Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಕಾಂತಾರ ಸಿನಿಮಾದಲ್ಲಿ ಬರುವ ಈ ಉದಯೋನ್ಮುಖ ನಟರು ಯಾರು ಗೊತ್ತಾ?

ಕನ್ನಡ ಚಿತ್ರವೊಂದು ಪ್ರೇಕ್ಷಕರ ಒತ್ತಾಯದ ಮೇರೆಗೆ ಫ್ಯಾನ್ ಇಂಡಿಯಾ ಸಿನಿಮಾ ಆಗೋದಕ್ಕೆ ಹೊರಟಿದೆ. ಹೌದು ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಕನ್ನಡದಲ್ಲಿ ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡವರು ಇತರ ಭಾಷೆಗಳಲ್ಲಿಯೂ ಕೂಡ ಡಬ್ ಆಗಬೇಕು ಎಂದು ಒತ್ತಾಯ ಹೇರಿದರು ಎಲ್ಲಾ ಭಾಷೆಯಲ್ಲಿಯೂ ಕಾಂತಾರ ಸಿನಿಮಾ ಡಬ್ ಆಗುತ್ತಿದೆ. ಇದು ಖಂಡಿತವಾಗಿಯೂ ಕನ್ನಡಿಗರಿಗೆ ಒಂದು ದೊಡ್ಡ ಹೆಮ್ಮೆಯ ವಿಷಯ.

ಇನ್ನು ಕಾಂತರಾ ಸಿನಿಮಾದ ಸಕ್ಸಸ್ ಗೆ ಅದರಲ್ಲಿ ಇದ್ದ ಪಾತ್ರ ವರ್ಗಗಳು ಕೂಡ ಅಷ್ಟೇ ಮುಖ್ಯ ಕಾರಣ. ರಿಷಬ್ ಶೆಟ್ಟಿ ಪ್ರಮೋದ್ ಶೆಟ್ಟಿ ಅಚ್ಯುತ್ ಕುಮಾರ್, ಕಿಶೋರ್ ಇವರೆಲ್ಲರೂ ಸಿನಿಮಾರಂಗದಲ್ಲಿ ಈಗಾಗಲೇ ಪಳಗಿದವರು. ಹಾಗಾಗಿ ಅವರಿಗೆ ಅವರ ಪಾತ್ರಕ್ಕೆ ನ್ಯಾಯ ಒದಗಿಸುವುದರಲ್ಲಿ ಯಾವುದೇ ಸಮಸ್ಯೆಯು ಆಗಿರುವುದಿಲ್ಲ ಆದರೆ ಇವರುಗಳ ಜೊತೆಗೆ ಇನ್ನೊಂದಿಷ್ಟು ಉದಯೋನ್ಮುಖ ಪಾತ್ರಗಳು ಪ್ರೇಕ್ಷಕರ ಗಮನ ಸೆಳೆದಿದೆ ಆ ಪಾತ್ರಗಳ ಬಗ್ಗೆ ನಾವು ನಿಮಗೆ ಅಲ್ಲಿ ಮಾಹಿತಿಯನ್ನು ಕೊಡುತ್ತೇವೆ.

IMG 20221013 WA0011

ಮೊದಲನೆಯದಾಗಿ ರಿಷಬ್ ಶೆಟ್ಟಿ ಮುಖ್ಯ ಪಾತ್ರಧಾರಿ ಶಿವು ಹೆಸರಿನಲ್ಲಿ ಕಾಣಿಸಿಕೊಂಡಿದ್ದಾರೆ. ಶಿವು ಅವರ ತಮ್ಮ ಗುರುವ. ಗುರುವ ನಾ ಅಭಿನಯ ನೋಡಿ ಜನ ಮೆಚ್ಚಿಕೊಂಡಿದ್ದಾರೆ ಅವರ ಸೌಮ್ಯ ಸ್ವಭಾವಕ್ಕೆ ಜನ ತಲೆಬಾಗಿದ್ದಾರೆ. ಇನ್ನು ಗುರುವ ಪಾತ್ರವನ್ನು ನಿಭಾಯಿಸಿದ್ದು ಸ್ವರಾಜ್ ಶೆಟ್ಟಿ. ಇವರು ಮೊದಲನೇ ಬಾರಿಗೆ ಬೆಳ್ಳಿತರೆಗೆ ಕಾಂತಾರ ಸಿನಿಮಾದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಕೃಷ್ಣ ತುಳಸಿ ಎನ್ನುವ ಧಾರಾವಾಹಿಯಲ್ಲಿ ಕೃಷ್ಣ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ನಂತರ ರಾಧಾಕಲ್ಯಾಣ ಧಾರವಾಹಿಯಲ್ಲಿ ವಿಲನ್ ಪಾತ್ರಧಾರಿಯಕ್ಕೆ ಕೂಡ ಅಭಿನಯಿಸಿದ್ದಾರೆ ಸ್ವರಾಜ್ ಶೆಟ್ಟಿ. ತುಳುನಾಡಿನಲ್ಲಿ ಶಿವದೂತ ಗುಳಿಗ ಎನ್ನುವ ನಾಟಕದಲ್ಲಿ ಗುಳಿಗನ ಪಾತ್ರದಲ್ಲಿ ಅತ್ಯದ್ಭುತವಾಗಿ ಅಭಿನಯಿಸಿ ಎಲ್ಲರ ಗಮನಸೆಳೆದರು ಇದೆ ಇವರಿಗೆ ಕಾಂತಾರ ಸಿನಿಮಾದಲ್ಲಿ ಅವಕಾಶ ಸಿಗುವುದಕ್ಕೂ ಕಾರಣವಾಯಿತು.

ಇನ್ನು ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ಅಮ್ಮ ಕಮಲಕ್ಕನ ಪಾತ್ರದಲ್ಲಿ ಅಭಿನಯಿಸಿದ ನಟಿ ಮಾನಸಿ ಸುಧೀರ್. ಇವರು ಚಿತ್ರರಂಗಕ್ಕೆ ಹೊಸಬರು ಆದರೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಭಾವ ಗಾನದ ಮೂಲಕ ಬಹಳ ಫೇಮಸ್ ಆಗಿದ್ದಾರೆ. ಬುಳ್ಳನ ಪಾತ್ರದಲ್ಲಿ ಸುನಿಲ್ ಗುರು ಮಿಂಚಿದ್ದಾರೆ. ಇವರು ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಕಾಂತಾರದಲ್ಲಿ ಮತ್ತೆ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ ಆದರೆ ಕಾಂತಾರದಲ್ಲಿ ಅಭಿನಯಕ್ಕಿಂತ ಹೆಚ್ಚಾಗಿ ಸ್ಕ್ರಿಪ್ಟ್ ಟೀಮ್ ನಲ್ಲಿದ್ದರು.

ಇನ್ನು ಕಾಂತಾರ ಸಿನಿಮಾದಲ್ಲಿ ಹೆಚ್ಚು ಗಮನ ಸೆಳೆದ ಪಾತ್ರ ಅಂದರೆ ರಾಂಪ. ಈ ಪಾತ್ರಕ್ಕೆ ಜೀವ ತುಂಬಿದವರು ಪ್ರಕಾಶ್ ತುಮಿನಾಡ್. ಇವರು ಹೆಚ್ಚು ತುಳುನಾಡಿನ ನಾಟಕಗಳಲ್ಲಿ ಮಿಂಚಿದವರು. ಇನ್ನು ಸುಂದರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ದೀಪಕ್ ರೈ ಪಾಣಾಜೆ. ಇವರು ಕೂಡ ರಂಗಭೂಮಿ ಕಲಾವಿದರು ತುಳುನಾಡಿನಲ್ಲಿ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿ ಸೈನಿಸಿಕೊಂಡವರು.

Leave a comment