Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಕನ್ನಡದ ಖ್ಯಾತ ನಟ ಅಚ್ಯುತ್ ಕುಮಾರ್ ಅವರ ಪತ್ನಿಯಾರು ಗೊತ್ತಾ? ಅವರೂ ಕೂಡ ಫೇಮಸ್ ನಟಿ!

Get real time updates directly on you device, subscribe now.

ಚಂದನವನದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ ಅಚ್ಯುತ್ ಕುಮಾರ್. ಇಂದು ಪೋಷಕ ನಟನಾಗಿ ಸಾಕಷ್ಟು ಹೆಸರು ಮಾಡಿರುವ ಅಚ್ಯುತ್ ಕುಮಾರ್ ಬಹು ಬೇಡಿಕೆಯ ನಟ ಕೂಡ ಹೌದು. ಕನ್ನಡದ ಬಹುತೇಕ ಎಲ್ಲಾ ಸಿನಿಮಾಗಳನ್ನು ಕೂಡ ಅಚ್ಯುತ್ ಕುಮಾರ್ ಒಂದು ಪಾತ್ರವನ್ನು ನಿಭಾಯಿಸುವುದು ಅವರ ಅದ್ಭುತ ನಟನೆಯಿಂದ ಇಂದು ಕನ್ನಡಿಗರ ಅಚ್ಚುಮೆಚ್ಚಿನ ನಟ ಕೂಡ ಹೌದು.

ನಟ ಅಚ್ಯುತ್ ಕುಮಾರ್ ಅವರು 1966 ಮಾರ್ಚ್ 8ರಂದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಜನಿಸಿದರು. ಬಾಲ್ಯದಿಂದಲೂ ಇವರಿಗೆ ಅಭಿನಯದ ಹುಚ್ಚು ಇತ್ತು. ಇದರಿಂದಾಗಿ ಅಭಿನಯ ತರಬೇತಿ ಪಡೆದುಕೊಳ್ಳಲು ಶಿವಮೊಗ್ಗದ ನಿನಾಸಂಗೆ ಸೇರಿದರು. ಆಗಿನ ಕಾಲದಲ್ಲಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ನಟ ಇವರು. ಸಾಕಷ್ಟು ನಾಟಕಗಳಲ್ಲಿಯೂ ಅಭಿನಯಿಸಿದ ಅಚ್ಯುತ್ ಕುಮಾರ್ ಕಿರುತೆರೆಯ ಲೋಕದ ಮೂಲಕ ತಮ್ಮ ವೃತ್ತಿಯನ್ನ ಆರಂಭಿಸಿದರು.

ಗಿರೀಶ್ ಕಾಸರವಳ್ಳಿ ನಿರ್ದೇಶನದ, ಎಸ್ ಎಲ್ ಭೈರಪ್ಪ ಬರೆದ ಕಾದಂಬರಿ ಆಧಾರಿತ ಗ್ರಹಭಂಗ ಎನ್ನುವ ಧಾರಾವಾಹಿಯಲ್ಲಿ ಮೊದಲು ಅವಕಾಶ ಸಿಕ್ಕಿತು ನಂತರ ಮೂಡಲ ಮನೆ ಪ್ರೀತಿ ಇಲ್ಲದ ಮೇಲೆ ಮೊದಲಾದ ಸೀರಿಯಲ್ ಗಳಲ್ಲಿ ಅಚ್ಯುತ್ ಕುಮಾರ್ ಖಾಯಂ ನಟನಾಗಿ ಅಭಿನಯಿಸಿದರು. ಧಾರಾವಾಹಿಯಲ್ಲಿ ಅಚ್ಚುಕಟ್ಟಾಗಿ ಅಭಿನಯಿಸುತ್ತಿದ್ದ ಅಚ್ಯುತ್ ಕುಮಾರ್ ಅವರಿಗೆ ಸಿನಿಮಾಗಳಿಂದ ಕರೆ ಬರಲು ಆರಂಭವಾಯಿತು.

2007ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಆ ದಿನಗಳು ಸಿನಿಮಾದಲ್ಲಿ ಆಯಿಲ್ ಕುಮಾರ್ ಪಾತ್ರದಲ್ಲಿ ಮಿಂಚಿದರು ಕುಮಾರ್. ಮೊಗ್ಗಿನ ಮನಸ್ಸು, ನಾನು ನನ್ನ ಕನಸು, ಜೋಶ್, 2013ರಲ್ಲಿ ತೆರೆಕಂಡ ಲೂಸಿಯಾ ಮೊದಲ ಸಿನಿಮಾಗಳು ಅಚ್ಚುತ್ ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮನ್ನ ತಾವು ಗುರುತಿಸಿಕೊಳ್ಳುವುದಕ್ಕೆ ವೇದಿಕೆಯಾದವು.

ಇದಾದ ಬಳಿಕ ಕನ್ನಡದ ಅದೆಷ್ಟು ಸಿನಿಮಾಗಳಲ್ಲಿ ನಟಿಸಿದ ಅಚ್ಯುತ್ ಕುಮಾರ್ ಈವರಿಗೆ ಸಾಕಷ್ಟು ಪ್ರಶಸ್ತಿಗಳನ್ನು ಕೂಡ ಮೂಡಿಗೇರಿಸಿಕೊಂಡಿದ್ದಾರೆ. ಇವರಿಗೆ ಎರಡು ರಾಜ್ಯ ಪ್ರಶಸ್ತಿ ಮತ್ತು ಮೂರು ಬಾರಿ ಫಿಲಂ ಫೇರ್ ಪ್ರಶಸ್ತಿಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

Achyuth Kumar with his wife Nandini Patwardhan and daughter

ಇನ್ನು ನಟ ಅಚ್ಚುತ್ ಕುಮಾರ್ ಕನ್ನಡದಲ್ಲಿ ಮಾತ್ರವಲ್ಲದೆ 2011 ರಿಂದ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿಯೂ ಕೂಡ ಸಕ್ರಿಯವಾಗಿದ್ದಾರೆ. ಇನ್ನು ನಟ ಅಚ್ಚುತ್ ಕುಮಾರ್ ಅವರ ಪತ್ನಿ ನಂದಿನಿ ಪಟವರ್ಧನ್ ಇವರು ಕೂಡ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರಿಗೆ ಒಬ್ಬ ಮುದ್ದಾದ ಮಗಳೂ ಇದ್ದು, ಸುಂದರವಾದ ಕುಟುಂಬ ಇವರದ್ದು. ಅಚ್ಯುತ್ ಕುಮಾರ್ ಸದಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಬಿಡುವಿನ ವೇಳೆಯಲ್ಲಿ ಮಗಳು ಹಾಗೂ ಪತ್ನಿ ಜೊತೆ ಹೆಚ್ಚಾಗಿ ಕಾಲ ಕಳೆಯುತ್ತಾರೆ.

ಕೆಜಿಎಫ್ 2 ಸಿನಿಮಾದಲ್ಲಿಯೂ ಕೂಡ ಅಭಿನಯಿಸಿರುವ ಅಚ್ಯುತ್ ಕುಮಾರ್ ಇದೀಗ ಕಾಂತಾರ ಸಿನಿಮಾದಲ್ಲಿ ಮತ್ತೊಂದು ಅದ್ಭುತ ಪಾತ್ರವನ್ನು ನಿಭಾಯಿಸಿದ್ದಾರೆ. ಅಚ್ಯುತ್ ಕುಮಾರ ವರ್ಷಕ್ಕೆ ಸುಮಾರು 20 ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ. ಈವರಿಗೆ ಸಾಕಷ್ಟು ವಿಭಿನ್ನ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದ ಖ್ಯಾತಿ ಅವರದ್ದು. ಕನ್ನಡ ಚಿತ್ರರಂಗ ಕಂಡ ಒಬ್ಬ ಅತ್ಯದ್ಭುತ ಪ್ರತಿಭೆ ಅಚ್ಯುತ್ ಕುಮಾರ್ ಎಂದರೆ ತಪ್ಪಾಗಲಿಕ್ಕಿಲ್ಲ.

Get real time updates directly on you device, subscribe now.

Leave a comment