. ಇವರು ಒಂದು ವಾರಕ್ಕೆ 1 ಲಕ್ಷ ರೂ. ಗಳ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಕಿರುತೆರೆಯ ನಟಿ ನೇಹಾ ಗೌಡ ಅವರು ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮುಖಾಂತರ ಫೇಮಸ್ ಆದರು. ಇವರು ಒಂದು ವಾರಕ್ಕೆ 2 ಲಕ್ಷ ರೂ. ಗಳ ಸಂಭಾವನೆಯನ್ನು ತೆಗೆದುಕೊಳ್ಳುತ್ತಿದ್ದಾರೆ.

ವಿನೋದ್ ಗೊಬ್ಬರಗಾಲ ಅವರು ಭಿಕ್ಷೆ ಗಿಲಿಗಿಲಿ ಕಾರ್ಯಕ್ರಮದ ರನ್ನರ್ ಅಪ್ ಆದರು. ಇವರು ಒಂದು ವಾರಕ್ಕೆ 1.5 ಲಕ್ಷ ರೂ. ಗಳ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ…..

Leave a comment