Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಇತಿಹಾಸ ಕ್ರಿಯೇಟ್ ಮಾಡಿರುವ ಕಾಂತಾರ ಸಿನಿಮಾದಲ್ಲಿ ಬರುವ ಪಂಜರ್ಲಿಯ ಅಸಲಿ ಕಥೆ ಗೊತ್ತೇ ?? ಮೈ ಜುಮ್ಮ್ ಎನ್ನುವ ಪೂರ್ತಿ ವಿವರ ಇಲ್ಲಿದೆ ನೋಡಿ !!

0

ಬಹುಶಃ ಕನ್ನಡ ಸಿನಿಮಾ ಚರಿತ್ರೆಯಲ್ಲಿ ಒಂದು ಸಿನಿಮಾವನ್ನು 99 ರಷ್ಟು ಜನ ಇಷ್ಟ ಪಟ್ಟ ಇತಿಹಾಸ ಇರಲಿಲ್ಲ. ಇದೀಗ ಕಾಂತಾರಾ ಹಿಸ್ಟರಿ ಕ್ರಿಯೇಟ್ ಮಾಡಿದೆ. ಕಾಂತರಾ ಸಿನಿಮಾ ಕೇವಲ ಒಂದು ಸಿನಿಮಾ ವಾಗಿ ಉಳಿದಿಲ್ಲ. ಅದು ಜನರಲ್ಲಿ ಭಕ್ತಿ ಭಾವ ಹಾಗೂ ವಿಶೇಷವಾದ ಭಾವನೆಯನ್ನು ಮೂಡಿಸಿದೆ. ಇಂತಹ ಒಂದು ಸಿನಿಮಾ ಕನ್ನಡದಲ್ಲಿ ತಯಾರಾಗಬಹುದು ಅಂತ ಯಾರೂ ನಿರೀಕ್ಷೆ ಮಾಡಿರಲಿಲ್ಲವೋ ಎನೋ. ಇದೀಗ ಎಲ್ಲಾ ಕ್ರೆಡಿಟ್ ಕಾಂತರಾ ಸಿನಿಮಾದ ನಿರ್ದೇಶಕ ರಿಷಭ್ ಶೆಟ್ಟಿ ಅವರಿಗೆ ಸಲ್ಲಬೇಕು.

ಕಾಂತರಾ ಸಿನಿಮಾ ಬನ್ನಿ ಆವರಿಸಿರುವ ಪಂಜುರ್ಲಿ ದೈವದ ಬಗ್ಗೆ ನಿಮಗೆ ಒಂದಿಷ್ಟು ಮಾಹಿತಿಯನ್ನು ನಾವು ತಿಳಿಸಿಕೊಡುತ್ತೇವೆ. ದಕ್ಷಿಣ ಕನ್ನಡದ ಸಂಸ್ಕೃತಿಯನ್ನು ತೋರಿಸಿರುವ ಕಾಂತಾರಾ ಸಿನಿಮಾದಲ್ಲಿ ಬರುವ ಒಂದು ಪಾತ್ರ ಬಹಳ ಪ್ರಮುಖವಾದದ್ದು. ಇದರ ಹಿಂದೆಯೂ ಒಂದು ಕಥೆ ಇದೆ. ತುಳುನಾಡಿನಲ್ಲಿ ದೈವರಾತನಿಗೆ ವಿಶೇಷ ಸ್ಥಾನವಿದೆ.

ಭಾರತೀಯ ಸಂಸ್ಕೃತಿಯಲ್ಲಿಯೂ ಇದಕ್ಕೆ ವಿಶೇಷವಾದ ಮಹತ್ವ ನೀಡಲಾಗಿದೆ. ತುಳುನಾಡಿನಲ್ಲಿರುವ 10 ಹಲವು ದೈವಗಳ ಪೈಕಿ ಕಾಂತಾರ ಸಿನಿಮಾದಲ್ಲಿ ತೋರಿಸಲಾಗಿರುವ ಪಂಜುರ್ಲಿ ದೈವವೂ ಕೂಡ ಒಂದು. ತುಳು ನಾಡಿಗೆ ಪಂಜುರ್ಲಿ ದೈವ ಬಂದಿರುವ ಕಥೆಯನ್ನು ಹೇಳುತ್ತೇವೆ ನೋಡಿ.

ಶಿವನ ಪತ್ನಿ ಪಾರ್ವತಿಯ ಮಾತಿನಂತೆ ಒಂದು ಕಾಡನ್ನು ನಿರ್ಮಾಣ ಮಾಡುತ್ತಾನೆ ಶಿವ. ಈ ದೈವ ಕಾಡಿನಲ್ಲಿ ಒಮ್ಮೆ ಶಿವ ಬೇಟೆಗಾಗಿ ತೆರಳುತ್ತಾನೆ. ಅಲ್ಲಿ ಸಾಕಷ್ಟು ಹಂದಿ ಹಾಗೂ ಹಂದಿ ಮರಿಗಳನ್ನ ನೋಡುತ್ತಾನೆ. ಹಂದಿಗಳು ಬೇಟೆಗಾರ ಬಂದ ಎಂದು ಪೊದೆ ಸೇರಿದರೆ ಒಂದು ಮುದ್ದಾದ ಅಂದಿನ ಮರಿ ಮಾತ್ರ ಹಾಗೆಯೇ ಶಿವನನ್ನ ನೋಡುತ್ತಾ ನಿಂತಿರುತ್ತದೆ. ಶಿವ ಬೇಟೆಯಾಡುವುದನ್ನೇ ಮರೆಯುತ್ತಾನೆ.

ಹಂದಿಮರಿಯನ್ನು ಅರಮನೆಗೆ ಕರೆದುಕೊಂಡು ಹೋಗಿ ಪೋಷಿಸಿ ಬೆಳೆಸುತ್ತಾನೆ. ಪಾರ್ವತಿಯು ಕೂಡ ಆ ಹಂದಿಮರಿಯನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ಹೀಗೆ ಆ ಹಂದಿ ಮರಿ ಬೆಳೆದು ದೊಡ್ಡದಾಗುತ್ತೆ. ಆಗ ಪಾರ್ವತಿ ಮನೆಯ ಎದುರು ಬೆಳೆದಿದ್ದ ಸೊಂಪಾದ ಬತ್ತದ ಗದ್ದೆಯ ವಾಸನೆ ಹಂದಿಯ ಮೂಗಿಗೆ ಬಡಿಯುತ್ತೆ. ಆಗ ತನಗೆ ಕಟ್ಟಿದ ಹಗ್ಗ, ಗೂಟವನ್ನು ಬಿಚ್ಚಿಕೊಂಡು ಹೋಗಿ ಪೈರನ್ನೆಲ್ಲವನ್ನೂ ತಿಂದು ಇನ್ನಷ್ಟು ಪೈರನ್ನು ನಾಶ ಮಾಡುತ್ತೆ ಇದರಿಂದ ಪಾರ್ವತಿಗೆ ಬಹಳ ನೋವಾಗುತ್ತದೆ.

ಪಾರ್ವತಿಯ ನೋವನ್ನ ನೋಡಿದ ಶಿವ ಸಿಟ್ಟಿಗೇಳುತ್ತಾನೆ. ಕೂಡಲೇ ಹಂದಿಗೆ ಬಾಣ ಬಿಡುತ್ತಾನೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಹಂದಿ ಅರಮನೆಯ ಬಾಗಿಲಿಗೆ ಬಂದು ಬೀಳುತ್ತದೆ. ಹಂದಿಯ ನರಳಾಟವನ್ನು ನೋಡಿದ ಪಾರ್ವತಿಯ ಮನಸ್ಸು ಕರಗುತ್ತೆ. ಶಿವನ ಬಳಿ ಹೇಗಾದರೂ ಮಾಡಿ ಹಂದಿಯನ್ನು ಮತ್ತೆ ಮರುಜೀವ ಗೊಳಿಸಬೇಕು ಇಲ್ಲವಾದರೆ ನಾನು ಊಟ ತಿಂಡಿ ಮಾಡುವುದಿಲ್ಲ ಅಂತ ಪಾರ್ವತಿ ಹಠ ಹಿಡಿಯುತ್ತಾಳೆ.

ಪಾರ್ವತಿಯ ಮಾತಿನಂತೆ ಶಿವ ಹಂದಿಗೆ ಮರು ಜೀವ ನೀಡುತ್ತಾನೆ ಆಗ ಹಂದಿ ನನ್ನನ್ನ ಮತ್ತೆ ಯಾಕೆ ಬದುಕಿಸಿದಿರಿ ಎಂದು ಕೇಳುತ್ತೆ. ಅದಕ್ಕಾಗಿ ಶಿವ ಹೀಗೆ ಉತ್ತರಿಸುತ್ತಾನೆ.
ನೀನು ಭೂಲೋಕದಲ್ಲಿ ಶಿವನ ಅನುಯಾಯಿಯಾಗಿ ಹೋಗಬೇಕು ಅಲ್ಲಿ ಧರ್ಮವನ್ನ ರಕ್ಷಿಸಬೇಕು ಇನ್ಮುಂದೆ ನಿನ್ನ ಹೆಸರು ಗಣಮಣಿ ಎಂದು ಪ್ರತೀತವಾಗುತ್ತೆ ಎಂದು ಹೇಳಿ ಭೂಲೋಕಕ್ಕೆ ಕಳಿಸುತ್ತಾನೆ.

ಗಣಮಣಿ ಭೂಲೋಕಕ್ಕೆ ಬಂದು ಕುಮಾರಧಾರ ಪರ್ವತದ ಝಲಧಾರೆಯಲ್ಲಿ ಸ್ನಾನ ಮಾಡಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುತ್ತೆ. ಅಲ್ಲಿಂದ ನೆಲ್ಯಾಡಿ ಬೀಡಿಗೆ ಹೋಗುತ್ತಾನೆ ಗಣಮಣಿ. ಅಲ್ಲಿ ಅಮ್ಮು ಬಲ್ಲಾಳ್ತಿ ತನ್ನ ಗಂಡನ ವಾಸಿಯಾಗದ ಕಾಯಿಲೆಯಿಂದ ನೋವನ್ನು ಅನುಭವಿಸುತ್ತಿರುತ್ತಾಳೆ. ಆಕೆಯನ ನೋಡಿ ಕಾರಣ ಕೇಳಿದ ಗಣಮಣಿ ಕೊನೆಗೆ ತಾನು ತಂದಿರುವ.

ಗಿಡಮೂಲಿಕೆಯಿಂದ ಆಕೆಯ ಗಂಡನ ಕಾಯಿಲೆಯನ್ನು ವಾಸಿ ಮಾಡುತ್ತಾನೆ. ಅಮ್ಮು ಬ಼ಲ್ಲಾಳ್ತಿ ಕುಮಾರ ನಿನ್ನ ಹೆಸರು ಏನು ಎಂದು ಕೇಳುತ್ತಾಳೆ. ನನ್ನನ್ನ ಕೈಲಾಸದಲ್ಲಿ ಗಣಮಣಿ ಎಂದು ಕರೆಯುತ್ತಿದ್ದರು. ನೀವು ನನಗೆ ಅನ್ನ ಹಾಕಿದ್ದೀರಿ. ಹಾಗಾಗಿ ನೀವು ನನ್ನನ್ನ ಅಣ್ಣಪ್ಪ ಎಂದು ಕರೆಯಬಹುದು ಎಂದು ಹೇಳುತ್ತಾನೆ ಗಣಮಣಿ. ಅಲ್ಲಿಂದ ಗಣಮಣಿ ಅಣ್ಣಪ್ಪ ನಾಗಿ ಬದಲಾಗುತ್ತಾನೆ.

ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥೇಶ್ವರ ಬಂದು ನೆಲೆಸುವುದಕ್ಕೂ ಅಣ್ಣಪ್ಪನೇ ಕಾರಣ. 70 ಮೆಟ್ಟಿಲ ಮೇಲೆ ಏರಿ ಅಣ್ಣಪ್ಪ ಧರ್ಮಸ್ಥಳದಲ್ಲಿ ಇದೀಗ ಕುಳಿತಿದ್ದಾನೆ. ಅಲ್ಲಿಂದ ಬೇರೆ ಬೇರೆ ಸ್ಥಳಗಳಿಗೆ ಸಂಚರಿಸಿದ ಅಣ್ಣಪ್ಪ ಪಂಜುರ್ಲಿ ಧರ್ಮವನ್ನು ಸ್ಥಾಪನೆ ಮಾಡುತ್ತಾ ಆಯಾ ಸ್ಥಳಕ್ಕೆ ತಕ್ಕ ಹಾಗೆ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತದೆ.

ಹಾಗಾಗಿ ತುಳುನಾಡಿನಲ್ಲಿ ಪಂಜುರ್ಲಿ ದೈವಕ್ಕೆ ಮೊದಲ ಸ್ಥಾನ. ದೈವಕ್ಕೆ ಇಲ್ಲಿ ಕೋಲ ನಡೆಸಲಾಗುತ್ತೆ ಇಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತೆ ದೈವ. ಪಂಜುರ್ಲಿ ದೈವದ ಮಹಿಮೆಯನ್ನು ನೀವು ಇದೀಗ ಕಾಂತಾರ ಸಿನಿಮಾದಲ್ಲಿಯೂ ಕೂಡ ನೋಡಿರಬಹುದು. ಇದು ಪಂಜುರ್ಲಿ ದೈವ ಧರ್ಮ ಸಂಸ್ಥಾಪನೆಗಾಗಿ ತುಳುನಾಡಿಗೆ ಬಂದು ನೆಲೆಸಿದ ಕಥೆ.

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply