ಕನ್ನಡ ಸಿನಿಮಾದಲ್ಲಿ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸುವ ಕಲಾವಿದರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅವರ ಅಭಿಮಾನಿಗಳಿಗೆ ಕುತೂಹಲ ಇದ್ದೇ ಇರುತ್ತೆ. ಆದರೆ ಕೆಲವು ಕಲಾವಿದರ ಬಗ್ಗೆ ಎಲ್ಲಿಯೂ ಅಷ್ಟಾಗಿ ಮಾಹಿತಿ ದೊರೆಯುವುದಿಲ್ಲ. ನಾವು ಇಂದು ಈ ಲೇಖನದಲ್ಲಿ ಕನ್ನಡ ಸಿನಿಮಾ ಸ್ಟಾರ್ ನಟರ ಹೆಣ್ಣು ಮಕ್ಕಳ ಬಗ್ಗೆ ನಿಮಗೆ ಮಾಹಿತಿಯನ್ನು ಕೊಡುತ್ತೀವಿ. ಇದರಲ್ಲಿ ಕೆಲವರು ಈಗಾಗಲೇ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಬನ್ನಿ ಅವರ ಹೆಸರುಗಳನ್ನು ನೋಡೋಣ.
ಮೊದಲನೆಯದಾಗಿ ಖ್ಯಾತ ನಟ ಶ್ರೀಧರ್. ಅತ್ಯದ್ಭುತ ಭರತನಾಟ್ಯಗಾರರೂ ಆಗಿರುವ ಶ್ರೀಧರ್ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಇನ್ನು ಶ್ರೀಧರ ಅವರ ಮಗಳು ಕೂಡ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ. ಮುಂದಿನ ಹೆಸರು ಅನಂತನಾಗ್. ಇಂದಿಗೂ ಪೋಷಕ ನಟರ ಪಾತ್ರಗಳಲ್ಲಿ ಅಭಿನಯಿಸುವುದರಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿರುವ ನಟ ಅನಂತನಾಗ್ ಅವರು. ಅನಂತನಾಗ್.
ಹಾಗೂ ಖ್ಯಾತ ನಟಿ ಗಾಯತ್ರಿ ಅವರ ಮಗಳು ಅದಿತಿ ನಾಗ್. ಇನ್ನು ದಿವಂಗತ ಖ್ಯಾತ ನಟ ಶಂಕರ್ ನಾಗ್ ಹಾಗೂ ನಟಿ ಅರುಂಧತಿ ನಾಗ್ ಇವಬ್ಬರೂ ಕೂಡ ಕನ್ನಡ ಸಿನಿಮಾ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಕನ್ನಡಿಗರು ಶಂಕರ್ ನಾಗ್ ಅವರನ್ನು ಇಂದಿಗೂ ಮರೆಯುವುದಿಲ್ಲ. ಶಂಕರ್ ನಾಗ್ ಹಾಗೂ ಅರುಂಧತಿ ದಂಪತಿಗಳ ಮುದ್ದಿನ ಮಗಳೇ ಕಾವ್ಯ ನಾಗ್.
ಇನ್ನು ಕನ್ನಡದ ಹೆಸರಾಂತ ನಟ ರಾಮಕುಮಾರ್. ಡಾ. ರಾಜಕುಮಾರ್ ಅವರ ಮಗಳು ಪೂರ್ಣಿಮಾ ಅವರನ್ನು ಮದುವೆಆಗಿರುವ ರಾಮ್ ಕುಮಾರ್ ಅವರ ಮಗಳೂ ಕೂಡ ಸಿನಿಮಾ ನಟಿ. ಈ ದಂಪತಿಗಳ ಮಗಳು ಧನ್ಯ ರಾಮ್ ಕುಮಾರ್. ಈಗಾಗಲೇ ಕನ್ನಡ ಸಿನಿಮಾದಲ್ಲಿ ನಟಿಸುವ ಮೂಲಕ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದ್ದಾರೆ ಧನ್ಯ ರಾಮ್. ಖ್ಯಾತ ನಟ ಹಾಗೂ ರಾಜಕೀಯದಲ್ಲಿಯೂ ಗುರುತಿಸಿಕೊಂಡಿರುವ ಕುಮಾರ್ ಬಂಗಾರಪ್ಪ. ಕುಮಾರ್ ಬಂಗಾರಪ್ಪ ಅಂದರೆ ಅಶ್ವವೇಧ ಹಾಡು ನೆನಪಿಗೆ ಬರುತ್ತೆ. ಕುಮಾರ್ ಬಂಗಾರಪ್ಪ ಅವರಿಗೆ ಮಗಳು.
ಹಾಗೂ ಮಗ ಇದ್ದು ಅವರ ಮಗಳೇ ಲಾವಣ್ಯ ಕುಮಾರ್. ಇನ್ನು ಖ್ಯಾತ ನಟ ಹಾಗೂ ಅತ್ಯುತ್ತಮ ಮಾತುಗಾರರು ಆಗಿರುವ ರಮೇಶ್ ಅರವಿಂದ್. ಕನ್ನಡದಲ್ಲಿ ಸಾಕಷ್ಟು ಎವರ್ ಗ್ರೀನ್ ಸಿನಿಮಾಗಳನ್ನು ಕೊಟ್ಟ ಖ್ಯಾತಿ ಇವರದ್ದು. ರಮೇಶ್ ಅರವಿಂದ್ ಅವರ ಮಗಳು ನಿಹಾರಿಕಾ ರಮೇಶ್. ಇವರೂ ಕೂಡ ನೋಡಲು ಬಹಳ ಮುದ್ದಾಗಿದ್ದಾರೆ. ಇನ್ನು ದಕ್ಷಿಣ ಭಾರತದ ಖ್ಯಾತ ನಟ ಡೈಲಾಗ್ ಕಿಂಗ್ ಸಾಯಿ ಕುಮಾರ್. ಇವರ ಮಗಳೇ ಜ್ಯೋತಿರ್ಮಯಿ.
ಇನ್ನು ಕನ್ನಡದ ಹೆಸರಾಂತ ನಟ ರಾಜೇಶ್ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಹೆಸರು ಮಾಡಿರುವ ನಟ ರಾಜೇಶ್. ಡಾ. ರಾಜಕುಮಾರ್ ಕಾಲದಿಂದ ಇತ್ತೀಚಿಗಿನ ವರ್ಷಗಳ ವರೆಗೂ ರಾಜೇಶ್ ಒಂದಿಲ್ಲೊಂದು ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದಾರೆ. ಅವರ ಪುತ್ರಿ ಆಶಾ ರಾಣಿ. ಆಶಾ ರಾಣಿ ಖ್ಯಾತ ನಟ ಅರ್ಜುನ್ ಸರ್ಜಾ ಅವರ ಪತ್ನಿ. ಅರ್ಜುನ್ ಸರ್ಜಾ ಹಾಗೂ ಆಶಾರಾಣಿಯವರ ಮಗಳು ಐಶ್ವರ್ಯ ಸರ್ಜಾ ಕೂಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಕನ್ನಡದ ಕಿರುತರೆ ಹಾಗೂ ಹಿರಿತೆರೆಯ ಖ್ಯಾತ ನಟ ವಿಜಯ್ ಕಾಶಿ, ಇವರ ಪತ್ನಿ ನಟಿ ಹಾಗೂ ನೃತ್ಯಗಾರ್ತಿ ವೈಜಯಂತಿ ಕಾಶಿ. ಇವರ ಮಗಳು ಪ್ರತಿಕ್ಷಾ ಕಾಶಿ ಇವರು ಕೂಡ ನೃತ್ಯಾಭ್ಯಾಸ ಮಾಡಿದ್ದಾರೆ. ಸ್ನೇಹಿತರೆ ಇವಿಷ್ಟು ಖ್ಯಾತ ನಟರ ಹೆಣ್ಣು ಮಕ್ಕಳ ಹೆಸರುಗಳು. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.