Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಕನ್ನಡ ಚಿತ್ರವೆಂದರೆ ಮೂಗು ಮುರಿಯುತ್ತಿದ್ದ ಜನಗಳ ಎದುರು ಇಡೀ ಪ್ರಪಂಚವೇ ತಿರುಗಿ ನೋಡುವ ಹಾಗೆ ಮಾಡಿದ, ವಿಜಯ್ ಕಿರಗಂದೂರು ರವರು ಯಾರು ಗೊತ್ತೇ ??

0

ಹೊಂಬಾಳೆ‌ ನಿರ್ಮಾಣ ಸಂಸ್ಥೆಯ ಬಗ್ಗೆ ಇದೀಗ‌ ಕೇಳದವರಿಲ್ಲ. ಸೂಪರ್ ಡೂಪರ್ ಹಿಟ್ ಸಿನಿಮಾಗಳು ಈ‌ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿ ಬಿಡುಗಡೆಗೊಂಡು ಇದೀಗ ಈ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ಇದರ ಬಗ್ಗೆ ಕೆಲವು ಮಾಹಿತಿಗಳು ಇಲ್ಲಿದೆ. ಈ ಸಂಸ್ಥೆಯ ಮಾಲೀಕರಾದ ವಿಜಯ್ ಕಿರಗಂದೂರು ಅವರು ಮಂಡ್ಯದ ಕಿರಂಗದೂರಿನವರು. ಮಂಡ್ಯದ ಕಿರಂಗದೂರನ್ನು ತಮ್ಮ‌ ಹೆಸರಿನ‌ ಮುಂದೆ ಸೇರಿಸಿಕೊಂಡ ಇವರನ್ನು ಬರು‌ ಬರುತ್ತಾ.

ವಿಜಯ್ ಕಿರಂಗದೂರಿನ‌ ಬದಲಾಗಿ‌ ವಿಜಯ್‌ ಕಿರಗಂದೂರು‌ ಎಂದು ಕರೆಯಲಾರಾಂಭಿಸಿದರು. ಇನ್ನು ಹುಟ್ಟುವಾಗಲೇ ಆರ್ಥಿಕವಾಗಿ ಸಧೃಡರಾಗಿದ್ದ ಇವರು ತಮ್ಮ ಶಿಕ್ಷಣವನ್ನು ಮಂಡ್ಯದಲ್ಲಿಯೇ ಮುಗಿಸಿದರು. ತದನಂತರ ಬೆಂಗಳೂರಿಗೆ‌ ಆಗಮಿಸಿದ ಇವರು ಹೊಂಬಾಳೆ ರಿಯಲ್‌ ಎಸ್ಟೇಟ್ ಹಾಗೂ ಕನ್ಸ್ಟ್ರಕ್ಷನ್ ಕಂಪನಿಯನ್ನು ಆರಂಭಿಸಿದರು.

ತಮ್ಮ ಕನ್ಸ್ಟ್ರಕ್ಷನ್‌ ಕಂಪನಿಯ ಮೂಲಕ ಅಪಾರ ಹೆಸರು ಮಾಡಿದರು. ಅತ್ಯುತ್ತಮ ಗುಣಮಟ್ಟದ ಹಲವು ಬಿಲ್ಡಿಂಗ್ ಗಳನ್ನು ನಿರ್ಮಿಸಿದ ಇವರು ಗುಣಮಟ್ಟದಲ್ಲಿ ಎಲ್ಲಿಯೂ ಸಹ ಕಡಿಮೆ ಮಾಡುತ್ತಿರಲಿಲ್ಲ.‌ ಸ್ವತಃ ವಿಜಯ್ ಅವರೇ ಕೆಲಸ ನಡೆಯುತ್ತಿದ್ದ‌ ಜಾಗಕ್ಕೆ ತೆರಳಿ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು.‌‌ ಇದರಿಂದಾಗಿಯೇ ಈ ಕಂಪೆನಿ ಇಂದು ಈ ಮಟ್ಟಕ್ಕೆ‌ ಬೆಳೆಯಲು ಸಾಧ್ಯವಾಯಿತು.‌ ಇನ್ನು ಸಿನಿಮಾ ನಿರ್ಮಾಣದ ಕನಸನ್ನು.

ಹೊತ್ತಿದ್ದ ವಿಜಯ್ ಅವರು ಅಣ್ಣಾವ್ರ ಬಹುದೊಡ್ಡ ಅಭಿಮಾನಿ ಆದ್ದರಿಂದಲೇ ತಾವು ಅಣ್ಣಾವ್ರ ಕುಟುಂಬದಿಂದಲೇ ಈ ಕೆಲಸವನ್ನು ಆರಂಭಿಸಬೇಕು ಎಂದು‌ ಕನಸು‌ ಕಂಡವರು. ಆಗಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ನಿನ್ನಿಂದಲೇ ಸಿನಿಮಾದ ನಿರ್ಮಾಣದ ಕೆಲಸವನ್ನು ಹೊಂಬಾಳೆ‌ ವಹಿಸಿಕೊಂಡಿತು. ಆದರೆ ಈ‌ ಸಿನಿಮಾ‌ ಬಾಕ್ಸ್ ಆಫೀಸಿನಲ್ಲಿ‌ ಅಷ್ಟೇನೂ ಸದ್ದು ಮಾಡಲಿಲ್ಲ.

ನಂತರ ಯಶ್ ಅವರ‌ ಅಭಿನಯದ ಮಾಸ್ಟರ್‌ಪೀಸ್ ಚಿತ್ರಕ್ಕೆ ಬಂಡವಾಳ ಹೂಡಿದ ಈ ಸಂಸ್ಥೆಗೆ ಈ ಸಿನಿಮಾ ಹಾಕಿದ‌ ಬಂಡವಾಳವನ್ನು ವಾಪಸ್ ತಂದು‌ ಕೊಟ್ಟಿತು‌.‌ ನಂತರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ನಿರ್ದೇಶನದಲ್ಲಿ ಮತ್ತೊಮ್ಮೆ ಪುನೀತ್ ರಾಜ್ ಕುಮಾರ್ ಅವರ ಜೊತೆ ರಾಜ ಕುಮಾರ ಎಂಬ ಸಿನಿಮಾವನ್ನು ನಿರ್ಮಾಣ ಮಾಡಿದರು. ಈ ಸಿನಿಮಾ ಬಾಕ್ಸ್ ಆಫೀರ್ ಕೊಳ್ಳೆ ಹೊಡೆದಿದ್ದು ಎಲ್ಲರಿಗೂ ತಿಳಿದಿದೆ. ಇದಾದ ಬಳಿಕ ಪ್ರಶಾಂತ್ ನೀಲ್ ಹಾಗೂ ಯಶ್‌ ಕಾಂಬಿನೇಷನ್‌ನಲ್ಲಿ.

ಬಹುಕೋಟಿ ವೆಚ್ಚದಲ್ಲಿ ಕೆಜಿಎಫ್‌‌ ಹಾಗೂ ಕೆಜಿಎಫ್ 2 ಚಿತ್ರವನ್ನು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ‌ ಬಿಡುಗಡೆ ಮಾಡಿ ಇತಿಹಾಸ‌ ನಿರ್ಮಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಇದರ‌ ಬೆನ್ನಲ್ಲೆ ಪ್ರಶಾಂತ್ ನೀಲ್ ಅವರ ನಿರ್ದೇಶನಕ್ಕೆ ಮಣೆ ಹಾಕಿದ ಹೊಂಬಾಳೆ ಸಂಸ್ಥೆ ಪ್ರಭಾಸ್ ಅವರೊಡನೆ ಸಲಾರ್ ಎಂಬ ಸಿನಿಮಾವನ್ನು ಘೋಷಿಸಲಾಗಿದೆ. ಈ ಸಿನಿಮಾಕ್ಕಾಗಿ ಇದೀಗ ಎಲ್ಲರು ಕಾದು ಕುಳಿತಿದ್ದು 2023 ರಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ರಿಷಭ್ ಶೆಟ್ಟಿಯವರ ಕಾಂತಾರ‌ ಚಿತ್ರಕ್ಕೂ‌ ಈ ಸಂಸ್ಥೆ ಬಂಡವಾಳ ಹೂಡಿದ್ದು ಈ ಚಿತ್ರವೂ ಇದೀಗ ಇತಿಹಾಸ‌ ನಿರ್ಮಿಸುತ್ತಿದೆ.

ಇಷ್ಟೇ ಅಲ್ಲದೆ ರಕ್ಷಿತ್ ಶೆಟ್ಟಿಯವರ ರಿಚರ್ಡ್ ಆಂಟನಿಗೂ ಸಹ ಹೊಂಬಾಳೆ ಸಂಸ್ಥೆ ಬಂಡವಾಳ ಹೂಡಲಿದೆ. ಕನ್ನಡ ಅಷ್ಟೇ ಅಲ್ಲದೆ ಇದೀಗ ಅನ್ಯ ಭಾಷೆಗಳಿಗೂ ಸಹ‌ ಬಂಡವಾಳ ಹೂಡುತ್ತಿರುವ ಹೊಂಬಾಳೆ‌ ಸಂಸ್ಥೆ ಮಲಯಾಳಂ ನ ಧೂಮಂ ಎಂಬ ಸಿನಿಮಾ ತಮಿಳಿನಲ್ಲಿಯೂ ಸಹ ಸಿನಿಮಾಗೆ‌ ಬಂಡವಾಳ ಹೂಡುತ್ತಿದ್ದಾರೆ. ಇಂತಹ ಸಂಸ್ಥೆಯಿಂದ‌ ಮತ್ತಷ್ಟು ಅತ್ಯುತ್ತಮ‌ ಚಿತ್ರಗಳು‌ ಮೂಡಿ ಬರಲಿ ಎಂದು ಆಶಿಸೋಣ…..

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply