Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಈ ಅವಳಿ ಜವಳಿ ನಟ ನಟಿಯರ ಬಗ್ಗೆ ಕುತೂಹಲಕಾರಿ ವಿಷಯಗಳನ್ನ ನೀವು ತಿಳಿದುಕೊಳ್ಳಲೇಬೇಕು. ಎಷ್ಟು ಜನ ಇದ್ದಾರೆ ಗೊತ್ತೇ ??

ಭಾರತದ ಸಿನೆಮಾ ರಂಗದಲ್ಲಿ ಸಾಕಷ್ಟು ಅವಳಿ ಜವಳಿ ಅಥವಾ ಟ್ವಿನ್ನಿಂಗ್ ಸಹೋದರ ಸಹೋದರಿಯರು ಕೂಡ ಒಟ್ಟಾಗಿ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ ಆದರೆ ಅವರ ಬಗ್ಗೆ ನಮಗೆ ಅಷ್ಟಾಗಿ ಮಾಹಿತಿ ಇಲ್ಲ ಬನ್ನಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಫೇಮಸ್ ಆಗಿರುವ ಅವಳಿ ಸಹೋದರ ಸಹೋದರಿಯರ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಕನ್ನಡ ಸಿನಿಮಾ ಮಾತ್ರವಲ್ಲದೆ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ಮಾಸ್ಟರ್ ಹಾಗೂ ವಿಲನ್ ಗಳಾಗಿ ಮಿಂಚಿರುವ ರಾಮ್ ಮತ್ತು ಲಕ್ಷ್ಮಣ್ ಜೋಡಿ. ಈ ಇಬ್ಬರು ಸಹೋದರರು ಇದುವರೆಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದು ಅವಳಿ ಸಹೋದರಿಯರನ್ನು ಮದುವೆಯನ್ನು ಆಗಿದ್ದಾರೆ.

ಇನ್ನು ತಮಿಳು ಹಾಗೂ ತೆಲುಗು ಸಿನಿಮಾ ರಂಗದಲ್ಲಿ ಮಿಂಚುತ್ತಿರುವ ಖ್ಯಾತ ನಟಿ ಸಾಯಿ ಪಲ್ಲವಿ. ಸಾಯಿ ಪಲ್ಲವಿ ಅವರ ಗಾರ್ಗಿ ಸಿನಿಮಾ ಇತ್ತೀಚಿಗೆ ಕನ್ನಡದಲ್ಲಿ ಕೂಡ ಡಬ್ ಆಗಿದೆ. ಇದಕ್ಕೆ ಸ್ವತಃ ಸಾಯಿ ಪಲ್ಲವಿ ಅವರೇ ಕನ್ನಡದಲ್ಲಿ ಡಬ್ ಮಾಡಿದ್ದು ವಿಶೇಷ. ಸಿಂಪಲ್ ಸುಂದರಿ ಸಾಯಿ ಪಲ್ಲವಿ ಅವರ ಟ್ವಿನ್ ಸಹೋದರಿ ಪೂಜಾ ಕಣ್ಣನ್.

ಇಬ್ಬರೂ ಕೂಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಖ್ಯಾತ ನಟಿ. ನೋಡಲು ಒಂದೇ ರೀತಿಯಾಗಿರುವ ಸಾಯಿ ಪಲ್ಲವಿ ಹಾಗೂ ಪೂಜಾ ಕಣ್ಣನ್ ಇಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾಗದಷ್ಟು ಅತ್ಯುತ್ತಮ ಬಾಂಧವ್ಯ ಹೊಂದಿರುವ ಸಹೋದರಿಯರು.

ಇನ್ನು ಮಂಗಳೂರಿನ ಮೂಲದ ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ. ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ ಕನ್ನಡದ ಅತ್ಯುತ್ತಮ ಸಿನಿಮಾ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾದಲ್ಲಿ ನಾಯಕಿಯ ಸ್ನೇಹಿತರಾಗಿ ಕಾಣಿಸಿಕೊಂಡ ಇವರಿಬ್ಬರೂ ಇದೀಗ ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಈ ಅವಳಿ ಸಹೋದರಿಯರು ಕೇವಲ ಐದು ನಿಮಿಷದ ಅಂತರದಲ್ಲಿ ಹುಟ್ಟಿದ್ದಾರೆ.

ಇನ್ನು ಬಾಲಿವುಡ್ ನ ಖ್ಯಾತ ನಟ ಅನಿಲ್ ಕಪೂರ್ ಅವರ ಸಹೋದರ ಸಂಜಯ್ ಕಪೂರ್. ಇವರಿಬ್ಬರು ಕೂಡ ಹಿಂದಿ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ ಅನಿಲ್ ಕಪೂರ್ ಅವರ ತಮ್ಮ ಸಂಜಯ್ ಕಪೂರ್ ಕೂಡ ಬಾಲಿವುಡ್ ನಲ್ಲಿ ಉತ್ತಮ ಹೆಸರು ಸಂಪಾದಿಸಿದ್ದಾರೆ. ಅಂದಹಾಗೆ ನಟ ಅನಿಲ್ ಕಪೂರ್ ಕನ್ನಡದಲ್ಲಿ 1983ರಲ್ಲಿ ತೆರೆಕಂಡ ಮಣಿರತ್ನಂ ನಿರ್ದೇಶನದ ಪಲ್ಲವಿ ಅನುಪಲ್ಲವಿ ಸಿನಿಮಾದಲ್ಲಿ ನಾಯಕರಾಗಿ ಮಿಂಚಿದ್ದರು. ಇನ್ನು ಧರ್ಮ ಮತ್ತು ರಕ್ಷ.

ಈ ಅವಳಿ ಸಹೋದರರು ಕೂಡ ತೆಲುಗು ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದಾರೆ ಸಾಕಷ್ಟು ತೆಲುಗು ಸಿನಿಮಾಗಳನ್ನು ಒಟ್ಟಾಗಿ ನಿರ್ದೇಶನ ಮಾಡಿರುವ ಈ ಸಹೋದರರು ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದಾರೆ ಕೂಡ. ಸ್ನೇಹಿತರೆ ಈ ಅವಳಿ ಸಹೋದರ ಸಹೋದರಿಯರಲ್ಲಿ ನಿಮಗೆ ಇಷ್ಟವಾದ ಜೋಡಿ ಯಾವುದು ಎಂದು ನಮಗೆ ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

Leave a comment